ಹಳದಿಗಟ್ಟಿರುವ ಹಲ್ಲುಗಳನ್ನು ಫಳ ಫಳ ಹೊಳೆಯುವಂತೆ ಮಾಡಲು ಯಾವುದೇ ದುಬಾರಿ ವೆಚ್ಚ ಬೇಡ, ಈ ಮನೆಮದ್ದುಗಳನ್ನು ಪಾಲಿಸಿ

0
1220

ವ್ಯಕ್ತಿಯ ಅತ್ಯಂತ ಆಕರ್ಷಕ ಗುಣಗಳಲ್ಲಿ ನಗು ಕೂಡ ಒಂದಾಗಿದೆ. ಆದರಿಂದ ಮನಬಿಚ್ಚಿ ನಗಲು ಹಲ್ಲುಗಳು ಬಹುಮುಖ್ಯವಾಗಿವೆ ಅದರಂತೆ ಹಲ್ಲುಗಳು ಬಿಳಿಯಾಗಿರದೆ ಕಲೆಗಳಿಂದ ಕೂಡಿ ಹಳದಿಯಾಗಿದ್ದರೆ ವ್ಯಕ್ತಿಯ ನಗುವಿನಲ್ಲಿ ಮುಜುಗರ ಕಂಡು ಬರುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳು ಕಂಡು ಬರುವುದು, ಹಲವು ಕೆಟ್ಟ ಅಭ್ಯಾಸಗಳಾದ ಧೂಮಪಾನ, ತಂಬಾಕು ಸೇವನೆ, ಕೆಫೀನ್ ಪಾನೀಯಗಳು ಮತ್ತು ಅನುವಂಶೀಯತೆ, ದೇಹದಲ್ಲಿ ಪ್ರೋಟೀನ್ ಕೊರತೆ ಇತ್ಯಾದಿ. ಕಾರಣಗಳಿಂದ ಹಲ್ಲುಗಳು ನಿಮ್ಮ ಸಹಜ ನಗುವನ್ನು ಕಿತ್ತುಕೊಳ್ಳುತ್ತವೆ. ಏಕೆಂದರೆ ಹಳದಿ ಹಲ್ಲುಗಳು ಅಥವಾ ಸ್ವಚವಿಲ್ಲದ ಹಲ್ಲುಗಳು ನಗುವಿನ ವೇಳೆ ಕಾಣಿಸಿಕೊಳ್ಳುತ್ತೇವೆ ಇದರಿಂದ ತಮ್ಮ ಘನತೆಗೆ ದಕ್ಕೆ ಬರುತ್ತದೆ ಎಂದು ಇಂತಹ ಹಲ್ಲುಗಳನ್ನು ಮುಚ್ಚಿ ನಗಲು ಪ್ರಯತ್ನಿಸುತ್ತಿರ. ಇನ್ಮುಂದೆ ಚಿಂತೆ ಬಿಟ್ಟು ಈ ಮನೆಮದ್ದು ಬಳಸಿ ಹಲ್ಲುಗಳ ಆಕರ್ಷಣೆ ಹೆಚ್ಚಿಸಿಕೊಳ್ಳಿ.

ನಿಮ್ಮ ಹಲ್ಲುಗಳ ಆಕರ್ಷಣೆ ಹೆಚ್ಚಿಸಲು ನೈಸರ್ಗಿಕವಾದ ವಿಧಾನಗಳು ಇಲ್ಲಿವೆ ನೋಡಿ.

Also read: ಪದೇ ಪದೇ ಡೆಂಟಿಸ್ಟ್ ಹತ್ರ ಹೋಗಿ ದುಡ್ಡು ಕೊಡೋ ಬದಲು ಈ ಮನೆಮದ್ದುಗಳನ್ನು ಪಾಲಿಸಿ ನಿಮ್ಮ ಹಲ್ಲುಗಳನ್ನು ಗಟ್ಟಿಗೊಳಿಸಿ…

ಅಡುಗೆ ಸೋಡಾ

ಲಿಂಬೆರಸದೊಂದಿಗೆ ಬೇಕಿಂಗ್ ಸೋಡಾವನ್ನು (ಅಡುಗೆ ಸೋಡಾ) ಬೆರೆಸಿ ಒಂದು ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಹಲ್ಲುಗಳ ಮೇಲೆ ಲೇಪಿಸಿ. ಆದರೆ ಈ ಪರಿಹಾರವನ್ನು ಪ್ರತಿನಿತ್ಯ ಬಳಸಬೇಡಿ. ಏಕೆಂದರೆ ಇದರಿಂದ ನಿಮ್ಮ ಹಲ್ಲುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗಬಹುದು ಮತ್ತು ಹಲ್ಲುಗಳು ಸೂಕ್ಷವಾಗುವ ಸಾಧ್ಯತೆಯಿರುತ್ತದೆ.

ಅಲೋವೆರಾ ಮತ್ತು ಗ್ಲಿಸರಿನ್

ಹೆಚ್ಚು ಶಕ್ತಿಯುತ ನೈಸರ್ಗಿಕ toothpaste, ಮಾಡಲು, ಒಂದು ಕಪ್ ನೀರು, 1/2 ಕಪ್ ಬೇಕಿಂಗ್ ಸೋಡಾ, ಒಂದು ಟೀಸ್ಪೂನ್ ಅಲೋ ವೆರಾ ಜೆಲ್, 4 ಟೀಸ್ಪೂನ್ ತರಕಾರಿ ಗ್ಲಿಸರಿನ್, ಒಂದು ಟೀಸ್ಪೂನ್ ನಿಂಬೆ ಸಾರಭೂತ ತೈಲ ಮಿಶ್ರಣಮಾಡಿ ಎಂದಿನಂತೆ ಬ್ರೇಶ್ ಮಾಡಿ ಇದರಿಂದ ಹಲ್ಲಿನ ಕಲೆಗಳು ಹೋಗಿ ಹಲ್ಲುಗಳು ಆರೋಗ್ಯಕರವಾಗಿಡುತ್ತೆದೆ.

ಕಿತ್ತಳೆ ಸಿಪ್ಪೆ

ನೀವು ಕಿತ್ತಳೆ ಹಣ್ಣನ್ನು ತಿಂದ ನಂತರ, ಸಿಪ್ಪೆಯನ್ನು ಎಸೆಯುವ ಬದಲು ಹಲ್ಲುಗಳ ಸ್ವಚತೆಗೆ ಬಳಸಿದರೆ ಹಲ್ಲನು ಬಿಳುಪುಗೊಳಿಸುತ್ತದೆ ಮತ್ತು ಕಲೆಗಳನ್ನು ತಡೆಗಟ್ಟಲು, ಮತ್ತು ಬ್ಯಾಕ್ಟೀರಿಯಾದಿಂದ ಹೋರಾಡಲು ಸಹಾಯ ಮಾಡುತ್ತದೆ. ಆದರಿಂದ ಕಿತ್ತಳೆ ಸಿಪ್ಪೆಯನ್ನು ಹಲ್ಲುಗಳಿಗೆ ಉಜ್ಜಿ ಸ್ವಲ್ಪ ಹೊತ್ತಿನ ನಂತರ ನೀರಿನಿಂದ ತೊಳೆದರೆ ಒಂದೇ ನಿಮಿಷದಲ್ಲಿ ಎಷ್ಟೊಂದು ಬದಲಾವಣೆಯನ್ನು ಕಾಣಬಹುದು.

ವಿಟಮಿನ್ ಟೂತ್ ಮಾಸ್ಕ್

ನಿಮ್ಮ ಹಲ್ಲುಗಳಿಗೆ ಪ್ಲೇಕ್-ತಡೆಗಟ್ಟುವ ಪೇಸ್ಟ್ ಮುಖವಾಡವನ್ನು ರಚಿಸಲು ತ್ವರಿತ ಮತ್ತು ಸುಲಭವಾದ ಮಾರ್ಗವೆಂದರೆ ವಿಟಮಿನ್ ಸಿ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಬೆರೆಸುವುದು. ಕೇವಲ ಟೊಮ್ಯಾಟೊ, ಸ್ಟ್ರಾಬೆರಿ ಮತ್ತು ಕಿತ್ತಳೆಗಳನ್ನು ಒಟ್ಟಿಗೆ ಕಲಬೆರಕೆ ಮಾಡಿ ಮತ್ತು ನಿಮ್ಮ ಹಲ್ಲುಗಳಲ್ಲಿ ಅಂಟಿಸಿ. 5-6 ನಿಮಿಷ ಬೀಡಿ ನಂತರ ತೊಳೆದುಕೊಳ್ಳಿ ಇದರಿಂದ ಬ್ಯಾಕ್ಟೀರಿಯಾವನ್ನು ಕೊಂದು ಹಾಕುತ್ತೆ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಹೇರಳವಾಗಿರುವ ಕಾರಣದಿಂದ ನಿಯಮಿತವಾಗಿ ಹಲ್ಲುಗಳನ್ನು ಇದರಿಂದ ಉಜ್ಜಿದರೆ ಹಲ್ಲುಗಳು ಹೊಳೆಯುವುದು. ಬಾಳೆಹಣ್ಣಿನಲ್ಲಿರುವ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಬ್ಲೀಚಿಂಗ್ ರೀತಿ ಕೆಲಸ ಮಾಡುತ್ತದೆ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್ ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ, ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಬ್ಯಾಕ್ಟೀರಿಯಾವು ಹಲ್ಲಿನಲ್ಲಿ ಕುಳಿಗಳು ಮತ್ತು ದದ್ದುಗಳನ್ನು ನಿರ್ಮಿಸುತ್ತದೆ.

ವಿನೆಗರ್

ಇದು 100% ನೈಸರ್ಗಿಕ ಮತ್ತು ಯಾವುದೇ ಹಾನಿಯಾಗದಂತೆ ನಿಮ್ಮ ಹಲ್ಲುಗಳನ್ನು ಶುದ್ಧೀಕರಿಸುತ್ತದೆ: 2 ಟೀಸ್ಪೂನ್ ವಿನೆಗರ್, ಒಂದು ಟೀಸ್ಪೂನ್ ಉಪ್ಪು, 4 ಚಮಚೆ ನೀರು, ಸೇರಿಸಿ ಮಿಕ್ಸ್ ಮಾಡಿ ಎರಡು ದಿನಕೊಮ್ಮೆ ಹಲ್ಲುಗಳಿಗೆ ಲೇಪನ ಮಾಡಿ ನಿಮ್ಮ ಹಲ್ಲಿನ ಸಮಸ್ಯೆಯನ್ನು ತೊಡೆದು ಹಾಕಿ ಆಕರ್ಷಕ ಹಲ್ಲನ್ನು ಹೊಂದಿರಿ.

ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣ

ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಮಾಡಿಕೊಳ್ಳಿ. ಈ ಮಿಶ್ರಣವನ್ನು ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಹಲ್ಲುಗಳಿಗೆ ಲೇಪಿಸಿ ಉಜ್ಜಿ. ಇದನ್ನು 5 ದಿನ ಸತತವಾಗಿ ಮಾಡುವುದರಿಂದ ನಿಮ್ಮ ಹಲ್ಲುಗಳು ಫಳಫಳ ಹೊಳೆಯುತ್ತವೆ.

ಹಾಲು ಮತ್ತು ಮೊಸರಿನ ಮಿಶ್ರಣ

ಹಾಲು ಮತ್ತು ಮೊಸರಿನ ಮಿಶ್ರಣವನ್ನು ತಯಾರಿಸಿಕೊಳ್ಳಿ. ಕೆನೆಯಿಂದ ಕೂಡಿದ ಈ ಪದಾರ್ಥವನ್ನು ನಿಮ್ಮ ಹಲ್ಲಿನ ಮೇಲೆ ಲೇಪಿಸಿ, 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಬಾಯಿಯನ್ನು ಮುಕ್ಕಳಿಸಿ. ಈ ಪರಿಹಾರವು ನಿಮ್ಮ ಹಲ್ಲುಗಳಿಗೆ ಬಿಳುಪನ್ನು ನೀಡುತ್ತವೆ. ಈ ಪರಿಹಾರವನ್ನು ವಾರದಲ್ಲಿ ಎರಡು ಬಾರಿ, ಹಗಲಿನ ಸಮಯದಲ್ಲಿ ಯಾವಾಗಲಾದರು ಪ್ರಯತ್ನಿಸಿ ನೋಡಬಹುದು.

Also read: ಹಲ್ಲು ನೋವು ಬಂದ್ರೂ ಡೆಂಟಿಸ್ಟ್ ಹತ್ರ ಹೋಗೋಕೆ ಭಯ ಪಡ್ತಿರೋವ್ರು ಈ ಮನೆಮದ್ದುಗಳನ್ನು ಪಾಲಿಸಿ ನೋವಿನಿಂದ ಮುಕ್ತಿ ಪಡೆಯಿರಿ..