ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಭತ್ಯೆಯಲ್ಲಿ 5 ಪಟ್ಟು ಹೆಚ್ಚಳ..

0
1153

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಟ ವೇತನ ಏರಿಕೆ ಮಾಡುವ ನಿರೀಕ್ಷೆಯಿತ್ತು. ಅದೇ ಬಹುದಿನಗಳ ಬೇಡಿಕೆಯಾಗಿರುವ 7ನೇ ವೇತನಕ್ಕೆ ಸಂಬಂಧಪಟ್ಟಂತೆ ಸಿಹಿಸುದ್ದಿಯೊಂದು ತಿಳಿದಿದ್ದು ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಲಾಗಿದೆ.

Also read: ಇನ್ಮೇಲಿಂದ ಜ್ಯೋತಿ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು ಹಾಗು ಅವರ ಕುಟುಂಬದವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು!!

ಈ ಕುರಿತಂತೆ ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಇಲಾಖೆ ಹೊರಡಿಸಿರುವ ಪ್ರಕಟಣೆಯಂತೆ ಐದು ಪಟ್ಟು ಭತ್ಯೆ ಹೆಚ್ಚಳ ಸಿಗಲಿದೆ. ಸರ್ಕಾರಿ ಹುದ್ದೆ ಸೇರಿದ ಬಳಿಕ ಸ್ನಾತಕೋತ್ತರ ಪದವಿ ಪಡೆದವರಿಗೆ ಈ ಸೌಲಭ್ಯ ಸಿಗಲಿದೆ ಎಂದು ನೌಕರರ ಭತ್ಯೆ ಹೆಚ್ಚಳ ಕುರಿತಂತೆ ಹೊಸದಾದ ಅಧಿಸೂಚನೆ ಹೊರಡಿಸಲಾಗಿದೆ.

ವೇತನ ಶಿಪಾರಸ್ತಿನಂತೆ ಇದೀಗ ಉನ್ನತ ಪದವಿ ಪಡೆದವರಿಗೆ 10,000 ರು ನಿಂದ 30,000 ರು ತನಕ ಲಂಪ್ ಸಮ್ ನಂತೆ ಒಮ್ಮೆಗೆ ಭತ್ಯೆ ಸಿಗಲಿದೆ. ಪದವಿ ಅಥವಾ ಮೂರು ವರ್ಷಗಳ ಅವಧಿ ಅಥವಾ ಅದಕ್ಕಿಂತ ಕೆಳಮಟ್ಟದಾ ತತ್ಸಮಾನ ಅರ್ಹತೆಯುಳ್ಳವರಿಗೆ ಕನಿಷ್ಠ 10,000 ರು ಭತ್ಯೆ ಸಿಗಲಿದೆ. ಕೇಂದ್ರ ಸರ್ಕಾರ ತಿಳಿಸಿದೆ.

ವೇತನ ಆಯೋಗದ ಶಿಫಾರಸ್ಸಿನಂತೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರುನಿಂದ 26,000 ರು ಹೆಚ್ಚಿಸಲಾಗಿದೆ.

1. ಪಿಎಚ್ ಡಿ ಅಥವಾ ತತ್ಸಮಾನ ಹೊಂದಿದವರಿಗೆ : 30,000 ರು
2. ಪಿಜಿ ಡಿಗ್ರಿ/ ಡಿಪ್ಲೋಮಾ (ಒಂದು ವರ್ಷಕ್ಕಿಂತ ಅಧಿಕ ಆವಧಿ): 25,000 ರು
3. ಪಿಜಿ ಡಿಗ್ರಿ/ ಡಿಪ್ಲೋಮಾ (ಒಂದು ವರ್ಷಕ್ಕಿಂತ ಕಡಿಮೆ ಆವಧಿ): 20,000 ರು
4. ಡಿಗ್ರಿ/ ಡಿಪ್ಲೋಮಾ (ಮೂರು ವರ್ಷಕ್ಕಿಂತ ಅಧಿಕ ಆವಧಿ ಅಥವಾ ತತ್ಸಮಾನ): 15,000ರು
5. ಡಿಗ್ರಿ/ ಡಿಪ್ಲೋಮಾ (ಮೂರು ವರ್ಷಕ್ಕಿಂತ ಕಡಿಮೀ ಆವಧಿ): 10,000 ರು

ಕಳೆದ ಫೆಬ್ರುವರಿಯಲ್ಲಿ ಕೂಡ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಜನವರಿ 1, 2019ರಿಂದಲೇ ಇದು ಪೂರ್ವಾನ್ವಯ ಆಗಲಿದೆ. ಈ ನಿರ್ಧಾರದಿಂದ ಕೇಂದ್ರ ಸರಕಾರದ ಮೇಲೆ 9000 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಎನ್ನುವ ವಿಚಾರಗಳು ಕೇಳಿಬಂದಿದವು. ಆದರು ಕೂಡ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು.

Also read: ಮೋದಿ ಸರಕಾರದ ಅಟಲ್ ಪಿಂಚಣಿ ಮೂಲಕ ಕೇವಲ ಸರ್ಕಾರಿ ನೌಕರರಲ್ಲದೇ ಬೇರೆಯವರೂ ಹೇಗೆ ತಿಂಗಳಿಗೆ ಸಾವಿರಾರು ರುಪಾಯಿ ಪಿಂಚಣಿ ಪಡೆಯಬಹುದು ಎಂದು ಓದಿ!!

ಕೇಂದ್ರ ಸರ್ಕಾರಿ ನೌಕರರು 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಫಿಟ್ಮೆಂಟ್ ಫಾರ್ಮ್ಯೂಲಾದಂತೆ ಮೂಲ ವೇತನದ 2.57ರಂತೆ ವೇತನ ಪಡೆಯುತ್ತಿದ್ದಾರೆ. ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಬಗ್ಗೆ ಮಾಹಿತಿ ಇತ್ತು.

ಈಗಾಗಲೇ ಶೇ3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿರುವುದರಿಂದ ಡಿಎ ಹಾಗೂ ತುಟ್ಟಿ ದರ (ಡಿಆರ್) ನಿವೃತ್ತಿಯಾದವರಿಗೆ ಶೇ 12ರಷ್ಟು ತಲುಪಲಿದೆ. ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ5 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಈಗ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರವಸೆ ಇಡೆರಿದೆ.