ಮದುವೆಯಾದವರು ಈ 5 ಗುಣಗಳನ್ನು ಅನುಸರಿಸದೆ ಇದ್ದಲ್ಲಿ, ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವು ಖಂಡಿತ!

0
2938

Kannada News | kannada Useful Tips

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ್ದು. ನಮ್ಮವರು, ನಮ್ಮ ಸಂಸಾರ, ನಮ್ಮ ಮಗ ಎನ್ನುವ ಹೊಸ ಪ್ರಪಂಚದ ಸೃಷ್ಟಿಯಾಗುತ್ತದೆ. ಮದುವೆಯ ನಂತರ ಜೀವನ ಸುಖಕರವಾಗಿರಲಿ, ಎಂದು ಪ್ರತಿಯೊಬ್ಬರು ಆಶಿಸುತ್ತಾರೆ. ಹೀಗಿರುವಾಗ ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ಪ್ರತಿಯೊಬ್ಬರ ಜೀವನ ಸ್ವರ್ಗದಂತಿದೆ ಅಂತ ಹೇಳುತ್ತಾರೆ, ಮತ್ತು ಕೊನೆಯವರೆಗೂ ಜೊತೆಯಲ್ಲಿ ಬಾಳುತ್ತೇವೆ ಎಂದು ಮದುವೆಯಾಗಿ ಸ್ವಲ್ಪ ಕಾಲದಲ್ಲಿ ಸಂಸಾರದಲ್ಲಿ ಮದುವೆಯಾಗಬಾರದಿತ್ತು ಎಂಬುವ ಅಪಸ್ವರಗಳು ಎದ್ದರೆ ಸಂಸಾರ ಅನ್ನುವುದು ಬೀದಿಗೆ ಬೀಳುತ್ತದೆ. ಮತ್ತು ಮದುವೆಯಾದ ಮೇಲೆ ಇದ್ದ ಖುಷಿ ಮತ್ತು ಸ್ವತಂತ್ರ ಇಲ್ಲದಂತಾಯಿತು ಎಂದು ಗೊಣಗುತ್ತಾರೆ. ಇಂತಹಹ ಸಮಸ್ಯೆಗಳನ್ನು ಅಲ್ಲಿಗೆ ಪರಿಹರಿಸಿದರೆ ಜೀವನ ಸುಂದರವಾಗಿ ನಡೆಯುವುದು.

ಹೀಗಿರುವಾಗ ದಾಂಪತ್ಯ ಜೀವನ ಸುಂದರವಾಗಿರಬೇಕೆಂದರೆ ಈ ಕೆಳಗಿನ ಗುಣಗಳು ಗಂಡ-ಹೆಂಡತಿ ಇಬ್ಬರಲ್ಲೂ ಇರಬೇಕಾಗುತ್ತದೆ.

೧. ನಂಬಿಕೆ ಮತ್ತು ಗೌರವ

love-is-great-2

ದಾಂಪತ್ಯ ಜೀವನ ಸುಂದರವಾಗಿರಬೇಕೆಂದರೆ ನಂಬಿಕೆ ಅನ್ನುವುದು ತುಂಬಾ ಮುಖ್ಯ. ನಂಬಿಕೆಯಿಲ್ಲದಿದ್ದರೆ ಆ ಸಂಬಂಧ ಮುರಿದು ಬೀಳುವುದು ಖಂಡಿತ. ಗಂಡ-ಹೆಂಡತಿ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಹಾಗೆ ಗಂಡನಿಗೆ ಹೆಂಡತಿ ಮೇಲೆ, ಹೆಂಡತಿಗೆ ಗಂಡನ ಮೇಲೆ ಗೌರವ ಇರಬೇಕು. ಯಾವುದೇ ಕಾರಣಕ್ಕೂ ದಬ್ಬಾಳಿಕೆ ಮಾಡಬಾರದು. ಮನೆಯವರ ಮುಂದೆ ಅಥವಾ ಸ್ನೇಹಿತರ ಮುಂದೆ ನಿಮ್ಮ ಬಾಳ ಸಂಗಾತಿಯನ್ನು ಅವಮಾನ ಮಾಡಬಾರದು.

೨. ಗಂಡ ಹೆಂಡತಿಯರ ಪ್ರೀತಿ ಶಾಶ್ವತ ವಾಗಿರಬೇಕು.

love-failure-in-5-tips-2

ಮದುವೆಯಾದ ಹೊಸದರಲ್ಲಿ ಗಂಡ ಹೆಂಡತಿಯರು ಪ್ರಣಯ ಪಕ್ಷಿಗಳಂತೆ ಇರುವರು. ಆದರೆ ಕಾಲ ಕಾಲದಂತೆ ಅದು ಇಲ್ಲವಾಗುತ್ತದೆ ಹಾಗಂತ ಯಾವತ್ತೂ ಹಾಗೆ ಇರಲು ಸಾಧ್ಯವಾಗುವುದಿಲ್ಲ ಅದರಲ್ಲೂ ಮಾಡುವೆ ನಂತರ ಜವಬ್ದಾರಿ ಹೆಚ್ಚಾಗುವುದರಿಂದ ಒಬ್ಬರಿಗೊಬ್ಬರು ಹೆಚ್ಚಿನ ಸಮಯವನ್ನು ಜೊತೆಯಲ್ಲಿ ಕಳೆಯಲು ಆಗದೇ ಹೋಗಬಹುದು. ಮದುವೆಗೆ ಮುಂಚೆ ಜೊತೆಗೆ ತುಂಬಾ ಸಮಯ ಕಳಿಯುತ್ತಿದ್ದರು ಆದರೆ ಮದುವೆಯಾದ ಮೇಲೆ ಬದಲಾಗಿದ್ದಾರೆ ಎಂದು ಅನ್ನಿಸಲಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮದುವೆಯ ನಂತರ ಎಷ್ಟೇ ಕಾಲ ಕಳೆದರು ಪ್ರೀತಿ ಮಾತ್ರ ಕಡಿಮೆ ಆಗಬಾರದು. ದಾಂಪತ್ಯ ಜೀವನದಲ್ಲಿ ರೊಮ್ಯಾನ್ಸ್ ಮುಖ್ಯವಾಗಿರುವುದರಿಂದ ಅದನ್ನು ಕಡೆಗಣಿಸಬೇಡಿ.

೩. ಮುಚ್ಚುಮರೆ ಇರಬಾರದು

ಯಾವುದೇ ವಿಷಯಕ್ಕೆ ಮುಚ್ಚುಮರೆ ಇರಬಾರದು, ಮುಚ್ಚು ಮರೆಯಿಂದಾಗಿ ಸಂಶಯ ರೋಗ ಶುರುವಾಗುತ್ತದೆ. ಅದರಲ್ಲೂ ಹೆಚ್ಚಿನ ಸಂಸಾರದಲ್ಲಿ ಬಿರುಕು ಬರುವುದು ಹಳೆಯ ಸಂಬಂಧವನ್ನು ಕೆದಕುವುದರಿಂದ. ಉತ್ತಮ ಬದುಕು ಬೇಕೆನ್ನುವವರು ಹಳೆಯ ಸಂಬಂಧಗಳನ್ನು ಕೆದಕದೇ ಇರುವುದು ಒಳ್ಳೆಯದು. ನನ್ನದೇ ಸರಿ ಎಂಬ ಹಠ ಸಾಧಿಸುವ ಗುಣವನ್ನು ಸಂಸಾರದಲ್ಲಿ ತೋರಿಸಬಾರದು. ಸಣ್ಣ-ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡದೇ ಪರಸ್ಪರ ಬಿಟ್ಟುಕೊಟ್ಟು ಬಾಳುವುದನ್ನು ಕಲಿತರೆ ದಾಂಪತ್ಯ ಜೀವನ ಮಧುರವಾಗಿರುತ್ತದೆ.

೪. ಅಹಂಕಾರ ಪಡಬಾರದು

ಇದು ಸಾಮನ್ಯವಾಗಿ ಬರುವುದು ಗಂಡ ಹೆಂಡತಿ ಇಬ್ಬರು ದುಡಿಯುತ್ತದ್ದರೆ ಅಂತಹ ಸಂಸಾರದಲ್ಲಿ ನಾನು ಜಾಸ್ತಿ ದುಡಿಯುತ್ತಿದ್ದೇನೆ ನೀನು ಕಡಿಮೆ ಅನ್ನುವ ಮಾತು ಬರಬಾರದು. ಈ ರೀತಿಯ ನಡುವಳಿಕೆ ಸಂಸಾರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ಗಂಡ-ಹೆಂಡತಿ ಪರಸ್ಪರ ಮನಬಿಚ್ಚಿ ಮಾತನಾಡಬೇಕು. ಎಷ್ಟೇ ಬ್ಯೂಸಿಯಾಗಿದ್ದರೂ ಒಬ್ಬರಿಗೊಬ್ಬರಿಗೆ ಸಮಯವನ್ನು ನೀಡಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.

೫. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳಬೇಕು

ತುಂಬಾ ಕೋಪ ಬಂದಾಗ ನನಗೆ ಸಾಕಾಯಿತು, ನೀನು ಮಾತ್ರ ಯಾವತ್ತಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಈ ಮಾತು ಆಡುವುದು ಸಹಜ ಆದರೆ ಆಡದಿರುವುದು ಒಳ್ಳೆಯದು. ಹಾಗೆ ಒಬ್ಬರ ತಪ್ಪನ್ನು ಮತ್ತೊಬ್ಬರು ಕ್ಷಮಿಸುವಂತಹ ದಂಪತಿಗಳು ತುಂಬಾ ದೀರ್ಘಕಾಲ ಜೊತೆಯಾಗಿರುತ್ತಾರೆ. ಅದೇ ರೀತಿ ಜಗಳವಾಡಲು ನೂರೊಂದು ಕಾರಣಗಳು ಇದ್ದರೆ, ಕೂಡಿ ಬಾಳಲು ಕೋಟಿ ಕಾರಣಗಳು ಇರುತ್ತವೆ ಎಂಬುದನ್ನು ಮರೆಯಬೇಡಿ ರೀತಿ ಮಾಡಿದರೆ ಸಂಸಾರದಲ್ಲಿ ಪ್ರೀತಿ ಹೆಚ್ಚಾಗುವುದು.

Also Read: ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕೇ…? ಇದನ್ನೊಮ್ಮೆ ಓದಿ…