ಮಾನಸಿಕ ಒತ್ತಡವೇ..? ಹಾಗಿದ್ದರೆ ಈ 5 ಸೂತ್ರ ಪಾಲಿಸಿ ನೋಡಿ.. ಜೀವನ ಸುಖಮಯವಾಗಿರುವುದು..!!

0
2492

ಹೌದು ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಹದಗೆಡುತ್ತಿರುವು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.. ಇದಕ್ಕೆ ಮುಖ್ಯ ಕಾರಣ ನಮ್ಮ ಒತ್ತಡ ಪೂರಿತ ಜೀವನ.. ಕೇವಲ ಕೆಲಸ ಮಾಡುವ ಜನರು ಮಾತ್ರವಲ್ಲ, ಸ್ಕೂಲ್ ಕಾಲೇಜ್ ನಲ್ಲಿ ಓದುತ್ತಿರುವ ಮಕ್ಕಳು ಸಹ ಒತ್ತಡ ದಿಂದಲೇ ಬದುಕುತ್ತಿದ್ದಾರೆ..
ಇದಕ್ಕೆ ಪರಿಹಾರ ಏನೂ ಎಂದು ದಿನ ಪೂರ್ತಿ ತಲೆ ಕೆಡಿಸಿಕೊಳ್ಳುವವರೂ ಇದ್ದಾರೆ.. ಇದಕ್ಕೆ ಪರಿಹಾರ ನಮ್ಮಲ್ಲಿಯೇ ಇದೆ.. ಹೌದು ಕೆಳಗಿನಂತೆ ಮಾಡಿ ನಿಮ್ಮ ಒತ್ತಡ ಖಂಡಿತ ಕಡಿಮೆಯಾಗುವುದು..

1. ದಿನಾ ಬೆಳಗ್ಗೆ ಬೇಗ ಏಳುವ ಅಭ್ಯಾಸ ರೂಡಿಸಿಕೊಳ್ಳಿ

ಈಗಿನ ಕಾಲದಲ್ಲಿ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿದು ಫೇಸ್ ಬುಕ್ ನೋಡುವವರೇ ಹೆಚ್ಚು.. ಅದರೆ ನಮ್ಮ ಹಿರಿಯರು ರೂಡಿಸಿಕೊಂಡು ಬಂದ ನಡವಳಿಕೆಯಲ್ಲಿ ನಮ್ಮ ಆರೋಗ್ಯ ಅಡಗಿದೆ.. ಬೆಳಗ್ಗೆ ಬೇಗ ಏಳುವುದರಿಂದ ನಮ್ಮ ಮನಸ್ಸು ದಿನಾ ಪೂರ್ತಿ ಉಲ್ಲಾಸವಾಗಿ ಉತ್ಸಾಹದಿಂದ ಇರುವುದಂತು ಸತ್ಯ..

2. ಪ್ರತಿದಿನ 30 ನಿಮಿಷ ಯೋಗ ಮಾಡಿ

ಒತ್ತಡಕ್ಕೆ ಯೋಗ ಮಾಡುವುದು ಒಂದು ರಾಮ ಬಾಣ.. ಪ್ರತಿದಿನ ಅರ್ಧ ಘಂಟೆ ಯೋಗ ಮಾಡಿ ಪರಿಣಾಮ ನೀವೆ ನೋಡಿ.. ಯೋಗ ಮಾಡುವುದರಿಂದ ಕೇವಲ ಮಾನಸಿಕ ಆರೋಗ್ಯ ಅಷ್ಟೇ ಅಲ್ಲ ದೈಹಿಕ ವಾಗಿಯೂ ಸಧೃಡರಾಗುವಿರಿ..

3. ಧ್ಯಾನ ಮಾಡಿ

ಯಾವ ಸಮಯದಲ್ಲಾದರೂ ಸರಿ ಹತ್ತು ನಿಮಿಷಗಳ ಕಾಲ ಬಿಡುವು ಮಾಡಿಕೊಂಡು ಧ್ಯಾನ ಮಾಡಿ.. ಬೆಳಗ್ಗೆ ಅಥವಾ ಸಂಜೆ ಮಾಡಿದರೆ ಒಳ್ಳೆಯದು.. ಧ್ಯಾನ ಮಾಡುವುದರಿಂದ ನಮ್ಮ ಮನಸ್ಸು ನಮ್ಮ ಹಿಡಿತಕ್ಕೆ ಬರುವುದು.. ಹಾಗೆಯೇ ಎಂತಹ ಕೆಟ್ಟ ಪರಿಸ್ಥಿತಿ ಇದ್ದರೂ ಎದುರಿಸಲು ಸಾಧ್ಯವಾಗುವುದು..

4. ನಿಮ್ಮ ಪ್ರೀತಿ ಪಾತ್ರ ರೊಂದಿಗೆ ಸ್ವಲ್ಪ ಸಮಯ ಕಳೆಯಿರಿ

ಹೌದು ಇದೊಂದು ಪರಿಣಾಮಕಾರಿ ವಿಧ.. ನಿಮ್ಮ ಆಪ್ತರೊಂದಿಗೆ ಸ್ವಲ್ಪ ಸಮಯ ಮಾತನಾಡಿ..ಗಂಡ ಹೆಂಡತಿಯ ಹತ್ತಿರ ಅಥವಾ ಹೆಂಡತಿ ಗಂಡನ ಹತ್ತಿರ.. ತಾಯಿಯ ಹತ್ತಿರ ಮಕ್ಕಳ ಹತ್ತಿರ ಪ್ರೀತಿಯಿಂದ ಮಾತನಾಡಿ.. ಮಾನಸಿಕವಾಗಿ ಹಗುರರಾಗುವುದಂತು ಸತ್ಯ.. ಹಾಗೆಯೇ ಇದರಿಂದ ನಿಮ್ಮ ಆಪ್ತರೂ ಸಂತೋಷ ಪಡುವುದು ನಿಜ.. ಇದಕ್ಕಿಂತ ನಿಮಗೆ ಖುಷಿ ಬೇಕೆ?? ನಿಮ್ಮವರು ನಿಮ್ಮಿಂದ ಸಂತೋಷ ಪಟ್ಟರೆ ನಿಮಗದು ಪರಮಾನಂದವೇ ಸರಿ.

5. ಇಷ್ಟ ವಾದ ತಿನಿಸನ್ನು ತಿನ್ನಿರಿ.. ನಿಮಿಗಿಷ್ಟವಾದ ಜಾಗಕ್ಕೆ ಭೇಟಿ ನೀಡಿ

ಹೊಟ್ಟೆ ತುಂಬಿದರೆ ಮನಸ್ಸೂ ಕೂಡ ಉಲ್ಲಾಸವಾಗಿರುವುದು.. ಅದರಲ್ಲೂ ಇಷ್ಟವಾದ ತಿನಿಸುಗಳು ಕೆಲವು ಸಮಯ ಬೇರೆ ಎಲ್ಲವನ್ನೂ ಮರೆಸುವುದು.. ಹಾಸ್ಯವಾಗಿ ಕಂಡರೂ ಇದು ಸತ್ಯ.. ಜೊತೆಗೆ ನಿಮಗಿಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ ಮನಸ್ಸನ್ನೂ ಶಾಂತವಾಗಿಸಿಕೊಂಡು ಮತ್ತೆ ನಮ್ಮ ಹಳೇ ಜೀವನಕ್ಕೆ ಮರಳಬಹುದು..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840