500ನೇ ಟೆಸ್ಟ್ ಮೊದಲ ದಿನ ಆಲೌಟ್‌ನಿಂದ ಭಾರತ ಪಾರು

0
492

ಪ್ರವಾಸಿ ನ್ಯೂಜಿಲೆಂಡ್ ತಂಡದ ವೇಗ ಹಾಗೂ ಸ್ಪಿನ್ ಬೌಲಿಂಗ್ ದಾಳಿಗೆ ಕಂಗೆಟ್ಟ ಭಾರತ ತಂಡ 5೦೦ನೇ ಟೆಸ್ಟ್ ಪಂದ್ಯದ ಮೊದಲ ದಿನ ಆಲೌಟ್ ಆಗುವ ಭೀತಿಯಿಂದ ಪಾರಾಗಿದೆ.

ಕಾನ್ಪೂರನ ಗ್ರೀನ್ ಪಾರ್ಕ್ ಅಂಗಳದಲ್ಲಿ ಗುರುವಾರದಿಂದ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಮಾಡಿತು. ದಿನದಾಟದ ಅಂತ್ಯಕ್ಕೆ ವಿರಾಟ್ ಪಡೆ 9 ವಿಕೆಟ್‌ಗಳಿಂದ 291  ರನ್ ಕಲೆಹಾಕಿದೆ. ಎರಡನೇ ದಿನಕ್ಕೆ ರವೀಂದ್ರ ಜಡೇಜಾ ಹಾಗೂ ಉಮೇಶ್ ಯಾದವ್ ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಭಾ

ರತದಲ್ಲಿ ಆಡುವ ಅವಕಾಶವನ್ನು ಪಡೆದ ಕರ್ನಾಟಕದ ಕೆ.ಎಲ್ ರಾಹುಲ್ (32) ಜವಾಬ್ದಾರಿಯುತ ಆಟವನ್ನು ಆಡಲಿಲ್ಲ. ಎರಡನೇ ವಿಕೆಟ್‌ಗೆ ಮುರುಳಿ ವಿಜಯ್ ಹಾಗೂ ಚೇತೇಶ್ವರ್ ಪೂಜರ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಮುರುಳಿ 65 ಹಾಗೂ ಪೂಜಾರ 62 ರನ್ ಬಾರಿಸಿ ಪೆವಿಲಿಯನ್ ಸೆರಿದರು.

ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಕೆಳ ಕ್ರಮಾಂಕದಲ್ಲಿ ಆರ್ ಅಶ್ವಿನ್ 40 ರನ್ ಬಾರಿಸಿದರು.
ನ್ಯೂಜಿಲೆಂಡ್ ತಂಡದ ವೇಗಿ ಟ್ರೇಂಟ್ ಬೌಲ್ಟ್ ಭಾರತದ್ ಕೆಳ ಕ್ರಮಾಂಕದ ಆಟಗಾರರಿಗೆ ಖೆಡ್ಡಾ ತೋಡಿದರು. ಬೌಲ್ಟ್ ಹಾಗೂ ಸ್ಯಾಂಟನರ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 9 ವಿಕೆಟ್‌ಗೆ 291
(ಮುರುಳಿ ವಿಜಯ್ 65, ಚೇತೇಶ್ವರ್ ಪೂಜರ 62, ಅಶ್ವಿನ್ 40, ಬೌಲ್ಟ್ 57ಕ್ಕೆ 3, ಸ್ಯಾಂಟನರ್ 77ಕ್ಕೆ 3)