ಸುಮಲತಾ ಹೆಸರಲ್ಲಿ 3 ಜನ ನಾಮಪತ್ರ ಸಲ್ಲಿಕೆ; ಜೆಡಿಎಸ್ ಕುತಂತ್ರಕ್ಕೆ ಪಕ್ಷದ ಚಿಹ್ನೆ ಆಯ್ಕೆಯ ಮೂಲಕ ಉತ್ತರ ನೀಡಿದ ಸಮಲತಾ ಅಂಬರೀಶ್..

0
541

ಮಂಡ್ಯದಲ್ಲಿ ಚುನಾವಣೆ ದಿನದಿಂದ ದಿನಕ್ಕೆ ಬಿರುಸಾಗುತ್ತಿದ್ದು. ಪಕ್ಷೇತರ ಅಭ್ಯರ್ಥಿಯ ವಿರುದ್ದ ಮುಖ್ಯಮಂತ್ರಿಯ ಪುತ್ರ ಗೆಲ್ಲಲೇ ಬೇಕು ಎನ್ನುವ ಹಠ ಮೈತ್ರಿಯಲ್ಲಿ ಹುಟ್ಟುತ್ತಿದ್ದು. ದಿನದಿಂದ ದಿನಕ್ಕೆ ಪ್ರಚಾರದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಅದರಂತೆ ಜೆಡಿಎಸ್ ಶಾಸಕರಿಂದ ಸುಮಲತಾ ಬೆಂಬಲಿಗರಿಗೆ ಬೆದರಿಕೆ ಕೇಳಿಬಂದಿದ್ದು ಇದರ ವಿರುದ್ದ ದೂರು ಕೂಡ ಸಲ್ಲಿಸಲಾಗಿದೆ. ಇಷ್ಟಕ್ಕೆ ಸುಮ್ಮನಿರದ ವಿರೋಧ ಪಕ್ಷಗಳು ಮತ್ತೊಂದು ಮಸಲತ್ತು ನಡೆಸಿದ್ದಾರೆ ಎನ್ನುವ ದೂರು ಸುಮಲತಾ ಬೆಂಬಲಿಗರಿಂದ ಕೇಳಿಬರುತ್ತಿದ್ದು. ಸುಮಲತಾ ಹೆಸರಿನ ಮೂವರಿಂದ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ವಿರುದ್ಧ ರಣತಂತ್ರ ಕೇಳಿಬರುತ್ತಿದೆ.


Also read: ಚುನಾವಣೆ ಭದ್ರತೆಗಾಗಿ ಬಂದ ಯೋಧರಿಗೆ ಬೆಂಗಳೂರಿಗರು ಹೂ ಮಳೆ ಸುರಿಸಿ ಸ್ವಾಗತ ಕೋರಿ ದೇಶ ಪ್ರೇಮ ಮೆರೆದಿರುವುದು ಎಲ್ಲರಿಗೂ ಮಾದರಿಯಾಗಿದೆ..

ಹೌದು ಜೆಡಿಎಸ್ ಮತ್ತು ಸುಮಲತಾ ನಡುವೆ ಚುನಾವಣಾ ರಣರಂಗವಾಗಿದ್ದು, ಸುಮಲತಾ ಅವರು ತಮ್ಮ ಪಕ್ಷೆಕ್ಕೆ ಯಾವ ಗುರುತ್ತು ಇಟ್ಟುಕೊಳ್ಳುತ್ತಾರೆ ಎನ್ನುವುದು ಎಲ್ಲರಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಹಲವು ತೊಂದರೆಗಳು ಕೂಡ ಕೇಳಿ ಬರುತ್ತಿವೆ. ಅದರಂತೆ ಸುಮಲತಾ ಮತಹಾಕುವ ವೇಳೆ ಜನರಿಗೆ ಗೊಂದಲಗಳು ಆಗಬೇಕು ಎನ್ನುವ ಉದ್ದೇಶದಿಂದ ಅದೇ ಹೆಸರಿನ ಮೂರು ಮಹಿಳೆಯರನ್ನು ಚುನಾವಣೆ ನಿಲ್ಲಿಸಿದ್ದು ಮತ್ತೊಂದು ಬೆಳೆವಣಿಗೆಗೆ ಕಾರಣವಾಗಿದೆ. ಇದಕ್ಕೆ ಉತ್ತರವಾಗಿ ಸುಮಲತಾ ಅವರು ಜೆಡಿಎಸ್ ಹೊರೆ ಹೊತ್ತ ಮಹಿಳೆಗೆ ವಿರುದ್ದವಾಗಿ ಮೂರು ಚಿಹ್ನೆಗಳನ್ನು ಆಯ್ಕೆ ಮಾಡಿ ಜೆಡಿಎಸ್ ನಡುಕು ಹುಟ್ಟಿಸಿದ್ದಾರೆ.

ಸುಮಲತಾ ಗುರುತು ಯಾವುದು?

ಮೈತ್ರಿ ನಾಯಕರ ಕುತಂತ್ರಕ್ಕೆ ಪ್ರತಿಯಾಗಿ ನಯವಾಗಿಯೇ ಟಾಂಗ್ ಕೊಡುತ್ತಿರುವ ಸುಮಲತಾ ಅಂಬರೀಶ್, ಇದೀಗ ತಮ್ಮ ಚಿಹ್ನೆ ಕೂಡ ರೈತ ಪರವಾಗಿರಬೇಕು ಎಂಬ ಕಾರಣಕ್ಕೆ 3 ಚಿಹ್ನೆಗಳನ್ನ ಸೆಲೆಕ್ಟ್ ಮಾಡಿದ್ದಾರೆ. 1.ಕಬ್ಬಿನ ಗದ್ದೆ ಮುಂದೆ ರೈತ, 2.ತೆಂಗಿನ ತೋಟ, 3.ಕಹಳೆ ಊದುತ್ತಿರುವ ರೈತ ಈ ಮೂರು ಚಿಹ್ನೆಗಳನ್ನ ಸುಮಲತಾ ಅಂಬರೀಶ್ ಸೆಲೆಕ್ಟ್ ಮಾಡಿದ್ದು, ಇವುಗಳ ಪೈಕಿ ಒಂದು ಚಿಹ್ನೆ ನೀಡಬೇಕೆಂದು ಚುನಾವಣಾಧಿಕಾರಿಗೆ ತಿಳಿಸಿದ್ದಾರೆ. ಈ ಮೂಲಕ ತೆನೆ ಹೊತ್ತ ರೈತ ಮಹಿಳೆಗೆ (ಜೆಡಿಎಸ್)ಗೆ ಸೆಡ್ಡು ಹೊಡೆದಿದೆ.
ಇದೆ ಚಿಹ್ನೆಗಳ ಆಯ್ಕೆ ಏಕೆಂದರೆ ಕಬ್ಬು ಮಂಡ್ಯ ಜಿಲ್ಲೆಯ ಪ್ರಧಾನ ಬೆಳೆ, ಕಬ್ಬಿನ ಗದ್ದೆಯಲ್ಲೇ ರೈತರು ದಿನ ಕಳೆಯುತ್ತಾರೆ. ಇನ್ನು ತೆಂಗಿನ ತೋಟ ಕಲ್ಪವೃಕ್ಷವಿದ್ದಂತೆ. ಮಂಡ್ಯದ ಬಹುತೇಕ ಕಡೆ ತೆಂಗಿನ ಬೆಳೆಯನ್ನ ಬೆಳೆಯಲಾಗುತ್ತೆ. ಮಾತ್ರವಲ್ಲ ಇಡೀ ರಾಷ್ಟ್ರದಲ್ಲೇ ಅತಿದೊಡ್ಡ ಎಳನೀರು ಮಾರ್ಕೆಟ್ ಮಂಡ್ಯ ಜಿಲ್ಲೆಯಲ್ಲಿದೆ. ಇನ್ನು ಕಹಳೆ ಸ್ವಾಭಿಮಾನದ ಸಂಕೇತವಾಗಿದೆ. ಹೀಗಾಗಿ ಈ ಮೂರು ಚಿಹ್ನೆಗಳನ್ನ ಸೆಲೆಕ್ಟ್ ಮಾಡುವ ಮೂಲಕ ಮಂಡ್ಯ ಜನರನ್ನ ಸೆಳೆಯಲು ಸುಮಲತಾ ಅಂಬರೀಶ್ ಮುಂದಾಗಿದ್ದಾರೆ ಎನ್ನಲಾಗಿದೆ.


Also read: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ; 65 ವರ್ಷದಿಂದ ಮಾಡದೋರು ಇವಾಗ ಮಾಡ್ತಾರ??

ಜೆಡಿಎಸ್ ಗೆಲ್ಲಲೇ ಬೇಕು ಎನ್ನುವುದು ಯಾಕೆ?

ಮೈತ್ರಿ ಸರ್ಕಾರದ ಕೂಸು ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರವಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ. ಫುಲ್ ಟಕ್ಕರ್ ಕೊಡುತ್ತಿರುವ ಸುಮಲತಾ ಅವರನ್ನು ಶತಾಯಗತಾಯವಾಗಿ ಮಣಿಸಲು ದಳಪತಿಗಳು ನಾನಾ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಯಾಕಂದ್ರೆ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಮಾತ್ರವಲ್ಲದೇ ಸಿಎಂ ಪುತ್ರ ಆಗಿರುವುದರಿಂದ ಗೆಲ್ಲಲೇ ಬೇಕಾದ ಅನಿವಾರ್ಯ ಇರುವುದರಿಂದ ಕುಮಾರಸ್ವಾಮಿ ಅವರು ಈ ಕ್ಷೇತ್ರವನ್ನು ಪ್ರತಿಷ್ಠಯಾಗಿ ತೆಗೆದುಕೊಂಡಿದ್ದು, ಹಲವು ರೀತಿಯಲ್ಲಿ ಕಸರತ್ತು ನಡೆಸಿದ್ದಾರೆ.


Also read: ನನ್ನ ಮಗ ನಿಖಿಲ್, ಅಭಿಮನ್ಯು ಚಕ್ರವ್ಯೂಹ ಬಿಡಿಸುತ್ತಾನೆ: ಎಚ್.ಡಿ.ಕೆ; ಈಥರ ಸಿನಿಮಾದಲ್ಲಿ ಆಗೋದು ಎಲೆಕ್ಷನ್-ನಲ್ಲಿ ಆಗುತ್ತಾ??

ಸುಮಲತಾ ಹೆಸರಿನ 3 ನಾಮಪತ್ರ?

ಸುಮಲತಾ ಪರ ಮತದಾರರಲ್ಲಿ ಗೊಂದಲ ಸೃಷ್ಟಿಸಲು ಜೆಡಿಎಸ್ ನಾಯಕರು ಹೊಸ ತಂತ್ರವನ್ನು ನಡೆಸಿದ್ದಾರೆ. ಸುಮಲತಾ ಹೆಸರಿನ ಮೂವರಿಂದ ನಾಮಪತ್ರ ಹಾಕಿಸಿ ಸುಮಲತಾ ಅಂಬರೀಶ್ ಗೆ ಶಾಕ್ ಕೊಟ್ಟಿದ್ದಾರೆ. ಕನಕಪುರ ಮೂಲದ ಪಿ.ಸುಮಲತಾ, ಕೆ.ಆರ್. ಪೇಟೆ ತಾಲೂಕಿನ ಸುಮಲತಾ, ಶ್ರೀರಂಗಪಟ್ಟಣದ ಸುಮಲತಾ ಎಂಬುವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಈ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡುವುದು ಜೆಡಿಎಸ್ ಮಾಸ್ಟರ್ ಪ್ಲಾನ್. ಒಟ್ಟಿನಲ್ಲಿ ಸುಮಲತಾ ಎನ್ನುವರನ್ನು ಮೂವರಿಂದ ನಾಮಪತ್ರ ಸಲ್ಲಿಸಿ ಗೊಂದಲ ಸೃಷ್ಟಿಸಲು ಹೊರಟಿರೋ ಜೆಡಿಎಸ್‌ಗೆ, ಅದೇ ರೀತಿ ಸುಮಲತಾ ಅಂಬರೀಶ್ ಕೂಡ ಜೆಡಿಎಸ್ ಪಕ್ಷದ ಚಿಹ್ನೆಗೆ ಹೋಲುವ ಚಿಹ್ನೆ ತೆಗೆದುಕೊಂಡು ಜೆಡಿಎಸ್ ಗೆ ಸದ್ದಿಲದೆ ನಡುಕ ಹುಟ್ಟಿಸಿದ್ದಾರೆ.