ಯಶಸ್ವಿ ಜನರ ಈ 8 ಯಶಸ್ಸಿನ ದಿನಚರಿ ಗುಟ್ಟುಗಳನ್ನು ತಿಳಿದರೆ ನೀವು ಖಂಡಿತ ಇದನ್ನು ಪಾಲಿಸ್ತೀರ…!

0
1775

ಯಶಸ್ವಿ ಜನರ ಈ 8 ಯಶಸ್ಸಿನ ದಿನಚರಿ ಗುಟ್ಟುಗಳನ್ನು ಕೇಳಿದರೆ ನೀವು ಖಂಡಿತ ಇದನ್ನು ಪಾಲಿಸ್ತೀರ…!

1. ಬೆಳಗ್ಗೆ ಎಲ್ಲರಿಗಿಂತ ಬೇಗ ಏಳುವುದು:

ಬೆಳಗ್ಗೆ ಎಲ್ಲರಿಗಿಂತ ಬೇಗ ಏಳುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಒಂದು ವೇಳೆ ನೀವು ಗೆಳೆಯರ ಜೊತೆ ರೂಮಿನಲ್ಲಿ ಇದ್ದರೆ ಇದು ಇನ್ನು ಉಪಯುಕ್ತ, ನೀವು ಎಲ್ಲರಿಗಿಂತ ಬೇಗನೆ ತಯಾರಾಗಿ ಸದಾ ಚಟುವಟಿಗೆಯಿಂದ ಇರುತ್ತೀರ.

2. ಎದ್ದ ತಕ್ಷಣ ಮೊದಲು ಮೊಬೈಲ್ ಅನ್ನು ಬಳಸದಿರಿ:

ಎದ್ದ ತಕ್ಷಣ ಮೊದಲು ಮೊಬೈಲ್ ಬಳಸುವುದರಿಂದ ನಿಮ್ಮ ನಿತ್ಯದ ಕೆಲಸಗಳಿಗೆ ವಿಳಂಬವಾಗುತ್ತದೆ ಹಾಗು ಇಲ್ಲದ ಸಮಸ್ಯೆಗಳನ್ನು ಬರಮಾಡಿಕೊಂಡ ಹಾಗೆ ಆಗುತ್ತದೆ, ಮಲಗುವಾಗಲೂ ಅದನ್ನು ಸೈಲೆಂಟ್ ಮೋಡ್ಗೆ ಹಾಕಿ ನಿಮ್ಮ ಬೆಡ್ನಿಂದ ದೂರವಿಟ್ಟು ಮಲಗಿ.

3. ಎದ್ದ ತಕ್ಷಣ ನಿಮಗಿಷ್ಟವಿರುವ ಕೆಲಸವನ್ನು ಮೊದಲು ಮಾಡಿ:

ಎದ್ದ ತಕ್ಷಣ ನಿಮಗಿಷ್ಟವಿರುವ ಕೆಲಸವನ್ನು ಮೊದಲು ಮಾಡಿ ಉದಾಹರಣೆಗೆ ಪುಸ್ತಕ ಓದುವುದು, ನ್ಯೂಸ್ ಪೇಪರ್ ಓದುವುದು, ಯೋಗ ಅಥವಾ ಎಕ್ಸರ್ಸೈಜ್ ಮಾಡುವುದು, ಚಿತ್ರ ಬಿಡಿಸುವುದು, ನಂತರ ನಿಮ್ಮ ದಿನ ನಿತ್ಯದ ಕೆಲಸವನ್ನು ಮಾಡಿ, ಹೇಗೆ ಮಾಡುವುದರಿಂದ ನಿಮಗೆ ಕೆಲಸದಲ್ಲಿ ಉಲ್ಲಾಸವಿರುತ್ತದೆ.

4. ಒಂದು ನಿರ್ದಿಷ್ಟ ದಿನಚರಿ ಮಾಡಿ:

ನಿಮಗೆ ಸೂಕ್ತವೆನಿಸುವಂತಹ ಒಂದು ನಿರ್ದಿಷ್ಟ ದಿನಚರಿಯನ್ನು ಮಾಡಿ ಅದರಲ್ಲಿ ಮೇಲೆ ತಿಳಿಸಿದ ಎಲ್ಲವನ್ನು ಸೇರಿಸಿ ಹಾಗು ಇದನ್ನು ತಪ್ಪದೆ ಪಾಲಿಸಲು ಪ್ರಯತ್ನ ಪಡಿ, ಹೀಗೆ ಮಾಡುವುದರಿಂದ ಸಮಯದ ಉಳಿಯುತ್ತದೆ ಹಾಗು ಸೋಮಾರಿತನ ದೂರವಾಗುತ್ತದೆ.

5. ನಿಮಗೆ ಸಾಧ್ಯವಾಗುವಂತಹ ಗುರಿಯನ್ನು ಇಟ್ಟುಕೊಳ್ಳಿ:

ನಿಮ್ಮ ಸಾಮರ್ಥ್ಯದ ಅನುಸಾರ ನಿಮಗೆ ಸಾಧ್ಯವಾಗುವಂತಹ ಗುರಿಯನ್ನು ಇಟ್ಟುಕೊಳ್ಳಿ. ಹೆಚ್ಚಿನ ಗುರಿಯನ್ನು, ಪ್ರಾಯೋಗಿಕವಾಗಿ ನಿಮ್ಮಿಂದ ಅಸಾದ್ಯವಾಗುವಂತಹ ಗುರಿಯನ್ನು ಇಟ್ಟು ಕೊಂಡರೆ ಅದು ನಿಮಗೆ ಬೇಸರ ಮೂಡಿಸಿ ಕೆಲಸವನ್ನು ಅರ್ಧಕ್ಕೆ ಬಿಡಲು ಕಾರಣವಾಗುತ್ತದೆ.

6. ಬೆಳಗ್ಗೆ ಬೇಕಿರುವ ಆಹಾರವನ್ನು ರಾತ್ರಿಯೆ ತಯಾರಾಗಿರಿಸಿ:

ಬೆಳಗ್ಗೆ ಎದ್ದ ತಕ್ಷಣ ಆಹಾರವನ್ನು ತಯಾರಿಸಲು ಬೇಕಿರುವ ಸಾಮಗ್ರಿಗಳನ್ನು ರಾತ್ರಿಯೆ ಹೊಂದಿಸಿಕೊಳ್ಳಿ ಉದಾಹರಣೆಗೆ ತರಕಾರಿ ಹೆಚ್ಚಿ ಫ್ರಿಡ್ಜ್-ನಲ್ಲಿಡುವುದು, ಹೀಗೆ ಮಾಡುವುದರಿಂದ ನಿಮ್ಮ ಬೆಳಗಿನ ಅಮೂಲ್ಯ ಸಮಯ ಉಳಿಯುತ್ತದೆ.

7. ಎಲ್ಲ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲಿಡಿರಿ:

ನೀವು ಬೆಳಗ್ಗೆ ಎದ್ದ ತಕ್ಷಣ ಕೆಲಸಕ್ಕೆ ಹೋಗುವ ಗಡಿ-ಬಿಡಿಯಲ್ಲಿ ಎಲ್ಲ ವಸ್ತುಗಳನ್ನು ನಿಮ್ಮ ಬೆಡ್ ಮೇಲೆ ಹಾಗೆ ಚೆಲ್ಲಾಡಿದರೆ ಸಾಯಂಕಾಲ ಸುಸ್ತಾಗಿ ಮನೆಗೆ ಬಂದು ಮಲಗೋಣ ಎಂದು ಕೊಂಡಾಗ ನಿಮಗೆ ಈ ವಸ್ತುಗಳ ರಾಶಿ ಕಾಣುತ್ತದೆ. ಅದಕ್ಕೆ ಎಲ್ಲ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲಿಡಿರಿ.

8. ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮೊದಲುಮಾಡಿ ಮುಗಿಸಿ:

ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮೊದಲುಮಾಡಿ ಮುಗಿಸಿದರೆ ನಿಮಗೆ ಒಂದು ನಿರಾಳತನ ಉಂಟಾಗುತ್ತದೆ, ಹೀಗೆ ಮಾಡುವುದರಿಂದ ಆ ಕೆಲಸ ತಪ್ಪಿಸುವ ಪ್ರಮೇಯವಿರುವುದಿಲ್ಲ ಹಾಗು ನಿಮಗೆ ಇಷ್ಟವಿರುವ ಕೆಲಸ ಬೇಗ ಮಾಡಲು ನೆರವಾಗುತ್ತದೆ.