ಬಿಲಿಸಿನ ಬೇಗೆಯಿಂದ ಹೊರಬರಲು ಇಲ್ಲಿದೆ 500 ರುಪಾಯಿಯ AC!!

0
1561

ಇಲ್ಲಿದೆ  ನೋಡಿ  ಬಡವರ  AC!!

ಈ  AC-ಯಾ  ಬೆಲೆ  ೫೦೦  ರೂಪಾಯಿ  ಹಾಗು  ಇದಕ್ಕೆ  ವಿದ್ಯುತ್ತಿನ  ಅವಶ್ಯಕತೆ  ಇಲ್ಲ . ಆಶ್ಚರ್ಯವಾಗುತ್ತಿದೆಯೇ ? ಇಲ್ಲಿದೆ  ನೋಡಿ  ಇದರ  ಕಥೆ . ಸದ್ಯಕ್ಕೆ  ಇದು , ಬಾಂಗ್ಲಾದೇಶದಲ್ಲಿ  ಚಾಲತಿಯಲ್ಲಿದೆ . ನ್ಯೂ ಯಾರ್ಕ್  ಮೂಲದ  ಒಂದು ಅಡ್ವರ್ಟೈಸಿಂಗ್  ಸಂಸ್ಥೆ  ಗ್ರೇಯಾ ಬಾಂಗ್ಲಾದೇಶದ  ಶಾಖೆ  ಗ್ರೇ ಢಾಕಾ  ಮತ್ತು  ಗ್ರಾಮೀಣ್  ಇಂಟೆಲ್  ಸೋಶಿಯಲ್ ಬಿಸಿನೆಸ್ ಲಿಮಿಟೆಡ್  ಸೇರಿ  ಈ  ಪ್ರಕೃತಿ  ಸ್ನೇಹಿ  AC ಯನ್ನು  ಬಾಂಗ್ಲಾದೇಶದ  ಬಡ  ಜನತೆಗೆ  ಈ  ಬೇಸಿಗೆಯ ಉಡುಗೊರೆಯಾಗಿ ನೀಡಿದ್ದಾರೆ . ಬಾಂಗ್ಲಾದೇಶದಲ್ಲಿ  ಬೇಸಿಗೆಯಲ್ಲಿ  ತಾಪಮಾನವು  45 ಡಿಗ್ರಿ  ಯನ್ನು  ಮೀರುತ್ತದೆ .

Credits: Weekend Leader

ಆಶಿಶ್  ಪಾಲ್ ನ   ಸಂಶೋಧನೆ  AC. ಕಿಟಕಿಗೆ  ಜೋಡಿಸಬಹುದಾದ  ಈ  ಸಾಧನವನ್ನು  ಪರಿಷ್ಕರಿಸಿದ  ಪ್ಲಾಸ್ಟಿಕ್  ಬಾಟಲಿ ಗಳಿಂದ   ಮಾಡಬಹುದು . ಹಾಗು  ಇದು  ತಾಪಮಾನವನ್ನು  5 ಡಿಗ್ರಿ  ಯ  ವರೆಗೆ  ಕಡಿಮೆ  ಮಾಡುತ್ತದೆ .

 

Credits: Weekend Leader

ಈ  ಯೋಚನೆ  ಇವರ  ತಲೆಗೆ  ಬಂದದ್ದು  ಅವನ  ಮಗನ  ಶಿಕ್ಷಕನ  ಪಾಠವನ್ನು  ಕೇಳಿದಾಗ . ಅದನ್ನು  ಕೇಳಿ  2014 ರಲ್ಲಿ ಈ  ಯೋಚನೆಯನ್ನು  ಕಾರ್ಯರೂಪಕ್ಕೆ  ತರಲು  ನಿರ್ಧರಿಸಿದರು . 2015 ರಲ್ಲಿ  ಇದರ  ಮಾದರಿ  ರೂಪವನ್ನು  ಸಿದ್ಧ ಪಡಿಸಿದರು . ಈ  ಸಾಧನದ  ಹಿಂದಿರುವ  ತತ್ವ  ಅಡೈಬ್ಯಾಟಿಕ್  ಕೂಲಿಂಗ್ . ಅಂದರೆ  ಗಾಳಿಯ  ಒತ್ತಡವನ್ನು  ಪರಿಮಾಣ ವಿಸ್ತರಣೆ  ಇಂದ  ಬದಲಿಸಿ  ತಾಪಮಾನವನ್ನು  ಕಮ್ಮಿ  ಮಾಡುವುದು . ಇದರಲ್ಲಿ  ಪರಿಷ್ಕರಿಸಿದ  ಎರಡು  ಲೀಟರ್  ಪ್ಲಾಸ್ಟಿಕ್ ಬಾಟಲಿ  ಗಳನ್ನು  ಅರ್ಧಕ್ಕೆ  ಕತ್ತರಿಸಿ  ಜೋಡಿಸಲಾಗುತ್ತದೆ .

Credits: Weekend Leader

ಇಲ್ಲಿಯವರೆಗೆ  25,000 ಜನ  ಈ  ಕೂಲರ್  ಅನ್ನು  ಮಾಡುವ  ವಿಧಾನವನ್ನು  ಅಂತರ್ಜಾಲದಿಂದ  ಡೌನ್ಲೋಡ್  ಮಾಡಿಕೊಂಡಿದ್ದಾರೆ  ಎಂದು  ಗ್ರೇ ಢಾಕಾ  ಹೇಳುತ್ತದೆ . ಆ  ಸಂಸ್ಥೆಗೆ  ಇದನ್ನು  ವಾಣಿಜಿಯೀಕರಣಕ್ಕೆ   ಮಾಡಿದ್ದಲ್ಲದ್ದರಿಂದ  ಇದರ  ಬಗ್ಗೆ  ಅವರಿಗೆ  ಖುಷಿ  ಇದೆ .