ನೀರಿನಲ್ಲಿ ಬಿದ್ದ ಸ್ನೇಹಿತೆಯ ಪ್ರಾಣ ಉಳಿಸಿದ ೪ ವರ್ಷದ ಹುಡುಗಿ…

0
518

ಎಷ್ಟೋ ಜನರಿಗೆ ಆಪತ್ಕಾಲದಲ್ಲಿ ಏನು ಮಾಡಬೇಕೆಂದು ತೋಚುವುದಿಲ್ಲ ಆದರೆ , ನಾಲ್ಕು ವರ್ಷದ ಚಿಕ್ಕ ಬಾಲಕಿಯ ಸಮಯಪ್ರಜ್ಞೆ ಆಕೆಯ ಪುಟಾಣಿ ಗೆಳತಿಯ ಜೀವ ಉಳಿಸಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ , ಈ ಬಾಲಕಿಯ ಹೆಸರು ಚಂದನಾ , ಅಜಿತ್ ಕುಮಾರ್ ಮತ್ತು ಶಿಲ್ಪಾ ದಂಪತಿಯ ಮಗಳು, ಇವರು ಮೂಲತಃ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದವರು , ನ.೧೦ ರಂದು ಈ ಘಟನೆ ನಡೆದಿದೆ.

ಈ ಘಟನೆ ನಡೆಯುವ ಮುನ್ನ ಅಜಿತ್ ಹಾಗು ಶಿಲ್ಪಾ ಚಂದನಾಳಿಗೆ ಅಂಗಡಿಯಲ್ಲಿ ತಿಂಡಿ ಕೊಡಿಸುತ್ತಿದ್ದರು. ಇದೇ ಸಮಯದಲ್ಲಿ ಚಂದನಾಳ ಗೆಳತಿ ರಿತು (ಚಂದ್ರಶೇಖರ್ ಮತ್ತು ವಿನುತಾ ಅವರ ಮಗಳು) ತನ್ನ ಚಪ್ಪಲಿಗೆ ಮೆತ್ತಿಕೊಂಡಿರುವ ಸಗಣಿ ತೊಳೆಯಲು ಚಿಕ್ಕ ಕಟ್ಟೆ ಬಳಿಗೆ ಹೋಗುತ್ತಿರುವುದನ್ನು ಚಂದನಾ ನೋಡಿದಳು , ಚಂದನಾ ರಿತುವನ್ನು ಮಾತನಾಡಿಸಲು ಕಟ್ಟೆ ಬಳಿ ಹೋದಳು.

ಆದರೆ ಅಷ್ಟರಲ್ಲಿ ರಿತು ಕಾಲು ಜಾರಿ ಕಟ್ಟೆಯೊಳಗೆ ಬಿದ್ದಿದ್ದಾಳೆ , ಇದನ್ನು ನೋಡಿದ ಚಂದನಾ ಕೂಡಲೇ ರೀತುವಿನ ಮನೆಗೆ ಓಡಿಹೋಗಿ ರಿತುವಿನ ತಂದೆತಾಯಿಗೆ ಮತ್ತು ತನ್ನ ತಂದೆಗೆ ವಿಷಯ ತಿಳಿಸಿ ಅಳಲಾರಂಭಿಸಿದ್ದಾಳೆ. ಮೊದಲು ಚಂದನ ಹೇಳಿದ್ದು ಅರ್ಥಮಾಡಿಕೊಳ್ಳದ ಮನೆಯವರು ಚಿಕ್ಕ ಹುಡುಗಿ ಏನೇನೋ ಹೇಳುತ್ತಿದ್ದಾಳೆ ಎಂದು ಸುಮ್ಮನಾದರು. ಇದಾದ ಮೇಲೆ ಚಂದನಾ ಮತ್ತೆ ಅಳುವನ್ನು ಜೋರು ಮಾಡಿದ್ದಳು , ಇದರಿಂದ ಗಾಬರಿಗೊಂಡ ಪೋಷಕರು ಕಟ್ಟೆ ಬಳಿ ಓಡಿ ಬಂದು ನೋಡಿದಾಗ ರಿತು ನೀರಿಗೆ ಬಿದ್ದಿರುವುದು ಕಂಡಿದೆ , ತಕ್ಷಣ ರಿತುವನ್ನು ನೀರಿನಿಂದ ಮೇಲಿತ್ತಿದರು.

ಆದರೆ ಅದಾಗಲೇ ರಿತು ತೀವ್ರ ಅಸ್ವಸ್ಥಳಾಗಿದ್ದಳು , ತಕ್ಷಣ ರಿತುವನ್ನು ಹತ್ತಿರದ ಕೆಎಂದೊಡ್ಡಿ ಆಸ್ಪತ್ರೆಗೆ ದಾಖಲಿಸಲಾಯಿತು , ಎರಡು ದಿನಗಳ ಚಿಕಿತ್ಸೆಯ ನಂತರ ಈಗ ರಿತುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ , ಈಗ ಅಣ್ಣೂರಿನೆಲ್ಲೆಡೆ ಚಂದನಾಳ ಸಾಹಸ , ಸಮಯಪ್ರಜ್ಞೆಯ ಬಗ್ಗೆ ಜನ ಹೊಗಳಿಕೆಯ ಮಾತನಾಡುತ್ತಿದಾರೆ , ಆದರೆ ಚಂದನಾಗೆ ಮಾತ್ರ ತನ್ನ ಸ್ನೇಹಿತೆ ರಿತು ಮತ್ತೆ ಮರಳಿ ಮನೆಗೆ ಬಂದಿರುವುದು ಖುಷಿತಂದಿದೆ.