ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ; 7 ವರ್ಷದ ಬಾಲಕನ ಬಾಯಲ್ಲಿ 526 ಹಲ್ಲುಗಳು! ವ್ಯೆದ್ಯ ಲೋಕವೇ ಅಚ್ಚರಿ..

0
353

ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ 30 ರಿಂದ 32 ಹಲ್ಲುಗಳು ಬೆಳೆಯುವುದು ಗೊತ್ತೆಯಿದೆ. ಅದಕ್ಕೂ ಮಿರಿ ಒಂದು ಅಥವಾ ಎರಡು ಹಲ್ಲುಗಳು ಬೆಳೆಯುವುದು ಕಂಡು ಬಂದರೆ, ಇಲ್ಲೊಬ್ಬ ಬಾಲಕನ ಬಾಯಲ್ಲಿ ಬರೋಬರಿ 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದ್ದು, ಭಾರಿ ವೈರಲ್ ಆಗಿದೆ. ವಿಶ್ವದಲ್ಲೇ ಮೊದಲ ಪ್ರಕರಣವಾಗಿದ್ದು ಕುತೂಹಲ ಕೆರಳಿಸಿದೆ. ಸದ್ಯ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ. ಇದೆಲ್ಲವೂ ಹೇಗೆ ಸಾದ್ಯವೆಂದು ಹಲವರು ಪ್ರತಿಕ್ರಿಯೆ ನೀಡಿದರೆ ವ್ಯೆದ್ಯರು ಹೊರ ತೆಗೆದ ಹಲ್ಲನ್ನು ರಂಗೋಲಿಯ ರೂಪದಲ್ಲಿಟ್ಟು ಫೋಟೋ ತೆಗೆದು ವೈರಲ್ ಮಾಡಿದ್ದಾರೆ.

ಬಾಲಕನ ಬಾಯಲ್ಲಿ ನೂರಾರು ಹಲ್ಲುಗಳು?

ಹೌದು ಆಶ್ಚರ್ಯ ಅನಿಸಿದರು ಅಸಲಿಗೆ ಸತ್ಯವಾಗಿದೇ. ಏಕೆಂದರೆ ಮನುಷ್ಯರಿಗೆ ಇರುವ 32 ಹಲ್ಲುಗಳೆ ಸರಿಯಾಗಿ ಇರಲು ಆಗದೆ ಹಲವು ತೊಂದರೆಗೆ ಕಾರಣವಾಗುತ್ತಿವೆ ಇಂತಹದರಲ್ಲಿ ಒಂದಲ್ಲ ಎರಡಲ್ಲ ನೂರಾರು ಹಲ್ಲು ಬಳೆಯುವುದು ಹೇಗೆ ಅನ್ನೋ ಯೋಚನೆ ಎಲ್ಲರಲ್ಲಿದೆ, ಇದಕ್ಕೆ ಉತ್ತರ ಮಾಹಿತಿ ನೀಡಿದ ವ್ಯೆದ್ಯರು ‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ. ಎಂದು ಹೇಳಿದ್ದಾರೆ.

Also read: ಹಿಂದೂ ಅಲ್ಲದ ಡೆಲಿವರಿ ಬಾಯ್ ತಂದ ಆಹಾರವನ್ನು ಕ್ಯಾನ್ಸಲ್ ಮಾಡಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿ ವ್ಯಕ್ತಿಗೆ ಝೊಮ್ಯಾಟೊ ದಿಂದ ಸಿಕ್ತು ಭಾರಿ ಬಹುಮಾನ..

ಮೂರು ವರ್ಷದಿಂದಲೇ ಬೆಳೆಯುತ್ತಿತು ಹಲ್ಲು;

ಈ ಬಾಲಕ ಸುಮಾರು ಮೂರು ವರ್ಷದವನಿರುವಾಗಲೇ ಆತನ ಬಾಯಿ ಊದಿಕೊಂಡಿರುವುದನ್ನು ಪೋಷಕರು ಗಮನಿಸಿದ್ದರು. ಆದರೆ ಬಾಲಕನ ಬಾಯಿ ಬಾವು ಬಂದಿರುವ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಅಲ್ಲದೆ, ಬಾಯಿಯನ್ನು ಪರೀಕ್ಷಿಸಲು ಮುಂದಾದಾಗ ಬಾಲಕ ಅಳಲು ಪ್ರಾರಂಭಿಸುತ್ತಿದ್ದ. ಹೀಗಾಗಿ ಪೋಷಕರು ನಿರ್ಲಕ್ಷ್ಯ ವಹಿಸಿದ್ದರು. ಬಾವು ಹೆಚ್ಚಾಗುತ್ತಿದ್ದಂತೆ ಪೋಷಕರು ಭಯಭೀತರಾಗಿದ್ದು, ನಂತರ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಗ ಎಕ್ಸ್-ರೇ ಹಾಗೂ ಸಿಟಿ ಸ್ಕ್ಯಾನ್ ಮಾಡಿದಾಗ ಕೆಳಭಾಗದ ಬಲ ದವಡೆಯಲ್ಲಿ ಹೆಚ್ಚು ಹಲ್ಲುಗಳಿರುವುದು ಕಂಡು ಬಂತು. ಹೀಗಾಗಿ ಸರ್ಜರಿ ಮಾಡಲು ನಿರ್ಧರಿಸಿ ಅರಿವಳಿಕೆ(ಅನಸ್ತೇಶಿಯಾ) ನೀಡಿ ಬಲಭಾಗದ ದವಡೆಯನ್ನು ತೆರೆದೆವು, ಅಲ್ಲಿ ಒಂದು ಚೀಲದ ರೀತಿ ಕಾಣಿಸಿತು. ಅದು ಸುಮಾರು 200 ಗ್ರಾಂ. ತೂಕವಿತ್ತು. ಆ ಚೀಲದ ತುಂಬ ಹಲ್ಲುಗಳಿದ್ದವು. ತುಂಬಾ ಎಚ್ಚರಿಕೆ ವಹಿಸಿ ಹಲ್ಲುಗಳನ್ನು ಹೊರ ತೆಗೆದೆವು.

Also read: ಮಹಿಳೆಯ ಹೊಟ್ಟೆಯಲ್ಲಿ 1.5 ಕೆಜಿ ಚಿನ್ನಾಭರಣ, 90 ನಾಣ್ಯಗಳು ಪತ್ತೆ; ಶಸ್ತ್ರಚಿಕಿತ್ಸೆ ನಂತರ ಬಯಲಾಯಿತು! ಸತ್ಯ..

ಕೆಲವು ತುಂಬಾ ಸಣ್ಣ ಕಣಗಳಿದ್ದರೂ ಅವುಗಳಲ್ಲಿ ಹಲ್ಲುಗಳ ಗುಣಗಳಿರುತ್ತವೆ. ಆ ಚೀಲದಿಂದ ಹಲ್ಲುಗಳನ್ನು ತೆಗೆಯಲು ಸುಮಾರು 5 ತಾಸು ತೆಗೆದುಕೊಳ್ಳಲಾಗಿದೆ. ಹೊರ ತೆಗೆಯಲಾದ ಹಲ್ಲುಗಳು ಮುತ್ತಿನ ಆಕಾರದಲ್ಲಿವೆ ಚೀಲ ತೆರೆದು ನೋಡಿದಂತೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ 526 ಹಲ್ಲುಗಳು ಪತ್ತೆಯಾಗಿವೆ ಎಂದು ಪಿ.ಸೆಂದಿಲ್‍ನಾಥನ್ ವಿವರಿಸಿದ್ದಾರೆ. ಅದರಂತೆ ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಪ್ಯಾಥೋಲಜಿ ವಿಭಾಗದ ಮುಖ್ಯಸ್ಥೆ ಪ್ರತಿಭಾ ರಮಣಿ ಈ ಕುರಿತು ಮಾಹಿತಿ ನೀಡಿ, ಸರ್ಜರಿ ಮಾಡಿದ ಮೂರು ದಿನಗಳ ನಂತರ ಬಾಲಕ ಸಹಜ ಸ್ಥಿಗೆ ಮರಳಿದ್ದಾನೆ ಎಂದು ತಿಳಿಸಿದ್ದಾರೆ. ಬಾಯಿಯಲ್ಲಿ 526 ಹಲ್ಲುಗಳು ಪತ್ತೆಯಾಗಿದ್ದು ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಮತ್ತೆ ಹಲ್ಲು ಬೆಳೆಯುತ್ತೇವೆ ಎನ್ನುವುದು ಇನ್ನೂ ತಿಳಿಸಿಲ್ಲ ಎಂದು ಬಾಲಕನ ಪಾಲಕರು ತಿಳಿಸಿದ್ದಾರೆ.