ಪೈಲಟ್‌ ಹೊತ್ತಿಸಿದ ಸಿಗರೇಟ್‌ 51 ಪ್ರಯಾಣಿಕರ ಪ್ರಾಣವನ್ನೇ ತೆಗೆಯಿತು..

0
335

ವಾಹನ ಮತ್ತು ವಿಮಾನ ಯಾನದಲ್ಲಿ ಅದರದೇ ಆದ ಸುರಕ್ಷತೆ ಇರುತ್ತದೆ. ಅವುಗಳನ್ನು ತಿಳಿದು ತಿಳಿದು ಮಾಡುವ ತಪ್ಪಿನಿಂದ ಎಷ್ಟೊಂದು ಅವಘಡಗಳು ನಡೆಯುತ್ತೆ ಅನ್ನೋದಕ್ಕೆ ಈ ವಿಮಾನ ದುರಂತವೇ ಸಾಕ್ಷಿಯಾಗಿದೆ. ಬಾಂಗ್ಲಾದೇಶದ ರಾಜಧಾನಿಯಾದ ಢಾಕಾದಿಂದ ಹೊರಟ ವಿಮಾನ ಕಠ್ಮಂಡು ಏರ್​ಪೋರ್ಟ್​ನ ರನ್​ವೇನಲ್ಲಿ ಲ್ಯಾಂಡ್ ಆಗುವಾಗ ಆಯಾ ತಪ್ಪಿ ಬಿದ್ದು 51 ಜನರು ಸುಟ್ಟು ಕರಕಲಾಗಿದ್ದರು. ಇದಕ್ಕೆ ಮೂಲ ಕಾರಣವೆ ನಿಯಮ ಉಳಘಿಸಿ ಪೈಲೆಟ್ ಮಾಡಿದ ತಪ್ಪು ಎಂದು ತನಿಖಾ ಆಯೋಗ ತಿಳಿಸಿದೆ.

ಏನಿದು ದುರಂತ:

ಹೌದು 51 ಜನರ ಪ್ರಾಣವನ್ನು ಬಲಿ ತೆಗದುಕೊಂಡ US ಏರ್‌ಲೈನ್ಸ್‌ ವಿಮಾನ ದುರಂತಕ್ಕೆ ಪೈಲೆಟ್​​ ಹಚ್ಚಿದ ಸಿಗರೇಟೇ ಕಾರಣ ಎಂದು ತಿಳಿದ ಜನರಿಗೆ ಆಘಾತವಾಗಿದೆ. ಕಠ್ಮಂಡುವಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಮಾನ 2018ರ ಮಾರ್ಚ್ 12ರಂದು ಪತನಗೊಂಡಿತ್ತು. ಈ ದುರಂತದಲ್ಲಿ 51 ಮಂದಿ ಸಾವಿಗೀಡಾಗಿದ್ದರು. 71 ಮಂದಿಯನ್ನು ಹೊತ್ತ ಈ ವಿಮಾನವು ಏರ್​ಪೋರ್ಟ್​ನ ರನ್​ವೇ ಬಳಿ ಇರುವ ಫುಟ್ಬಾಲ್ ಮೈದಾನದ​​ ಮೇಲೆ ನುಗ್ಗಿ ಬೆಂಕಿಹೊತ್ತಿಕೊಂಡಿತ್ತು. ಇದಕ್ಕೆ ಕಾರಣವೇನು ಎಂದು ತನಿಖೆ ನಡೆಸಿದ ಆಯೋಗ ವರದಿ ನೀಡಿದೆ.

ಈ ವರದಿ ಅನ್ವಯ ವಿಮಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಪೈಲಟ್‌, ನಿರ್ಬಂಧಗಳ ನಡುವೆಯೂ ವಿಮಾನದ ಕಾಕ್‌ಪಿಟ್‌ನಲ್ಲಿಯೇ ಧೂಮಪಾನ ಮಾಡಿದ್ದಾನೆ. ಈ ಸಿಬ್ಬಂದಿಯ ಅಜಾಗರೂಕತೆಯ ಕಾರಣದಿಂದಲೇ ವಿಮಾನ ಫುಟ್ಬಾಲ್ ಮೈದಾನದಲ್ಲಿ ಉರುಳಿ ಎರಡು ಬಾರಿ ಸ್ಫೋಟವಾಯಿತು. ಈ ವೇಳೆ ವಿಮಾನವು ಚೂರು ಚೂರುಗಳಾಗಿ ಮೈದಾನದಲ್ಲಿ ಚೆಲ್ಲಾಡಿದೆ ಎಂದು ನೇಪಾಳದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಆಯೋಗ ತನಿಖಾ ವರದಿ ಸಲ್ಲಿಸಿದೆ ಎನ್ನಲಾಗಿದೆ.

ವರದಿಯಲ್ಲೇನಿದೆ?

ವಿಮಾನಯಾನದ ಸಮಯದಲ್ಲಿ ತಂಬಾಕು ಪದಾರ್ಥ ಬಳಕೆ ಮಾಡಲಾಗಿದೆ. ಇದರ ಹೊರತು ಇನ್ಯಾವುದೇ ನಿಷೇಧಿತ ವಸ್ತುಗಳ ಸೇವನೆ ಮಾಡಿಲ್ಲ. ಪರಿಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ದಿಕ್ಕು ತೋಚದೆ ಸಿಬ್ಬಂದಿ ಸುಮ್ಮನಾದುದು ಪ್ರಯಾಣಿಕರ ಸಾವಿಗೆ ಕಾರಣ ಈ ಮಾಹಿತಿ ಕಾಕ್‌ಪಿಟ್‌ ಧ್ವನಿ ಸಂಗ್ರಹದ ಪರಿಶೀಲನೆ ವೇಳೆ ಧೂಮಪಾನ ಮಾಡಿರುವುದಾಗಿ ಸಾಬೀತಾಗಿದೆ. ಆದರೆ, ಪೈಲಟ್‌ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಕಾರ್ಯನಿರ್ವಹಣಾ ವಿಭಾಗ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ದುರಂತದಲ್ಲಿ ಸಾವಿಗಿಡಾದ ಪ್ರಯಾಣಿಕರ ಶವಗಳ ಪರೀಕ್ಷೆ ನಡೆಸಿದ ಕಠ್ಮಂಡು ವಿಧಿವಿಜ್ಞಾನ ಇಲಾಖೆ, ತಲೆಗೆ ಬಲವಾದ ಹೊಡೆತಬಿದ್ದಿರುವುದರಿಂದ ಪ್ರಯಾಣಿಕರು ಮೃತಪಟ್ಟಿರುವುದಾಗಿ ಹೇಳಿದೆ. ಈಗಾಗಲೇ ಈ ಎರಡು ವರದಿಗಳನ್ನು ನೇಪಾಳದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಮತ್ತು ನೇಪಾಳ ಕಳಪೆ ವಾಯು ಸುರಕ್ಷತಾ ಗುಣಮಟ್ಟ, ಅನನುಭವಿ ಪೈಲಟ್​ಗಳು, ಅಸಮರ್ಪಕ ನಿರ್ವಹಣೆ ಇತ್ಯಾದಿ ಸಮಸ್ಯೆಗಳಿಂದ ಇಲ್ಲಿ ಹೆಚ್ಚಿನ ದುರಂತಗಳು ಕಂಡು ಬರುತ್ತಿವೆ. 2016 ರಲ್ಲಿವೂ ಮಿನಿ ವಿಮಾನ ಅಪ್ಪಳಿಸಿ ಸುಮಾರು 24 ಜನರು ಪ್ರಾಣಕಳೆದುಕೊಂಡರು. ಇಲ್ಲಿ ಅನುಭವ ಹೊಂದಿರುವ ಮತ್ತು ನುರಿತ ಪೈಲೆಟ್ -ಗಳ ಅಭಾವದಿಂದ ಪ್ರಯಾಣಿಕರು ಬಲಿ ಯಾಗುತ್ತಿದ್ದು ಇತ್ತ ಪ್ರಯಾಣ ಮಾಡುವರು ವಿಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

Also read: ನೀವು ಈ 10 ಹೂಡಿಕೆಗಳಿಗೆ ಮತ್ತು ಆದಾಯಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ; ಕಾನೂನಾತ್ಮಕವಾಗಿ ಇವುಗಳು ತೆರಿಗೆ ಮುಕ್ತವಾಗಿವೆ..