4 ಗಂಟೆಯಲ್ಲಿ ೭ ಶಿಬಿರ ಧ್ವಂಸ, ೩೮ ಉಗ್ರರು, ೯ ಪಾಕ್ ಸೈನಿಕರು ಬಲಿ

0
1258

ಮಧ್ಯರಾತ್ರಿ ೧೨.೩೦ಕ್ಕೆ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನಾ ಪಡೆ ೭-೮ ಶಿಬಿರಗಳ ಮೇಲೆ ದಾಳಿ ನಡೆಸಿ ೩೮ ಉಗ್ರರು ಹಾಗೂ ಅವರ ನೆರವಿಗೆ ಬಂದ ೯ ಪಾಕ್ ಸೈನಿಕರನ್ನು ಹತ್ಯೆಗೈಯಲು ತೆಗೆದುಕೊಂಡಿದ್ದು ಕೇವಲ ೪ ಗಂಟೆ ಮಾತ್ರ.

ಭಾರತೀಯ ಸೇನೆ ತನ್ನ ತಾಕತ್ತು ಏನು ಎಂಬುದನ್ನು ತೋರಿಸಿಕೊಟ್ಟಿದೆ. ಈ ಕ್ಷಿಪ್ರ ಕಾರ್ಯಾಚರಣೆಯ ಸಿದ್ಧತೆಗೆ ತೆಗೆದುಕೊಂಡಿದ್ದು ೧೦ ದಿನ ಮಾತ್ರ ಎಂಬುದು ಮತ್ತೊಂದು ವಿಶೇಷ.

ಸರಕಾರ ರಕ್ಷಣಾ ಸಲಹೆಗಾರ ಧಾಭೊಳ್ ಈ ಮಹತ್ವದ ಕಾರ್ಯಾಚರಣೆ ಹಿಂದಿನ ಸೂತ್ರಧಾರರಾಗಿದ್ದಾರೆ.
ಉರಿಯಲ್ಲಿ ಏಕಾಏಕಿ ದಾಳಿ ನಡೆಸಿದ ಉಗ್ರರು ೧೮ ಯೋಧರ ಹತ್ಯೆ ನಡೆಸಿತ್ತು. ಇದರ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಭಾರತದತ್ತ ಬೆರಳು ಮಾಡಿದ್ದರು.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಭಾರತ ತಿರುಗೇಟು ನೀಡಲು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಿತ್ತು.
ಗುರುವಾರ ಮಧ್ಯರಾತ್ರಿ ೧೨.೩೦ಕ್ಕೆ ಕಾರ್ಯಾಚರಣೆ ಆರಂಭಿಸಿದ ಭಾರತೀಯ ಇದಕ್ಕಾಗಿ ೩ ಹೆಲಿಕಾಫ್ಟರ್ ಬಳಸಿತ್ತು. ಅಲ್ಲದೇ ತನ್ನ ಕಾರ್ಯಾಚರಣೆಯನ್ನು ಡ್ರೋಣ್ ಮೂಲಕ ಸೆರೆಹಿಡಿದು ಸಾಕ್ಷಿಯನ್ನೂ ಸಂಗ್ರಹಿಸಿಟ್ಟುಕೊಂಡಿತು.

ಹೈ ಅಲರ್ಟ್

ದಾಳಿ ಮಾಹಿತಿ ಬೆನ್ನಲ್ಲೇ ಪಾಕಿಸ್ತಾನ ತಿರುಗೇಟು ನೊಡುವ ಮಾತುಗಳನ್ನು ಅಡಿತು. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲದೆ ಕಾರ್ಯ ನಿರ್ವಹಿಸುವ ಪೊಲೀಸ್, ನರ್ಸ್, ವೈದ್ಯರು ಮತ್ತಿತರರಿಗೆ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಯಿತು.
ವ್ಯಾಪಕ ಪ್ರಶಂಸೆ

ದಾಳಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಮಾಹಿತಿ ನೀಡಿದ್ದರು. ದಾಳಿ ನಂತರ  ಸರ್ವಪಕ್ಷ ಸಭೆಯಲ್ಲಿ ವಿವರಣೆ ನೀಡಲಾಯಿತು. ಭಾರತೀಯ ಸೇನೆಯ ಸಾಮರ್ಥ್ಯಕ್ಕೆ ಎಲ್ಲರೂ ಮುಕ್ತವಾಗಿ ಪ್ರಶಂಶಿಸಿಸಿಸರು.