ನಾವ್ ಹೇಳಿದಂತೆ ಈ ರೀತಿ ಮಾಡ್ತಾ ಬನ್ನಿ ನಿಮಗೆ ಬಾಯಿ ಕ್ಯಾನ್ಸರ್ ಬರುವ ಪ್ರಮೇಯ ಶೇಕಡ 50% ಕಮ್ಮಿಯಾಗುತ್ತೆ!!

0
605

ಕ್ಯಾನ್ಸರ್ ಕಾಯಿಲೆ ಯಾವ ರೀತಿಯಲ್ಲಿ ಬರುತ್ತದೆ ಎನ್ನುವುದು ಊಹೆಗೂ ಮೀರಿದೆ. ಇತ್ತೀಚಿನ ದಿನಗಳಲ್ಲಿ ಅಂತು ಯಾವುದೇ ಕೆಟ್ಟ ಅಭ್ಯಾಸವಿಲ್ಲದವರಿಗೂ ಕೂಡ ಕ್ಯಾನ್ಸರ್ ಬರುತ್ತಿದೆ. ಅಂತಹ ಕ್ಯಾನ್ಸರ್ -ಗಳಲ್ಲಿ ಬಾಯಿಯ ಕ್ಯಾನ್ಸರ್ ಕೂಡ ಶೀಘ್ರವಾಗಿ ಸಾವು ತರುವ ಕಾಯಿಲೆಯಾಗಿದೆ. ಇದು ಬರಿ ತಂಬಾಕು, ಮದ್ಯಪಾನ ಮಾಡಿದವರಿಗೆ ಬರದೆ ಚಿಕ್ಕ ಮಕ್ಕಳಿಗೂ ಬರುವ ಕಾಲವಾಗಿದೆ. ಇದು ಹೆಚ್ಚಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಕಂಡು ಬರುತ್ತದೆ. ಬಾಯಿಯ ಕೆಳಗಿನ ಭಾಗದಲ್ಲಿ ಮತ್ತು ನಾಲಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ವೇಗದಲ್ಲಿ ಎಲ್ಲ ಕಡೆಗೂ ಹರಡುತ್ತದೆ.

ಹೌದು ಬಾಯಿಯ ಕ್ಯಾನ್ಸರ್ ಜೊಲ್ಲಿನ ಗ್ರಂಥಿ, ಒಳಗಿನ ಗಲ್ಲ, ಗಂಟಲು, ಟಾನ್ಸಿಲ್ ಮತ್ತು ಅನ್ನನನಾಳಕ್ಕೆ ಕೂಡ ಹರಡುವುದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಕುತ್ತಿಗೆ, ತಲೆ ಮತ್ತು ದೇಹದ ಇತರ ಭಾಗಗಳಿಗೆ ಕೂಡ ಹರಡುವುದು. ಇದಕ್ಕೆ ಮುನ್ನೆಚ್ಚರಿಕೆಯಾಗಿ ಕೆಲವೊಂದು ಆಹಾರ ಪದಾರ್ಥಗಳ ಸೇವನೆಯ ಮೂಲಕ ತಡೆಗಟ್ಟಬಹುದು. ಹಾಗಾದ್ರೆ ಆ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ.

1. ಹಸಿರು ಎಲೆಯ ತರಕಾರಿಗಳು:

ಕ್ಯಾನ್ಸರ್ ಬಗ್ಗೆ ಹಲವು ಸಂಶೋಧನೆಗಳು ನಡೆದಿದ್ದು ಅಮೆರಿಕನ್ ಇನ್ ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಪ್ರಕಾರ ಕ್ಯಾನ್ಸರ್ ವಿರೋಧಿ ತರಕಾರಿಗಳಾಗಿರುವಂತಹ ಹಸಿರೆಲೆ ತರಕಾರಿಗಳು ಮತ್ತು ಎಲೆಕೋಸಿನಂತಹ ತರಕಾರಿಗಳ ಸೇವನೆ ಹೆಚ್ಚು ಮಾಡುವುದರಿಂದ ಕ್ಯಾನ್ಸರ್ ನ್ನು ತಡೆಬಹುದು. ಇದು ಗಡ್ಡೆಯ ಗಾತ್ರವನ್ನು ತಗ್ಗಿಸುವುದು ಮತ್ತು ಅದು ಬೇರೆ ಕಡೆ ಹಬ್ಬದಂತೆ ಹಾಗೂ ಮತ್ತೆ ಮರಳದಂತೆ ತಡೆಯುವುದು ಎಂದು ಹೇಳಲಾಗಿದೆ. ಇದರಲ್ಲಿ ಹಲವಾರು ರೀತಿಯ ಕ್ಯಾನ್ಸರ್ ವಿರೋಧಿ ಗುಣಗಳು ಎಂದು ತಿಳಿಸಿದೆ.

2. ಕೆಂಪು ಟೊಮೆಟೊ:

ಸಂಶೋಧನೆ ತಿಳಿಸುವ ಪ್ರಕಾರ ಟೊಮೆಟೊದಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಚರ್ಮದ ಅಂಗಾಂಶಗಳಿಗೆ ಆಗುವಂತಹ ಹಾನಿ ತಡೆಯುವುದು ಮತ್ತು ಇದರಿಂದ ಕ್ಯಾನ್ಸರ್ ನ ಸಾಧ್ಯತೆಯು ಕಡಿಮೆಯಾಗುವುದು. ಹಾಗೆಯೇ ಕೆಂಪು ಟೊಮೆಟೊಗೆ ಬಣ್ಣ ನೀಡುವಂತಹ ಲೈಕೊಪೆನೆ ಎನ್ನುವ ಅಂಶವು ಬಾಯಿಯ ಕ್ಯಾನ್ಸರ್ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಲೈಕೊಪೆನೆ ಆ್ಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು ಮತ್ತು ಇದು ಹಾನಿಕಾರಕವಾಗಿರುವಂತಹ ಫ್ರೀ ರ್ಯಾಡಿಕಲ್ ನಿಂದ ದೇಹವನ್ನು ರಕ್ಷಿಸುವುದು.

3. ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ಮತ್ತು ಇತರ ಹಾನಿಕಾರಕ ಅಂಶಗಳನ್ನು ದೇಹದಿಂದ ಹೊರಹಾಕಲು ಪ್ರಮುಖ ಪಾತ್ರ ವಹಿಸುವುದು. ಹಾನಿಕಾರಕ ಅಂಶಗಳು ಬಾಯಿಯ ಕ್ಯಾನ್ಸರ್ ಉಂಟು ಮಾಡಬಹುದು ಮತ್ತು ಅದರ ಲಕ್ಷಣಗಳನ್ನು ಹೆಚ್ಚಿಸಬಹುದು. ಪ್ರತಿನಿತ್ಯ ಎರಡು ಕಪ್ ಗ್ರೀನ್ ಟೀ ಕುಡಿದರೆ ಅದರಿಂದ ಬಾಯಿಯ ಕ್ಯಾನ್ಸರ್ ನ ಲಕ್ಷಣಗಳನ್ನು ತಡೆಯಬಹುದು ಮತ್ತು ಅದು ಮರಳಿ ಬರದಂತೆ ತಡೆಯಬಹುದು.

4. ಅವಕಾಡೊ:

ಸಂಶೋಧನೆ ಹೇಳುವ ಪ್ರಕಾರ ಅವಕಾಡೊದಲ್ಲಿ ವಿಟಮಿನ್ ಸಿ- ಇ ಸಮೃದ್ಧವಾಗಿದೆ. ಇದು ಬಾಯಿಯಲ್ಲಿ ಇರುವಂತಹ ಕ್ಯಾನ್ಸರ್ ಕಾರಕ ಕೋಶಗಳನ್ನು ತೆಗೆದುಹಾಕಿ ಬಾಯಿಯ ಕ್ಯಾನ್ಸರ್ ಬರದಂತೆ ತಡೆಯುವುದು. ಕ್ಯಾನ್ಸರ್ ಗೆ ಚಿಕಿತ್ಸೆ ನೀಡದೆ ಇದ್ದರೆ ಆಗ ಅದು ದ್ವಿಗುಣವಾಗುತ್ತಾ ಹೋಗುವುದು ಮತ್ತು ಬಾಯಿಯ ಇತರ ಭಾಗಗಳಿಗೆ ಕೂಡ ಹಬ್ಬುವುದು. ಅವಕಾಡೊ ಮುಖ್ಯವಾಗಿದೆ.

5. ರಸ್ಬೆರಿ ಸೇವನೆ:

ಕ್ಯಾನ್ಸರ್ ಚಿಕಿತ್ಸೆ ವೇಳೆ ಪ್ರತಿನಿತ್ಯ ಒಂದು ಕಪ್ ರಸ್ಬೆರಿ ಜ್ಯೂಸ್ ಸೇವನೆ ಮಾಡಿದರೆ ಅದರಿಂದ ಕ್ಯಾನ್ಸರ್ ನ್ನು ತುಂಬಾ ಪರಿಣಾಮಕಾರಿ ಯಾಗಿ ನಿವಾರಣೆ ಮಾಡಬಹುದು. ತಾಜಾ ರಸ್ಪೆರಿ ಜ್ಯೂಸ್ ನ್ನು ಇದಕ್ಕೆ ಬಳಸಿಕೊಂಡರೆ ಒಳ್ಳೆಯದು. ಯಾಕೆಂದರೆ ಪ್ಯಾಕ್ ಮಾಡಲ್ಪಟ್ಟಿರುವಂತಹ ಜ್ಯೂಸ್ ಗಳು ಅಷ್ಟು ಒಳ್ಳೆಯದಲ್ಲ. ಅದರ ಬದಲಾಗಿ ಶುದ್ದ ರಸ್ಬೆರಿ ಪ್ರಮುಖ್ಯವಾಗಿದೆ.

6. ನುಗ್ಗೆಕಾಯಿ

ನುಗ್ಗೆಕಾಯಿ ಬರಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹಳಷ್ಟು ಉಪಯೋಗವನ್ನು ನೀಡುತ್ತೆ. ಅದರಂತೆ ನುಗ್ಗೆ ಮರದ ಎಲೆಗಳು ಬಾಯಿಯ ಕ್ಯಾನ್ಸರ್ ನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ. ಈ ಎಲೆಗಳನ್ನು ಒಣಗಿಸಿ ಹುಡಿ ಮಾಡಬೇಕು. ಒಂದು ಚಮಚ ಹುಡಿಯನ್ನು ಕುದಿಯು ನೀರಿಗೆ ಹಾಕಬೇಕು. ಇದನ್ನು ಚಿಕಿತ್ಸೆಯ ಸಮಯದಲ್ಲಿ ಪ್ರತಿನಿತ್ಯ ಕುಡಿಯಬೇಕು. ಇದರಿಂದ ಬಾಯಿಯಲ್ಲಿ ಆಗುವ ಗುಳ್ಳೆಗಳನ್ನು ನಿವಾರಣೆ ಮಾಡುತ್ತೆ.

7. ಬಾಯಿ ಕ್ಯಾನ್ಸರ್ ಕಂಡು ಬಂದರೆ ಈ ಆಹಾರಗಳಿಂದ ದೂರವಿರಿ;

ಬಾಯಿ ಕ್ಯಾನ್ಸರ್ ಚಿಕಿತ್ಸೆ ವೇಳೆ ಕಡೆಗಣಿಸಬೇಕಾಗಿರುವಂತಹ ಆಹಾರಗಳೆಂದರೆ ಅದು ಉಪ್ಪು, ಕೊಬ್ಬು, ಆಲ್ಕೋಹಾಲ್ ಮತ್ತು ಸಕ್ಕರೆ. ಈ ರೀತಿಯ ಆಹಾರಗಳಲ್ಲಿ ಕ್ಯಾಲರಿ ಇರುವುದಿಲ್ಲ. ಇದರಿಂದ ದೇಹಕ್ಕೆ ಯಾವುದೇ ರೀತಿಯ ಪೋಷಕಾಂಶಗಳು ಸಿಗದು.

Also read: ಕ್ಯಾನ್ಸರ್ ಕಾಯಿಲೆಗಿಂತ ಹೆಚ್ಚು ಅಪಾಯ ತರುವ ಕಾಯಿಲೆ; ಈ ಕಾಯಿಲೆ ನಿಮಗೂ ಇರಬಹುದು ನೋಡಿ..