300 ಜನರನ್ನು ಉಳಿಸಿ ಪ್ರಾಣ ತೆತ್ತ ಧೀರ ಈತನಿಗೆ ಸಾರ್ಥಕ ನಮನ!

0
2857

 

ಅನ್ಯಾಯವಾಗಿ ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಂದರೆ, ಕೊಂದಾತನು ಸರ್ವ ಜನಸಮೂಹವನ್ನು ಕೊಂದಂತೆ. ಅಪಾಯದಲ್ಲಿರುವ ಒಬ್ಬ ವ್ಯಕ್ತಿಯ ಪ್ರಾಣವನ್ನು ಪಾರು ಮಾಡಿದರೆ, ಪಾರುಮಾಡಿದಾತನು ಸರ್ವ ಮನುಕುಲವನ್ನು ರಕ್ಷಿಸಿದಂತೆ. ಈ ಮಾತು ಯಾಕೆ ಅಂತಿರ ಇಲ್ಲಿದೆ ನೋಡಿ

ಕೆಲವರು ತ್ಯಾಗಿಗಳು ಜೊತೆಗೆ ಧೀರರು ಆಗಿರುತ್ತಾರೆ. ಮತ್ತೂ ಕೆಲವರು ಬೇರೆಯವರಿಗಾಗಿ ತಮ್ಮ ಪ್ರಾಣವನ್ನೇ ಮುಡುಪಿಡುತ್ತಾರೆ. ಆದರೆ ಈ ಮಹಾತ್ಯಾಗಿ ಎಲ್ಲಕ್ಕೂ ಮಿಗಿಲಾದ ತ್ಯಾಗ ಮಾಡಿ ಪ್ರಾಣ ಬಿಟ್ಟಿದ್ದಾನೆ. ಅಷ್ಟಕ್ಕೂ ಈತ ಮಾಡಿದ ಸಾಧನೆಯೇನು ಗೊತ್ತೆ.

ನಿನ್ನೆ ಆಗಸ್ಟ್ 4 ರಂದು 226 ಭಾರತೀಯರು ಸೇರಿದಂತೆ 300 ಪ್ರಯಾಣಿಕರಿದ್ದ ಎಮಿರೇಟ್ಸ್ ಇಕೆ 521 ವಿಮಾನವು ಕೇರಳದಿಂದ ತಿರುವನಂತಪುರಂ’ನಿಂದ ದುಬೈಗೆ ತಲುಪಿದೆ. ದುಬೈನಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಪತನಗೊಂಡಿದೆ. ಪತನಗೊಳ್ಳುವ ಸಂದರ್ಭದಲ್ಲಿ ವಿಮಾನಕ್ಕೆ ಬೆಂಕಿ ತಗುಲಿದೆ. ಇನ್ನೇನು ಇಡೀ ವಿಮಾನವನ್ನು ಆವರಿಸಿ ಎಲ್ಲಾ ಪ್ರಯಾಣಿಕರು ಭಸ್ಮವಾಗಬೇಕು ಎನ್ನುವಾಗ ಅಗ್ನಿ ಶಾಮಕ ದಳದ ಸಿಬ್ಬಂದಿಯೊಬ್ಬ ಅಗ್ನಿ ಶಾಮಕ ಯಂತ್ರದೊಂದಿಗೆ ಬೆಂಕಿ ನಂದಿಸಲು ವಿಮಾನಕ್ಕೆ ಜಿಗಿದಿದ್ದಾನೆ.

ಈ ಧೀರ ಅಗ್ನಿಶಾಮಕ ಸಿಬ್ಬಂದಿಯ ಹೆಸರು ಜಿಸ್ಮ್ ಹಿಸ್ಸಾ ಮೊಹಮದ್ ಹಸನ್. ಬೆಂಕಿಯನ್ನು ನಂದಿಸುತ್ತಾ ವಿಮಾನದಲ್ಲಿದ್ದ 12 ಸಿಬ್ಬಂದಿ ಹಾಗೂ 282 ಪ್ರಯಾಣಿಕರನ್ನು  ವಿಮಾನದಿಂದ ಹೊರಗೆ ಕಳಿಸಿದ್ದಾನೆ. ಬೆಂಕಿಯ ಜ್ವಾಲಮುಖಿ ಎಲ್ಲಡೆ ಆವರಿಸುವಷ್ಟರಲ್ಲಿ ವಿಮಾನದಲ್ಲಿದ್ದ 300 ಮಂದಿಯೂ ಯಾವುದೇ ಪ್ರಾಣಾಪಾಯವಿಲ್ಲದೆ ಹೊರಗೆ ಬಂದಿದ್ದಾರೆ. ಆದರೆ ಆತನು ಹೊರಗಡೆ ಬರಬೇಕೆನ್ನುವಷ್ಟರಲ್ಲಿ ವಿಮಾನದ ಬೆಂಕಿಯು ಆತನ ದೇಹಕ್ಕೆ ತಗುಲಿತ್ತು. ಮೊಹಮದ್ ಹಸನ್’ನ ದೇಹ ಬಹುತೇಕ ಸುಟ್ಟಿದ್ದರಿಂದ ಆತ ಹುತಾತ್ಮನಾಗಿದ್ದಾನೆ.

ತಮ್ಮನ್ನು ಉಳಿಸಿದ ಧೀರನ ಸಾವನ್ನು ಕಂಡು 300 ಮಂದಿ ಪ್ರಯಾಣಿಕರು ಸೇರಿದಂತೆ ದುಬೈ’ನ ಜನತೆ ಕಂಬನಿ ಮಿಡಿಯುವುದರ ಜೊತೆ ಸಾರ್ಥಕ ನಮನವನ್ನು ಸಲ್ಲಿಸಿದ್ದಾರೆ.