ಸೊಳ್ಳೆಗಳು ನಿಮ್ಮಿಂದ ದೂರವಿರಲು, ನಿಮ್ಮ ದೇಹಕ್ಕೆ ಸೊಳ್ಳೆಗಳು ಕಡಿಯದಂತೆ ತಡೆಯಲು ಇಲ್ಲಿವೆ.. ನೈಸರ್ಗಿಕ ಮನೆ ಮದ್ದು..

0
2462

ಸೊಳ್ಳೆ ಚಿಕ್ಕದಿದ್ದರು ಪರಿಣಾಮ ಮಾತ್ರ ದೊಡ್ಡದು ಹಾಗಂತ ಎಲ್ಲ ಸೊಳ್ಳೆಗಳ ಕಡಿತ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಬೇಸಿಗೆ ಕಾಲದಲ್ಲಿ ಅಂತು ಸೊಳ್ಳೆಗಳು ವಿಪರಿತವಾಗಿ ಕಂಡು ಬರುತ್ತೇವೆ. ಅದಕ್ಕೆ ಹಲವು ಕಾರಣಗಳು ಕೂಡ ಇವೆ. ಸೊಳ್ಳೆ ಕಡಿಯುವುದರ ಹಿಂದಿರುವ ಸತ್ಯವೇನು ಎಂದು ಅಧ್ಯಯನಗಳೇ ನಡೆಯುತ್ತಿವೆ. ಕೆಲವು ಮೂಲಗಳ ಪ್ರಕಾರ ಕೆಲವರ ದೇಹ ಹೊರ ಸೋಸುವ ವಾಸನೆ ಸೊಳ್ಳೆಗಳನ್ನು ಆಕರ್ಷಿಸುತ್ತವಂತೆ. ಇನ್ನೂ ರಕ್ತದ ಗುಂಪಿಗೆ ಬಂದರೆ ನಿಮ್ಮ ರಕ್ತದ ಗುಂಪು ಎ ಅಥವಾ ಒ ಆಗಿದ್ದರೆ ಎ ಮಾದರಿಯ ರಕ್ತದ ಗುಂಪು ಹೊಂದಿರುವವರಿಗಿಂತ ಬಿ ಮಾದರಿಯ ರಕ್ತದ ಗುಂಪು ಹೊಂದಿರುವವರಿಗೆ ಸೊಳ್ಳೆ ಕಡಿಯುವುದು ಜಾಸ್ತಿಯಂತೆ.

Also read: ಸೊಳ್ಳೆ ಹೆಚ್ಚಾಗಿವೆ ಅಂತ ಅಪ್ಪಿ ತಪ್ಪಿಯೂ ಚೀನಿಯ ಸೊಳ್ಳೆ ಬ್ಯಾಟ್ ಬಳಸುತ್ತಿದ್ದರೆ ಎಚ್ಚರ..!

ದೇಹದಿಂದ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಿದ್ದರೆ, ಅದಕ್ಕೆ ಸೊಳ್ಳೆಗಳು ಆಕರ್ಷಿತರಾಗುವುದು ಹೆಚ್ಚು. ಸ್ಥೂಲ ಕಾಯದವರಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುವ ಪ್ರಮಾಣ ಹೆಚ್ಚು ಇರುತ್ತದೆ. ಅದರಂತೆ ಅಥ್ಲೆಟಿಕ್ ಗಳಿಗೆ ಮೈ ಬಿಸಿಯಾಗಿದ್ದರೆ, ಬೆವರು ಹರಿಯುತ್ತಿದ್ದರೆ, ಇದರ ವಾಸನೆಯಿದ್ದರೆ ಅವರಿಗೆ ಸೊಳ್ಳೆ ಕಡಿತ ಜಾಸ್ತಿ. ಇರುತ್ತದೆ ಇದೆ ಕಾರಣಕ್ಕೆ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಹಲವು ಅಪಾಯಕಾರಕ ಔಷಧಿಗಳನ್ನು ಬಳಕೆ ಮಾಡುವುದು ಅಥವಾ ಕ್ರೀಮ್-ಗಳಿಗೆ ಮಾರು ಹೋಗುವರು ಹೆಚ್ಚು. ಇವುಗಳ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಸೊಳ್ಳೆಗಳು ನಿಮ್ಮ ಸುತ್ತ ಬರದಂತೆ ನೋಡಿಕೊಳ್ಳಬಹುದು ಅದು ಹೇಗೆ ಅಂತ ಇಲ್ಲಿವೆ ನೋಡಿ.

ನಿಮ್ಮ ದೇಹದಿಂದ ಸೊಳ್ಳೆಗಳನ್ನು ದೂರವಿರಿಸಲು ನೈಸರ್ಗಿಕ ಮಾರ್ಗಗಳು:

1. ನೈಸರ್ಗಿಕ ಸಸ್ಯಗಳು

ಸೊಳ್ಳೆಗಳಿಗೆ ಕೆಮಿಕಲ್ಸ್ ನಿಂದ ತಯಾರಿಸಿದ ಕೀಟನಾಶಕಗಳ ಬಳಕೆ ಮಾತ್ರ ಪರಿಣಾಮಕಾರಿಯಲ್ಲ, ಬದಲಿಗೆ ಹಲವಾರು ವಿಭಿನ್ನ ನೈಸರ್ಗಿಕ ಸಸ್ಯಗಳು ಮತ್ತು ಗಿಡಮೂಲಿಕೆಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ, ಕೆಲವು ಉಪಯುಕ್ತ ಸಸ್ಯಗಳನ್ನು ನೀವು ವಾಸಿಸುವ ಸ್ಥಳದ ಸುತ್ತ ಬೆಳಸಿದರೆ ಬಂದ ಸೊಳ್ಳೆಗಳು ದೂರವಾಗುತ್ತೇವೆ, ಈ ಉಪಾಯದಿಂದ ನಿಮ್ಮ ಸಾಕು ಪ್ರಾಣಿಗಳನ್ನು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಂತಹ ಗಿಡಗಳು ಎಂದರೆ ಹಾರ್ಸ್ಮೇಂಟ್, ತುಳಸಿ, ರೋಸ್ಮರಿ, ಬೆಳ್ಳುಳ್ಳಿ, ಕ್ಯಾಟ್ನಿಪ್,

2. ಲ್ಯಾವೆಂಡರ್ ಸ್ಪ್ರೇ ಮತ್ತು ದೇಹದ ಎಣ್ಣೆ

ಸೊಳ್ಳೆಗಳು ಲ್ಯಾವೆಂಡರ್ ವಾಸನೆ ಆಗುವುದಿಲ್ಲ. ಆದರಿಂದ ಲ್ಯಾವೆಂಡರ್ ಸ್ಪ್ರೇಯನ್ನು ನೀವು ಅವಶ್ಯಕವಾದ ಬಾಡಿ ಸ್ಪ್ರೆಯನ್ನು ತಯಾರಿಸಬಹುದು ಅಥವಾ ಅದನ್ನು ನಿಮ್ಮ ಚರ್ಮದ ಮೇಲೆ ಹನಿಗಳಲ್ಲಿ ಹಚ್ಚಬಹುದು. ಈ ನೈಸರ್ಗಿಕ ಮಾರ್ಗದಿಂದ ಸೊಳ್ಳೆಗಳು ನಿಮ್ಮ ದೇಹದ ಸುತ್ತ ಸುಳಿದಾಡುವುದಿಲ್ಲ, ಇದು ಆರೋಗ್ಯಕ್ಕೂ ಉತ್ತಮವಾಗಿದೆ. ರಾಸಾಯನಿಕಗಳು ಮತ್ತು ಕ್ರೀಮ್-ಗಳ ಹಾಗೆ ಚರ್ಮದ ಕಿರಿಕಿರಿ ಮತ್ತು ಅಲರ್ಜಿಗಳು ಕಂಡು ಬರುವುದಿಲ್ಲ. ಅಷ್ಟೇ ಅಲ್ಲದೆ ಇದು ಲ್ಯಾವೆಂಡರ್ ಪ್ರಿಯರಿಗೆ ಉಪಯೋಗವಾಗುತ್ತೆ.

3. ಸಿಟ್ರೋನೆಲ್ಲಾ ಮೇಣದಬತ್ತಿಗಳು

ನಿಮ್ಮ ಮನೆಯಲ್ಲಿ ಅಲರ್ಜಿ ಸಮಸ್ಯೆ ಇದ್ದರೆ ಸಿಟ್ರೋನೆಲ್ಲಾ ಮೇಣದಬತ್ತಿಗಳು ದೊಡ್ಡ ಪರಿಹಾರವಾಗಿರಬಹುದು. ಸಿಟ್ರೋನೆಲ್ಲಾ ಎಂಬುದು ಒಂದು ಜನಪ್ರಿಯ ನೈಸರ್ಗಿಕ ಕೀಟ ನಿವಾರಕವಾಗಿದ್ದು, ಅದು ಸಂಶೋಧನೆಯಿಂದ ಅನುಮೋದಿಸಲ್ಪಟ್ಟಿದೆ. ಇದು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ, ಮನೆಯಲ್ಲಿ ಹೊಸದಾದ ವಾಸನೆಯನ್ನು ಹರಡುತ್ತದೆ. ಇದರಿಂದ ಯಾವುದೇ ಕೀಟಗಳು ನಿಮ್ಮ ಮನೆಯ ಸುತ್ತ ಹರಿದಾಡುವುದಿಲ್ಲ. ಸೊಳ್ಳೆಗಳು ಅಂತು ನಿಮ್ಮ ಸುಳಿದಾಡುವುದಿಲ್ಲ.

4. ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಸೊಳ್ಳೆಗಳ ನಿವಾರಣೆಗೆ ಉಪಯುಕ್ತವಾಗಿದೆ. ಇದನ್ನು ಹೆಚ್ಚಿನ ಜನರು ಮನೆಯಲ್ಲಿ ಇಟ್ಟಿರುತ್ತಾರೆ. ಸೋಳೆಗಳು ಮನೆಯಲ್ಲಿ ಕಂಡು ಬರುವ ವೇಳೆ ಒಂದು ಪ್ರಮಾಣದಲ್ಲಿ ಸಿಂಪಡಿಸಿದರೆ ಸಾಕು ಸೊಳ್ಳೆಗಳು ಕಂಡು ಬರುವುದಿಲ್ಲ, ಹೆಚ್ಚಿನ ಪರಿಣಾಮಕ್ಕಾಗಿ ಇದರಲ್ಲಿ ಅಲ್ಪ ಪ್ರಮಾಣದ ಕೆಲವು ಸಿಟ್ರೋನೆಲ್ಲಾ ಎಣ್ಣೆಯನ್ನು ಸೇರಿಸಬಹುದು

5. ಸೋಪಿನ ನೀರು

ನಿಮ್ಮ ಮನೆಯ ಸುತ್ತ ಅಥವಾ ಹೊಲದಲ್ಲಿ ಸೊಳ್ಳೆಗಳ ಕಾಟದಿಂದ ಹಲವು ತೊಂದರೆಗಳಿಗೆ ಒಳಗಾಗುತ್ತಿರ ಇದಕ್ಕೆ ಪರಿಹಾರವಾಗಿ. ಸೋಪಿನ ನೀರನ್ನು ಒಂದು ಪ್ಲೇಟ್-ನಲ್ಲಿ ಇರಿಸಿ ಸ್ವಲ್ಪ ಸಮಯದ ನಂತರ ಈ ಸೊಳ್ಳೆಗಳು ಸೋಪಿನ ನೀರಿಗೆ ಆಕರ್ಷಿಸಲಾಗುವುದು ನೊರೆಯಲ್ಲಿ ಸಿಕ್ಕಿಬೀಳುತ್ತವೆ.

6. ಬೆಳ್ಳುಳ್ಳಿ ನೀರು:

ಕೆಲವು ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿ ತಿನ್ನುವುದು ಸೊಳ್ಳೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಈ ಪರಿಹಾರವು ಬೆಳ್ಳುಳ್ಳಿ ಪ್ರೇಮಿಗಳಿಗೆ ಒಳ್ಳೆಯ ಸುದ್ದಿಯಾಗಿದೆ, ಆದರೆ ನೀವು ಅದನ್ನು ನಿಜವಾಗಿ ದ್ವೇಷಿಸಿದರೆ, ನೀವು ಅಗಾಧ ಪ್ರಮಾಣದಲ್ಲಿ ಅದನ್ನು ತಿನ್ನಬೇಕಾದ ಅಗತ್ಯವಿಲ್ಲ. ಕೇವಲ ಅದನ್ನು ಕುದಿಸಿದ ನೀರನ್ನು ಸೊಳ್ಳೆಗಳು ಸೇರುವ ಸ್ಥಳಗಳಲ್ಲಿ ಮಿಶ್ರಣವನ್ನು ಸಿಂಪಡಿಸಿದರೆ ಸಾಕು ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ.

Also read: ಮನೆಯ ಮುಂದೆ ಗಿಡಗಳನ್ನು ಬೆಳೆಸಿ ಸೊಳ್ಳೆಗಳನ್ನು ಓಡಿಸಿ..!!