ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಯಾರಿಗೆ ಸಿಗುತ್ತೆ? ಯಾರಿಗಿಲ್ಲ?

0
547

ಕೇಂದ್ರ ಸರ್ಕಾರದ ಕೊನೆಯ ಬಜೆಟ್ -ನಲ್ಲಿ ರೈತರಿಗೆ ಬಾರಿ ಕೊಡಿಗೆ ನೀಡಿದ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಒಪ್ಪಿಗೆ ಸೂಚಿಸಿದೆ ಅದರಂತೆ ರೈತರ ಖಾತೆಗೆ ನೇರ ನಗದು ಯೋಜನೆಯ ಪೂರ್ಣ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 75 ಸಾವಿರ ಕೋಟಿ ರೂ. ವೆಚ್ಚ ಆಗಲಿದೆ. 2 ಹೆಕ್ಟೇರ್ ಪ್ರದೇಶಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವ ರೈತರನ್ನು ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಮೂರು ಹಂತದಲ್ಲಿ ಹಣ ಬಿಡುಗಡೆ ಆಗಲಿದೆ. ಈ ಯೋಜನೆಯಿಂದ ಸುಮಾರು 12 ಕೋಟಿ ಸಣ್ಣ ರೈತರಿಗೆ ಅನುಕೂಲ ಆಗಲಿದೆ. ಈ ಯೋಜನೆ 2018 ಡಿಸೆಂಬರ್ 1 ರಿಂದ ಪೂರ್ವಾನ್ವಯವಾಗಲಿದೆ.


Also read: ಪೇ ಚಾನೆಲ್‌ ಆಯ್ಕೆ ಮಾಡಿಲ್ಲವೇ ? ಹಾಗಾದ್ರೆ ಇಂದೇ ಸ್ಥಗಿತವಾಗುತ್ತೆ ನಿಮ್ಮ ಟಿವಿ ಪ್ರಸಾರ..

3 ಕಂತುಗಳಲ್ಲಿ ನಗದು ಜಮಾ

ತಲಾ 2 ಸಾವಿರ ರು.ನಂತೆ 3 ಕಂತುಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವ ಯೋಜನೆ ಇದಾಗಿದೆ. ಮೊದಲ ಕಂತು ಮಾ.31ರೊಳಗೆ ರೈತರ ಖಾತೆ ತಲುಪಬೇಕಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ಸಂದೇಶ ರವಾನಿಸಿದೆ. ಅದರಂತೆ ‘ಪ್ರತಿ ಗ್ರಾಮದಲ್ಲೂ ಅರ್ಹ ಫಲಾನುಭವಿಯ ಹೆಸರು, ಲಿಂಗ ಹಾಗೂ ಆತ/ಆಕೆ ಎಸ್ಸಿ ಅಥವಾ ಎಸ್ಟಿಸಮುದಾಯಕ್ಕೆ ಸೇರಿದ್ದಾರೆಯೇ ಎಂಬ ಮಾಹಿತಿಯನ್ನು ಸಂಗ್ರಹಿಸುವಂತೆ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಫಲಾನುಭವಿಗಳ ಹೆಸರನ್ನು ಗ್ರಾಮ ಪಂಚಾಯಿತಿ ನೋಟಿಸ್‌ ಬೋರ್ಡ್‌ನಲ್ಲಿ ಫಲಕ ಪ್ರಕಟಿಸಲಾಗುತ್ತದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.


Also read: ನೀವು ಭಾರತೀಯ ಜೀವ ವಿಮಾ ನಿಗಮದ ಗ್ರಾಹಕರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ ಇಲ್ಲದಿದ್ದರೆ ಭವಿಷ್ಯದಲ್ಲಿ ದಂಡ ಪಾವತಿಸಬೇಕಾಗುತ್ತೆ..

ಈ ಯೋಜನೆ ಯಾರಿಗೆ ಸಿಗುತ್ತೆ?

5 ಎಕರೆವರೆಗೆ ಜಮೀನು ಹೊಂದಿದ ರೈತರಿಗೆ ವಾರ್ಷಿಕ 6 ಸಾವಿರ ರುಪಾಯಿ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಇದರ ಮಾರ್ಗಸೂಚಿ ಗಳನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಯೋಜನೆಯ 6 ಸಾವಿರ ರುಪಾಯಿ ಹಣ ಪಡೆಯಲು ಕೆಲವು ನೀತಿ ನಿಯಮ ರೂಪಿಸಲಾಗಿದ್ದು, ತೆರಿಗೆದಾರರು, ಹಾಲಿ ಹಾಗೂ ನಿವೃತ್ತ ಸರ್ಕಾರಿ ನೌಕರರು, ಹಾಲಿ ಹಾಗೂ ಮಾಜಿ ಸಂಸದರು/ ಶಾಸಕರು, ಮಂತ್ರಿಗಳು- ಇವರಿಗೆ ಮುಂಗಡಪತ್ರದಲ್ಲಿ ಘೋಷಿಸಲಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 6 ಸಾವಿರ ರುಪಾಯಿ ಪರಿಹಾರ ಸಿಗುವುದಿಲ್ಲ.


Also read: ಸಾಧಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಅನ್ನೋದಕ್ಕೆ ಇದೇ ಸಾಕ್ಷಿ, ಈತನಿಗೆ ಜೈಲಿನಲ್ಲಿದ್ದಾಗ ಬರೆದ ಕೃತಿಗೆ ಪ್ರಶಸ್ತಿ ಜೊತೆಗೆ 50 ಲಕ್ಷ ರುಪಾಯಿ ಬಹುಮಾನ ಬಂದಿದೆ!

ಮಾರ್ಗಸೂಚಿಗಳು:

  • ಪತಿ, ಪತ್ನಿ ಅಥವಾ ಅಪ್ರಾಪ್ತ ಮಕ್ಕಳನ್ನು ಒಳಗೊಂಡ ಒಟ್ಟಾರೆ 5 ಎಕರೆವರೆಗೆ ಜಮೀನು ಹೊಂದಿದ ಕುಟುಂಬವು ಯೋಜನೆಗೆ ಅರ್ಹ.
  • ಸರ್ಕಾರಿ ನೌಕರರು ಅಥವಾ ಪಿಂಚಣಿದಾರರಾಗಿದ್ದರೂ ಗ್ರೂಪ್ ಡಿ ಅಥವಾ 4 ನೇ ದರ್ಜೆಯ ನೌಕರನಾಗಿದ್ದರೆ ಅಂಥ ವ್ಯಕ್ತಿಗಳು ಅರ್ಹ.
  • ಪಿಂಚಣಿದಾರರು 10 ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿದರೆ (ಡಿ ಗ್ರೂಪ್ ಅಥವಾ ಕ್ಲಾಸ್- 4 ಉದ್ಯೋಗಿಗಳನ್ನು ಹೊರತುಪಡಿಸಿ) ಅರ್ಹರಲ್ಲ.
  • ತೆರಿಗೆದಾರರು, ಹಾಲಿ ಹಾಗೂ ನಿವೃತ್ತ ಸರ್ಕಾರಿ ನೌಕರರು, ಹಾಲಿ ಹಾಗೂ ಮಾಜಿ ಸಂಸದರು/ಶಾಸಕರು, ಮಂತ್ರಿಗಳು, ಮಾಜಿ ಮಂತ್ರಿಗಳಿಗೆ ಅನ್ವಯವಿಲ್ಲ.
  • ವೃತ್ತಿಪರ ವರ್ಗಕ್ಕೆ ಸೇರಿದ ವೈದ್ಯರು, ಎಂಜಿನಿಯರುಗಳು, ವಕೀಲರು, ಲೆಕ್ಕ ಪರಿಶೋಧ ಕರು, ವೃತ್ತಿಪರ ಸಂಸ್ಥೆಗಳ ಜತೆ ನೋಂದಾಯಿಸಿ ಕೊಂಡಿರುವ ವಾಸ್ತುಶಿಲ್ಪಿಗಳು ಹಾಗೂ ಅವರ ಕುಟುಂಬದವರಿಗೂ ಪ್ರಯೋಜನ ಲಭಿಸದು.
  • ಫಲಾನುಭವಿಗಳಿಂದ ಸ್ವಯಂ ದೃಢೀಕರಣ ಪಡೆದುಕೊಂಡು ನೈಜ ಫಲಾನುಭವಿಗಳನ್ನು ರಾಜ್ಯ ಸರ್ಕಾರಗಳು ಗುರುತಿಸಬಹುದು.
  • ಫಲಾನುಭವಿ ವ್ಯಕ್ತಿ ಲಭ್ಯವಾಗದೇ ಹೋದರೆ ಆತನ ಕುಟುಂಬದ ಹಿರಿಯ ವ್ಯಕ್ತಿಗೆ ಹಣ ವರ್ಗಾಯಿಸಬಹುದು.
  • ಒಂದು ವೇಳೆ ಸ್ವಯಂ ದೃಢೀಕರಣ ತಪ್ಪಾಗಿದ್ದರೆ ಫಲಾನುಭವಿಯ ಖಾತೆಗೆ ಹಾಕಲಾಗಿದ್ದ ಹಣ ವಾಪಸು ಪಡೆದು, ಆತನಿಗೆ ದಂಡ ವಿಧಿಸಲಾಗುತ್ತದೆ.
  • ಇದೇ ಮಾರ್ಚ್ 31 ರ ಒಳಗೆ ಮೊದಲ ಕಂತಿನ ಹಣ (2000 ರು.) ವರ್ಗಾವಣೆ
  • 2ನೇ ಕಂತಿನ ಹಣ ವರ್ಗಾವಣೆಗೆ ಆಧಾರ್ ಕಡ್ಡಾಯವಾಗಿದೆ.