ಮಾದಕವಸ್ತು ದಂಧೆ ನಡೆಸುತ್ತಿದ್ದ 88 ವರ್ಷದ ವೃದ್ಧೆ ಅಂದರ್; 10ನೇ ಬಾರಿಗೆ ಅರೆಸ್ಟ್ ಆದರು ಚಾಲಾಕಿ ವೃದ್ಧೆ ಹೊರಬಂದಿದ್ದು ಹೇಗೆ??

0
261

ಮಾದಕವಸ್ತು ದಂಧೆ ಇಡಿ ದೇಶಕ್ಕೆ ಮಾರಕವಾಗಿದ್ದು, ಇದರಿಂದ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದರಂತೆ ಅದೆಷ್ಟೂ ಜನರು ಡ್ರಗ್ಸ್ ತೆಗೆದುಕೊಂಡು ವಿಕೃತಿ ಮರೆಯುತ್ತಿದ್ದಾರೆ. ಇದು ಸಮಾಜಕ್ಕೆ ಪಿಡುಗಾಗಿ ಆಕ್ರಮಿಸಿದ್ದು ಈ ದಂದೆಯನ್ನು ಬೇರುಸಮೇತ ಕಿಳ್ಳಲು ಸರ್ಕಾರ ನಾನಾ ರೀತಿಯ ಕ್ರಮಗಳನ್ನು ಕೈಗೊಂಡರು ಕೂಡ ಮಾದಕ ವಸ್ತುಗಳು ಬಂದು ಸೇರುತ್ತಿವೆ. ಇನ್ನೂ ಈ ದಂದೆಯಲ್ಲಿ ಯುವಕರು ಹೆಚ್ಚು ಪಾಲಾಗಿದ್ದು ಬೇರೆ ರಾಜ್ಯಗಳಿಂದ ತಂದು ಮಾರಾಟ ಮಾಡುತ್ತಿದ್ದಾರೆ. ಇಂತಹ ಕೆಲಸಗಳಲ್ಲಿ ಯುವಕರು ಮಾತ್ರವಲ್ಲದೆ 88 ವರ್ಷದ ವೃದ್ಧೆ ಒಬ್ಬಳು ಕೂಡ ಹಲವು ವರ್ಷಗಳಿಂದ ಡ್ರಗ್ಸ್ ದಂದೆಯಲ್ಲಿರುವುದು ಪತ್ತೆಯಾಗಿದೆ.

88 ವರ್ಷದ ಡ್ರಗ್ ಡೀಲರ್?

ಹೌದು ದೇಶವೇ ಬೆರಗಾಗುವಂತ ಸುದ್ದಿಯೊಂದು ತಿಳಿದಿದ್ದು, ಹಲವು ದಶಕಗಳಿಂದ ಮಾದಕವಸ್ತು ದಂಧೆ ನಡೆಸುತ್ತಿದ್ದ ವೃದ್ಧೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು 88 ವರ್ಷದ ರಾಜ್ರಾಣಿ ಎಂದು ಗುರುತಿಸಲಾಗಿದ್ದು, ಈಕೆ ಮಾದಕವಸ್ತುಗಳ ವ್ಯಾಪಾರ ಮಾಡುತ್ತಿದ್ದಳುಇವಳು 25ನೇ ವಯಸ್ಸಿನಿಂದ ಮಾದಕ ದ್ರವ್ಯ ಮಾರಾಟ ದಂಧೆಯಲ್ಲಿ ತೊಡಗಿ ಈಗ 10ನೇ ಬಾರಿಗೆ ಪೊಲೀಸರ ಅತಿಥಿಯಾಗಿದ್ದಾಳೆ. ಎಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಮಾದಕವಸ್ತುಗಳ ದಂಧೆಯನ್ನು ಮೊದಲು ರಾಜ್ರಾಣಿ ಗಂಡ ನೋಡಿಕೊಳ್ಳತ್ತಿದ್ದ. ಆದರೆ 1990 ರಲ್ಲಿ ಆತ ಮೃತಪಟ್ಟ ನಂತರ ರಾಜ್ರಾಣಿ ಈ ದಂಧೆ ಮಾಡುವ ಅಧಿಕಾರವನ್ನು ವಹಿಸಿಕೊಂಡಿದ್ದಾಳೆ. ರಾಜ್ರಾಣಿಯನ್ನು 1996 ರಿಂದ ಇಲ್ಲಿಯವರಿಗೂ ದೆಹಲಿ ಪೊಲೀಸರು 6 ಬಾರಿ ಬಂಧಿಸಿದ್ದು ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದಳು. ರಾಜ್ರಾಣಿಗೆ ಈಗ ವಯಸ್ಸಾದ ಕಾರಣ ಆಕೆಯ ಆರೋಗ್ಯ ಸರಿಯಿಲ್ಲ. ಆಕೆಗೆ ನಡೆಯಲು ಆಗುವುದಿಲ್ಲ. ಆದರೆ ಅವಳ ಸಹಚರರ ಸಹಾಯದಿಂದ ಈಗಲೂ ದಂಧೆ ನಡೆಸುತ್ತಿದ್ದಾಳೆ. ಬುಧವಾರ ಆಕೆ 16 ಗ್ರಾಮ್ ಹೆರಾಯಿನ್ ಅಕ್ರಮವಾಗಿ ಸಾಗಿಸುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸರು, ಪಶ್ಚಿಮ ದೆಹಲಿಯಲ್ಲಿರುವ ಆಕೆಯ ಮನೆಯ ಮೇಲೆ ದಾಳಿ ಮಾಡಿ ಆಕೆಯನ್ನು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಮೋನಿಕಾ. ಪೊಲೀಸರು ಮನೆಯ ಮೇಲೆ ದಾಳಿ ನಡೆಸಿ ರಾಜ್ರಾಣಿಯನ್ನು ಬಂಧಿಸಿದ್ದಾರೆ. ಈ ವೇಳೆ ಅವಳ ಬಳಿ ಹೆರಾಯಿನ್ ಕಂಡುಬಂದಿದೆ. ಆಕೆ ಪಂಜಾಬ್ ಮತ್ತು ಉತ್ತರ ಪ್ರದೇಶದ ಮಾದಕವಸ್ತು ವ್ಯಾಪಾರಿಗಳೊಂದಿಗೆ ಸಂಪರ್ಕದಲ್ಲಿದ್ದಳು. ಜೈಲಿಗೆ ಹೋಗಲು ಭಯ ಪಡದ ಮಹಿಳೆ, ಕಾನೂನುಗಳ ಬಗ್ಗೆ ಚೆನ್ನಾಗಿ ತಿಳಿದಿಕೊಂಡಿದ್ದಾಳೆ ಮತ್ತು ನಾವು ಬಂಧಿಸಿದ ಪ್ರತಿ ಬಾರಿಯೂ ಜಾಮೀನು ಪಡೆದು ಹೊರಬರುತ್ತಾಳೆ ಎಂದು ಹೇಳಿದ್ದಾರೆ. ಈ ವೇಳೆ ಪೊಲೀಸ್ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದು ‘ಅಪ್ರಾಪ್ತ ವಯಸ್ಸಿನಲ್ಲಿಯೇ ವಿವಾಹವಾಗಿ, ಹರಿಯಾಣಾದಿಂದ ಇಂದರ್‌ಪುರಿಗೆ ಬಂದು ನೆಲೆಸಿದ್ದೆ. ನನಗೆ 7 ಜನ ಮಕ್ಕಳಿದ್ದರು. ಅವರು ಕೂಡ ಡ್ರಗ್ಸ್ ಮಾರಾಟ ದಂಧೆಯಲ್ಲಿಯೇ ತೊಡಗಿದ್ದರು. ಆದರೆ, ದುರದೃಷ್ಟವಶಾತ್ 6 ಜನ ಮಕ್ಕಳು ಡ್ರಗ್ಸ್ ವ್ಯಸನ ಮತ್ತು ಅಪಘಾತದಿಂದ ಸಾವನ್ನಪ್ಪಿದ್ದರು’ ಎಂದು ಪೊಲೀಸ್ ವಿಚಾರಣೆ ವೇಳೆ ಬಂಧಿತ ಆರೋಪಿ ರಾಜ್‌ರಾಣಿ ಹೇಳಿಕೊಂಡಿದ್ದಾಳೆ.