ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರ ರೈತರ ಮನ ಗೆಲ್ಲಲು ಹೊಸ ಮಾದರಿಯ ಯೋಜನೆಯನ್ನು ಜಾರಿಗೆ ತಂದು ರೈತರ ಮನ ತನ್ನತ ವಾಲಿಸುತ್ತಿದೆ. ಇದಕ್ಕಾಗಿ ಪ್ರಧಾನಿ ಸಚಿವಾಲಯ ಮತ್ತು ನೀತಿ ಆಯೋಗ ಸಭೆ ನಡೆಸಿ ಈ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದ್ದು, ರೈತರ ಸಾಲಮನ್ನಾಕ್ಕೆ ಪರ್ಯಾಯವಾಗಿ ಕೃಷಿ ಪ್ರೋತ್ಸಾಹ ಯೋಜನೆ ಜಾರಿಗೆ ಸಜ್ಜಾಗಿರುವ ಕೇಂದ್ರ ಸರ್ಕಾರ, ತೆಲಂಗಾಣ ಮಾದರಿಯಂತೆ ದೇಶದ ತುಂಬೆಲ್ಲ ಈ ಯೋಜನೆ ಜಾರಿಗೆ ತಂದು ಎಕರೆಗೆ 4000 ರೂ. ಪ್ರೋತ್ಸಾಹ ಧನ ನೀಡಲು ಸಜ್ಜಾಗಿದೆ ಅಂತೆ.
ಏನಿದು ಯೋಜನೆ?
ಕೇಂದ್ರ ಸರ್ಕಾರ ಪ್ರತಿ ಎಕರೆಗೆ 4 ಸಾವಿರ ರೂ. ನೇರ ನಗದು ಘೋಷಣೆ ಮಾಡುವ ಸಾಧ್ಯತೆಯಿದೆ.ಅಷ್ಟೇ ಅಲ್ಲ, ಪ್ರತಿ ರೈತರಿಗೆ 1 ಲಕ್ಷ ರೂ. ಬಡ್ಡಿ ರಹಿತ ಸಾಲ ಸೌಲಭ್ಯವನ್ನೂ ಇದೇ ವೇಳೆ ಘೋಷಿಸಬಹುದಾಗಿದೆ. ರೈತರ ಸಾಲಮನ್ನಾಕ್ಕೆ ಪರ್ಯಾಯವಾಗಿ ಕೃಷಿ ಪ್ರೋತ್ಸಾಹ ಯೋಜನೆ ಜಾರಿಗೆ ಸಜ್ಜಾಗಿರುವ ಕೇಂದ್ರ ಸರ್ಕಾರ, ತೆಲಂಗಾಣ ಮಾದರಿಯಂತೆ ಬಿತ್ತನೆ ಅವಧಿಯಲ್ಲಿ ರೈತರಿಗೆ ನೇರವಾಗಿ ಹಣ ಪಾವತಿಸುವ ಹಾಗೂ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದ್ದು ಹಣಕಾಸು ಇಲಾಖೆ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ಇಂಥದ್ದೊಂದು ವರದಿ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ.
ಈ ಯೋಜನೆಯ ಹಿನ್ನೆಲೆ ಏನು?
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ 3 ರಾಜ್ಯಗಳಲ್ಲಿ ಭಾರಿ ಸೋಲುಂಡ ಹಿನ್ನೆಲೆಯಲ್ಲಿ ರೈತರಿಗಾಗಿ ಯೋಜನೆ ಗಳನ್ನು ಪ್ರಕಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಪ್ರಧಾನಿ ಸಚಿವಾಲಯ ಮತ್ತು ನೀತಿ ಆಯೋಗ ಸಭೆ ನಡೆಸಿ ಈ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದ್ದು, ಈ ವಾರದಲ್ಲೇ ಈ ಯೋಜನೆಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ವಿವಿಧ ಖಾತೆಗಳ ಅಧಿಕಾರಿಗಳೆಲ್ಲರೂ ಒಟ್ಟಾಗಿ ಈ ಯೋಜನೆಯನ್ನು ಅಂತಿಮಗೊಳಿಸುವಂತೆ ಪ್ರಧಾನಿ ಸಚಿವಾಲಯ ಸೂಚಿಸಿತ್ತು.
ಶೂನ್ಯ ಬಡ್ಡಿರಹಿತ 1 ಲಕ್ಷ ರೂ. ಸಾಲ:
Also read: SSLC ಪಾಸಾದ ಅಭ್ಯರ್ಥಿಗಳಿಗೆ ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಕಾನ್ಸ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..
ಈ ಯೋಜನೆ ಯಶಸ್ವಿಯಾದರೆ ಪ್ರತಿವರ್ಷದ ಬಿತ್ತನೆ ಅವಧಿಯಲ್ಲಿ ರೈತರ ಪ್ರತಿ ಎಕರೆಗೆ 4 ಸಾವಿರ ರೂ. ಪ್ರೋತ್ಸಾಹ ಧನ ಸಿಗಲಿದೆ. ಜತೆಗೆ ನೀರಾವರಿ ಪ್ರದೇಶದ ರೈತರಿಗೆ ಪ್ರತಿ ಎಕರೆಗೆ ಸುಮಾರು 8 ಸಾವಿರ ರೂ.ವರೆಗೆ ಹಣ ಪಡೆಯಲು ಅವಕಾಶವಿದೆ. ಈ ಹಣ ಬಿತ್ತನೆ ಅವಧಿಯಲ್ಲೇ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಹೆಕ್ಟೇರ್ಗೆ 50 ಸಾವಿರ ರೂ.ಗಳಂತೆ ಗರಿಷ್ಠ 1 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿರಹಿತ ಸಾಲ ದೊರೆಯಲಿದೆ ಈಗಿರುವ ಶೇ.4ರ ಬಡ್ಡಿದರದ ಬದಲಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದು ಕೇಂದ್ರದ ನಿರ್ಧಾರವಾಗಿದೆ. ಹಾಗೆಯೇ ರಸಗೊಬ್ಬರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ 70 ಸಾವಿರ ಕೋಟಿ ರೂ. ಸಬ್ಸಿಡಿ ಹಣವನ್ನೂ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕೇಂದ್ರ ನಿರ್ಧರಿಸಿದೆ.
ಈ ಯೋಜನೆ ಹೊರೆಯಾಗಲಿದೆ:
ನೇರ ನಗದು ಪಾವತಿಗಾಗಿ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ಹೊರೆಯಾದರೆ, ಬಡ್ಡಿ ರಹಿತ ಸಾಲಕ್ಕಾಗಿ ಸರ್ಕಾರಕ್ಕೆ 28-30 ಸಾವಿರ ಕೋಟಿ ರೂ.ಹೊರೆಯಾಗಲಿದೆ. ಈಗಾಗಲೇ ರಸಗೊಬ್ಬರಕ್ಕೆ ನೀಡಲಾಗುತ್ತಿರುವ ಸಬ್ಸಿಡಿ ಹಾಗೂ ಇತರ ಸಣ್ಣ ಸ್ಕೀಮ್ಗಳನ್ನು ಇದರಲ್ಲಿಸೇರ್ಪಡೆಗೊಳಿಸುವ ಬಗ್ಗೆ ತಿಳಿಸಿದ್ದು. ಇವುಗಳ ಜತೆಗೆ ಇನ್ನಷ್ಟು ರೈತ ಉಪಯೋಗಿ ಯೋಜನೆಗಳನ್ನು ಕೇಂದ್ರ ಸರ್ಕಾರ ವಾರಾಂತ್ಯದೊಳಗೆ ಘೋಷಿಸುವ ಸಾಧ್ಯತೆಯಿದೆ ಅಂತೆ.