ರಾಜ್ಯದಲ್ಲಿ ಆಘಾತಕಾರಿ ಸತ್ಯ ಬಯಲು; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 578 ಅಪ್ರಾಪ್ತ ಗರ್ಭಿಣಿಯರು ಪತ್ತೆ..

0
355

ಸ್ವಾತಂತ್ರ್ಯ ಲಭಿಸಿ ಇಷ್ಟೊಂದು ವರ್ಷಗಳಾದರು, ದೇಶ ಸುಶಿಕ್ಷಿತದಲ್ಲಿದರು ಸಾಮಾಜಿಕ ಪಿಡುಗಾಗಿರುವ ‘ಬಾಲ್ಯ ವಿವಾಹ’ ಮಾತ್ರ ಇನ್ನೂ ಸಮಾಜಕ್ಕೆ ಕಂಟಕದೋಪಾದಿಯಲ್ಲಿ ಕಾಡುತ್ತಿದೆ. ಅದಕ್ಕಾಗಿ ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಪಣ ತೊಟ್ಟಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಇದೀಗ ಈ ಪಿಡುಗಿನ ಬಗ್ಗೆ ಅರಿವು ಮೂಡಿಸಲು ಹಲವಾರುರು ಕ್ರಮಗಳನ್ನು ಕೈಗೊಂಡಿದೆ ಹಳ್ಳಿ ಹಳ್ಳಿಗಳಲ್ಲಿ ಕಾರ್ಯಗಾರ ನಡೆಸಿ ಬಾಲ್ಯ ವಿವಾಹ ಪದ್ದತಿಯನ್ನು ವಿರೋಧಿಸಲು ತಿಳಿಸಿದೆ. ಆದರು ರಾಜ್ಯದ ಹಲವು ಪ್ರದೇಶಗಳಲ್ಲಿ ಈ ಅನಿಷ್ಟ ಪದ್ಧತಿ ಎದ್ದು ಕಾಣುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ ಆಶ್ಚರ್ಯ ಕರ ಸುದ್ದಿಯೊಂದು ಹೊರಬಿದಿದ್ದೆ.

Also read: ಬಹುದಿನಗಳಿಂದ ವಿವಾದ ಸೃಷ್ಟಿಸಿದ ಎಸ್‍ಸಿ, ಎಸ್‍ಟಿ ನೌಕರರ ಬಡ್ತಿ ಮೀಸಲಾತಿಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು..

ಹೌದು 2018-19ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ವಿತರಿಸಿದ ತಾಯಿ ಕಾರ್ಡ್‌ನಲ್ಲಿ ಬಯಲಾದ ಸತ್ಯ, ಇಡಿ ರಾಜ್ಯದಲ್ಲಿ ಬೆರಗುಗೊಳಿಸಿದೆ. ಸದ್ಯದ ಸ್ಥಿತಿಯಲ್ಲಿ ಬಾಲ್ಯವಿವಾಹಗಳಿಗೆ ಸುದ್ದಿಯಾಗುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನಲ್ಲೇ ತಾಯಿಯಾಗುವವರ ಸಂಖ್ಯೆ ಹೆಚ್ಚಾಗಿದೆ. 2018-19ರಲ್ಲಿ ವರ್ಷದಲ್ಲಿ 578 ಹೆಣ್ಣುಮಕ್ಕಳು ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸಿದ್ದಾರೆ! ಎನ್ನುವ ಸತ್ಯವನ್ನು ಜಿಲ್ಲಾಸ್ಪತ್ರೆ ವಿತರಿಸಿದ ತಾಯಿ ಕಾರ್ಡ್‌ನಿಂದ ಸತ್ಯ ಬಯಲಾಗಿದೆ. ಈ ಆಘಾತಕಾರಿ ಸುದ್ದಿಯನ್ನು ಸರ್ಕಾರದ ಮೂಲಗಳೆ ಬಹಿರಂಗಪಡಿಸಿವೆ.

ಒಂದೇ ವರ್ಷದಲ್ಲಿ 578 ಅಪ್ರಾಪ್ತ ಗರ್ಭಿಣಿಯರು?

ನಂಬಲು ಸಾಧ್ಯವಾಗದಿದ್ದರು ಅಸಲಿಗೆ ಸತ್ಯವೇ ಆಗಿದ್ದು, 2018 ಮತ್ತು 19ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರೋಬ್ಬರಿ 578 ಮಂದಿ ಅಪ್ರಾಪ್ತ ಹೆಣ್ಣು ಮಕ್ಕಳು ಜಿಲ್ಲಾಸ್ಪತ್ರೆಯಿಂದ ‘ತಾಯಿ ಕಾರ್ಡ್’ ಪಡೆದಿದ್ದಾರೆ. ಅಂದರೆ ಪ್ರತಿ ದಿನ ಸುಮಾರು ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ತಾಯಂದಿರಾಗುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಬಾಲ್ಯವಿವಾಹದಂಥ ಅನಿಷ್ಠ ತಡೆಯಲು ಅಧಿಕಾರಿವರ್ಗ ಸಂಪೂರ್ಣ ವಿಫಲವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಬೆಳಕಿಗೆ ಬಂದ ಸತ್ಯವಾದರೆ ಇನ್ನೂ ಬೆಳಕಿಗೆ ಬರದೆ ಇರುವ ಹಲವಾರು ಇನ್ನು ಖಾಸಗಿ ಆಸ್ಪತ್ರೆಗೆ ತೋರಿಸಿರುವವರ, ಗರ್ಭಪಾತ ಮಾಡಿಕೊಂಡವರ ಸಂಖ್ಯೆ ಸೇರಿಸಿದರೆ ಅಪ್ರಾಪ್ತ ವಯಸ್ಸಿನಲ್ಲಿ ತಾಯ್ತನಕ್ಕೆ ತಳ್ಳಲ್ಪಡುವ ಹೆಣ್ಣುಮಕ್ಕಳ ಸಂಖ್ಯೆ ಇನ್ನೂ ಹೆಚ್ಚಿರುವ ಶಂಕೆ ಇದೆ.

Also read: ಸುಮಲತಾ ಅಂಬರೀಶ್ ಅವರಿಗೆ ಯೋಧ ಹಾಕಿದ್ದ ಮೊದಲ ಮತವನ್ನು ಅಸಿಂಧುಗೊಳಿಸಿದ ಕೇಂದ್ರ ಚುನಾವಣಾ ಆಯೋಗ ಇದರಲ್ಲಿ ಪ್ರತಿಪಕ್ಷದ ಕೈವಾಡ ವಿದೆಯೇ??

ಸದ್ಯ ಜಿಲ್ಲಾ ಆಸ್ಪತ್ರೆಯಿಂದ ತಾಯಿ ಕಾರ್ಡ್‌ನಿಂದ ಲಭ್ಯ ಮಾಹಿತಿ ಆಧಾರದಲ್ಲಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ೫೦೦ಕ್ಕೂ ಹೆಚ್ಚು ಅಪ್ರಾಪ್ರರು ಗರ್ಭಿಣಿಯರಾಗಿದ್ದಾರೆ ಎಂಬ ಅಂಕಿ-ಅಂಶ ನೀಡಲಾಗಿದೆ. ಕಾನೂನು ಪ್ರಕಾರ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವುದಕ್ಕೂ ಮುನ್ನ ಮದುವೆ ಮಾಡುವುದು ಅಪರಾದವಾಗಿದೆ. ಇಂಥ ಮದುವೆಗಳನ್ನು ನಿಲ್ಲಿಸಲು ಮತ್ತು ಅದರ ಬಗ್ಗೆ ಅರಿವು ಮೂಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಪೊಲೀಸ್ ಇಲಾಖೆಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಬಾಲ್ಯವಿವಾಹಕ್ಕೆ ಮುಂದಾಗಿದವರಿಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಕೆಲಸವನ್ನು ಈ ಸಮಿತಿ ಮಾಡುತ್ತದೆ. ಆದರೆ, ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಈ ಸಮಿತಿ ಸಂಪೂರ್ಣ ವಿಫಲವಾಗಿದೆ. ಎನ್ನುವುದು ಎತ್ತಿತೊರಿಸುತ್ತಿದೆ.

ಈ ಪ್ರಕರಣಕ್ಕೆ ಡಿಸಿ ಏನ್ ಅಂತಾರೆ?

Also read: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ, ಸಿ.ಎಂ. ವಿಶ್ರಾಂತಿಗಾಗಿ ದುಬಾರಿ ರೆಸಾರ್ಟ್-ನಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿರುವುದು ನೈತಿಕತೆಯೇ??

ಇಷ್ಟೊಂದು ಸಂಖ್ಯೆಯಲ್ಲಿ ಅಪ್ರಾಪ್ತ ವಯಸ್ಸಿನಲ್ಲೇ ತಾಯಿಯಾಗುವವರ ಘಟನೆಗಳು ಗಮನಕ್ಕೆ ಬಂದರೂ ಪ್ರಕರಣ ದಾಖಲಿಸದ ಅಧಿಕಾರಿಗಳ ವಿರುದ್ಧವೇ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇರುವ ಕಾರಣ ಆ ನಿಟ್ಟಿನಲ್ಲೂ ಕ್ರಮ ಕೈಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದ ಅವರು ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ವಿತರಿಸಿದ ತಾಯಿ ಕಾರ್ಡ್‌ನಲ್ಲಿ ಬಯಲಾದ ಗರ್ಭಿಣಿಯರನ್ನು ಹುಡುಕಿ ಮಾಹಿತಿ ಕಲೆಹಾಕುವಂತೆಯೂ ಸೂಚಿಸಿದ್ದಾರೆ.