ಉತ್ತರ ಪ್ರದೇಶದ ಈ ಶಾಲೆಯಲ್ಲಿ ರಾಷ್ಟ್ರಗೀತೆಗೆ ನಿಷೇಧ..!

0
901

ಅಲಹಾಬಾದ್: ಆಘಾತಕಾರಿ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ ಅಲಹಾಬಾದ್‍ನ ಶಾಲೆಯೊಂದು ತನ್ನ ಆವರಣದಲ್ಲಿ ರಾಷ್ಟ್ರಗೀತೆಯನ್ನು ನಿಷೇಧಿಸಿದೆ.

ಭಾರತದ ರಾಷ್ಟ್ರಗೀತೆ – ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ.ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು..

ಈ ಶಾಲೆಯ ವ್ಯವಸ್ಥಾಪಕ ರಾಷ್ಟ್ರಗೀತೆ ಹಾಡದಂತೆ ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ್ದಾನೆ. ಭಾರತ ಭಾಗ್ಯ ವಿಧಾತ ಸಾಲು ಇಸ್ಲಾಮ್‍ಗೆ ವಿರುದ್ಧವಾಗಿದೆ ಎಂಬುದೇ ಈ ನಿಷೇಧಕ್ಕೆ ಕಾರಣ. ರಾಷ್ಟ್ರಗೀತೆ ನಿಷೇಧವನ್ನು ಪ್ರತಿಭಟಿಸಿ ಈ ಶಾಲೆಯ ಎಂಟು ಶಿಕ್ಷಕರು ರಾಜೀನಾಮೆ ನೀಡಿದ್ದಾರೆ. ಈ ಶಾಲೆಯ ಹೆಸರು: ಎಂಎ ಕಾನ್ವೆಂಟ್ ಸ್ಕೂಲ್. ಈ ಉದ್ಧಟತನಕ್ಕಾಗಿ ಶಾಲೆಯ ಮಂಡಳಿಯನ್ನು ಬಿಜೆಪಿ ಧುರೀಣ ಶ್ರೀಕಾಂತ್ ಶರ್ಮ ತರಾಟೆಗೆ ತೆಗೆದುಕೊಂಡಿದ್ದಾರೆ.

ಜನಗಣಮನ-ಅಧಿನಾಯಕ ಜಯ ಹೇ ಭಾರತಭಾಗ್ಯವಿಧಾತಾ!

ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಳ ಬಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ

ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ,

ಗಾಹೇ ತವ ಜಯಗಾಥಾ।

ಜನಗಣಮಂಗಳದಾಯಕ ಜಯ ಹೇ ಭಾರತಭಾಗ್ಯವಿಧಾತಾ!

ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ।।

ರಾಷ್ಟ್ರಗೀತೆಯ ಕನ್ನಡ ಭಾವಾನುವಾದ:-

  • “ಜನ ಸಮುಹದ ಮನಸ್ಸಿಗೆ ಒಡೆಯನಾದಸರ್ವೋಚ್ಚನಾಯಕನೇ ಭಾರತದ ಅದೃಷ್ಟವನ್ನುದಯಪಾಲಿಸುವವನೇ ನಿನಗೆ ಜಯವಾಗಲಿ
  • ಪಂಜಾಬ,ಸಿಂಧು,ಗುಜರಾತ,ಮಹಾರಾಷ್ಟ್ರ,ದಕ್ಷಿಣಭಾರತ,ಒಡಿಶಾ,ಬಂಗಾಳ,ಹೀಗೆ ಭಾರತದ ನಾಲ್ಕೂ ದಿಕ್ಕಿನ ಪ್ರಾಂತ್ಯಗಳು ವಿಂದ್ಯ,ಹಿಮಾಚಲ ಪರ್ವತಗಳು ಹಾಗೇ ಗಂಗಾ,ಯಮುನೆಯಂತಹ,ಜೀವನದಿಗಳು ಶ್ರೇಷ್ಠವಾದಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗ್ರತಗೊಳ್ಳುತ್ತವೆ
  • ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ
  • ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ,ಜಯವಾಗಲಿ.ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ.”
  • “ನಮನ”

ಆದರೆ ಇಲ್ಲಿ ರಾಷ್ಟ್ರಗೀತೆಯಲ್ಲಿ ‘ಭಾರತ ಭಾಗ್ಯ ವಿಧಾತ’ ಎಂಬ ಸಾಲುಗಳಿದ್ದು, ಅವು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಹಾಗಾಗಿ ತಮ್ಮ ಶಾಲೆಯಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರಗೀತೆ ಹಾಡದಂತೆ ನಿಷೇಧ ಹೇರಲಾಗಿದೆ ಎಂದು ಶಾಲೆಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಶಾಲೆಗಳು ಆರಂಭವಾಗುವುದೇ ಮಕ್ಕಳು ರಾಷ್ಟ್ರಗೀತೆ ಹೇಳಿದ ನಂತರ. ಮಕ್ಕಳಲ್ಲಿ ದೇಶ ಭಕ್ತಿಯ ಭಾವನೆಯನ್ನು ಮೂಡಿಸಲು ದಿನಾಲು ರಾಷ್ಟ್ರಗೀತೆ ಹೇಳಿಸಲಾಗುತ್ತದೆ. ಆದರೆ, ರಾಷ್ಟ್ರಗೀತೆಯನ್ನೇ ಬ್ಯಾನ್ ಮಾಡಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಶಾಲೆಯಲ್ಲಿ ರಾಷ್ಟ್ರಗೀತೆ ಹಾಡದಂತೆ ನಿರ್ಬಂಧ ಹೇರಿರುವುದನ್ನು ವಿರೋಧಿಸಿ ಅನೇಕ ಶಿಕ್ಷಕರು ರಾಜೀನಾಮೆ ನೀಡಿದ್ದಾರೆ. ಆಡಳಿತ ಮಂಡಳಿಯ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬಿ.ಜೆ.ಪಿ. ಮುಖಂಡ ಶ್ರೀಕಾಂತ್ ಶರ್ಮ ಒತ್ತಾಯಿಸಿದ್ದಾರೆ.