ಹೋಸ 500 ರೂ. 5 ಮಿಲಿಯನ್ ನೋಟು ಸದ್ಯದಲ್ಲೇ ಬರಲಿದೆ

0
884

ಕಳೆದ ಕೆಲ ತಿಂಗಳಿಂದ 500, 1000 ಮೌಲ್ಯದ ನೋಟುಗಳನ್ನು ವಾಪಸ್ ಪಡೆದರೆ ಕಪ್ಪುಹಣದ ಪ್ರಮಾಣ ಕಡಿಮೆ ಅಗುತ್ತದೆ ಎಂಬ ಬೇಡಿಕೆ ವಿವಿಧ ವಲಯದಿಂದ ಕೇಳಿಬಂದಿತ್ತು. ಇದೀಗ 2000 ಮೌಲ್ಯದ ನೋಟುಗಳನ್ನೇ ಬಿಡುಗಡೆಯಾಗಿದ್ದು.ಇನ್ನು 500 ಮುಖಬೆಲೆಯ ನೋಟು ಸದ್ಯದಲ್ಲೇ ಬರಲಿದೆ, ಈ ನೋಟು ಕೂಡ ಕುತೂಹಲಕ್ಕೂ ಕಾರಣವಾಗಿದೆ.

ಸದ್ಯದಲ್ಲೇ ಹೋಸ 500 ರೂಪಾಯಿ ನೋಟು ನಿಮ್ಮ ಕಿಸೆ ಸೇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ನೋಟು ಬಿಡುಗಡೆಗೆ ಎಲ್ಲ ಸಿದ್ಧತೆ ಪೂರ್ಣಗೊಳಿಸಿದೆ.

ನೋಟು ನಿಷೇಧದ ನಂತರ ಹಣಕ್ಕಾಗಿ ಪರದಾಡುತ್ತಿರುವ ಜನಸಾಮಾನ್ಯರು ಕೊಂಚ ರಿಲೀಫ್ ಆಗ್ಬಹುದು. ಯಾಕಂದ್ರೆ ನಾಸಿಕ್ ನ ಕರೆನ್ಸಿ ನೋಟ್ ಪ್ರೆಸ್, ಹೊಸ ನೋಟುಗಳನ್ನು ಮುದ್ರಿಸಿ ಆರ್ ಬಿ ಐ ಗೆ ಕಳುಹಿಸಿದೆ. 500 ರೂಪಾಯಿ ಮುಖಬೆಲೆಯ 5 ಮಿಲಿಯನ್ ನೋಟುಗಳ ಕಂತೆಯನ್ನು ಈಗಾಗ್ಲೇ ಆರ್ ಬಿ ಐಗೆ ರವಾನಿಸಲಾಗಿದೆ.

ಇನ್ನೂ 5 ಮಿಲಿಯನ್ ನೋಟುಗಳನ್ನು ಮುದ್ರಿಸಿ ಬುಧವಾರ ಕಳುಹಿಸಲಾಗುತ್ತದೆ. ಸೆಕ್ಯೂರಿಟಿ ಪ್ರಿಂಟಿಂಗ್ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ 9 ಘಟಕಗಳಲ್ಲಿ ನಾಸಿಕ್ ಕರೆನ್ಸಿ ನೋಟ್ ಪ್ರೆಸ್ ಕೂಡ ಒಂದು.

ಇಲ್ಲಿ 20, 50 ಮತ್ತು 100 ರೂಪಾಯಿ ಮುಖಬೆಲೆಯ ನೋಟುಗಳನ್ನು ಕೂಡ ಮುದ್ರಿಸಲಾಗುತ್ತದೆ. ಸರ್ಕಾರ ಹಳೆಯ 500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ಬಳಿಕ ಹೊಸ 500 ಮತ್ತು 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದೆ.

2000 ರೂಪಾಯಿ ಬಹುತೇಕ ಎಲ್ಲೆಡೆ ಲಭ್ಯವಾಗುತ್ತಿದ್ದು, 500 ರೂಪಾಯಿ ನೋಟುಗಳು ಹೆಚ್ಚಾಗಿ ಸಿಗುತ್ತಿಲ್ಲ.

ಮೈಸೂರು ಮತ್ತು ಪಶ್ಚಿಮ ಬಂಗಾಳದ ಸಲ್ಬೊನಿ ಘಟಕಗಳಲ್ಲಿ ಈಗಾಗ್ಲೇ 500 ಮತ್ತು 2000 ರೂ. ನೋಟುಗಳನ್ನು ಮುದ್ರಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಾಸಿಕ್ ಮತ್ತು ಮಧ್ಯಪ್ರದೇಶದ ದೇವಾಸ್ ಪ್ರೆಸ್ ಗಳಲ್ಲೂ 500 ರೂಪಾಯಿ ನೋಟುಗಳನ್ನು ಮುದ್ರಣ ಮಾಡಲಾಗಿದೆ. ಇವುಗಳ ಪೈಕಿ ನಾಸಿಕ್ ಪ್ರೆಸ್ ಗೆ 500 ರ ಮುಖಬೆಲೆಯ 400 ಮಿಲಿಯನ್ ನೋಟುಗಳನ್ನು ಮುದ್ರಿಸುವಂತೆ ಸೂಚಿಸಲಾಗಿದೆ. ಇನ್ನು ನಿನ್ನೆ ಸಹ ಎಲ್ಲಾ ಬ್ಯಾಂಕ್ ಗಳಲ್ಲಿ ಹೊಸ ನೋಟುಗಳು ಖಾಲಿಯಾಗಿದ್ರಿಂದ 10 ರೂಪಾಯಿ ನಾಣ್ಯಗಳನ್ನೂ ವಿತರಿಸಲಾಗಿದೆ.