ಬರಗಾಲದಲ್ಲಿ ಭಗೀರಥನಂತೆ ಏಕಾಂಗಿಯಾಗಿ 60 ಅಡಿ ಬಾವಿ ತೋಡಿ ನೀರು ತಂದ ಮಹಿಳೆ…!

0
576

ಉತ್ತರ ಕನ್ನಡ ಜಿಲ್ಲೆ ಶಿರಸಿ ಗಣ್ಣೇಶನಗರದಲ್ಲಿ ಗೌರಿ ಸಿ.ನಾಯ್ಕ ಎಂಬ ಮಹಿಳೆ ಸ್ವತಃ ತಾವೇ ಶ್ರಮವಹಿಸಿ ಬರಗಾಲದಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಜೀವಜಲವನ್ನು ಬರಿಸಿದ್ದಾರೆ.

ಜೀವನದ ಆಸರೆಗಾಗಿ ನೆಟ್ಟಬಾಳೆ, ತೆಂಗು, ಅಡಕೆ ಗಿಡಗಳು ನೀರಿನಲ್ಲದೆ ಒಣಗುತ್ತಿರುವುದನ್ನು ಕಂಡ ಮಹಿಳೆಯೊಬ್ಬಳು ಏಕಾಂಗಿಯಾಗಿ ಬಾವಿ ತೊಡಿ ದಿಟ್ಟತನ ಮೆರೆದಿದ್ದಾಳೆ.  ಶಿರಸಿ ಪಟ್ಟಣದ ಗಣೇಶನಗರ ನಿವಾಸಿ 51ರ ಹರೆಯದ ಗೌರಿ ಚಂದ್ರಶೇಖರ ನಾಯ್ಕ ಈ ಸಾಹಸ ಮಾಡಿದ  ಮಹಿಳೆ.

ದಿನಕೂಲಿ ಮಾಡುತ್ತಿದ್ದ ಗೌರಿ ಮನೆಯ ಹಿತ್ತಲಿನಲ್ಲಿ ಸುಮಾರು 150 ತೆಂಗು, 20 ಅಡಿಕೆ ಸಸಿಗಳನ್ನು ನೆಟ್ಟಿದ್ದರು. ನೀರಿಲ್ಲದೆ ಒಣಗುತ್ತಿದ್ದನ್ನು ನೋಡಿ  ಈ ನಿರ್ಧಾರ ಕೈಗೊಂಡರಂತೆ. ಅಲ್ಲದೆ, ಈ ವಿಷಯವನ್ನು ಮಗನಿಗೂ ತಿಳಿಸಿದ ಅಚ್ಚರಿ ಮೂಡಿಸಿದ್ದಾರೆ.  ಎರಡು ತಿಂಗಳ ಹಿಂದೆ ಏಕಾಂಗಿಯಾಗಿ ಒಬ್ಬಳೆ ದಿನಕ್ಕೆ 3 ಅಡಿ ಬಾವಿ ತೊಡಲಾರಂಭಿಸಿದಳು. ಒಬ್ಬಳೆ ದಿನಕ್ಕೆ 200 ಬಾರಿ ಮಣ್ಣು ಎತ್ತಾಗಲು ಹತ್ತುವುದು ಇಳಿದು ಮಾಡಿದ್ದಾಳೆ.  ಅಂತಿಮ ಹಂತದಲ್ಲಿ ಮಾತ್ರ ಕೆಲವರ ಸಹಾಯ ಪಡೆದಿದ್ದಳೆ ಅಷ್ಟೆ.

 

60 ಅಡಿ ಆಳದ  ಬಾವಿಯಲ್ಲಿ 7 ಅಡಿ ನೀರು ಬಂದಿದ್ದು ಗೌರಮ್ಮ ಸಾಹಸಕ್ಕೆ ಊರಿನವರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ಗಣೇಶ ನಗರದಲ್ಲಿ ಸುಮಾರು 10 ಬಾವಿಗಳು ತೊಡಿದ್ದರು ಒಂದು ಹನಿ ನೀರು ಬಂದಿಲ್ಲ. ಇಲ್ಲಿ ನೀರಿನ ಚಿಲುಮೆ ಹುಕ್ಕಿದ್ದು, ಗೌರಮ್ಮನ ಈ ಸಾಹಸ ಅನೇಕರಿಗೆ ಪ್ರೇರಣೆಯಾಗಿದೆ.