ಪೈಪ್‌ ಮೂಲಕ ಎಲ್‌ಪಿಜಿ ಪೂರೈಕೆ ಮಾಡುವ ಸಿಜಿಡಿ ಯೋಜನೆಗೆ ನರೇಂದ್ರ ಮೋದಿ ಚಾಲನೆ ನೀಡಿದ್ದು, ಕರ್ನಾಟಕದ 8 ಜಿಲ್ಲೆ ಗಳು ಆಯ್ಕೆಯಾಗಿವೆ…

0
563

ರಾಜ್ಯದ ಯಾವ ಜಿಲ್ಲೆಗಳಿಗೆ ಕೊಳವೆ ಮೂಲಕ ಅನಿಲ ಪೂರೈಕೆಯಾಗುತ್ತೆ?

Also read: ಡಿಸೆಂಬರ್ 1ರೊಳಗೆ ನಾವು ಹೇಳಿದಂತೆ ಮಾಡದಿದ್ದರೆ, ನಿಮ್ಮ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳುವುದು!!

ಪರಿಸರ ಸಂರಕ್ಷ ಣೆಯ ಸಲುವಾಗಿ ಹೊಗೆಮುಕ್ತ ಭಾರತ ಸಂಕಲ್ಪ ಮಾಡಿವ ಯೋಜನೆಯನ್ನು ಜಾರಿಗೆ ತರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವು ಸಿಎನ್‌ಜಿ ಬಳಕೆಯನ್ನು ಉತ್ತೇಜಿಸುತ್ತಿದೆ. ಕೊಳವೆಗಳ ಮೂಲಕ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಮಾಡುವ ಯೋಜನೆಯಾದ ನಗರ ಅನಿಲ ವಿತರಣಾ ವ್ಯವಸ್ಥೆ (ಸಿಜಿಡಿ)ಗೆ ಪ್ರಧಾನಿ ಅವರು ಚಾಲನೆ ನೀಡಿದ್ದಾರೆ. ಈ ಯೋಜನೆಯಲ್ಲಿ ಕರ್ನಾಟಕದ 8 ಜಿಲ್ಲೆಗಳು ಆಯ್ಕೆಯಾಗಿದ್ದು ಅವುಗಳ ಪಟ್ಟಿ ಇಲ್ಲಿದೆ.

ಏನಿದು ಸಿಜಿಡಿ?

Also read: ಪೆಟ್ರೋಲ್ ಬಂಕ್-ನಲ್ಲಿ ಮೊಬೈಲ್ ಬಳಸುವುದು ಬ್ಯಾನ್ ಆಗಿದ್ದರೂ, PayTM ಅಥವಾ BHIM ಆಪ್-ಗಳನ್ನು ಬಳಸುವುದು ಎಷ್ಟು ಸುರಕ್ಷಿತ

ಕೊಳವೆಗಳ ಮೂಲಕ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಹಾಗೂ ಬಂಕ್‌ಗಳ ನಿರ್ಮಾಣದ ಮೂಲಕ ವಾಹನಗಳಿಗೆ ಸಿಎನ್‌ಜಿ ಅನಿಲ ಪೂರೈಸುವ ಯೋಜನೆ ಇದಾಗಿದೆ, ಎಲ್‌ಪಿಜಿಗಿಂತ ಹೆಚ್ಚು ಸುರಕ್ಷಿತ ಮತ್ತು ಕಡಿಮೆ ಖರ್ಚಿನ ಇಂಧನ ಇದಾಗಿದ್ದು, ದಿನಬಳಕೆ ಹಾಗೂ ವಾಣಿಜ್ಯ ಉದ್ದೇಶಗಳೆರಡಕ್ಕೂ ಇದನ್ನು ಬಳಸಬಹುದಾಗಿದೆ. ಇದರಿಂದಾಗಿ ಸಿಲಿಂಡರ್‌ ಬಳಕೆ, ರೀಫಿಲ್ಲಿಂಗ್‌ ಮೊದಲಾದ ಕೆಲಸಗಳು ತಪ್ಪಲಿವೆ. ವಾಹನಗಳಲ್ಲಿ ಪೆಟ್ರೋಲ್‌ಡೀಸೆಲ್‌ ಬದಲಿಗೆ ಸಿಎನ್‌ಜಿ ಅನಿಲ ಬಳಕೆಯು ಈಗಾಗಲೇ ಚಾಲ್ತಿಯಲ್ಲಿದೆ. ಯೋಜನೆಯ ಅಡಿ ಜಿಲ್ಲೆಯ ಅಲ್ಲಲ್ಲಿ ಪೆಟ್ರೋಲ್‌ ಬಂಕ್‌ ಮಾದರಿಯಲ್ಲಿ ಸಿಎನ್‌ಜಿ ಬಂಕ್‌ಗಳೂ ನಿರ್ಮಾಣ ಆಗಲಿವೆ.

ಸಿಜಿಡಿ ಯೋಜನೆಯ ವ್ಯಾಪ್ತಿಯಲ್ಲಿ ಕರ್ನಾಟಕದ ಯಾವ ಜಿಲ್ಲೆಗಳಿವೆ?

Also read: ಸಿಲಿಂಡರ್ ಗ್ಯಾಸ್ ಬಳಸುವ ಪ್ರತಿಯೊಬ್ಬರೂ ಈ ನಿಯಮ ಅರಿತರೆ.. ಒಂದು ತಿಂಗಳು ಬರುವ ಗ್ಯಾಸ್ ನಾಲ್ಕು ತಿಂಗಳು ಬರುತ್ತೆ..!!

ಈಗಾಗಲೇ 9ನೇ ಹರಾಜು ಪ್ರಕ್ರಿಯೆಯನ್ನು ಮುಗಿಸಿದ್ದು ಕರ್ನಾಟಕದ 8 ಜಿಲ್ಲೆಗಳನ್ನು ಈ ಯೋಜನೆಗೆ ಸೇರಿಸಲಾಗಿದೆ. ಯೋಜನೆಗೆ ಕರ್ನಾಟಕದ ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಬಳ್ಳಾರಿ ಮತ್ತು ಗದಗ ಜಿಲ್ಲೆಗಳು ಸೇರಿವೆ. ದೇಶದ 129 ಜಿಲ್ಲೆಗಳನ್ನು 9ನೇ ಹರಾಜು ಪ್ರಕ್ರಿಯೆಯಲ್ಲಿ ಸೇರಿಸಲಾಗಿದೆ. ಮುಂದಿನ 10ನೇ ಹರಾಜು ಪ್ರಕ್ರಿಯೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ರಾಜ್ಯದ ಬಾಗಲಕೋಟೆ, ರಾಯಚೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕಲಬುರಗಿ, ವಿಜಯಪುರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸೇರಿಸಲಾಗುತ್ತದೆ. ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ರಾಜ್ಯಕ್ಕೆ ಅಡುಗೆ ಅನಿಲ ವಿತರಣೆ ಮಾಡಲಿದೆ. ರಾಮನಗರದಲ್ಲಿ 300 ಕೋಟಿ ವೆಚ್ಚದಲ್ಲಿ ಅನಿಲ ವಿತರಣೆ ಜಾಲವನ್ನು ನಿರ್ಮಾಣ ಮಾಡಲಾಗುತ್ತದೆ. ಒಟ್ಟು 1.13 ಮನೆಗಳಿಗೆ ಅನಿಲ ವಿತರಣೆ ಮಾಡಲಾಗುತ್ತದೆ

ಸಿಜಿಡಿ ವ್ಯವಸ್ಥೆಯಿಂದ ಆಗುವ ಅನುಕೂಲತೆ?

Also read: ನೀವು ಗ್ಯಾಸ್ ಗೀಸರ್ ಬಳುಸುತಿದ್ದರೆ ಜಾಗ್ರತೆ ಯಾಕೆ ಅಂತೀರಾ ಈ ಸ್ಟೋರಿ ನೋಡಿ..!

ವಾಹನಗಳಿಗೂ ಪರಿಸರ ಸ್ನೇಹಿ ಇಂಧನ (Compressed Natural Gas) ಲಭ್ಯವಾಗಲಿದೆ. ಎಲ್‌ಪಿಜಿಗೆ ಪರ್ಯಾಯವಾಗಿ ಬಳಸಲು ಉದ್ದೇಶಿಸಿರುವ ಸಿಎನ್‌ಜಿ ಇಂಧನವು ಪರಿಸರ ಸ್ನೇಹಿ ಶುದ್ಧ ಇಂಧನವಾಗಿದ್ದು, ಕೊಳವೆ ಮೂಲಕ ನಗರ ಪ್ರದೇಶದ ಗ್ರಾಹಕರಿಗೆ ದಿನವಿಡೀ ಅನಿಲ ಪೂರೈಕೆಯಾಗಲಿದೆ. ಬಳಕೆಯಾದ ಅನಿಲಕ್ಕೆ ಅನುಗುಣವಾಗಿ ಗ್ರಾಹಕರು ಶುಲ್ಕ ಪಾವತಿಸಬೇಕಾಗುತ್ತದೆ. ಮನೆಗಳಿಗೆ ನೇರವಾಗಿ ಪೈಪ್‌ಲೈನ್‌ ಮೂಲಕ ಗ್ಯಾಸ್‌ ದೊರೆಯಲಿರುವುದರಿಂದ ದೇಶ ಇನ್ನಷ್ಟು ಅಭಿವೃದ್ಧಿ ಹಾದಿಯಲ್ಲಿ ಸಾಗಲಿದ್ದು, ಎಲ್ಲವು ಕ್ಷಣಾರ್ಧದಲ್ಲಿ ಮುಗಿಯಲಿದೆ. ಗ್ಯಾಸ್‌ ಮುಗಿದ ಬಳಿಕ ಬುಕ್‌ ಮಾಡುವ, ಪೂರೈಕೆಗಾಗಿ ಕಾಯುವ ತೊಂದರೆಯು ತಪ್ಪಲಿದೆ. ಇದಲ್ಲದೇ, ವಾಹನಗಳಿಗೆ ಈ ಗ್ಯಾಸ್‌ ಬಳಸುವುದರಿಂದ ಇಂಜಿನ್‌ ಕ್ಷಮತೆಯು ಹೆಚ್ಚಲಿದೆ.