3700 ಕೋಟಿ ರೂ. ಆನ್‍ಲೈನ್‍ ವಂಚನೆ: ಇತಿಹಾಸದ ಅತೀ ದೊಡ್ಡ ಕ್ಯಾಶ್‍ಲೆಸ್‍ ವಂಚನೆ

0
767

ಜಗತ್ತಿನ ಅತೀ ದೊಡ್ಡ ಇಂಟರ್‍ ನೆಟ್‍ ವಂಚನೆ ಪ್ರಕರಣವನ್ನು ಭೇಧಿಸಿರುವ ಉತ್ತರ ಪ್ರದೇಶ ಪೊಲೀಸರು ಮೂವರನ್ನು ಬಂಧಿಸಿ, 500 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಈ ಮೂವರು 65 ಲಕ್ಷ ಜನರಿಂದ 3500 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ವಿಶೇಷ ಕಾರ್ಯಾಪಡೆ ಈ ಪ್ರಕರಣವನ್ನು ಭೇದಿಸಿದ್ದು, ಅನುಭವ್‍ ಮಿತ್ತಲ್‍, ಶ್ರೀಧರ್‍ ಪ್ರಸಾದ್ ಮತ್ತು ಮಹೇಶ್‍ ದಯಾಲ್‍ ಅವರನ್ನು ಬಂಧಿಸಿದ್ದಾರೆ.

Socialtradr.biz ಎಂಬ ವೆಬ್‍ಸೈಟ್ ನಡೆಸುತ್ತಿದ್ದ ಈ ಮೂವರು ಬಂಡವಾಳ ಹೂಡಿಕೆದಾರರು 5,700ರಿಂದ 57,500 ಕೋಟಿವರೆಗೆ ಹೂಡಿಕೆ ಮಾಡಬಹುದಾಗಿತ್ತು. ಕಂಪನಿ ಅಕೌಂಟ್‍ ಗೆ ಒಮ್ಮೆ ಕ್ಲಿಕ್ ‍ಮಾಡಿದರೆ 5 ಡಾಲರ್‍ ದೇಣಿಗೆ ಪಡೆಯಲಾಗುತ್ತದೆ. ಈ ಮೂಲಕ ಕಂಪನಿಯ ಷೇರುದಾರರಾಗಬಹುದು. 5 ಡಾಲರ್‍ ನೀಡಿದರೆ ನೀವು 6 ಡಾಲರ್‍ ಆದಾಯ ಗಳಿಸಬಹುದು ಎಂದು ವೆಬ್‍ಸೈಟ್‍ನಲ್ಲಿ ಆಮೀಷ ಒಡ್ಡಲಾಗಿತ್ತು.

ಅಬ್ಲೆಜ್‍ ಇನ್ಫೊ ಸೋಲುಷನ್ಸ್ ಪ್ರವೇಟ್‍ ಲಿಮಿಟೆಡ್‍ ಹೆಸರಿನಲ್ಲಿ ನೋಯ್ಡಾದಲ್ಲಿ ಕಂಪನಿ ನೋಂದಣಿ ಮಾಡಿಸಿಕೊಂಡಿದ್ದ ಈ ಮೂವರು ಆರೋಪಿಗಳು ಪದೇಪದೆ ವೆಬ್‍ಸೈಟ್‍ ವಿಳಾಸ ಬದಲಿಸುವ ಮೂಲಕ 65 ಲಕ್ಷ ಜನರಿಂದ 3700 ಕೋಟಿ ರೂ.ವನ್ನು ಈ ರೀತಿ ದೇಣಿಗೆ ಪಡೆದು ವಂಚಿಸಿದ್ದರು.
ಗಜಿಯಾಬಾದ್‍ನಿಂದ ಬಿ.ಟೆಕ್‍ ಪದವಿ ಪಡೆದಿದ್ದ ಮಿತ್ತಲ್‍ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಪ್ರಸಾದ್ ಎಂಬಾತ ಆಂಧ್ರಪ್ರದೇಶದ ವಿಶಾಖಪಟ್ಟಣದ ನಿವಾಸಿಯಾಗಿದ್ದಾನೆ. ದಯಾಲ್‍ ಎಂಬಾತ ಉತ್ತರ ಪ್ರದೇಶದ ಮಥುರಾದ ನಿವಾಸಿಯಾಗಿದ್ದಾನೆ.

2015 ಆಗಸ್ಟ್ ನಲ್ಲಿ ಆರಂಭವಾದ ಈ ವೆಬ್‍ಸೈಟ್ ನಾಲ್ಕು ಪ್ಯಾಕೇಜ್‍ಗಳನ್ನು ಘೋಷಿಸಿತ್ತು. ಆಸಕ್ತರು ಕಂಪನಿ ಅಕೌಂಟ್‍ ಮೇಲೆ ಕ್ಲಿಕ್‍ ಮಾಡಿ 5 ಡಾಲರ್‍ ಪಾವತಿಸಿದ ಮೇಲೆ ನಿಮಗೆ ಲಿಂಕ್‍ ಕಳುಹಿಸಿದ ಪೇಜ್‍ ಲೈಕ್‍ ಮಾಡಿ ಎಂಬ ಸಂದೇಶ ಬರುತಿತ್ತು. ಆ ಸಂದೇಶ ನಕಲಿ ಆಗಿರುತಿತ್ತು. ಈ ರೀತಿ ಲಕ್ಷಾಂತರ ಜನರಿಗೆ ವಂಚಿಸಿದ್ದು, ಇದರ ಹಿಂದೆ ಇನ್ನೆಷ್ಟು ಮಂದಿ ಇದ್ದಾರೆ ಎಂದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.