ಪಾಲಕ್ ಸೇವನೆಯಿಂದ ಬಹುಕಾಲ ವೃದ್ಧಾಪ್ಯ ಬರದಂತೆ ತಡೆಯುತ್ತದೆ..!!

0
3491

ಹಸಿ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ಪೋಷಕಾಂಶಗಳು ದೊರೆತು ದೇಹವು ಸದೃಢವಾಗಿ ಬೆಳೆದು, ಆರೋಗ್ಯಕರವಾಗಿರುತ್ತದೆ. ದಿನನಿತ್ಯ ನಾವು ತಿನ್ನುವ ನಾನಾ ಬಗೆಯ ಸೊಪ್ಪುಗಳಲ್ಲಿ ಪಾಲಕ್‌ಗೆ ಅಗ್ರಸ್ಥಾನ. ಕೆಲವೊಂದು ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.ಹಾಗಾದರೇ ಪಾಲಕ್‌ ಸೊಪ್ಪಿನಿಂದಾಗುವ ಪ್ರಯೋಜನಗಳ ಕುರಿತು ಈ ಕೆಳಗಿನಂತೆ ಪಟ್ಟಿಮಾಡಬಹುದಾಗಿದೆ.

  • ತರಕಾರಿಯಾಗಿ ಆಡುಗೆಯಲ್ಲಿ ಉಪಯೋಗಿಸಲ್ಪಡುತ್ತದೆ. ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ನಾರಿನಂಶ,ಪ್ರೋಟಿನ್‍ಗಳು ಇವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶ ಇದೆ. ಪಾಲಕ್ ಸೊಪ್ಪನ್ನು ವಾರಕ್ಕೆ ೩ ಬಾರಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೇಗೆ ಇದು ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು ತ್ವಚೆಗೆ ಕೂಡ ಒಳ್ಳೆಯದು.
  • ಪಾಲಕ್ ಸೊಪ್ಪಿನಲ್ಲಿರುವ ಅಂಶಗಳು ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುವುದಕ್ಕೆ ತುಂಬ ಒಳ್ಳೆಯದು. ಇದು ಕೂದಲ ಬೆಳವಣಿಗೆಗೂ ಬಹಳ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ,ಸಿ,ಇ ಪೊಟ್ಯಾಷಿಯಂ,ಕಬ್ಬಿಣ ಮತ್ತು ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ ಈ ಅಂಶಗಳು, ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
  • ಅದರಲ್ಲು ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ಕೆಂಪು ರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿ ಕೂದಲ ಬುಡಕ್ಕು ತಲುಪಿಸಲು ಸಹಾಯಕಾರಿ ಆಗಿದೆ.
  • ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲ ಉದುರುವಿಕೆಯನ್ನು ತಡೆಯಬಹುದು. ಕೂದಲು ಉದುರುವುದಕ್ಕೆ ಮುಖ್ಯ ಕಾರಣವೆಂದರೆ ಕೂದಲ ಬುಡದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಪಾಲಕ್ ಸೊಪ್ಪು ಕಬ್ಬಿಣದ ಅಂಶವನ್ನು ಕೂದಲ ಬುಡಕ್ಕೆ ಒದಕಿಸುವುದರಿಂದ ಕೂದಲು ಉದುರುವುದು ಕ್ರಮೇಣ ಕಡಿಮೆ ಆಗುತ್ತದೆ.
  • ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಇರುವುದರಿಂದ ಇವುಗಳು ತ್ವಚೆಯ ಸೆಳೆತ ಮತ್ತು ಕಾಂತಿ ಹೆಚ್ಚಿಸಲು ನೆರವಾಗುತ್ತದೆ, ಹಾಗೆಯೇ ವಿಟಮಿನ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ. ಅಲ್ಲದೆ ಹಳೆಯ ಕಲೆಗಳಿಂದ ಕೂಡಿರುವ ತ್ವಚೆಯ ಭಾಗವನ್ನು ಇದು ತಿಳಿಯಾಗಿಸುತ್ತದೆ.
  • ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರಲು ನೆರವಾಗುತ್ತದೆ.
  • ಪಾಲಕ್ ಸೊಪ್ಪು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ.
  • ಅತಿನೇರಳೆ ಕಿರಣಗಳು ತ್ವಚೆಯನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕುರುಹುಗಳು ಬೇಗ ಬರುವಂತೆ ಮಾದುತ್ತದೆ, ಆದರೆ ಪಾಲಕ್ ಸೊಪ್ಪು ಕ್ಯಾನ್ಸರ್ ಮತ್ತು ವೃದ್ಧಾಪ್ಯ ಬರದಂತೆ ತಡೆಯುತ್ತದೆ.

  • ಪಾಲಕ್‌ ಸೊಪ್ಪು ಫ್ರೋಲೆಟ್ ಅಂಶವನ್ನು ಹೊಂದಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಇತರೆ  ಹೃದಯ ಸಂಬಂಧಿ ಖಾಯಿಲೆಗಳನ್ನು ನಿವಾರಿಸುತ್ತದೆ.
  • ಪಾಲಕ್‌ಸೊಪ್ಪಿನಲ್ಲಿ ಕ್ಯಾರೋಟಿನೈಡ್ ಅಂಶವಿದ್ದು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಪ್ರಮಾಣವನ್ನು ಹೆಚ್ಚಾಗದಂತೆ ನಿಯಂತ್ರಿಸುತ್ತದೆ.
  • ಪಾಲಕ್‌ ಸೇವನೆಯು ಮೊಡವೆಗಳನ್ನು ಹೋಗಲಾಡಿಸುವುದೇ ಅಲ್ಲದೇ ಮುಖದಲ್ಲಿ ಬೇಗನೇ ನೆರಿಗೆ ಮೂಡದಂತೆ ಕಾಪಾಡುತ್ತದೆ.
  • ಸಾಮಾನ್ಯವಾಗಿ ಉಂಟಾಗಬಹುದಾದ ದೃಷ್ಠಿದೋಷವನ್ನು ತಡೆಗಟ್ಟುವಲ್ಲಿ ಪಾಲಕ್‌ ಸೊಪ್ಪು ನೆರವಾಗುತ್ತದೆ.
  • ಮೆದುಳಿನ ನರಕೋಶಗಳ ಅಭಿವೃದ್ಧಿಗೆ ಸಹಾಯಕವಾಗಬಲ್ಲ ಪೋಷಕಾಂಶಗಳು ಪಾಲಕ್‌ ಸೊಪ್ಪಿನಲ್ಲಿರುವುದರಿಂದ ಅದರ ಸೇವನೆಯು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲದು.
  • ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪಾಲಕ್‌ ದಿವ್ಯೌಷಧವಾಗಬಲ್ಲದು.
  • ದಿನನಿತ್ಯ ಪಾಲಕ್‌ ಸೊಪ್ಪನ್ನು ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದಂಶದಿಂದಾಗಿ ನಮ್ಮ ರಕ್ತಕಣಗಳು ವೃದ್ಧಿಯಾಗಿ ರಕ್ತಹೀನತೆಯನ್ನು ದೂರವಿಡಬಹುದು.
  • ಪಾಲಕ್‌ನಲ್ಲಿರುವ ಎ ಜೀವಸತ್ವವು ಚರ್ಮವನ್ನು ಬಿಗಿಗೊಳಿಸಿ ಕಾಂತಿಯುತವಾಗಿರಿಸುತ್ತದೆ.

 • ಪಾಲಕ್‌ನಲ್ಲಿನ ಸಿ ಜೀವಸತ್ವವು ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ.
 • ಬಿಸಿಲಿನ ತಾಪದಿಂದಾಗಿ ಮಂಕಾಗಿರುವ ಚರ್ಮಕ್ಕೆ ಸಹಜವರ್ಣ ಪಡೆಯಲು ಪಾಲಕ್‌ ನೆರವಾಗುತ್ತದೆ.
 • ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕಣಗಳನ್ನು ನಾಶಮಾಡಬಲ್ಲ ಶಕ್ತಿ ಪಾಲಕ್‌ನಲ್ಲಿದೆ.
 • ತ್ವಚೆಯ ತಳಭಾಗದಲ್ಲಿ ಸಂಗ್ರಹವಾಗಿ ಮೊಡವೆಗೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ರಕ್ತದಿಂದಲೇ ನಿವಾರಿಸಲು ಪಾಲಕ್‌ ಸಹಾಯಕವಾಗುತ್ತದೆ.
 • ಕೂದಲು ಉದುರುವ ಸಮಸ್ಯೆಯಿರುವವರು ಬೆಳಗ್ಗೆ ಎದ್ದೊಡನೆ ಒಂದು ಲೋಟ ಪಾಲಕ್‌ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಕೆಲ ದಿನಗಳಲ್ಲೇ ಪರಿಣಾಮ ಕಂಡುಬರುತ್ತವೆ.

Also read: ಪ್ರಯಾಣ ಮಾಡುವಾಗ ವಾಂತಿ ಹಾಗೂ ತಲೆಸುತ್ತಿನಿಂದ ಮುಕ್ತಿ ಸಿಗಬೇಕಾದರೆ ಈ ಮನೆಮದ್ದುಗಳನ್ನು ಪಾಲಿಸಿ…!!