ಇವೆಲ್ಲಾ ರಾತ್ರಿಯಲ್ಲು ಸಹ ಸಾಕಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಸ್ಯಗಳು – ಮನೆಯಲ್ಲಿದ್ದರೆ ಬಹಳ ಒಳ್ಳೆಯದು!

0
3132

Kannada News | Health tips in kannada

ಮರಗಿಡಗಳು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಬದಲಿಗೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಆರೋಗ್ಯದಾಯಕ ವಾತಾವರಣವನ್ನುಂಟುಮಾಡುತ್ತದೆ. ೫೦ ಟನ್ ತೂಕದ ಒಂದು ಮರ ವರ್ಷಕ್ಕೆ ೧ ಟನ್ ಆಮ್ಲಜನಕ ಬಿಡುಗಡೆಮಾಡುತ್ತದೆ. ಸಸ್ಯಗಳು ಆಮ್ಲಜನಕ ಉತ್ಪಾದಿಸುವ ಏಕೈಕ ಕಾರ್ಖಾನೆಗಳೆಂದು ಹೇಳಿದರೆ ತಪ್ಪಾಗಲಾರದು. ಸಾಮಾನ್ಯವಾಗಿ ಸಸ್ಯಗಳು ರಾತ್ರಿ ಹೊತ್ತು ಆಮ್ಲಜನಕವನ್ನು ಹೀರಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಗೆ ಬಿಡುತ್ತವೆ. ಆದರೆ ಕೆಲವು ಸಸ್ಯಗಳು ರಾತ್ರಿಯ ವೇಳೆ ಕೂಡ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಗಾಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ (ಆಕ್ಸಿಜನ್) ಬಿಡುಗಡೆಯಾಗಿ ಪರಿಸರ ಸಮತೋಲನ ವಾಗಿರುತ್ತದೆ. ಆಯುರ್ವೇದದಲ್ಲಿ ಔಷಧಗಳ ದೃಷ್ಟಿಯಿಂದಲೂ ಈ ಸಸ್ಯಗಳು ಬಹಳಷ್ಟು ಉಪಯೋಗಿ ಹಾಗೂ ಮಹತ್ವದಾಗಿದೆ.

ರಾತ್ರಿಯಲ್ಲು ಸಹ ಸಾಕಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಸ್ಯಗಳು

ಅಲೋವೆರಾ

ಅಲೋವೆರಾದಲ್ಲಿ ಪಾಲಿಸೆಕರೈಡ್‌ಗಳು ಹೇರಳವಾಗಿವೆ. ಇವುಗಳು ಚರ್ಮದಲ್ಲಿನ ಕಲೆ ಹಾಗೂ ಮೊಡವೆಗಳನ್ನು ನಿವಾರಿಸುವಲ್ಲಿ ಸಹಕಾರಿ. ಚರ್ಮ ಮತ್ತು ಆರೋಗ್ಯ ಸಮಸ್ಯೆಗಳಿಗೆ ಉಪಯೋಗಿಸಲ್ಪಡುವ ಅಲೋವೆರಾ ರಾತ್ರಿಯಲ್ಲಿ ಸಾಕಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದನ್ನು ನಿಮ್ಮ ಮನೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಈ ಸಸ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ. ಗಾಳಿಯಲ್ಲಿರುವ ಸೋಂಕನ್ನು ನಿವಾರಿಸಿ ಮನೆಯೊಳಗೆ ತಣ್ಣಗೆ ಮಾಡುವ ನೈಸರ್ಗಿಕ ಶೀತಕ ಇದಾಗಿದೆ.

ಪಡವಲಕಾಯಿ

ಪಡವಲಕಾಯಿ ರಾತ್ರಿಯಲ್ಲಿ ಆಮ್ಲಜನಕವನ್ನು ಹೊರಹಾಕುವ ಈ ಸಸ್ಯ ಇತರ ಸಸ್ಯಗಳಿಗಿಂತ ಭಿನ್ನವಾಗಿದೆ. ಇದು ವಾತಾವರಣವನ್ನು ಇನ್ನಷ್ಟು ತಂಪಾಗಿರಿಸುತ್ತದೆ. ಇದು ವಾತಾವರಣದಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಗಾಳಿಯನ್ನು ಶುದ್ಧಗೊಳಿಸುತ್ತದೆ.

ಅರೆಕಾ ಪಾಮ್ ಟ್ರೀ

watch :

ಅರೆಕಾ ಪಾಮ್ ಟ್ರೀ ವಾತಾವರಣವನ್ನು ತಂಪಾಗಿಸುವ ಅತ್ಯದ್ಭುತ ಸಸ್ಯ ಸಂಪತ್ತಿಗಾಗಿ ನೀವು ಹುಡುಕಾಡುತ್ತಿದ್ದೀರಾ ಎಂದಾದಲ್ಲಿ ಅರೆಕಾ ಪಾಮ್ ಟ್ರೀಯನ್ನು ನಾವು ಸಲಹೆ ಮಾಡುತ್ತಿದ್ದೇವೆ. ಇದು ನಿಮ್ಮ ಮನೆಯನ್ನು ಸುತ್ತಲಿನ ಪರಿಸರವನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಗಾಳಿಯಲ್ಲಿರುವ ಹಾನಿಕಾರಕ ಅಂಶಗಳನ್ನು ಇದು ಹೊರಹಾಕುತ್ತದೆ. ಮತ್ತು ಈ ಸಸ್ಯ ಎಲ್ಲಾ ವಿಧದ ಹಾನಿಕಾರಕ ಅನಿಲಗಳನ್ನು ಹೀರಿಕೊಂಡು ರಾತ್ರಿವೇಳೆಯಲ್ಲೂ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಸ್ನೇಕ್ ಪ್ಲಾಂಟ್‌

ಈ ಸಸ್ಯ ರಾತ್ರಿ ವೇಳೆ ಇಂಗಾಲದ ಡೈ ಆಕ್ಸೈಡ್ ಹೀರಿ ಆಮ್ಲಜನಕವನ್ನು ಹೊರಸೂಸುತ್ತದೆ. ಹಾಗಾಗಿ, ಬಹಳಷ್ಟು ಮನೆಗಳ ಬೆಡ್‌ರೂಂ ಇಲ್ಲವೇ ಕಚೇರಿಗಳಲ್ಲಿ ಸ್ನೇಕ್ ಪ್ಲಾಂಟ್‌ಗೆ ಕಾಯಂ ಸ್ಥಾನ. ನೋಡಲು ತುಸು ಕತ್ತಾಳೆ ಗಿಡದಂತೆ ಕಾಣುವ ಸ್ನೇಕ್ ಪ್ಲಾಂಟ್‌ಗೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ. ಮನೆಯಲ್ಲಿ ಸೂರ್ಯನ ಬಿಸಿಲು ಬೀಳುವ ಜಾಗದಲ್ಲಿ ಸಹಾ ಈ ಸಸ್ಯವನ್ನು ಬೆಳೆಸಬಹುದು. ಈ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ.

ಬೇವಿನ ಮರ

ಬೇವು ಬಹೂಪಯೋಗಿ ಮರ. ಈ ಮರ ಅತ್ಯಧಿಕ ಪ್ರಮಾಣದಲ್ಲಿ ಔಷಧಿಗೆ ಬಳಕೆಯಾಗುತ್ತದೆ. ಬೇವಿನ ಮರದ ಗಾಳಿಯನ್ನು ಸೇವಿಸುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕೆಲವು ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಈ ಮರದ ತೊಗಟೆ, ಗೋಂದು, ಎಲೆ, ಹೂವು, ಚಿಗುರು, ಬೀಜದ ಎಣ್ಣೆ, ಹಿಂಡಿಯಂತಹ ಎಲ್ಲ ಭಾಗಗಳೂ ಒಂದಲ್ಲ ಒಂದು ಉಪಯೋಗಕ್ಕೆ ಬರುತ್ತವೆ. ಇದೂ ಕೂಡ ಎಲ್ಲಾ ವಿಧದ ಹಾನಿಕಾರಕ ಅನಿಲಗಳನ್ನು ಹೀರಿಕೊಂಡು ರಾತ್ರಿವೇಳೆಯಲ್ಲೂ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ತುಳಸಿ ಸಸ್ಯ

ಹಿಂದೂ ಧರ್ಮದಲ್ಲಿ ತುಳಸಿ ಪವಿತ್ರ ಸಸ್ಯ ಎಂಬ ನಂಬಿಕೆ ಇದೆ. ವಿಷ್ಣುವಿಗೆ ಪ್ರಿಯಾವಾದ ತುಳಸಿ ಗಿಡವನ್ನು ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ಬೆಳೆಸಿ ಪೂಜೆ ಮಾಡುವ ಪದ್ಧತಿ ನಡೆದುಬಂದಿದೆ. ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿರುವುದೂ ಸಹ ಅದನ್ನು ಪೂಜನೀಯವಾಗಿ ಗುರುತಿಸಲು ಕಾರಣವಾಗಿದೆ. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಲವು ಮಹತ್ವಗಳನ್ನು ಹೊಂದಿರುವ ತುಳಸಿ ಗಿಡ ರಾತ್ರಿವೇಳೆಯಲ್ಲೂ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

Also Read: ಸೊಂಟದ ನೋವಿಗೆ ಮನೆಯಲ್ಲೇ ಮದ್ದು!!