ಬೆಂಗಳೂರಿನ ವಾಹನ ಅಪಘಾತಗಳಿಗೆ ರಸ್ತೆ ಗುಂಡಿಗಳು ಮಾತ್ರ ಕಾರಣವಲ್ಲ, ಮ್ಯಾನ್‌ಹೋಲ್ ಗುಂಡಿಗಳು ಕೂಡ ಮುಖ್ಯ ಕಾರಣವಂತೆ..

0
220

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ದಿನನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ, ಇದರಿಂದ ನೂರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದಕ್ಕೆ BBMP ನೇ ನೇರಹೊಣೆ ಎನ್ನುವ ಮಾತುಗಳು ಕೇಳಿಬಂದಿದ್ದು, ಹೈ ಕೋರ್ಟ್ ಕೂಡ ರಸ್ತೆಗುಂಡಿಯಿಂದ ಆದ ಅಪಘಾತಕ್ಕೆ BBMP ಪರಿಹಾರ ನೀಡಬೇಕು ಎಂದು ಆದೇಶ ನೀಡಿತ್ತು, ಇದಕ್ಕೆ ಒಪ್ಪಿದ ಬೆಂಗಳೂರು ಮಹಾನಗರ ಪಾಲಿಕೆ ಈಗ ರಸ್ತೆ ಅಪಘಾತದಲ್ಲಿ ಗುಂಡಿಗಳಿಗಿಂತ ಮ್ಯಾನ್‌ಹೋಲ್-ಗಳಿಂದ ಹೆಚ್ಚಿನ ಅಪಘಾತಗಳು ಆಗುತ್ತಿವೆ ಎಂದು ಹೇಳಿದ್ದು, ಬೈಕ್ ಸವಾರರಿಗೆ ಮತ್ತಷ್ಟು ಆಘಾತಕಾರಿ ಸುದ್ದಿಯಾಗಿದೆ.

Also read: ಇನ್ಮುಂದೆ ರಸ್ತೆ ಗುಂಡಿ ಅಪಘಾತ ಸಂತ್ರಸ್ತರಿಗೆ ಬಿಬಿಎಂಪಿ ಪರಿಹಾರ ಕೊಡಬೇಕು; ಹೈ ಕೋರ್ಟ್ ಮಹತ್ವದ ತೀರ್ಪು.!!

ಹೌದು ಬೆಂಗಳೂರಿನಲ್ಲಿ ಗುಂಡಿಗಳಿಂದ ಕೂಡಿದ ರಸ್ತೆಗಳು ವಾಹನ ಚಾಲಕರಿಗೆ ಸಮಸ್ಯೆ ಅಲ್ಲ, ಮ್ಯಾನ್‌ಹೋಲ್-ಗಳು ಕೂಡ ಸಮಸ್ಯೆ ಮಾಡುತ್ತಿವೆ ಎಂದು ರಸ್ತೆ ಮೂಲಸೌಕರ್ಯ ಅಭಿವೃದ್ಧಿಯ ಉಸ್ತುವಾರಿ ಬಿಬಿಎಂಪಿ ಮುಖ್ಯ ಎಂಜಿನಿಯರ್ ಎಸ್ ಸೋಮಶೇಖರ್ ಹೇಳಿದ್ದು, ನಗರದ 3,240 ಮ್ಯಾನ್‌ಹೋಲ್ ಕಂಡು ಬರುತ್ತಿದ್ದು ಅವುಗಳಲ್ಲಿ ರಸ್ತೆಗಿಂತ ಎತ್ತರವಾಗಿ, ರಸ್ತೆಗಿಂತ ತೆಗ್ಗಾಗಿ ಅಪಘಾತಗಳು ನಡೆಯುತ್ತಿವೆ, ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿ ಹೆಚ್ಚಾಗಿ 3000 ಕ್ಕೂ ಹೆಚ್ಚು ಮ್ಯಾನ್‌ಹೋಲ್ ಕೋಣೆಗಳಿವೆ, ಇವು ಅಪಾಯಕಾರಿ ಎಂದು ಹಣೆಪಟ್ಟಿ ಕಟ್ಟಲಾಗಿದೆ. ಇವುಗಳಿಗೆ ಕೆಲವು ಸಂಸ್ಥೆಗಳ ಕಳಪೆ ಕೆಲಸವೇ ಕಾರಣ ಎಂದು BBMP ಅಭಿಪ್ರಾಯಪಟ್ಟಿದೆ.

ಕಳೆದ ಕೆಲವು ದಿನಗಳಿಂದ ಬರುತ್ತಿರುವ ದೂರುಗಳಿಂದ ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್ಎಸ್ಬಿ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಅಧಿಕಾರಿಗಳ ಜಂಟಿ ಪರಿಶೀಲನೆ ನಡೆಸಲಾಯಿತು ಇದರಲ್ಲಿ ಅಂತಹ ಅಪಾಯಕಾರಿ ಮ್ಯಾನ್‌ಹೋಲ್-ಗಳನ್ನು ಲೆಕ್ಕಮಾಡಲಾಗಿದ್ದು. ಇವು ಹೆಚ್ಚಾಗಿ ದಕ್ಷಿಣ ಮತ್ತು ಪಶ್ಚಿಮ ವಲಯದಲ್ಲಿವೆ. ಆದರೆ ನಗರದಾದ್ಯಂತ ಅಪಾಯಕಾರಿ ಮ್ಯಾನ್‌ಹೋಲ್ ಕೋಣೆಗಳಿವೆ ”ಎಂದು ಸೋಮಶೇಕರ್ ಹೇಳಿದ್ದಾರೆ.

Also read: ಪ್ಲಾಸ್ಟಿಕ್ ಉತ್ಪಾದಕರ ವಿರುದ್ದ ಕ್ರಮ ಕೈಗೊಳಲ್ಲು ಸೋತ BBMP, ಈಗ ನಾಗರೀಕರ ಕೈಯಲ್ಲಿ ಪ್ಲಾಸ್ಟಿಕ್‌ ಬ್ಯಾಗ್ ಕಂಡರೆ ದಂಡ ಹಾಕ್ತಾರಂತೆ!! ನಾಗರೀಕರ ಮೇಲೆ ಈ ಗದಾ ಪ್ರಹಾರ ಸರಿಯೇ??

BWSSB ಅಂಕಿಅಂಶಗಳ ಪ್ರಕಾರ, ನಗರದ 6,000 ಕಿ.ಮೀ ರಸ್ತೆಗಳಲ್ಲಿ 2,04,702 ಮ್ಯಾನ್‌ಹೋಲ್‌ಗಳಿವೆ. ಇದಲ್ಲದೆ, 4,830 ಮ್ಯಾನ್‌ಹೋಲ್‌ಗಳನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಮ್), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್), ಬಿಎಸ್‌ಎನ್‌ಎಲ್ ಮತ್ತು ಆಪ್ಟಿಕ್ ಫೈಬರ್ ಕೇಬಲ್‌ಗಳನ್ನು ಭೂಗರ್ಭದಲ್ಲಿ ಇಡುವ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಕಂಪನಿಗಳಿಗೆ ಸೇರಿವೆ. ರಸ್ತೆ ಗುಂಡಿಗಳು ಸರಿಪದಿಸಿದಂತೆ ಮ್ಯಾನ್‌ಹೋಲ್ ಗುಂಡಿಗಳು ಎದ್ದು ಕಾಣುತ್ತಿವೆ. ಚೇಂಬರ್ ತೆರೆಯುವಿಕೆಯು ರಸ್ತೆ ಮಟ್ಟಕ್ಕಿಂತ ಹೆಚ್ಚಿದ್ದರೆ, ಅದು ಅನಗತ್ಯ ರಸ್ತೆ ಉಬ್ಬುಗಳಿಗೆ ಕಾರಣವಾಗುತ್ತದೆ. ಇಂತಹ 3000 ಪ್ರಕರಣಗಳಲ್ಲಿ ಮ್ಯಾನ್‌ಹೋಲ್ ರಸ್ತೆ ಮಟ್ಟಕ್ಕಿಂತ ಕೆಳಗಿವೆ, ಇದರಿಂದಾಗಿ ಅವು ರಸ್ತೆಗಳ ಮಧ್ಯದಲ್ಲಿ ಆಳವಾದ ಗುಂಡಿಗಳಂತೆ ಕಾಣುತ್ತಿವೆ.

Also read: ಬೆಂಗಳೂರಿನ ಮೂಲ ಸೌಕರ್ಯಗಳು ಮಾತ್ರ ಸುಧಾರಣೆ ಕಾಣುತ್ತಿಲ್ಲ, ಆದರೆ BBMP ಮಾತ್ರ ತೆರಿಗೆ ಏರಿಕೆ ಮಾಡುತ್ತಲೇ ಇದೆ, ಇದು ಸರೀನಾ??

ಫೆಬ್ರವರಿಯಲ್ಲಿ ಜಂಟಿ ತಪಾಸಣೆ ನಡೆಸಿದ ನಂತರ 17,000 ಕ್ಕೂ ಹೆಚ್ಚು ಮ್ಯಾನ್‌ಹೋಲ್ ಕೋಣೆಗಳ ನೆಲಸಮಗೊಳಿಸುವಿಕೆಯನ್ನು ಸಂಸ್ಥೆ ಪೂರ್ಣಗೊಳಿಸಿದೆ. ಆದರು 3,240 ಅಸಮ ಮ್ಯಾನ್‌ಹೋಲ್ ಕೋಣೆಗಳ ಹೊಸ ಅಂಕಿ ಅಂಶವನ್ನು ಬಿಬಿಎಂಪಿ ತಂದಿದೆ ಎಂದು ಕೆಂಪರಾಮಯ್ಯ ಆರೋಪಿಸಿ BBMP ನಮಗೆ ಯಾವುದೇ ವರದಿ ನೀಡಬೇಕು ಅದು ಯಾವುದೇ ತಪಷಣೆ ನಡೆಸಿಲ್ಲ, ಇದರಿಂದ ವಾಹನ ಸವಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ BBMP ಅಧಿಕಾರಿಯೊಬ್ಬರು ಮ್ಯಾನ್‌ಹೋಲ್ ಕೋಣೆಗಳ ಬಗ್ಗೆ ನಮಗೆ ವಾಟ್ಸಾಪ್ ಮತ್ತು ಟ್ವಿಟರ್‌ನಲ್ಲಿ ಹಲವಾರು ದೂರುಗಳು ಬರುತ್ತಿವೆ ಎಂದು ಹೇಳಿದ್ದಾರೆ. ಹೀಗೆ ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಅಮಾಯಕ ಪ್ರಾಣವನ್ನು ತೆಗೆಯುತ್ತಿದ್ದಾರೆಎನ್ನುವ ಸಾರ್ವಜನಿಕರ ಮಾತುಗಳು ಕೇಳಿಬರುತ್ತಿವೆ.