ಬರೋಬರಿ 30 ವರ್ಷದ ಹಿಂದೆ ತಾನು ವಿದ್ಯಾರ್ಥಿ ಇದ್ದಾಗೆ ಪಡೆದ ಬರಿ 200 ರೂ. ಸಾಲ ತೀರಿಸಲು ಭಾರತಕ್ಕೆ ಬಂದ ಕೀನ್ಯಾ ಸಂಸದ..

0
307

ಅದು ಹಾಗೆಯೇ ಕೆಲವೊಬ್ಬರಿಗೆ ನಿಯತ್ತು ಪ್ರಾಮಾಣಿಕತೆ ಎನ್ನುವುದು ಬಹುಮುಖ್ಯವಾಗಿದೆ. ಒಬ್ಬರು ಕಷ್ಟದಲ್ಲಿ ಸಹಾಯ ಮಾಡಿದ್ದಾರೆ ಅಂದರೆ ಅದರ ಋಣವನ್ನು ತೀರಿಸಲು ಎಷ್ಟೇ ವರ್ಷವಾದರೂ, ಪಡೆದ ಸಹಾಯವನ್ನು ಹಿಂದಿರಿಗಿಸಲು ನಿಯತ್ತಿನ ಜನ ಬಂದೆ ಬರುತ್ತಾರೆ. ಆದರೆ ಇನ್ನೂ ಕೆಲವರು ಎಷ್ಟೇ ಸಹಾಯ ಪಡೆದರು ಅದರ ಅರಿವಿಲ್ಲದೆ ಅನ್ನ ಹಾಕಿದವರಿಗೆ ಕನ್ನ ಹಾಕುವ ಜನರಿಗೆ ಈಗೇನು ಬರವಿಲ್ಲ ಆದರೆ ಇಂತಹ ವ್ಯಕ್ತಿಗಳಿಗೆ ನಾಚಿಕೆಯಾಗುವಂತ ಪ್ರಕರಣವೊಂದು ನಡೆದಿದ್ದು, ಸತ್ಯ ಹರಿಚಂದ್ರನ ತುಂಡು ಇವನೇ ಎನ್ನುವ ಮಾತುಗಳಿಗೆ ಕಿನ್ಯಾ ಸಂಸದ ಪಾತ್ರರಾಗಿದ್ದಾರೆ.

Also read: ದುರ್ವಾಸನೆಯ ಗ್ಯಾಸ್-ನ್ನು ಸುವಾಸನೆಯಾಗಿ ಮಾಡೋ ಮಾತ್ರೆಗಳು; ನೀವು ಬಿಡುವ ಕೆಟ್ಟ ಗ್ಯಾಸ್ 5 ವೆರೈಟಿಯಲ್ಲಿ ಗಮ್ಮ್ ಎನಿಸಬಹುದು..

ಹೌದು ಸುಮಾರು 30 ವರ್ಷಗಳ ಹಿಂದೆ ಪೂರ್ವ ಆಫ್ರಿಕಾದ ಕೀನ್ಯಾ ದೇಶದ ಸಂಸದರಾಗಿರುವ ರಿಚರ್ಡ್ ತಾಂಗ್, ಅವರು ಮಹಾರಾಷ್ಟ್ರದ ಔರಂಗಬಾದ್‍-ನಲ್ಲಿ ಓದುವಾಗೆ ಸಹಾಯವಾಗಿ ಕಿರಾಣಿ ಅಂಗಡಿಯ ವ್ಯಕ್ತಿಯಿಂದ ಪಡೆದ 200 ರೂ. ಸಾಲವನ್ನು ತೀರಿಸಲು ಭಾರತಕ್ಕೆ ಬಂದು ಆಶ್ಚರ್ಯಿ ಮೂಡಿಸಿದ್ದಾರೆ. ಈ ವೇಳೆ ಔರಂಗಬಾದ್‌ನ ದಿನಸಿ ವ್ಯಾಪಾರಿ, 80 ವರ್ಷ ವಯಸ್ಸಿನ ಕಾಶಿನಾಥ್‌ ಗೌಲಿ ಎದುರು ಕೀನ್ಯಾದ ಸಂಸದ ರಿಚರ್ಡ್‌ ತಾಂಗಿ ಬಂದು ನಿಂತಾಗ ಅವರ ಕಣ್ಣಾಲಿಗಳಲ್ಲಿ ನೀರು ಹನಿಗಟ್ಟಿತ್ತು. ಏಕೆಂದರೆ ತಾಂಗಿ ವಯೋವೃದ್ಧರನ್ನು ಭೇಟಿ ಮಾಡಲು ಅಲ್ಲಿಂದ ಇಲ್ಲಿಗೆ ಬಂದಿದ್ದರು. ಅದು ಬರಿ 200 ಸಾಲವನ್ನು ಹಿಂತಿರಿಗಿಸಲು ಭಾರತದವರೆಗೆ ಬಂದಿದರು ಎಂತಹ ನಿಯತ್ತಿನ ಜನ ಎಂದು ಇಡಿ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also read: ಎಂಥ ಕಾಲ ಬಂತಪ್ಪಾ, ತನ್ನ ಅನುಮತಿ ಇಲ್ಲದೆ ಜನ್ಮ ನೀಡಿರುವ ಅಪ್ಪ-ಅಮ್ಮನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಗ..

1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಸಂಸದ ರಿಚರ್ಡ್ ತಾಂಗ್. ಅವರ ಬಳಿ ಮರಳಿ ತಾಯ್ನಾಡಿಗೆ ಹೋಗುವ ಸಂದರ್ಭದಲ್ಲಿ ಬಸ್ ಚಾರ್ಜ್‍ಗೆ ಹಣ ಇರಲಿಲ್ಲ. ಹೀಗಾಗಿ ಔರಂಗಬಾದ್‍ನ ವಾಂಖೇಡೆನಗರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಎಸ್.ಕೆ.ಗಾವ್ಲಿ ಬಳಿ 200 ರೂ. ಸಾಲ ಕೊಡು ನಿನಗೆ ಮರಳಿಸುತ್ತೇವೆ ಎಂದು ಸಾಲ ಪಡೆದಿದ್ದರು. ತಾಯ್ನಾಡಿಗೆ ಮರಳಿದ ನಂತರ ಸಾಲ ತೀರಿಸುವುದನ್ನು ಮರೆತಿರಲಿಲ್ಲ. ಹೀಗಾಗಿ ಸಾಲ ಪಡೆದು 30 ವರ್ಷ ಕಳೆದರೂ ಇದೀಗ ಆ ಹಣವನ್ನು ಮರಳಿಸಲು ಕೀನ್ಯಾದಿಂದ ಮರಳಿದ್ದಾರೆ.

Also read: ಕಷ್ಟಪಟ್ಟರೆ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ಆಟೋ ಚಾಲಕ ದೊಡ್ಡ ಲಾರಿ ಕಂಪನಿಯ ಮಾಲೀಕನಾಗಿರುವುದೇ ಸಾಕ್ಷಿ!!

ಕೀನ್ಯಾದಿಂದ ಮರಳುತ್ತಿದ್ದಂತೆ ನೇರವಾಗಿ ಗಾವ್ಲಿಯ ಕಿರಾಣಿ ಅಂಗಡಿಗೆ ತೆರಳಿದ್ದಾರೆ. ಪ್ರಾರಂಭದಲ್ಲಿ ರಿಚರ್ಡ್ ಅವರನ್ನು ಪತ್ತೆ ಹಚ್ಚಲು ಕಿರಾಣಿ ಅಂಗಡಿ ಮಾಲೀಕ ಗ್ವಾಲಿಗೆ ಸಾಧ್ಯವಾಗಿಲ್ಲ. ನಂತರ ಸಂಸದ ರೀಚರ್ಡ್ ಅವರೇ ಗಾವ್ಲಿಯನ್ನು ಗುರುತಿಸಿ ಮಾತನಾಡಿಸಿದ್ದಾರೆ. ಗಾವ್ಲಿ ಆಶ್ಚರ್ಯಚಿಕಿತರಾಗಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ, ನನ್ನ ಕಣ್ಣನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ನಾನು ಔರಂಗಬಾದ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತುಂಬಾ ಕಷ್ಟದ ಸ್ಥಿತಿಯಲ್ಲಿದ್ದೆ. ಆಗ ಗಾವ್ಲಿ ನನಗೆ ಸಹಾಯ ಮಾಡಿದರು. ನಾನು ತಾಯ್ನಾಡಿಗೆ ಮರಳಬೇಕು ಹಣ ಕೊಡಿ ನಾನು ಮರಳಿ ಬಂದು ನಿಮಗೆ ಹಣ ತೀರಿಸುತ್ತೇನೆ ಎಂದು ಹೇಳಿದ್ದೆ. ಹೀಗಾಗಿ ಇದೀಗ 200 ರೂ.ಹಣ ಮರುಪಾವತಿಸಲು ಬಂದಿದ್ದೇನೆ. ಅವರು ನನಗೆ ಒಂದು ಅದ್ಭುತವಿದ್ದಂತೆ. ಅವರು ಊಟಕ್ಕೆ ನನ್ನನ್ನು ಹೋಟೆಲ್‍ಗೆ ಕರೆದೊಯ್ಯುತ್ತಿದ್ದರು. ಆದರೆ, ನಾನು ಅವರ ಮನೆಯಲ್ಲಿಯೇ ಊಟ ಮಾಡುವಂತೆ ಹಠ ಹಿಡಿದೆ. ಅವರ ಮನೆಯಲ್ಲಿಯೇ ಊಟ ಮಾಡಿದೆ ಎಂದು ಭಾವನಾತ್ಮಕವಾಗಿ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ.