4ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಇನ್ನಿಂಗ್ಸ್ ಜಯ

0
594

ಮುಂಬೈ: ಭಾರತ–ಇಂಗ್ಲೆಂಡ್‌ ಟೆಸ್ಟ್‌ ಸರಣಿಯ 4ನೇ  ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ  3–0 ಅಂತರದ ಮುನ್ನಡೆ ಕಾಯ್ದು ಕೊಂಡಿದೆ.

4ನೇ ದಿನದಾಟದ ಅಂತ್ಯಕ್ಕೆ 2 ನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ಕುಕ್ ಪಡೆ 5 ನೇ ದಿನದಾಟದ ಆರಂಭದಲ್ಲೇ ಆಲೌಟಾಗುವ ಮೂಲಕ ಸೋಲನ್ನಪ್ಪಿಕೊಂಡಿತು.

ಇಂಗ್ಲೆಂಡ್ ಪರ ಕುಕ್ 18 ,ಜೆ ರೂಟ್ 77 ,ಬೇರ್ಸ್ಟೋವ್ 53 ಮತ್ತು ಸ್ಟೋಕ್ಸ್ 18 ರನ್ಗಳಿಸಿದರೆ ಉಳಿದ ಯಾವ ಆಟಗಾರರೂ ಒಂದಂಕಿ ದಾಟಲಿಲ್ಲ.

ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ ಕಿತ್ತಿದ್ದ ಸ್ಪಿನ್ನರ್ ಆರ್ ಅಶ್ವಿನ್ 2ನೇ ಇನ್ನಿಂಗ್ಸ್ನಲ್ಲೂ 6 ವಿಕೆಟ್ ಕಬಳಿಸಿ ಗಮನ ಸೆಳೆದರು.

ಒಂದೇ ವರ್ಷದಲ್ಲಿ ಮೂರನೇ ದ್ವಿಶತಕ ಬಾರಿಸಿದ ಶ್ರೇಯಕ್ಕೆ ಪಾತ್ರರಾದ ವಿರಾಟ್ (235; 340ಎ, 25ಬೌಂ, 1ಸಿ)   ಮತ್ತು ಜಯಂತ್ ಯಾದವ್ (104; 204ಎ, 15ಬೌಂ) ಅವರ ದಾಖಲೆಯ ಜೊತೆಯಾಟದಿಂದಾಗಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ 631 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.  231 ರನ್‌ಗಳ ಮುನ್ನಡೆ ಸಾಧಿಸಿತು.

 

ಎರಡನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಇಂಗ್ಲೆಂಡ್ ತಂಡವು 55.3 ಓವರ್‌ಗಳಲ್ಲಿ ಎಲ್ಲ  ವಿಕೆಟ್‌ ಕಳೆದುಕೊಂಡು  195 ರನ್ ಗಳಿಸುವ ಮೂಲಕ ಸೋಲು ಕಂಡಿತು.  ಅರ್ಧಶತಕ ಗಳಿಸಿದ್ದ  ಜಾನಿ ಬೆಸ್ಟೊ (ಬ್ಯಾಟಿಂಗ್ 50) ಇಂದು ಬಹ ಬೇಗನ್ ಔಟ್‌ ಆದ್ದರಿಂದ  ಭಾರತ ಸುಲಭವಾಗಿ ಜಯ ಪಡೆಯಿತು.

 

ಒಂದೇ ವರ್ಷದಲ್ಲಿ ಮೂರನೇ ದ್ವಿಶತಕ ದಾಖಲಿಸಿ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟಿದರು. ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್‌ ಅವರು ಒಂದು ವರ್ಷದಲ್ಲಿ ನಾಲ್ಕು ದ್ವಿಶತಕ ಗಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.  ಕ್ಲಾರ್ಕ್ ಅವರ ದಾಖಲೆ ಸರಿಗಟ್ಟಲು ಕೊಹ್ಲಿ ಇನ್ನೊಂದು ದ್ವಿಶತಕ ದಾಖಲಿಸಬೇಕು.

 

ಸ್ಕೋರ್‌ವಿವರ

ಇಂಗ್ಲೆಂಡ್  ಮೊದಲ ಇನಿಂಗ್ಸ್‌  400

ಭಾರತ  ಪ್ರಥಮ ಇನಿಂಗ್ಸ್  631

(182.3 ಓವರ್‌ಗಳಲ್ಲಿ)

ಇಂಗ್ಲೆಂಡ್  ದ್ವಿತೀಯ ಇನಿಂಗ್ಸ್  6 ಕ್ಕೆ  195

(55.3 ಓವರ್‌ಗಳಲ್ಲಿ)