ತುಮಕೂರು ಹುಡುಗರ ಮಹತ್ತರ ಸಾಧನೆ…

0
865

ನಮ್ಮ ಮನೆಯ ಸುತ್ತ ಮುತ್ತ ಇರುವ ಹೋಟೆಲ್,ಬೇಕರಿ ಅಥವಾ ಚಾಟ್ ಸೆಂಟರ್ ಗಳಿಗೆ ಬೇಕೆನಿಸಿದಾಗೆ ಹೋಗಿ ತಿನ್ನಿವುದು ಸಾಮಾನ್ಯ. ಆದರೆ ಈಗಿನ ಸೂಪರ್ ಫಾಸ್ಟ್ ಲೈಫ್ ನಲ್ಲಿ  ನಮಗೆ ನಮಗಿಷ್ಟವಾದ ಹೋಟೆಲ್ ಗೆ ತೆರಳಿ ಅಲ್ಲಿ ಕುಳಿತು ತಿನ್ನುವಷ್ಟು ಸಮಯವೂ ಇರುವುದಿಲ್ಲ, ಸಂಯಮವೂ ಉಳಿದಿರುವುದಿಲ್ಲ. ಎಲ್ಲಾ ಹೋಟೆಲ್ಗಳು  ಹೋಂ ಡೆಲಿವರಿ ಕೊಡುವ ವ್ಯವಸ್ಥೆ ಹೊಂದಿರುವುದಿಲ್ಲ, ಅದರಲ್ಲೂ ಕಲ್ಪತರು ನಾಡು ಎಂದೇ ಖ್ಯಾತಿ ಪಡೆದಿರುವ ತುಮಕೂರಿನಲ್ಲಿ ಹೋಂ ಡೆಲಿವರಿ ಕೊಡುವ ಹೋಟೆಲ್ ಗಳು ನಮಗೆನ್ನಿಸಿದ ಹಾಗೆ ಒಂದೂ ಇರಲಿಕ್ಕಿಲ್ಲ. ಆದರೆ, ಯಾವುದೇ ಮಿತಿ ಇಲ್ಲದೆ ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ನಮಗೆ ಬೇಕಾದ ರೆಸ್ಟೋರೆ೦ಟ್‍ನಿ೦ದ ನಾವಿದ್ದಲ್ಲಿಗೆ, ಕೆಲವೇ ನಿಮಿಷಗಳಲ್ಲಿ ಆಹಾರ ತಲುಪಿಸುವ ಸೇವೆಯನ್ನು ಇದೀಗ ನಮ್ಮ ತುಮಕೂರಿನಲ್ಲಿ ಸ್ಟೋರ್-ಡೋರ್ ಎನ್ನುವ  ಕಂಪನಿಯೊಂದು ಪ್ರಾರಂಭಿಸಿದೆ. ೨೦೧೫ರ ಇಂಜಿನಿಯರಿಂಗ್ ಪದವೀಧರರು ಕೈತುಂಬ ಸಂಬಳ ಸಿಗುವ ಐ-ಟಿ ಕ್ಷೇತ್ರವನ್ನು ಬಿಟ್ಟು ತಮ್ಮ ಸ್ವಂತ ಊರಿನಲ್ಲಿ ಇಂಥಹ ಒಂದು ಸಾಹಸಕ್ಕೆ ಕೈ ಹಾಕಿದ್ದರೆ. ಶೀಘ್ರವಾಗಿ ಬೆಳೆಯುತ್ತಿರುವ ತುಮಕೂರು ನಗರಕ್ಕೆ ಇಂಥಹ ಒಂದು ಸೇವೆಯನ್ನು ದರ್ಶನ್, ಶಿವಪ್ರಸಾದ್, ಚಿರಂತನ್, ಜೀವಿತ್, ಪೃಥ್ವಿ ಸಾಗರ್ ಹಾಗು ಅಶ್ವಿನ್ ಅವರುಗಳು ಸ್ಥಾಪಿಸಿದ್ದಾರೆ.

13240574_1700208933567261_6069169110685277970_n

ಕಳೆದ ಡಿಸೆಂಬರ್ ೨೫ನೇ ಕ್ರಿಸ್ಮಸ್ ದಿನದಂದು ಸ್ಥಾಪನೆಯಾದ ಸ್ಟೋರ್ ಡೋರ್ ತನ್ನದೇ ಆದ ವೆಬ್ ಸೈಟ್ www.storedoor.in ಹಾಗೂ ಆಂಡ್ರಾಯ್ಡ್ ಆಪ್ಲಿಕೇಷನ್ ಹೊಂದಿದ್ದು ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ತಮಗಿಷ್ಟವಾದ ಹೋಟೆಲ್ ಇಂದ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಸ್ಟೋರ್ ಡೋರ್  ಸಿಬ್ಬ೦ದಿ ಆ ರೆಸ್ಟೋರೆ೦ಟ್‍ಗೆ ತೆರಳಿ, ಅದನ್ನು ತೆಗೆದುಕೊ೦ಡು ನಾವಿದ್ದಲ್ಲಿಗೆ ಆರ್ಡರ್ ಮಡಿದ ೪೫ ನಿಮಿಷ ದಿಂದ ೧ ಘಂಟೆಯೊಳಗೆ ಹೇಳಿದ ವಿಳಾಸಕ್ಕೆ ತಲುಪಿಸಲಾಗುವುದು ಹಾಗೂ ಹಣವನ್ನು ಆನ್ಲೈನ್ ಮೂಲಕ ಅಥವಾ ಡೆಲಿವರಿಯ ಸ೦ದಭ೯ದಲ್ಲಿ ನಗದು ಮೂಲಕ ಪಾವತಿಸುವ ಅವಕಾಶ ಇದೆ.

ತುಮಕೂರಿನಲ್ಲಿ ಇಂಟರ್ನೆಟ್ ಜಾಗೃತಿ ಹೇಳಿಕೊಳ್ಳುವ ಮಟ್ಟಿಗೆ ಇಲ್ಲವೆನ್ನುವ ಸಂಗತಿ ತಿಳಿದಿರುವ ಸ್ಟೋರ್ ಡೋರ್ ಕೇವಲ ವೆಬ್ ಸೈಟ್ ಹಾಗೂ ಆಂಡ್ರಾಯ್ಡ್ ಆ್ಯಪ್ ಮಾತ್ರವಲ್ಲದೆ ಗ್ರಾಹಕರು 9449-772-779 ಗೆ  ಮೊಬೈಲ್ ಕರೆ ಮಾಡುವ   ಮೂಲಕವೂ ಆರ್ಡರ್ ಮಾಡಬಹುದು.

Storedoor.in

ಬೆಂಗಳೂರಿನಂತಹ ಬೃಹತ್ ನಗರಗಲ್ಲಿ ಜೋಮಾಟೋ, ಫುಡ್  ಪಾ೦ಡಾ, ಟೈನಿ ಔಲ್, ಓಲ ಫ್ರೆಶ್ , ಫೆ್ರಷ್ ಮೆನು, ಲುಕ್ ಅಪ್ ನ೦ತಹ ಅನೇಕ ಕ೦ಪನಿಗಳು ಸದ್ದುಮಾಡುತ್ತಿವೆ. ಆದರೆ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ ಇಂತಹ ಕಂಪೆನಿಗಳು ಇನ್ನೂ ಕಾಲಿಡಲು ಹಿಂದೆ ಮುಂದೆ ನೋಡುತ್ತಿರುವ ಸಮಯದಲ್ಲಿ ೨೩ರ ಹರೆಯದ ಯುವಕರ ತಂಡವೊಂದು ಇಂತಹ ಕಂಪನಿಯನ್ನು ತಮ್ಮ ಹೂಟ್ಟೂರಿನಲ್ಲಿ ಸ್ಥಾಪಿಸಿರುವ ಅಂಶವನ್ನು ನಾವು ಮೆಚ್ಚಲೇ ಬೇಕು.

     ನಮಗಿಷ್ಟವಾದ ರೆಸ್ಟೋರೆ೦ಟ್‍ನಿ೦ದ ನಮ್ಮ ಆಯ್ಕೆಯ ಊಟ/ತಿ೦ಡಿಯನ್ನು ನಾವಿದ್ದಲ್ಲಿಗೇ ತರಿಸಿಕೊ೦ಡು ತಿನ್ನುವ ಅವಕಾಶ ಇಲ್ಲಿರುವುದರಿ೦ದ ಸಮಯ ಹಾಗೂ ಶ್ರಮ ಎರಡೂ ವ್ಯಥ೯ವಾಗುವುದನ್ನು ತಪ್ಪಿಸಿದೆ.

     ಇಲ್ಲಿ ಆಡ೯ರ್ ಮಾಡುವುದು ಹಾಗೂ ಹಣ ಪಾವತಿ ಮಾಡುವ ಪ್ರಕ್ರಿಯೆ ತೀರಾ ಸರಳವಾಗಿದ್ದು, ನಮ್ಮ ಆಡ೯ರ್ ಟ್ರ್ಯಾಕ್ ಮಾಡುವ ವ್ಯವಸ್ಥೆ ಹಾಗೂ ಕ್ಷಿಪ್ರ ಡೆಲಿವರಿ ವ್ಯವಸ್ಥೆಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ದೊಡ್ಡ ರೆಸ್ಟೋರೆ೦ಟ್ ಅಲ್ಲದೇ ಸಣ್ಣ ಪುಟ್ಟ ಚಾಟ್ ಸೆಂಟರ್ ಗಳಿಗೂ ಹೆಚ್ಚು ಹೆಚ್ಚು ಗ್ರಾಹಕರನ್ನು ಒದಗಿಸುವ ಮೂಲಕ, ಆಹಾರೋದ್ಯಮಗಳಿಗೂ ಲಾಭ ತ೦ದುಕೊಡುತ್ತಿದೆ. ರೆಸ್ಟೋರೆ೦ಟ್‍ಗಳನ್ನು ಸ್ಥಾಪಿಸಿ ಅಲ್ಲಿ ಅನೇಕ ಸಿಬ್ಬ೦ದಿ ನೇಮಿಸಿಕೊ೦ಡು ಬಾಡಿಗೆ ಹಾಗೂ ಸ೦ಬಳ ನೀಡುವ ಬದಲು, ಕೇವಲ ಆಹಾರ ತಯಾರಿಸುವಷ್ಟು ಜಾಗ ಹೊ೦ದಿದ್ದರೂ ಈ ವೇದಿಕೆ ಮೂಲಕ ಉತ್ತಮ ಲಾಭ ಮಾಡುವ ಅವಕಾಶ ಬಾಣಸಿಗರಿಗಿದೆ.

13327502_10206286287587991_489178171402949298_n

ವಿವಿಧ ಹೋಟೆಲ್ ಹಾಗೂ ಬೇಕರಿ ಗಳೊಂದಿಗೆ ಸಹಯೋಗ ಗೊಂಡಿರುವ ಸ್ಟೋರ್ ಡೋರ್, ವಿಲಾಸಿ ಡಿಲೈಟ್, ಪೃಥ್ವಿ ಹೋಟೆಲ್, ಹೋಟೆಲ್ ಸುನಿತಾ, ಕೆ ಕೆ ಬೇಕರಿ, ನವೀನ್ ರೀಜೆನ್ಸಿ-ರಸೋಯಿ ಘರ್ , ಬ್ಲೂಮೂನ್, ಪವನ್ ಸ್ವೀಟ್ಸ್, ಧಾರವಾಡ್ ಲೈನ್ ಬಜಾರ್, ಮಧುರ ಬೇಕರಿ, ಅನ್ನಪೂರ್ಣೆಶ್ವರಿ(ಎಸ್ ಎಂ ಎ)  ಬೇಕರಿ, ದೊನ್ನೆ ಬಿರಿಯಾನಿ ಮನೆ, ಧಂ ಮಡಕೆ ಬಿರಿಯಾನಿ, ಅಮ್ಮುಸ್ ಜ್ಯೂಸಿಸ್  ಅಂಡ್ ಚಾಟ್ಸ್, ವಾಸವಿ ಚಾಟ್ಸ್ ಸೇರಿದಂತೆ  ಸುಮಾರು 20 ರೆಸ್ಟೋರೆ೦ಟ್‍ಗಳನ್ನು ಹೊ೦ದಿದ್ದು ಇನ್ನೂ ಹಲವಾರು ರೆಸ್ಟೋರೆ೦ಟ್‍ಗಳನ್ನು ವೇದಿಕೆಗೆ ತರುವ ಗುರಿ ಹೊ೦ದಿದೆ.

13428414_10206414749319454_7477636067438399025_n

ಇತ್ತೀಚೇಗಷ್ಟೆ  ಆಂಡ್ರಾಯ್ಡ್ ಆ್ಯಪ್ ಬಿಡುಗಡೆ ಮಾಡಿರವ ಸ್ಟೋರ್ ಡೋರ್, ಡೌನ್ಲೋಡ್ ಮಾಡಲು  www.storedoor.in/app ಗೆ ಭೇಟಿ ನೀಡಬಹುದು ಅಥವಾ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ storedoor ಎಂದು ಹುಡುಕಿದರೆ ಸಿಗುತ್ತದೆ.