3ಡಿ ಪ್ರಿಂಟರ್ ಮೂಲಕ ಬರ್ಗರ್!

0
424

ಕಂಪ್ಯೂಟರ್ ಗೈಡೆಡ್ ಸಾಫ್ಟ್ ವೇರ್ ನಿರ್ದೇಶನದಲ್ಲಿ ಹಿಟ್ಟು ಜೆಲ್, ಪುಡಿಗಳು ಮತ್ತು ದ್ರವ ಪದಾರ್ಥಗಳನ್ನು ಬಳಸಿಕೊಂಡು ಆಹಾರ ತಯಾರಿಸುವ 3ಡಿ ಆಹಾರ ಪ್ರಿಂಟರ್ ಅನ್ನು ವಿಜ್ಞಾನಿಗಳು ಅಭಿವೈದ್ಧಿಪಡಿಸಿದ್ದಾರೆ. ಸಂಶೋಧನೆಯ ಆರಂಭಿಕ ಹಂತದಲ್ಲಿರುವ ಈ ಸಾಧನೆ ಪ್ರೊಟೊಟೈಪ್ ನೋಡಲು ಕಾಫಿ ಮೆಷಿನ್ ನಂತೆ ಇದೆ.

‘ಫುಡ್ ಪ್ರಿಂಟರ್ ಎಂದರೆ ಅವು ನಮ್ಮ ಎಲ್ಲಾ ಸಾಂಪ್ರದಾಯಿಕ ಅಡುಗೆ ಪದ್ಧತಿಯನ್ನು ಬದಲಾಯಿಸಲಾರವು. ಆದರೆ, ಇವು ಕೆಲವು ಪೌಷ್ಟಿಕಾಂಶಗಳ್ಳುಳ್ಳ ಆಹಾರಗಳನ್ನು ಡಿಜಿಟಲ್ ರೆಸಿಪಿಗಳನ್ನು ತಯಾರಿಸಬಲ್ಲವು’ ಎಂದು ಅಮೆರಿಕಾ ಕೊಲಂಬಿಯಾ ಯೂನಿವರ್ಸಿಟಿಯ ಸಂಶೋಧಕರಾದ ಹೂಡ್ ಲಿಪ್ಸನ್ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ಕಿಚನ್ ಟೇಬಲ್’ಗೂ 3ಡಿ ಪ್ರಿಂಟಿಂಗ್ ಎಂಬ ಕಿಲ್ಲರ್ ಆ್ಯಪ್ ಭವಿಷ್ಯದಲ್ಲಿ ಆಗಮಿಸಲಿದೆ. ಈ ಪ್ರಿಂಟರ್ ನೊಳಗೆ ರೋಬೊಟಿಕ್ ಆಮ್ (ರೊಬೊ ಕೈ)ಗಳಿದ್ದು, ಆ ಕೈಯೊಳಗೆ ಬಿಸಿ ಮಾಡುವ ಸಾಧನೆಗಳು ಇರಲಿವೆ’ ಎಂದು ಅವರು ಹೇಳಿದ್ದಾರೆ.

ಸಾಂಪ್ರದಾಯಿಕ ಅಡುಗೆಗಿಂತ 3ಡಿ ಪ್ರಿಂಟಂರ್ ಮೂಲಕ ವಿವಿಧ ಪದಾರ್ಥಗಳನ್ನು, ವಿಭಿನ್ನ ಉಷ್ಣತೆಯಲ್ಲಿ, ವಿಭಿನ್ನ ರೀತಿಯಲ್ಲಿ ಬೇಯಿಸಲು ಸಾಧ್ಯವಿದೆ. ಅಂದರೆ, ಒಂದು ತಿಂಡಿಯೊಳಗೆ ಇರುವ ವಿವಿಧ ಪದಾರ್ಥಗಳನ್ನು ಭಿನ್ನ ಭಿನ್ನ ಉಷ್ಣತೆಯಲ್ಲಿ ಬೇಯಿಸಿ ಅಚ್ಚುಕಟ್ಟಾಗಿ ತಿಂಡಿ ರೆಡಿಮಾಡುವ ಸಾಮರ್ಥ್ಯ ಇರಲಿದೆ’ ಎಂದಿದ್ದಾರೆ.