ಸ್ವಂತ ಮನೆ ಮಾಡ್ಕೊಬೇಕು ಅಂತ ಫ್ಲಾಟ್ ಖರೀದಿ ಮಾಡಿ ಮೋಸ ಹೋಗೋ ಮುಂಚೆ ಈ ಐದು ಅಂಶಗಳನ್ನ ತಿಳಿದುಕೊಳ್ಳಿ!!

0
733

ಸ್ವಂತ ಮನೆ ಖರೀದಿಸುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಖರೀದಿಗೆ ಮುಂದಾಗುವುದು ಒಳ್ಳೆಯದು. ಏಕೆಂದರೆ ಭಾರತೀಯರ ಗುಣದಲ್ಲಿರುವ ಸ್ವಭಾವದಂತೆ ಒಂದು ಮಾವಿನ ಹಣ್ಣು ಕೊಳ್ಳುವ ಮುನ್ನ ಅದನ್ನು ಹೇಗೆ ಮುಟ್ಟಿ, ವಾಸನೆ ನೋಡಿ, ಬಣ್ಣ ನೋಡಿ, ಸರಿಯಾಗಿ ತೋಕ ಅಥವಾ ಏಣಿಕೆ ಮಾಡಿ ತೆಗೆದುಕೊಳ್ಳುವುದು ಇದೇ. ಅದ್ರಂತೆ ದೊಡ್ಡ ಹಣ ಹೂಡಿಕೆ ಮಾಡಿ ಮನೆ ಖರೀದಿಸುವ ಮುನ್ನ ಆಸ್ತಿಗೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಒಂದು ಪ್ಲಾಟ್ ಕೊಳ್ಳುವಾಗ ಬಿಲ್ಡರ್, ಬ್ರೋಕರ್, ಬ್ರೌಚರ್ಸ್ ನೋಡಿ ಅವರ ಮಾತಿಗೆ ಮರುಳಾಗದೆ ಮೊದಲು ಭೂಮಿಗೆ ಸಂಬಂಧಪಟ್ಟಂತೆ ಈ ವಿಚಾರಗಳನ್ನು ತಿಳಿದುಕೊಳ್ಳಿ.

1. ಕಾನೂನಿನ ಪ್ರಕಾರ ಎನ್ಎ ಪಡೆದ ಭೂಮಿಯೇ?

Also read: ಬೆಂಗಳೂರಿನಲ್ಲಿ ಸ್ವಂತ ಮನೆ ಖರೀಧಿಸುವುದು ಒಳ್ಳೆಯದ? ಇಲ್ಲ ಬಾಡಿಗೆ ಮನೆಯ ವಾಸವೇ ಉತ್ತಮ, ಎನ್ನುವ ಗೊಂದಲಕ್ಕೆ ಅರ್ಥಿಕ ತಜ್ಞರ ಅಭಿಪ್ರಾಯ ಇಲ್ಲಿದೆ ನೋಡಿ.!

ಭಾರತದಲ್ಲಿ ಯಾವುದೇ ಪ್ಲಾಟ್ ಖರೀದಿಸುವ ಮುನ್ನ ಅದು ಕೃಷಿ ಭೂಮಿಯಿಂದ ಬೇರ್ಪಟ್ಟು ಕಾನುನಾತ್ಮಕವಾಗಿ ಎನ್ಎ ಆಗಿದೆ ಎನ್ನುವುದು ಮೊದಲು ತಿಳಿಯಬೇಕು, ಅದರಂತೆ ಭೂಮಿಗೆ ಸಂಬಂಧಪಟ್ಟ ಸರ್ವೇ ನಂಬರ್ ಪಡೆದು ಅದರ ಮಾಲಿಕತ್ವದ ಮಾರಾಟ ಮಾಡಿದವರ ಬಗ್ಗೆ ಕಾನೂನು ಪರಿಶೀಲನೆ ನಡೆಸುವ ಅಗತ್ಯವಿದೆ. ಏಕೆಂದರೆ ಭೂಮಿಯನ್ನು ಖರೀದಿಸಿದ ನಂತರ ಯಾವುದೇ ಸಮಯದಲ್ಲಿ ನಿಮ್ಮನ್ನು ಬೀದಿಗೆ ತಳ್ಳುವ ಅವಕಾಶವನ್ನು ಮಾಡಿಕೊಳ್ಳಬಾರದು. ಅದಕ್ಕಾಗಿ ಮೂರನೇ ವ್ಯಕ್ತಿಯ ಹಕ್ಕುಗಳು ಅಥವಾ ಹಿತಾಸಕ್ತಿಗಳನ್ನು ಇದು ಇನ್ನೂ ಹೊಂದಿದೆಯೆ. ಅಥವಾ ವ್ಯಾಪಾರದ ಉದ್ದೇಶದಿಂದ ಭೂ ಕಾಗದಗಳ ಮಾಲೀಕತ್ವದಲ್ಲಿದೆ ಎನ್ನುವುದು ತಿಳಿಯಬೇಕು.

2. ಪ್ಲಾಟ್ ಕಟ್ಟಡ ಪ್ರಾರಂಭ ಅಥವಾ ಮುಕ್ತಾಯದ ದಿನಾಂಕ;

ಒಂದು ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಭರವಸೆಯಂತೆ ಆಸ್ತಿಯಲ್ಲಿ ಖರೀದಿಸಿವಾಗ ಅಭಿವೃದ್ದಿಗಾಗಿ ಪ್ರಾರಂಭ ದಿನಾಂಕ ಮತ್ತು ಕಟ್ಟಡ ಮುಕ್ತಾಯದ ದಿನಾಂಕ ಪತ್ರದಲ್ಲಿರುವಂತೆ ಹಕ್ಕುಗಳನ್ನು ನೀವು ಅರ್ಥಮಾಡಿಕೊಳ್ಳಬೇಕು, ಅದರಂತೆ ನಿರ್ಮಾಣ-ಸಂಬಂಧಿತ ಯೋಜನೆಯಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಿದ್ದರೆ ಖರೀದಿಸಲು ಹೋಗಬೇಡಿ.

3. ಪ್ಲಾಟ್ ಕಾಯ್ದಿರಿಸಿದ ಭೂಮಿಯಲ್ಲಿ ನಿರ್ಮಿಸಲಾಗಿದೆಯೇ?

ಕೆಲವು ಭೂಮಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಆಗುವುದಿಲ್ಲ ಅಂತಹ ಭೂಮಿಗಳು ಅಂದರೆ ಪುರಾತತ್ತ್ವ ಶಾಸ್ತ್ರದ ಸಂಶೋಧನೆಯ ಸ್ಥಳದ ನೀರಾವರಿ ಮುಂತಾದ ಸರ್ಕಾರಿ ಯೋಜನೆಗಳಿಗೆ ಮಾತ್ರ ಮೀಸಲಾಗಿರುವ ಮಿಸಲಾಗಿರುತ್ತೇವೆ, ಅಲ್ಲಿ ಯಾವುದೇ ರಿಯಲ್ ಎಸ್ಟೇಟ್ ನಡೆಸಲು ಸಧ್ಯ ಇರುವುದಿಲ್ಲ, ಅದಕ್ಕಾಗಿ ಮೊದಲು ತಿಳಿಯವುದು ಉತ್ತಮ ಒಂದು ಮೀಸಲಿಟ್ಟ ಭೂಮಿಯಾದರೆ ಖರೀದಿಸಲೇ ಬೇಡಿ.

4. ಡೆವಲಪರ್‌ ಇತಿಹಾಸ ಪರಿಶೀಲಿಸಿ;

ಬಿಲ್ಡರ್-ಗಳು ಆಕರ್ಷಣೆಯ ಕಟ್ಟಡಗಳನ್ನು ತೋರಿಸಿ ನಿಮಗೆ ಮೋಸ ಮಾಡುವುದು ಹೆಚ್ಚಿರುತ್ತದೆ, ಅದಕ್ಕಾಗಿ ಒಂದೇ ಭಾರಿಗೆ ಡೆವಲಪರ್‌ ನಂಬಲು ಹೋಗಬೇಡಿ. ಆಯ್ಕೆ ಮಾಡಿದ ಡೆವಲಪರ್‌ನ ಹೆಸರು ಮತ್ತು ಆಪರೇಟಿಂಗ್ ಇತಿಹಾಸವನ್ನು ಕ್ರಾಸ್ ಚೆಕ್ ಮಾಡಿ. ಈ ಹಿಂದೆ ಅವರು ಎಷ್ಟು ಯೋಜನೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ, ಮತ್ತು ಆ ಡೆವಲಪರ್‌ನೊಂದಿಗೆ ಆಸ್ತಿಯನ್ನು ಖರೀದಿಸಿರುವ ಜೊತೆಗೆ ಮಾತನಾಡಿ ಸಂಪೂರ್ಣ ಮಾಹಿತಿ ತಿಳಿಯಿರಿ ಒಂದು ವೇಳೆ ಅನುಮಾನ ಬಂದರೆ ಖರೀದಿ ಮಾಡಲೇಬೇಡಿ.

5. ಖರೀದಿಯ ಮುನ್ನ ಯಾವೆಲ್ಲ ದಾಖಲೆ ನೋಡಬೇಕು?

ಡೆವಲಪರ್ ತನ್ನ ಫೈಲ್‌ಗಳಲ್ಲಿ ನೀವು ಖಚಿತಪಡಿಸಿಕೊಳ್ಳಬೇಕಾದ ಹಲವು ದಾಖಲೆಗಳಿರಬೇಕು. 7/12 ದಸ್ತಾವೇಜಿನಿಂದ, ಭೂ ಕಂದಾಯ ತೆರಿಗೆ ರಶೀದಿಗಳು, ಶೀರ್ಷಿಕೆ ಪತ್ರ, ಸ್ಟಾಂಪ್ ಡ್ಯೂಟಿ ಡಾಕ್ಯುಮೆಂಟ್, ಎನ್ಕಂಬ್ರನ್ಸ್ ಸರ್ಟಿಫಿಕೇಟ್, ಮುನ್ಸಿಪಲ್ ಕಾರ್ಪೊರೇಶನ್ ಅನುಮೋದನೆಗಳು, ಬ್ಯಾಂಕಿನಿಂದ ಹಣ ಬಿಡುಗಡೆಯಾದ ಪ್ರಮಾಣಪತ್ರ, ಹಂಚಿಕೆ ಪತ್ರ ಮತ್ತು ಅಭಿವೃದ್ಧಿ ಒಪ್ಪಂದದ ಹಕ್ಕು ಪತ್ರ. ಪರೀಕ್ಷಿಸಿ ಇನ್ನೂ ಹಲವು ಪತ್ರಗಳು ಇರುತ್ತೆ ಮುಖ್ಯವಾಗಿ ಮೇಲಿನ ಪತ್ರಗಳಲ್ಲಿ ಯಾವುದೇ ಒಂದು ಇಲ್ಲದಿದ್ದರೆ ಅಸ್ತಿ ಕ್ಲಿಯರ್ ಇಲ್ಲ ಅಂತವಾಗುತ್ತೆ, ಅದಕ್ಕಾಗಿ ಮೋಸ ಹೋಗುವ ಮುನ್ನ ಈ ಎಲ್ಲ ಅಂಶಗಳು ತಿಳಿಯಿರಿ.

Also read: ಮನೆ ಖರೀದಿಸುವಾಗ ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಅಂದ್ರೆ, ಜೀವನ ಪೂರ್ತಿ ದುಡಿದ ದುಡ್ಡು ಹಾಳುಮಾಡಿಕೊಳ್ತೀರಿ ಎಚ್ಚರ !!!