ಮಂಡ್ಯಾದ ಈ ಡಾಕ್ಟರ್ ಪ್ರತಿಯೊಬ್ಬ ರೋಗಿಗೆ ಕೇವಲ ೫ ರುಪಾಯಿ ಚಾರ್ಜ್ ಮಾಡ್ತಾರೆ

0
9619

ಮಂಡ್ಯದ ಡಾ ಶಂಕರೇಗೌಡ ನಿಸ್ಸಂದೇಹವಾಗಿ ದೇಶದ ದಂತಕಥೆ. ಓದಿದ್ದು M.B.B.S , M.D
ಚರ್ಮ ರೋಗದ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಶಿವನಹಳ್ಳಿ ತಾಲೂಕಿನವರಾದ ಇವರು ಬೆಳಿಗ್ಗೆ ತಮ್ಮ ಗ್ರಾಮದಲ್ಲಿ ಮತ್ತು ಮಧ್ಯಾಹ್ನ ಮಂಡ್ಯದ ತಮ್ಮ ಚಿಕಿತ್ಸಾಲಯದಲ್ಲಿ ರೋಗಿಗಳಿಗೆ ಕೇವಲ 5 ರೂ ಪಡೆದು ಚಿಕಿತ್ಸೆ ನೀಡುತ್ತಾರೆ. ಎಷ್ಟೋ ಬಾರಿ 5 ರೂ ಗಳನ್ನು ಸಹ ಪಡೆಯುವುದಿಲ್ಲ.

ಮೂಲತಃ ಕೃಷಿಕ ಕುಟುಂಬಕ್ಕೆ ಸೇರಿದ ಶಂಕರೇ ಗೌಡರು ತಮ್ಮ 6 ಎಕರೆ ಭೂಮಿಯಲ್ಲಿ ಕೃಷಿ ಕೆಲಸದಲ್ಲೂ ತೊಡಗಿದ್ದಾರೆ , ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ.

ಶಂಕರೇ ಗೌಡರು ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದು, ರಾಜಕೀಯ ಜನ ಸೇವೆ ಮಾಡಲು ಒಂದೊಳ್ಳೆ ಮಾರ್ಗ ಎಂದು ಭಾವಿಸುತ್ತಾರೆ. ಅಂತೆಯೇ ಜನರು ಸಹ ಇವರನ್ನು ಬಹಳ ಪ್ರೀತಿಸುತ್ತಾರೆ .

ಪ್ರಸ್ತುತ ಮಂಡ್ಯ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ನಂಬಲೇ ಬೇಕಾದ ವಿಷಯವೆನೆಂದರೆ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಇವರು ಒಂದು ನಯಾ ಪೈಸೆ ಖರ್ಚು ಮಾಡಿಲ್ಲ ,ಪ್ರಚಾರಕ್ಕಾಗಿ ನಿಂತವರು ಗೌಡರನ್ನು ಪ್ರೀತಿಸಿವ ಮಂಡ್ಯ ಜನ.

ಮುಂದಿನ ದಿನಗಳಲ್ಲಿ ವಿದ್ಯಾವಂತರು ,ಪ್ರಬುದ್ದರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಹಾಗೆಯೇ ತಮ್ಮ ಜೀವನವನ್ನು ನಿಸ್ವಾರ್ಥ ಸೇವೆಗೆ ಮುಡಿಪಿಟ್ಟ ಗೌಡರಿಗೆ ಇನ್ನಷ್ಟು ಒಳ್ಳೆಯ ರಾಜಕೀಯ ಭವಿಷ್ಯ ಒದಗಿ ಬರಲಿ ಆ ತರದಲ್ಲಿ ಇನ್ನು ಹೆಚ್ಚು ಜನ ಸೇವೆ ಮಾಡಲಿ.

ಬಂಗಾರದ ಮನುಷ್ಯನ ಬಾಳು ಬಂಗಾರವಾಗಲಿ ಎಂದು ನ್ಯೂಸಿಸ್ಮ್ ತಂಡ ಹಾರೈಸುತ್ತದೆ