ಮಲಗಲು ತಲೆದಿಂಬು ಇದ್ರನೆ ಸುಖನಿದ್ದೆ ಎನ್ನುವರು ಈ ಮಾಹಿತಿ ನೋಡಿ, ದಿಂಬು ಏನೆಲ್ಲಾ ಅರೋಗ್ಯ ಸಮಸ್ಯೆ ತರುತ್ತೆ ಎನ್ನುವುದು ತಿಳಿಯುತ್ತೆ.!

0
878

ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಮಲಗುವ ರೀತಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಮೊದಲು ಸರಿಯಾದ ಹಾಸಿಗೆ ಹೊದಿಗೆ ಇಲ್ಲದಿದ್ದರೂ ಸುಖ ನಿದ್ದೆ ಮಾಡಬಹುದಿತ್ತು, ಆದರೆ ಈಗ ಚಿಕ್ಕಮಕ್ಕಳಿಗೂ ಸರಿಯಾದ ಕ್ರಮದಲ್ಲಿ ಹಾಸಿಗೆ ದಿಂಬು ಇಲ್ಲದಿದ್ದರೆ ನಿದ್ದೇನೆ ಬರೋದಿಲ್ಲ ಎನ್ನುವ ಕಾಲಮಾನವಾಗಿದೆ. ಅದರಂತೆ ದಿಂಬು ಇಟ್ಟುಕೊಂಡು ಮಲಗುವ ಅಭ್ಯಾಸದಿಂದ ಹಲವು ಅರೋಗ್ಯ ಸಮಸ್ಯೆಗಳು ಬರುತ್ತೇವೆ ಎಂದು ಹಿರಿಯರು ಹೇಳುತ್ತಾನೆ ಇರುತ್ತಾರೆ. ಆದರೆ ಸುಖ ನಿದ್ದೆಗಾಗಿ ದಿಂಬು ಬೇಕೇಬೇಕು. ಎನ್ನುವ ಪ್ರತಿಯೊಬ್ಬರಿಗೂ ಏನೆಲ್ಲಾ ತೊಂದರೆಗಳಿವೆ ನೋಡಿ.

Also read: ಸರಿಯಾಗಿ ನಿದ್ದೆ ಮಾಡದೆ ಇದ್ರೆ ಎಷ್ಟೊಂದು ತೊಂದರೆ ಗೊತ್ತಾ? ರಾತ್ರಿ ವೇಳೆ ಏಳು ಗಂಟೆಗಿಂತ ಕಡಿಮೆ ನಿದ್ದೆ ಮಾಡಿದರೆ ಹೃದಯದ ಕಾಯಿಲೆ ಬರಬಹುದಂತೆ..

ಹೌದು ಹಾಸಿಗೆ ಎಂದ ಮೇಲೆ ಅಲ್ಲಿ ದಿಂಬು ಇರಲೇಬೇಕೆಂಬುದು ನಿಯಮವಾದರೆ ದಿಂಬಿಲ್ಲದ ಹಾಸಿಗೆ ಹಲವಾರು ಸಮಸ್ಯೆಗಳನ್ನು ತಾನಾಗಿಯೇ ಪರಿಹರಿಸಬಲ್ಲದು. ಎನ್ನುವುದು ಹಲವು ಸಂಶೋಧನೆಗಳು ತಿಳಿಸಿವೆ ಅದರಂತೆ ಯಾವೆಲ್ಲ ಸಮಸ್ಯೆಗಳಿವೆ ಬರುತ್ತೇವೆ ಎನ್ನುವುದು ಇಲ್ಲಿದೆ ನೋಡಿ.

1. ಒತ್ತಡ, ನಿದ್ರಾಹೀನತೆ

ದಿಂಬು ಸರಿಯಾಗಿಲ್ಲದಿದ್ದರೆ, ಅದರ ಎತ್ತರ ಏರು ಅಥವಾ ತಗ್ಗಾಗಿದ್ದರೆ ಅದು ನಿಮ್ಮ ರಾತ್ರಿಯ ನಿದ್ರೆಗೆ ಪದೇ ಪದೆ ಭಂಗ ತರುತ್ತದೆ. ಉತ್ತಮ ನಿದ್ದೆಯಾಗಲಿಲ್ಲವೆಂದರೆ ಬೆಳಗ್ಗೆ ಎಲ್ಲ ಕಿರಿಕಿರಿ ಎನಿಸುತ್ತದೆ. ನಿಧಾನವಾಗಿ ಇದು ಒತ್ತಡಕ್ಕೆ ಕಾರಣವಾಗುತ್ತದೆ. ಆದರೆ, ದಿಂಬಿಲ್ಲದಿದ್ದರೆ ದೇಹದ ನೋವುಗಳೂ ಇಲ್ಲದೆ ಉತ್ತಮ ಗುಣಮಟ್ಟದ ನಿದ್ರೆ ಬರುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ನಿದ್ರೆ ಚೆನ್ನಾಗಾಗುವುದರಿಂದ ಹೆಚ್ಚು ಎನರ್ಜಿಯಿಂದಿರುವಿರಿ.

2. ನೆನಪಿನ ಶಕ್ತಿ ಕಡಿಮೆಯಾಗುತ್ತೆ

ಗುಣಮಟ್ಟದ ನಿದ್ರೆ ಜನರ ಕ್ರಿಯೇಟಿವಿಟಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ನಾವು ನಿದ್ರೆ ಮಾಡಿದ ಸಂದರ್ಭದಲ್ಲಿ ನಮ್ಮ ಮೆದುಳು ತಾನು ಪಡೆದ ಎಲ್ಲ ಮಾಹಿತಿಯನ್ನು ಶೇಖರಿಸಿ, ಬೇಕಾದ್ದು ಬೇಡದ್ದುಗಳನ್ನು ನಿರ್ಧರಿಸುತ್ತದೆ. ಚೆನ್ನಾಗಿ ನಿದ್ರೆಯಾದರೆ ಈ ಸಾರ್ಟ್ ಔಟ್ ಕೆಲಸ ಚೆನ್ನಾಗಾಗುತ್ತದೆ. ದಿಂಬಿಲ್ಲದೆ ಅಂಗಾತ ಮಲಗಿದಾಗ ಬರುವ ಗುಣಮಟ್ಟದ ನಿದ್ರೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹಲವು ರೀತಿಯಲ್ಲಿ ಕಾಪಾಡುತ್ತದೆ.

3. ಬೆನ್ನು ಹಾಗೂ ಕತ್ತು ನೋವು

ಹೆಚ್ಚಿನ ಜನರು ಬೆನ್ನುನೋವು ಅನುಭವಿಸಲು ಕೆಟ್ಟ ದೇಹಭಂಗಿ ಕಾರಣ. ಹಾಗೆ ಕೆಟ್ಟ ದೇಹಭಂಗಿ ಹೆಚ್ಚು ಕಾಲ ಇರುವುದು ನೀವು ದಿಂಬಿನ ಮೇಲೆ ತಲೆ ಇಟ್ಟು ಮಲಗಿದಾಗ. ಬೆನ್ನುಮೂಳೆಯ ಸಾಮಾನ್ಯ ತಿರುವಿಗೆ ವಿರುದ್ಧವಾದ ದಿಂಬು ಅದನ್ನು ಅಗತ್ಯಕ್ಕಿಂತ ಹೆಚ್ಚು ಬಗ್ಗಿಸುತ್ತದೆ. ಇದರಿಂದ ಬೆನ್ನುಮೂಳೆಯ ಆಕಾರವೇ ಬದಲಾಗಬಹುದು ಮತ್ತು ಬೆನ್ನುನೋವು ನಿಮ್ಮ ಶಾಶ್ವತ ಸಂಗಾತಿಯಾಗಬಹುದು. ಇನ್ನು ದಿಂಬಿನ ಮೇಲೆ ಕತ್ತಿಟ್ಟಾಗ ಅದು ಮೇಲೆ ಬಾಗುತ್ತದೆ. ಹೆಚ್ಚು ಕಾಲ ಇದೇ ರೀತಿ ಇರುವುದರಿಂದ ಕತ್ತು ನೋವು ಕೂಡಾ ಪ್ರತಿದಿನ ಕಾಡಲಾರಂಭಿಸುತ್ತದೆ. ದಿಂಬಿಲ್ಲದಿದ್ದರೆ ದೇಹವು ನೇರವಾಗಿ ಪ್ರಾಕಡತಿಕ ಭಂಗಿಯಲ್ಲಿ ಮಲಗಿರುತ್ತದೆ. ಇದರಿಂದ ಕತ್ತು ಹಾಗೂ ಬೆನ್ನಿನ ಮೂಳೆ, ಸ್ನಾಯುಗಳು ಹೆಚ್ಚು ರಿಲ್ಯಾಕ್ಸ್ ಆಗುತ್ತವೆ.

4. ಮೂಳೆಗಳ ಜೋಡಣೆ

ಪ್ರತಿದಿನ ದಿಂಬಿನ ಮೇಲೆ ಚಿತ್ರವಿಚಿತ್ರ ಭಂಗಿಗಳಲ್ಲಿ ಮಲಗಿಕೊಳ್ಳುವುದರಿಂದ ಮೂಳೆಗಳ ಜೋಡಣೆ ಏರುಪೇರಾಗಿ ಬಿಡಬಹುದು. ಆದರೆ ದಿಂಬಿಲ್ಲದ ಹಾಸಿಗೆಯಲ್ಲಿ ನೇರವಾಗಿ ಮಲಗುವುದರಿಂದ ಮೂಳೆಗಳು ಸರಿಯಾದ ರೀತಿಯಲ್ಲಿ ಜೋಡಣೆಯಿಂದ ದೇಹದ ಆಕಾರ ಚೆನ್ನಾಗಿರುತ್ತದೆ.

5. ಫ್ಲಾಟ್ ಹೆಡ್ ಸಿಂಡ್ರೋಮ್

ಮಗು ನಿಮ್ಮನ್ನು ದಿಂಬಿನಲ್ಲಿ ಮಲಗಿಸುವಂತೆ ಕೇಳುವುದಿಲ್ಲ. ಆದರೂ, ನೀವದನ್ನು ದಿಂಬಿನಲ್ಲಿ ಮಲಗಿಸುತ್ತೀರಿ. ಇದರಿಂದ ಅದರ ಮೆತ್ತಗಿನ ತಲೆ ಒಂದು ಬದಿ ಪೂರ್ತಿ ಫ್ಲ್ಯಾಟ್ ಆಗಿ, ಮತ್ತೊಂದು ಬದಿ ಹಾಗೆ ಎತ್ತರ ಉಳಿಯುವ ಸಾಧ್ಯತೆಗಳು ಹೆಚ್ಚು. ದಿಂಬಿಲ್ಲದೆ ಮಲಗಿಸಿದಾಗ ಈ ಸಮಸ್ಯೆ ತಲೆದೋರುವುದಿಲ್ಲ.

6. ಅಲರ್ಜಿ ಸಮಸ್ಯೆ

ದಿಂಬನ್ನು ಬಳಸಿ ಮಲಗಿದಾಗ ಬಹುತೇಕ ಜನರು ಯಾವುದಾದರೂ ಒಂದು ಬದಿಗೆ ತಿರುಗಿ ಮಲಗುವುದಿದೆ. ದಿಂಬಿನಲ್ಲಿ ಪ್ರತಿದಿನ ನಮ್ಮ ತಲೆಹೊಟ್ಟು, ಮಣ್ಣು, ಜೊಲ್ಲು ಎಲ್ಲವೂ ಸೇರಿಕೊಂಡು ಬ್ಯಾಕ್ಟೀರಿಯಾಗಳ ಆವಾಸಸ್ಥಾನವಾಗಿರುತ್ತದೆ. ಅಂಥ ಕೊಳಕು ದಿಂಬಿಗೆ ಮುಖ ತಾಗಿಸಿ ಮಲಗಿದರೆ ಮೊಡವೆ, ಇನ್ನಿತರೆ ಕಲೆ, ಗುಳ್ಳೆಗಳು ಏಳುವುದು ಸಾಮಾನ್ಯ. ಇನ್ನು ಈ ಬ್ಯಾಕ್ಟೀರಿಯಾಗಳ ಕಾರಣದಿಂದಲೇ ಅಲರ್ಜಿಯಾಗಬಹುದು. ಮುಖದಲ್ಲಿ ಒಂದೇ ಬದಿಗೆ ರಕ್ತ ಸಂಚಲನವಾಗುವುದರಿಂದ ಮತ್ತೊಂದೆಡೆ ಕೊರತೆಯಾಗುತ್ತದೆ. ಇದರಿಂದ ಆ ಭಾಗದಲ್ಲಿ ಬೇಗ ಸುಕ್ಕು ಏಳಬಹುದು ಅದಕ್ಕಾಗಿ ದಿಂಬು ಇಟ್ಟುಕೊಳ್ಳುವುದು ಕಡಿಮೆ ಮಾಡಿ. ಒಂದೇ ಸಾರಿ ಈ ಅಭ್ಯಾಸವನ್ನು ತಪ್ಪಿಸಲು ಸಾಧ್ಯವಾಗದಿದ್ದರೂ ತೆಳ್ಳನಯ ದಿಂಬುಗಳನ್ನು ಇಟ್ಟುಕೊಂಡು ಮಲಗುವ ಅಭ್ಯಾಸವನ್ನು ಬೆಳಸಿಕೊಳ್ಳಿ.

Also read: ನೀವು ನಿದ್ದೆಯಲ್ಲಿ ಕನಸು ಕಾಣೋದು ಕಡಿಮೆಯಾಗಿದೀಯಾ?? ಹಾಗಿದ್ರೆ ನೀವು ರೋಗಕ್ಕೆ ಹತ್ರವಾಗ್ತಿದೀರಾ ಜಾಗ್ರತೆ…