ಪರಸ್ಪರರಿಂದ ದೂರವಿರುವ ದಂಪತಿಗಳಿಗೆ ಕಿವಿಮಾತು

0
1621

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ್ದು. ನಮ್ಮವರು, ನಮ್ಮ ಸಂಸಾರ, ನಮ್ಮ ಮಗ ಎನ್ನುವ ಹೊಸ ಪ್ರಪಂಚದ ಸೃಷ್ಟಿಯಾಗುತ್ತದೆ. ಮದುವೆಯ ನಂತರ ಜೀವನ ಸುಖಕರವಾಗಿರಲಿ, ಎಂದು ಪ್ರತಿಯೊಬ್ಬರು ಆಶಿಸುತ್ತಾರೆ. ಹೀಗಿರುವಾಗ ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ಪ್ರತಿಯೊಬ್ಬರ ಜೀವನ ಸ್ವರ್ಗದಂತಿದೆ ಅಂತ ಹೇಳುತ್ತಾರೆ, ಮತ್ತು ಕೊನೆಯವರೆಗೂ ಜೊತೆಯಲ್ಲಿ ಬಾಳುತ್ತೇವೆ ಎಂದು ಮದುವೆಯಾಗಿ ಸ್ವಲ್ಪ ಕಾಲದಲ್ಲಿ ಸಂಸಾರದಲ್ಲಿ ಮದುವೆಯಾಗಬಾರದಿತ್ತು ಎಂಬುವ ಅಪಸ್ವರಗಳು ಎದ್ದರೆ ಸಂಸಾರ ಅನ್ನುವುದು ಬೀದಿಗೆ ಬೀಳುತ್ತದೆ. ಮತ್ತು ಮದುವೆಯಾದ ಮೇಲೆ ಇದ್ದ ಖುಷಿ ಮತ್ತು ಸ್ವತಂತ್ರ ಇಲ್ಲದಂತಾಗುತ್ತಾದೆ.

Also read: ಮದುವೆಯಾದವರು ಈ 5 ಗುಣಗಳನ್ನು ಅನುಸರಿಸದೆ ಇದ್ದಲ್ಲಿ, ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವು ಖಂಡಿತ!

ಅದರಲ್ಲೂ ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿಯ ಪ್ರಕಾರ ಮದುವೆಗೆ ಮಹತ್ತರ ಸ್ಥಾನ ಇದೆ ಹಾಗೂ ವಿಶೇಷ ಗೌರವ ಪಡೆದಿದೆ. ಜೀವನದಲ್ಲಿ ನಮಗಾಗಿ ಬಾಳ ಸಂಗಾತಿ ಜೊತೆಯಾಗುತ್ತಾರೆ. ನಮ್ಮ ಪ್ರತಿ ಕಷ್ಟ, ಸುಖ-ದುಃಖ, ನೋವು-ನಲಿವಲ್ಲಿ ಕೈ ಹಿಡಿದು ಜೀವನ ಸಾಗಿಸುತ್ತಾರೆ. ಹೀಗೆ ಇಬ್ಬರೂ ಅನ್ಯೋನ್ಯವಾಗಿ ನೆಮ್ಮದಿಯಿಂದ ಜೀವನ ಸಾಗಿಸಬೇಕೆಂದರೆ ಇಬ್ಬರಲ್ಲಿ ಇರುವ ಹೊಂದಾಣಿಕೆ ಪ್ರಮುಖ ಪಾತ್ರ ವಹಿಸುತ್ತದೆ.

Also read: ಸಂಸಾರ ನಡೆಸಲು ಹಣಕಾಸಿನ ಈ ಅಂಶಗಳನ್ನು ದಂಪತಿಗಳು ಅನುಸರಿಸಿದರೆ, ಸಂಸಾರ ನಿಭಾಯಿಸಲು ಸಲೀಸಾಗುತ್ತೆ!!

ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲವಾದಲ್ಲಿ ಪರಸ್ಪರ ದೂರವಿರುವ ದಂಪತಿಗಳಿಗೆ ಕಿವಿಮಾತು :

  • ಹಳೆಯದನ್ನು ಮರೆತು ಮಾತುಕತೆಯನ್ನು ಮುಂದುವರಿಸಿ.
  • ಪ್ರತಿಯೊಂದು ಸಂಗತಿ ಅಹಂನ್ನು ಅಡ್ಡ ತರಬೇಡಿ. ಈ ಪ್ರಕರನವನ್ನು ಹೇಗೆ ಬಗೆಹರಿಸಬೇಕು ಎನ್ನುವುದರ ಬಗ್ಗೆ ಯೋಚಿಸಿ,
  • ಎಲ್ಲದಕ್ಕೂ ಹೆಂಡತಿಯನ್ನೇ ತಪ್ಪಿತಸ್ಥೆಯನ್ನಾಗಿಸಬೇಡಿ. ಏಕೆಂದರೆ ಚಪ್ಪಾಳೆ ಒಂದೇ ಕೈಯಿಂದ ತಟ್ಟಲು ಆಗುವುದಿಲ್ಲ ಎನ್ನುವುದು ನೆನಪಿರಲಿ.
  • ಹೆಂಡತಿ ಉದ್ಯೋಗಸ್ಥೆಯಾಗಿದ್ದರೆ, ಆಕೆಯ ತೊಂದರೆಗಳ ಬಗೆಗೂ ಗಮನವಿರಲಿ, ನಿಮ್ಮಿಬ್ಬರ ನಡುವಿನ ಜಗಳಕ್ಕೆ ಮೂಲಕಕಾರಣ ವರ್ಕ್ ರೊಟೀನ್ ಆಗಿದ್ದರೆ ಪರಸ್ಪರ ಹೊಂದಾಣಿಕೆಯಿಂದ ಹೋಗಿ.

Also read: ಸಂತಾನೋತ್ಪತಿ ಸಮಸ್ಯೆಗಳಿಂದ ಬಳಲುತ್ತಿರುವ ದಂಪತಿಗಳಿ ಇಲ್ಲಿದೆ ಒಂದು ಬದಲಿ ವೈದ್ಯಕೀಯ ಚಿಕಿತ್ಸೆ

  • ನಿಮ್ಮ ಜಗಳ ಮಕ್ಕಳ ಮೇಲೆ ಪರಿಣಾಮ ಉಂಟಾಗದಂತೆ ಗಮನಿಸಿ.
  • ಸಾಮಾನ್ಯವಾಗಿ ತಂದೆ-ತಾಯಿ ತಮ್ಮ ಜಗಳದಲ್ಲಿ ಮಕ್ಕಳ ಜೀವನ ಹಾಳು ಮಾಡಿಬಿಡುತ್ತಾರೆ.
  • ಗಂಡನ ಅಭ್ಯಾಸಗಳು ಮತ್ತು ವರ್ತನೆ ನಿಮ್ಮನ್ನು ಅವರಿಂದ ದೂರ ಒಯ್ಯತ್ತಿದ್ದರೆ, ಬದಲಿಸಿಕೊಳ್ಳುವಂತೆ ಸೂಚಿಸಿ.
  • ಪತಿಯ ಕುರಿತಾಗಿ ಯಾವಾಗಲೂ ಪತ್ತೇದಾರಿಕೆ ಮಾಡುವುದನ್ನು ಬಿಡಿ, ಯಾವಾಗಲೂ ಅವರ ಸ್ಪೆಪ್ನಿಯಾಗಿರಲು ಪ್ರಯತ್ನಿಸಬೇಡಿ. ಒಮ್ಮೊಮ್ಮೆ ಅವರನ್ನು ಏಕಾಂಗಿಯಾಗಿರಲು ಅವಕಾಶ ಕೊಡಿ.
  • ಪ್ರಕರಣ ನ್ಯಾಯಾಲಯದ ಕಟ್ಟೆ ಏರಿದ್ದರೆ, ಗಂಡ ಹೊಂದಾಣಿಕೆಗೆ ಸಿದ್ಧ ನಾಗಿದ್ದರೆ ಹಳೆಯದನ್ನು ಮರೆತು ಮಕ್ಕಳು ಹಾಗೂ ಕುಟುಂಬದ ಹಿತದೃಷ್ಟಿಯಿಂದ ಹೊಸದಾಗಿ ಜೀವನ ಸಾಗಿಸಲು ಸನ್ನದ್ಧರಾಗಿ.