ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಿ, ಜೀವನದಲ್ಲಿ ಜಿಗುಪ್ಸೆ ಬಂದಿದ್ಯ, ಹಾಗಿದ್ರೆ ಇದನ್ನು ಓದಿ, ಸ್ವಂತ ಉದ್ಯಮಿಯಾಗೋಕ್ಕೆ ಏನು ಬೇಕು ಅಂತ ಹೇಳ್ತೀವಿ..

0
2630

ಸ್ವಂತ ಉದ್ಯೋಗ ಮಾಡ ಬಯಸುವವರಿಗೆ 5 ಟಿಪ್ಸ್

ಈಗಿನ ಕಾಂಪಿಟೇಟಿವ್ ಯುಗದಲ್ಲಿ ಸರ್ಕಾರಿ ಕೆಲಸ ಪಡೆಯಬೇಕೆಂದರೆ ತುಸು ಕಷ್ಟವೇ ಸರಿ.. ಇನ್ನು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಹುಡುಕಿ ಹೋಗುವಿರ?? ದೇಹ ದಣಿವಾಗುವವರೆಗೂ ಕೆಲಸ.. ಈಗಿರುವಾಗ ಸ್ವಂತ ಉದ್ಯೋಗ ಮಾಡಿ ಬೆಳೆಯ ಬಯಸುವವರೆ ಹೆಚ್ಚು.. ಅವರಿಗೊಂದಿಷ್ಟು ಸಲಹೆ.

1. ಬಂಡವಾಳ

ನೀವು ಉದ್ಯೋಗ ಶುರು ಮಾಡಲು ಬಂಡವಾಳ ಬೇಕೆ ಬೇಕು,ಬಡ್ಡಿ ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕುವುದು ಬುದ್ಧಿವಂತರ ಲಕ್ಷಣವಲ್ಲ.. ಅಕಸ್ಮಾತ್ ಬ್ಯುಸಿನೆಸ್ ಲಾಭದಾಯಕವಾಗದಿದ್ದರೆ ಪರಿಸ್ಥಿತಿಯನ್ನು ಎದುರಿಸಲು ಕಷ್ಟವೇ ಸರಿ.. ಅದಕ್ಕಾಗಿ ನೀವು ಮೊದಲು ನಿಮ್ಮ ಸ್ವಂತ ಬಂಡವಾಳವನ್ನು ಸಿದ್ಧ ಮಾಡಿಕೊಳ್ಳಬೇಕು.. ಸಣ್ಣ ಮೊತ್ತ ಕೈಗೆ ಬರುವವರೆಗೆ ಯಾವುದಾದರು ಬೇರೆ ಕೆಲಸ ಮಾಡಿ ಕೂಡಿಟ್ಟುಕೊಂಡು ಉದ್ಯೋಗ ಶುರು ಮಾಡುವುದು ಒಳಿತು.. ಇದು ಸಾಧ್ಯವಾಗದಿದ್ದರೆ ಸರ್ಕಾರಿ ಬ್ಯಾಂಕ್ ಗಳಲ್ಲಿ ಸ್ವಂತ ಉದ್ಯೋಗ ಮಡಲಿಕ್ಕಾಗಿಯೇ ಅನೇಕ ಯೋಜನೆಗಳು ಇವೆ.. ಖಾಸಗಿ ಫೈನಾನ್ಸ್ ಗಳಿಗೆ ಹೋಲಿಸಿದರೆ ಸರ್ಕಾರಿ ಬ್ಯಾಂಕ್ ಗಳಲ್ಲಿ ಬಡ್ಡಿಯ ದರವೂ ಕಡಿಮೆ ಇರುತ್ತದೆ.. ಎಷ್ಟೋ ಜನಗಳಿಗೆ ಇದರ ಅರಿವು ಇಲ್ಲದೇ ಸೌಲಭ್ಯ ಪಡೆಯಲಾಗುತ್ತಿಲ್ಲ. ಈ ಮೇಲಿನ ರೀತಿಯಲ್ಲಿ ನೀವು ಮಾಡುವ ಬ್ಯುಸಿನೆಸ್ ಗೆ ಬಂಡವಾಳ ಸಿಗಲಿದೆ.

2. ಆಫೀಸ್ ಮಾಡುವ ಸ್ಥಳ

ಹೌದು ಆಫೀಸ್ ಶುರು ಮಾಡುವ ಸ್ಥಳದ ಬಗ್ಗೆ ಎಚ್ಚರ ವಹಿಸಿರಿ.. ಅದು ಸಿಟಿ/ಪಟ್ಟಣದ ಕೇಂದ್ರ ಭಾಗಕ್ಕೆ ಹತ್ತಿರ ವಿದ್ದರೆ ಒಳ್ಳೆಯದು.. ಜನ ಸಂಪರ್ಕ ಸುಲಭವಾಗಿ ಆಗಬೇಕು.. ಯಾರಿಗಾದರೂ ಸುಲಭವಾಗಿ ವಿಳಾಸ ಹೇಳುವಂತಿರಬೇಕು..

3. ನಿಮ್ಮ ಬ್ಯುಸಿನೆಸ್ ಬಗ್ಗೆ ಜಾಹಿರಾತು

ಈಗಿನ ಕಾಲದಲ್ಲಿ ಪ್ರಚಾರವಿಲ್ಲದೇ ಏನೂ ಮಾಡಲು ಅಸಾಧ್ಯ.. ನಿಮ್ಮ ಕೆಲಸ/ನೀವು ತಯಾರು ಮಾಡುವ ವಸ್ತುಗಳ ಬಗ್ಗೆ ಜನರಿಗೆ ಮಾಹಿತಿ ತಲುಪುವ ಹಾಗೆ ಮಾಡಿ.. ಸೋಷಿಯಲ್ ಮೀಡಿಯಾ ಒಂದು ಉತ್ತಮ ಮಾದ್ಯಮ.. ಖರ್ಚು ಕೊಡ ಕಡಿಮೆ.. ಬಳಸಿಕೊಂಡು ಪ್ರಚಾರ ಮಾಡಿ. ಪ್ರಚಾರವಿಲ್ಲದೇ ನಿಮ್ಮ ಉತ್ತಮ ವ್ಯಾಪಾರ ಹಾಳಾಗುವುದು ಬೇಡ..

4. ಕೆಲಸಗಾರರ ಆಯ್ಕೆ

ನಿಮ್ಮ ಬ್ಯುಸಿನೆಸ್ ಗೆ ಕೆಲಸಗಾರರ ಆಯ್ಕೆಯಲ್ಲಿ ಜಾಣತನ ವಹಿಸಿ.. ಕೆಲಸದಲ್ಲಿ ನಿಪುಣನಲ್ಲದ್ದಿದ್ದರು ಕೆಲಸದ ಅರಿವು ಪೂರ್ತಿಯಾಗಿ ಇರುವವರನ್ನು ಸಮಾಜದೊಂದಿಗೆ ಪೂರ್ಣ ಒಡನಾಟವಿರುವವರನ್ನು ಆಯ್ಕೆ ಮಾಡಿಕೊಳ್ಳಿ..

5. ಮಾಡುವ ವ್ಯಾಪಾರದಲ್ಲಿ ಕ್ವಾಲಿಟಿ ಕಾಪಾಡಿಕೊಳ್ಳಿ.

ಒಮ್ಮೆ ನಿಮ್ಮ ಪ್ರಾಡಕ್ಟ್ ಗಳನ್ನು ಕೊಂಡರೆ ಸಾಕು ಎಂದು ಯೋಚಿಸಬೇಡಿ.. ಒಮ್ಮೆ ಕೊಂಡರೆ ಅವರು ಇನ್ನು ನಾಲ್ಕು ಮಂದಿಗೆ ನಿಮ್ಮ ವಸ್ತುವಿನ/ಸರ್ವೀಸಿನ ಬಗ್ಗೆ ತಿಳಿಸಬೇಕು.. ಅದಕ್ಕಾಗಿ ನಿಮ್ಮ ಸರ್ವೀಸ್/ಪ್ರಾಡಕ್ಟ್ ನ ಕ್ವಾಲಿಟಿ ಚನ್ನಗಿರಲೇಬೇಕು.. ಇದರಿಂದ ಬಂಡವಾಳ ಹಾಕದೆಯೆ ಪ್ರಚಾರವು ಸಿಕ್ಕಂತಾಗುತ್ತದೆ..

ಆಲ್ ದಿ ಬೆಸ್ಟ್ ನಿಮ್ಮ ವ್ಯಾಪಾರ ಅಭಿವೃದ್ಧಿಯಾಗಲಿ