ಆರೋಗ್ಯದ ಸ್ಥಿತಿಯನ್ನೇ ಹಾಳುಮಾಡುವ ಅಸಿಡಿಟಿ ಸಮಸ್ಯೆಯನ್ನು ತಕ್ಷಣವೇ ನಿವಾರಣೆ ಮಾಡಲು ಇಲ್ಲಿದೆ ನೋಡಿ ಪವರ್ ಫುಲ್ ಮನೆಮದ್ದುಗಳು..

0
2278

ಪ್ರತಿಯೊಬ್ಬರೂ ಅಸಿಡಿಟಿ ಸಮಸ್ಯೆ ಇದ್ದೆ ಇರುತ್ತದೆ. ಇದಕ್ಕೆ ಯಾವುದೇ ಔಷಧಿ ತೆಗೆದುಕೊಂಡರು ತಕ್ಷಣಕ್ಕೆ ನಿವಾರಣೆ ಆದರು ಮತ್ತೆ ಊಟದ ವ್ಯತ್ಯಾಸದಿಂದ ಬಂದೆ ಬರುತ್ತದೆ. ಕೆಲವು ಬಾರಿ ಊಟ ಮಾಡದೆ. ಇನ್ನೂ ಕೆಲವು ಸಲ ಹೆಚ್ಚಿನ ಊಟ ಮಾಡದೇ ಇರುವುದು ಇದಕ್ಕೆ ಕಾರಣವಾಗುತ್ತೆ. ಅದರಲ್ಲಿ ಮಸಾಲೆ ಪದಾರ್ಥಗಳ ಸೇವನೆ, ಎಣ್ಣೆಯುಕ್ತ ಪದಾರ್ಥಗಳು, ಖಾರ ಸೇವನೆ ಅತಿಯಾದರೆ ಈ ಸಮಸ್ಯೆಗಳು ಹೆಚ್ಚಾಗುತ್ತೆ. ಅಸಿಡಿಟಿ ಶುರುವಾದರೆ ತೇಗು, ಎದೆ ಉರಿ, ಹೊಟ್ಟೆ ಸುಡುವ ಅನುಭವ ಶುರುವಾಗುತ್ತೆ. ಜೀರ್ಣಕ್ರಿಯೆಯಲ್ಲಿ ಅತಿಯಾದ ಆಮ್ಲೀಯತೆ ಉಂಟಾದರೆ ಹೊಟ್ಟೆ ಉರಿ, ಹೊಟ್ಟೆ ಉಬ್ಬರ ಪದೇ ಪದೇ ಉಂಟಾಗುವುದು. ಇದಕ್ಕೆಂದು ಕೆಲವು ಪಾನೀಯಗಳನ್ನು ಸೇವಿಸುತ್ತಾರೆ ಆದರೆ ಇದರಿಂದ ಮತ್ತಷ್ಟು ತೊಂದರೆಗೆ ಒಳಗಾದದ್ದು ಇದೆ.

Also read: ವಿಪರೀತವಾಗಿ ಕಿರಿಕಿರಿಯನ್ನು೦ಟು ಮಾಡುವ ತುರಿಕೆ ಸಮಸ್ಯೆಗೆ ಕಾರಣವೇನು? ಮನೆಮದ್ದು ಇಲ್ಲಿದೆ ನೋಡಿ..

ಅಸಿಡಿಟಿ ನಿವಾರಣೆಗೆ ಮನೆ ಮದ್ದುಗಳು:

1. ತುಳಸಿ

ತುಳಸಿಯಲ್ಲಿರುವ ರಾಸಾಯನಿಕ ವಸ್ತುಗಳು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಜಠರದಲ್ಲಿ ಹೆಚ್ಚಿನ ಪ್ರಮಾಣದ ಲೋಳೆಯನ್ನು ಉತ್ಪತಿ ಮಾಡುವಂತೆ ಪ್ರೇರೇಪಿಸುತ್ತದೆ. ಜೊತೆಗೆ ತುಳಸಿಯು ಅಲ್ಸರ್ ನಿರೋಧಕ ಅಂಶಗಳನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ. ಅಲ್ಲದೆ ತುಳಸಿಯು ಪೆಪ್ಟಿಕ್ ಆಸಿಡ್‍ನ ಪರಿಣಾಮಗಳನ್ನು ಕಡಿಮೆ ಮಾಡಿ ಅಸಿಡಿಟಿಯನ್ನು ನಿಯಂತ್ರಿಸುತ್ತದೆ. ಅದಕ್ಕಾಗಿ ಊಟವಾದ ನಂತರ ಐದರಿಂದ ಆರು ತುಳಸಿ ಎಲೆಗಳನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ದೂರವಿರಬಹುದು.

2. ಶುಂಠಿ

ಅಸಿಡಿಟಿ ಬಂದಾಗ ಔಷಧದ ಬಾಕ್ಸ್ ನೋಡುವ ಮೊದಲು ತರಕಾರಿ ಬುಟ್ಟಿಯನ್ನು ನೋಡಿ. ಅಲ್ಲಿ ನಿಮಗೆ ಶುಂಠಿ ಕಾಣಿಸುತ್ತದೆ. ಶುಂಠಿಯನ್ನು ಸಣ್ಣ ಪ್ರಮಾಣದಲ್ಲಿ ಕತ್ತರಿಸಿಕೊಂಡು ಅದನ್ನು ಅಗಿಯಿರಿ. ಇದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.

3. ಚಕ್ಕೆ

ಸಾಂಬಾರು ಪದಾರ್ಥವಾದ ಚಕ್ಕೆಯ ಪ್ರಯೋಜನಗಳು ಹಲವಾರು. ಇದು ಅಸಿಡಿಟಿಯನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮನೆ ಮದ್ದಾಗಿದೆ. ಇತರೆ ಔಷಧಿಗಳನ್ನು ಸೇವಿಸುವ ಬದಲಿಗೆ ಚಕ್ಕೆಯಿಂದ ತಯಾರಿಸಿದ ಟೀಯನ್ನು ಸೇವಿಸಿ. ಅಸಿಡಿಟಿಯಿಂದ ಮುಕ್ತರಾಗಿ. ನಿಮಗೆ ಬೇಕಾದಲ್ಲಿ ಚಕ್ಕೆಯ ಪುಡಿಯನ್ನು ನೀವು ತಯಾರಿಸುವ ಖಾದ್ಯಗಳಿಗೆ ಬೆರೆಸಿಕೊಳ್ಳಬಹುದು.

4. ತಣ್ಣಗಿನ ಹಾಲು

ಹಾಲಿನಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಈ ಕ್ಯಾಲ್ಸಿಯಂ ನಮ್ಮ ಉದರದಲ್ಲಿ ಅಸಿಡ್ ಸಂಚಯಗೊಳ್ಳುವುದನ್ನು ತಡೆಯುತ್ತದೆ. ಒಂದು ಲೋಟ ಹಾಲನ್ನು ಸೇವಿಸುವುದರಿಂದಾಗಿ ಅಸಿಡಿಟಿಯನ್ನು ದೂರವಿಡಬಹುದು. ತಣ್ಣಗಿನ ಹಾಲು ಹೊಟ್ಟೆ ಉರಿಯಿಂದ ತಕ್ಷಣ ಉಪಶಮನ ನೀಡುತ್ತದೆ. ಕೆನೆ ತೆಗೆದ ಹಾಲು ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

5. ಜೀರಿಗೆ

ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಅಸಿಡಿಟಿಯನ್ನು ನಿವಾರಿಸಿಕೊಳ್ಳಬಹುದು

6. ಏಲಕ್ಕಿ

ಕಫಾ, ಪಿತ್ತ ಮತ್ತು ವಾತ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ ಹಾಗು ಜಠರದಲ್ಲಿನ ಸೆಳೆತಗಳನ್ನು ನಿವಾರಿಸುತ್ತದೆ. ಇದು ಜಠರದಲ್ಲಿನ ಮ್ಯುಕಸ್ ಪೊರೆಗೆ ಅಸಿಡಿಟಿಯಿಂದ ಉಂಟಾದ ನೋವಿಗೆ ಆರಾಮವನ್ನು ನೀಡುತ್ತದೆ. ಇದರಲ್ಲಿರುವ ಸಿಹಿ ರುಚಿಯು ಹೊಟ್ಟೆಗೆ ತಂಪನ್ನು ನೀಡಿ ಉರಿಯನ್ನು ಕಡಿಮೆ ಮಾಡುತ್ತದೆ.

7. ಬೆಟ್ಟದ ನೆಲ್ಲಿಕಾಯಿ

ಇದು ಕಫಾ ಮತ್ತು ಪಿತ ನಿವಾರಕ ಅಂಶಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವುದರಿಂದ, ಜಠರದಲ್ಲಿರುವ ಗಾಯಗಳನ್ನು ಉಪಶಮನಗೊಳಿಸುತ್ತದೆ. ಅಸಿಡಿಟಿಯನ್ನು ನಿವಾರಿಸಲು ಪ್ರತಿದಿನ ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಸೇವಿಸಿ.

Also read: ಮಕ್ಕಳಲ್ಲಿ ಸಾಯುವಂತ ಬಾಧೆ ನೀಡುವ ಜಂತುಹುಳ ಸಮಸ್ಯೆಗೆ ಇಲ್ಲಿದೆ ನೋಡಿ ಸುಲಭ ಮನೆಮದ್ದುಗಳು..