ನಕಲಿ ಎಂದು 850 ರೂ.ಗೆ ಖರೀದಿಸಿದ ಉಂಗುರ ಅಸಲಿ ವಜ್ರದ ಉಂಗುರವಾಗಿ 6.5 ಕೋಟಿಗೆ ಮಾರಾಟವಾಯಿತು..

0
399

ಪ್ರತಿಯೊಬ್ಬರಿಗೂ ಆಭರಣಗಳನ್ನು ಹಾಕಿಕೊಳ್ಳುವ ಆಸೆ ಹೆಚ್ಚಾಗಿರುತ್ತೆ, ಆದರಿಂದ ಕೋಟಿ ಕೋಟಿ ಹಣ ನೀಡಿ ಮೈಮೇಲೆ ವಜ್ರದ, ಬಂಗಾರದ ವಸ್ತುಗಳನ್ನು ಹಾಕಿಕೊಳ್ಳುವ ಕ್ರೇಜಿ ಜನರು ತುಂಬಾನೇ ಇದ್ದಾರೆ. ಹಣ ಇದ್ದವರು ಇಷ್ಟೊಂದು ಬೆಲೆಯ ಆಭರಣಗಳನ್ನು ಖರೀದಿಸಿದರೆ ಹಣ ವಿಲ್ಲದವರು ಸಮಾದಾನಕ್ಕೆ ಪಾಸಿ, ಅಥವಾ ರೋಲ್ದ್ ಗೋಲ್ಡ್ ವಸ್ತುಗಳನ್ನು ಖರೀದಿಸಿ ಅವುಗಳನ್ನು ದರಿಸಿ ಸಂತಸ ವ್ಯಕ್ತಪಡಿಸುತ್ತಾರೆ. ಇಂತಹ ವಸ್ತುಗಳು ಬಹುತೇಕವಾಗಿ ಒಂದು ತಿಂಗಳು ಅಥವಾ ಒಂದು ವರ್ಷದ ವರೆಗೆ ಇರಬಹುದು ನಂತರ ಅವುಗಳು ದರಿಸಲು ಆಗುವುದಿಲ್ಲ. ಆದಕಾರಣ ಅವುಗಳನ್ನು ತಿಪ್ಪೆಗೆ ಎಸೆಯಬೇಕಾಗುತ್ತೆ.

@publictv.in

ಹೆಚ್ಚಿನ ಹಣ ನೀಡಿ ಖರೀದಿಸಿ ದರಿಸುವ ಆಭರಣಗಳು ಕಾಯಿವುದೇ ಒಂದು ಸಾಹಸವಾಗಿದೆ. ಇವುಗಳಿಗೆ ಇರುವ ಬೆಲೆಯನ್ನು ತಿಳಿದ ಕಳ್ಳರು ಯಗರಿಸುವ ಭಯವು ತುಂಬಾನೇ ಇರುತ್ತೆ, ಅದರಲ್ಲಿ ವಜ್ರದ ಆಭರಣಗಳು ಎಂದರೆ ಅಷ್ಟು ಸರಳವಾಗಿ ಉಪಯೋಗ ಮಾಡಲು ಸಾದ್ಯವಿಲ್ಲ ಏಕೆಂದರೆ ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳಿಗೆ ಹೆಚ್ಚಿನ ಸುರಕ್ಷತೆ ಬೇಕಾಗುತ್ತೆ ಈ ಕಾರಣದಿಂದ ಹಣ ಎಷ್ಟೋ ಜನರು ಆಭರಣಗಳನ್ನು ಬಳಕೆ ಮಾಡುತ್ತಿಲ್ಲ, ಇನ್ನು ಕೆಲವೊಬ್ಬರಂತೂ ಬ್ಯಾಂಕ್, ಸೆಕ್ಯೂರಿಟಿ ಸೇರಿದಂತೆ ಹಲವು ಲಾಕರ್-ಗಳಲ್ಲಿ ಇಟ್ಟಿರುತ್ತಾರೆ. ಇನ್ನೂ ಇವುಗಳನ್ನು ದರಿಸುವ ಆಸೆ ಇರುವ ಬಡವರು ಅಂತು ನಕಲಿ ಆಭರಣಗಳನ್ನು ಹಾಕಿಕೊಂಡು ಯಾವುದೇ ಭಯವಿಲ್ಲದೆ ಸಾಗುತ್ತಾರೆ. ಇವೆಲ್ಲ ಉದ್ದೇಶ ಇಟ್ಟುಕೊಂಡು ನಕಲಿ ಆಭರಣಗಳನ್ನು ಖರೀದಿಸಿದ ವಸ್ತುಗಳು ಅಸಲಿಯಾಗುವುದು ಸಾದ್ಯವೇ? ಅದು ಹೇಗೆ ಸಾದ್ಯ ಓರಿಜನಲ್ ಎಂದು ಖರೀದಿಸುವ ವಸ್ತುಗಳು ನಕಲಿಯಾದ ಉದಾಹರಣೆಗಳು ಸಾಕಷ್ಟಿವೆ ಆದರೆ ನಕಲಿ ಅಸಲಿಯಾದ ಉದಾಹರಣೆಗಳು ಒಂದು ಇಲ್ಲ ಆದರೆ ಇಲ್ಲೊಂದು ಅಚ್ಚರಿಯ ಬದಲಾವಣೆ ನಡೆದು ಒಂದು ಮಹಿಳೆ ಕೋಟಿ ಕೋಟಿ ಹಣ ತನ್ನದಾಗಿಸಿಕೊಂಡಿದ್ದಾಳೆ.

ಏನಿದು ನಕಲಿ ಅಸಲಿಯಾಗಿ?

@publictv.in

ಡೆಬ್ರಾ ಗಾಂಡರ್ಡ್(55), ಎಂಬ ಇಂಗ್ಲೆಂಡ್ ನಿವಾಸಿ ಮಹಿಳೆಗೆ ಆಭರಣವನ್ನು ದರಿಸುವ ಆಸೆ ಇರುತ್ತೆ, ಅದನ್ನು ತೆಗೆದುಕೊಳ್ಳಲು ಹಣ ವಿರುವುದಿಲ್ಲ ಆದಕಾರಣ ಮಹಿಳೆ 33 ವರ್ಷಗಳ ಹಿಂದೆ ರಸ್ತೆ ಬದಿಯ ಅಂಗಡಿಯಲ್ಲಿ 850 ರೂ. ನೀಡಿ ರಿಂಗ್ ಖರೀದಿಸಿದ್ದರು. ಹೀಗೆ ಹಲವು ವರ್ಷ ಉಂಗುರವನ್ನು ಧರಿಸಿದ ಡೆಬ್ರಾ ಇತ್ತೀಚೆಗೆ ಅದನ್ನು ಮಾರಲು ನಿರ್ಧರಿಸಿದ್ದರು. ಹೀಗಾಗಿ ಸಮೀಪದ ಅಂಗಡಿಗೆ ತೆರಳಿದಾಗ ಅದು ನಕಲಿ ಅಲ್ಲ ಅಸಲಿ ಎಂಬುದಾಗಿ ಗೊತ್ತಾಗಿದೆ. ಈ ವಿಷಯ ತಿಳಿದ ಮಹಿಳೆ ಆಶ್ಚರ್ಯಕ್ಕೆ ಒಳಗಾದರು.
ಇಷ್ಟೆಲ್ಲಾ ಆದ ಬಳಿಕ ಅಂಗಡಿಯವನ ಮಾತು ನಂಬದ ಡೆಬ್ರಾ ನಗರದ ಪ್ರಸಿದ್ಧ ವಜ್ರ ವ್ಯಾಪಾರಿ ಬಳಿ ತೆರಳಿ ಉಂಗುರದ ಗುಣಮಟ್ಟವನ್ನು ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ವ್ಯಾಪಾರಿ ನಿಮ್ಮ ಉಂಗುರ 26.27 ಕ್ಯಾರಟ್ ವಜ್ರದ ಹರಳನ್ನು ಹೊಂದಿದೆ. ಪ್ರಾಚೀನ ಕಾಲದ ಉಂಗುರ ಇದಾಗಿದ್ದು, ಪ್ರದರ್ಶನಕ್ಕಿರಿಸಿ ಮಾರುವುದರಿಂದ ಹೆಚ್ಚಿನ ಹಣ ನಿಮ್ಮದಾಗಲಿದೆ ಎಂದು ಸಲಹೆ ನೀಡಿದ್ದರು. ವ್ಯಾಪಾರಿಯ ಸಲಹೆ ಮೇರೆಗೆ ಉಂಗುರವನ್ನು ಡೆಬ್ರಾ ಪ್ರದರ್ಶನಕ್ಕೆ ಇರಿಸಿದ್ದರು. ಇದನ್ನು ನೋಡಿದ ಜನರು ಇಷ್ಟೊಂದು ಅಮೂಲ್ಯ ವಸ್ತು ನಿಮ್ಮ ಕೈಯಲಿ ಇತ್ತ ಅಂತ ಹರ್ಷ ವ್ಯಕ್ತಪಡಿಸಿದರು. ಹಾಗೆ ಹರಾಜಿನಲ್ಲಿ ನೇರೆದ ನೂರಾರು ಜನರು ಈ ವಜ್ರವನ್ನು ಪಡೆಯಲೇ ಬೇಕು ಅಂತ ಹೆಚ್ಚಿನ ಮೌಲ್ಯ ಕೂಗಿದರು ಈ ವೇಳೆ ನಗರದ ಖ್ಯಾತ ವ್ಯಕ್ತಿಯೊಬ್ಬರು ಹರಾಜಿನಲ್ಲಿ 6 ಕೋಟಿ 86 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ತೆರಿಗೆ ಕಡಿತಗೊಳಿಸಿದಾಗ ಡೆಬ್ರಾರ ಪಾಲಿಗೆ 4.5 ಕೋಟಿ ರೂ. ಬಂದಿದೆ.

Also read: ಮತ್ತೊಂದು ವೈದ್ಯರ ಯಡವಟ್ಟು; ಶಸ್ತ್ರಚಿಕಿತ್ಸೆಯ ಬಳಿಕ 9 ಇಂಚಿನ ಕತ್ತರಿಯನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ್ರು..