75 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು; ಅಮರ ಪ್ರೀತಿಗೆ ಸಾಕ್ಷಿಯಾದ ಪ್ರೀತಿ ಇದೇನಾ?, ಈ ಕಥೆ ಓದಿ ನೋಡಿ ಕಳೆದ ನಿಮ್ಮ ಪ್ರೀತಿವೂ ಹೀಗೆಯೇ ಸಿಗಬಹುದು..

0
730

ಪ್ರೀತಿ ಎನ್ನುವುದು ಹೀಗೆ ಎಲ್ಲೋ ಹುಟ್ಟುತ್ತೆ ಎಲ್ಲೋ ಬೆಳೆಯಿತ್ತೆ, ಕಡಿಮೆ ಸಯಮದಲ್ಲಿ ತುಂಬಾ ಹತ್ತಿರವಾಗಿ ಅಷ್ಟೇ ಬೇಗನೆ ದೂರವಾದರೂ ಮನದಲ್ಲಿರುವ ಪ್ರೀತಿ ಮಾತ್ರ ಎಂದಿಗೂ ಮರೆಯಾಗುವುದೇ ಇಲ್ಲ, ಎಂದು ಹಲವು ಪ್ರೇಮಿಗಳ ಮನದಾಳದ ಮಾತಾಗಿದೆ. ಕೆಲವು ಪ್ರೇಮಿಗಳು ಜೀವನ ಪೂರ್ತಿ ಜೊತೆಯಾಗಿ ಇದ್ದರೆ ಇನ್ನೂ ಕೆಲವು ಪ್ರೀತಿಗಳು ಕೆಲವು ಕಾರಣಾಂತರದ ಬಿರುಗಾಳಿಗೆ ಸಿಲುಕಿ ದೂರವಾಗುತ್ತೆವೆ, ಹೀಗೆ ದೂರವಾದ ಇಬ್ಬರು ಪ್ರೇಮಿಗಳು ಬೇರೆ ಬೇರೆ ದೇಶದಲ್ಲಿದರು ಬೇರೆ ಯಾರನ್ನೇ ವಿವಾಹವಾದರೂ ಕೂಡ ಮನದಲ್ಲಿರುವ ಪ್ರೀತಿ ಸಾಯಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ 75 ವರ್ಷದ ನಂತರ ಒಂದಾದ ಪ್ರೇಮಿಗಳೆ ಸಾಕ್ಷಿಯಾಗಿದ್ದಾರೆ.

ಹೌದು ಮೊದಲಿನ ಕಾಲದಲ್ಲಿ ಎಲ್ಲವು ನಿಯತ್ತಿನಿಂದ ಇರುತ್ತಿತ್ತು, ಅದರಂತೆ ಪ್ರೀತಿಯಲ್ಲಿವೂ ನಿಯತ್ತು ಇತ್ತು. ಈಗಿನ ಕಾಲದಲ್ಲಿ ಎಲ್ಲ ವಿಷಯಕ್ಕೆ ಮೊದಲು ಪ್ರೀತಿಯಲ್ಲಿ ನಿಯತ್ತಿಲ್ಲ, ಅದು ಬೇರೆಯ ವಿಷಯ ಆದರೆ. ಈ ಇಬ್ಬರು ಪ್ರೇಮಿಗಳು 75 ವರ್ಷಗಳ ನಂತರ ಹೇಗೆ ಒಂದಾದರು? 7 ದಶಕಗಳ ಹಿಂದೆ ಹೇಗೆ ಬೇರೆಯಾಗಿದರು ಎನ್ನುವ ರೋಮ್ಯಾಂಟಿಕ್ ಸ್ಟೋರಿ ಇಲ್ಲಿದೆ.

ಯಾರು ಈ ಅವರ ಪ್ರೇಮಿಗಳು?

75 ವರ್ಷದ ಬಳಿಕ ರಾಬಿನ್ಸ್ ಡಿ, ಜೇನಿನ್ ಪಿಯರ್‍ಸನ್ ಒಂದಾದ ಪ್ರೇಮಿಗಳಾಗಿದ್ದು, ಇವರ ಪ್ರೀತಿ ಶುರುವಾಗಿದ್ದು 1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ ಶುರುವಾಗಿದೆ. 24 ವರ್ಷದಲ್ಲಿದ್ದಾಗ ಕೇಟಿ ರಾಬಿನ್ಸ್, ಜೇನಿನ್‍ನನ್ನು ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲೇ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ರಾಬಿನ್ಸ್ ಅಮೆರಿಕದಲ್ಲಿ ವಾಸಿಸುತ್ತಿದ್ದರೆ, ಜೇನಿನ್ ಫ್ರಾನ್ಸ್ ನಲ್ಲಿ ವಾಸಿಸುತ್ತಿದ್ದರು. ರಾಬಿನ್ಸ್ ಅಮೆರಿಕದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ 2ನೇ ವಿಶ್ವ ಯುದ್ಧ ನಡೆಯುತ್ತಿದ್ದ ಕಾರಣ ಬೇರೆ ಕಡೆ ಕಳುಹಿಸಲಾಗಿತ್ತು.

Also read: ತನ್ನ ಜೀವನವನ್ನೇ ತ್ಯಾಗ ಮಾಡಿ ಮಗನ ಭವಿಷ್ಯಕ್ಕಾಗಿ ಶ್ರಮಿಸಿದ ಅಮ್ಮನಿಗೆ ಪುನರ್ ವಿವಾಹ ಮಾಡಿಸಿದ ಮಗ; ತಾಯಿಗೆ ಶುಭಾಶಯ ತಿಳಿಸಿದ್ದು ಹೀಗೆ..

ಅದರಂತೆ ಯುದ್ಧ ಮುಗಿದ ನಂತರ ಎಲ್ಲ ಸೈನಿಕರು ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದರು. ಹಾಗೆಯೇ ರಾಬಿನ್ಸ್ ಕೂಡ ತಮ್ಮ ಮನೆಗೆ ಹಿಂದಿರುಗಿದ್ದರು. ಈ ಸಮಯದಲ್ಲಿ ಮತ್ತೆ ಬರುತ್ತೇನೆ ನಿನ್ನನು ಕರೆದುಕೊಂಡು ಹೋಗುತ್ತೇನೆ ನೀನು ಇಂಗ್ಲಿಷ್ ಭಾಷೆಯನ್ನು ಕಲಿತುಕೊಳ್ಳಬೇಕು ಎಂದು ಹೇಳಿ ಹೋಗಿದರು ಆದರೆ ವಿಧಿಯ ಆಟ. ವಾಪಸ್ ಬರಲು ಆಗಲೇ ಇಲ್ಲ ಎಂದು ರಾಬಿನ್ಸ್ ಡಿ, ಹೇಳಿಕೊಂಡಿದ್ದಾರೆ. ಈ ವೇಳೆಯಲ್ಲಿ ಜೇನಿನ್ ಅವರು ಮಾತಾನಾಡಿ. ರಾಬಿನ್ಸ್ ನನ್ನನ್ನು ಬಿಟ್ಟು ಹೋಗಿದ್ದ ಸಂದರ್ಭದಲ್ಲಿ ನಾನು ತುಂಬಾ ಅತ್ತಿದ್ದೆ. ರಾಬಿನ್ಸ್ ಮತ್ತೆ ವಾಪಸ್ ಬರುತ್ತಾರೆ ಎಂಬ ಭರವಸೆಯಿಂದ ನಾನು ಆಂಗ್ಲ ಭಾಷೆ ಕೂಡ ಕಲಿತೆ. ಅವರು ಮತ್ತೆ ಬಂದಾಗ ನಾನು ಅವರ ಜೊತೆ ಆಂಗ್ಲ ಭಾಷೆ ಮಾತನಾಡಬೇಕು ಎಂದು ಆಸೆಯಿಂದ ಇದ್ದೆ. ಆದರೆ ಯುದ್ಧ ನಡೆದ ಬಳಿಕ ರಾಬಿನ್ಸ್ ಅಮೆರಿಕಗೆ ಹೊರಟೇ ಹೋದರು ಎಂದು ಜೇನಿನ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ನನ್ನ ಪ್ರೀತಿ ಇನ್ನೂ ಮಾಸಿಲ್ಲ:

Also read: ವಿಚಿತ್ರ ಪ್ರೇಮ ಕತೆ; ಮದುವೆಯಾದ ಒಂದೇ ವಾರದಲ್ಲಿ ಮದುವೆ ಮಾಡಿಸಿದ ಪುರೋಹಿತನ ಜೊತೆಯಲ್ಲೇ ನವವಿವಾಹಿತೆ ಪರಾರಿ..

ಈ ಸಂದರ್ಶದಲ್ಲಿ ಮಾತನಾಡಿ ನಾನು ಕೂಡ ಜೇನಿನ್‍ನನ್ನು ಮರೆಯಲಿಲ್ಲ. ನಾನು ಈಗಲೂ ಸಹ ಜೇನಿನ್ ಫೋಟೋ ಇಟ್ಟುಕೊಂಡಿದ್ದೇನೆ. ಅಲ್ಲದೆ ಜೇನಿನ್ ಕೂಡ ನಾನು ರಾಬಿನ್ಸ್ ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಅವರನ್ನು ಎಂದಿಗೂ ಹೃದಯದಿಂದ ತೆಗೆಯಲಿಲ್ಲ ಎಂದು ಹೇಳಿದ್ದಾರೆ. ರಾಬಿನ್ಸ್ ಟ್ರಕ್‍ನಲ್ಲಿ ಯುದ್ಧಕ್ಕೆ ಹೊರಟಾಗ ನನಗೆ ತುಂಬಾ ದುಃಖ ಆಗಿತ್ತು. ನಾನು ತುಂಬಾ ಅತ್ತಿದ್ದೆ. ಯುದ್ಧ ನಡೆದ ಬಳಿಕ ಅವರು ಅಮೆರಿಕಗೆ ಹೋಗಬಾರದಿತ್ತು ಎಂದು ಜೇನಿನ್ ಹೇಳಿದ್ದಾರೆ. ಅದರಂತೆ ಸ್ವಲ್ಪ ವರ್ಷದ ಬಳಿಕ ಇಬ್ಬರು ಬೇರೆಯವರನ್ನು ಮದುವೆಯಾಗಿದ್ದು, ಈಗ ಇಬ್ಬರ ಸಂಗಾತಿ ಕೂಡ ನಿಧನರಾಗಿದ್ದಾರೆ. 75 ವರ್ಷಗಳ ಬಳಿಕ ಇಬ್ಬರು ಪರಸ್ಪರ ಭೇಟಿಯಾಗಿ ಭಾವುಕರಾಗಿದ್ದಾರೆ.

ಅಲ್ಲದೆ ಇಬ್ಬರು ಕಿಸ್ ಮಾಡಿ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಬಳಿಕ ರಾಬಿನ್ಸ್ ನಾನು ಈಗ ಹೋಗಬೇಕು. ನಾನು ಮತ್ತೆ ಹಿಂದಿರುಗುತ್ತೇನೆ ಎಂದು ನಿನಗೆ ಮಾತು ನೀಡುತ್ತೇನೆ ಎಂದು ಹೇಳುತ್ತಾ ಜೇನಿನ್‍ಗೆ ಐ ಲವ್ ಯೂ ಎಂದು ಹೇಳಿದ್ದಾರೆ. ಇದು 75 ವರ್ಷದಿಂದ ಕಾಯ್ದು ಕುಳಿತ ಪ್ರೇಮದ ಅಂತರದಲ್ಲಿ ಏನೇ ನಡೆದರೂ ಲೆಕ್ಕಿಸದೆ ಒಂದಾದ ಕತೆ. ಈಗಿನ ಕಾಲದಲ್ಲಿ ದೂರವಾದ ಪ್ರೇಮಿಗಳು ಕಾಯ್ದು ನೋಡಿ ನೀವೂ ಮುಂದೆ ಹೀಗೆ ಒಂದಾಗಬಹುದು.