9 ವರ್ಷದ ಬಾಲಕನ ಮೇಲೆ ಒಂದು ವರ್ಷದಿಂದ ಚಿಕ್ಕಮ್ಮನಿಂದಲೇ ನಿರಂತರ ಅತ್ಯಾಚಾರ..

0
487

ದೇಶದಲ್ಲಿ ಅತ್ಯಾಚಾರದ ಕೂಗು ಹೆಚ್ಚುತ್ತಿದು ಬರಿ ಮಹಿಳೆಯರು ಮತ್ತು ಬಾಲಕಿಯರ ಮಾತ್ರ ಈ ಅತ್ಯಾಚಾರದಲ್ಲಿ ಬಲಿ ಆಗುವುದು ಕೇಳಿಬರುತ್ತಿತ್ತು, ಈಗ ಕಾಲ ಕೆಟ್ಟಂತೆ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ಕಿರುಕುಳ ಕೇಳಿಬರುತ್ತಿವೆ. ಇದರಲ್ಲಿ ಏನು ಅರಿಯದ ಮಕ್ಕಳನ್ನು ತಮ್ಮ ಮನೋಕಾಮನೆ ತಿರಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚಾಗಿ ಸಂಬಂಧಿಕರಲ್ಲಿ ಕೇಳಿ ಬರುತ್ತಿದ್ದು ಇವು ಮನುಕುಲವೇ ನಾಚುವ ಪ್ರಕರಣಗಳಾಗಿವೆ. ಇಂತಹದೆ ಒಂದು ಘಟನೆ ಕೇರಳದಲ್ಲಿ ನಡೆದಿದ್ದು ಚಿಕ್ಕಮ್ಮನೆ ಬಾಲಕನ ಮೇಲೆ ಕಳೆದ ಒಂದು ವರ್ಷದಿಂದ ಅತ್ಯಾಚಾರ ಮಾಡುತ್ತಿರುವುದು ವಿಪರ್ಯಾಸವಾಗಿದೆ.


Also read: ಸೇಡಿಗೆ ಸೇಡು, ರಕ್ತಕ್ಕೆ ರಕ್ತ; ಉಗ್ರರ ಸೆದೆ ಬಡೆಯಲು ಸಕಲ ಕ್ರಮ.. ಪಾಕಿಗೆ ನರೇಂದ್ರ ಮೋದಿ ಅವರಿಂದ ಖಡಕ್ ಸಂದೇಶ..

ಏನಿದು ಪ್ರಕರಣ?

ಒಂಬತ್ತು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವತ್ತಾರು ವರ್ಷದ ಮಹಿಳೆ ವಿರುದ್ಧ ತೆನ್ಹಿಪ್ಪಲಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಾಲಕ ಸ್ಥಳೀಯ ವೈದ್ಯರ ಬಳಿ ತೆರಳಿ ಕ್ಲಿನಿಕ್ ನಲ್ಲಿ ಈ ವಿಚಾರ ತಿಳಿಸಿದಾಗಲಷ್ಟೇ ಅದು ಹೊರಜಗತ್ತಿಗೆ ತಿಳಿದು ಬಂದಿತ್ತು. ವೈದ್ಯರು ಕೂಡಲೇ ಚೈಲ್ಡ್ ಲೈನ್ ಗೆ ತಿಳಿಸಿದ್ದು, ಬಾಲಕನ ಹೇಳಿಕೆ ದಾಖಲಿಸಿಕೊಂಡು ನಂತರ ದೂರು ದಾಖಲಿಸಲಾಗಿದೆ. ಆರೋಪಿ ಮಹಿಳೆಯ ವಿರುದ್ಧ ಪೋಕ್ಸೋ ಅನ್ವಯ ಪ್ರಕರಣ ದಾಖಲಾಗಿದೆ. ಎಂದು ತಿಳಿದುಬಂದಿದೆ.

ಒಂದು ವರ್ಷದಿಂದ ಅತ್ಯಾಚಾರ:

ಮೂರನೆ ತರಗತಿ ಶಾಲೆಗೇ ಹೋಗುವ ಬಾಲಕನ್ನು ಸ್ವಂತ ಚಿಕಮ್ಮ ಅಂದರೆ ಬಾಲಕನ ತಂದೆಯ ತಮ್ಮನ ಹೆಂಡತಿ ಕಳೆದ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಾಲಕನನ್ನು ರೂಮ್ ಕರೆದೊಯ್ದು ಹಿಂಸೆ ನೀಡುತ್ತಿದ್ದಳು. ಈ ವಿಚಾರವನ್ನು ಯಾರಿಗಾದರು ತಿಳಿಸಿದರೆ ಹೊಡೆಯುದಾಗಿ ತಿಳಿಸಿದ ಈ ಮಹಿಳೆ ಬೆದರಿಕೆ ಹಾಕಿದ್ದಳು ಎಂಬುವುದು ಬಾಲಕನ ವಿಚಾರಣೆಯ ವೇಳೆ ತಿಳಿದುಬಂದಿದೆ. ಇನ್ನೂ ಏನು ಅರಿಯದ ಬಾಲಕನು ಲೈಂಗಿಕ ದೌರ್ಜನ್ಯದಿಂದ ಮಾನಸಿಕ ಸ್ಥಿತಿಯೇ ಮೇಲೆ ಪರಿಣಾಮ ಬೀರಿದೆ ಎಂದು ವ್ಯದ್ಯರು ತಿಳಿಸಿದ್ದಾರೆ.


Also read: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ವೀರಮರಣ ಹೊಂದಿದ ‘ಮಂಡ್ಯದ ಗುರು’ ತಮ್ಮ ತಾಯಿಗೆ ಹೇಳಿದ ಕೊನೆಯ ಮಾತೇನು?

ಆರೋಪಿ ಮಹಿಳೆಯು ಬಾಲಕನಿಗೆ ಸಂಬಂಧಿಯೇ ಆಗಿದ್ದು, ಆತನ ಮನೆಯ ಹತ್ತಿರವೇ ವಾಸವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸಂತ್ರಸ್ತ ಹಾಗೂ ಆರೋಪಿಯ ಕುಟುಂಬಗಳ ಮಧ್ಯೆ ವ್ಯಾಜ್ಯವಿದೆ. ಈಗ ಮಾಡಿರುವ ಆರೋಪಕ್ಕೂ ಹಾಗೂ ಭಿನ್ನಾಭಿಪ್ರಾಯಕ್ಕೂ ಸಂಬಂಧ ಇದೆಯಾ ಎಂಬುದನ್ನು ಪರಿಶೀಲಿಸಬೇಕು. ಮುಂಬರುವ ದಿನಗಳಲ್ಲಿ ಆರೋಪಿಯ ಹೇಳಿಕೆ ಕೂಡ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಹಿಳೆ ವಿರುದ್ಧ ಪೊಲೀಸರು ಪೋಕ್ಸೊ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿಂದೆ ಇಂತಹದೆ ಒಂದು ಪ್ರಕರಣ ಎರ್ನಾಕುಲಂನಲ್ಲಿ ನಡೆದಿದ್ದು ಕ್ಯಾನ್ಸರ್ ಪೀಡಿತ ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿತ್ತು. ಈಗ ಕೇರಳದಲ್ಲಿ ನಡೆದಿದ್ದು ಪಾಲಕರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ.

ಏನಿದು ಪೋಕ್ಸೋ ಕಾಯಿದೆ?


Also read: ಪುಲ್ವಾಮ ಆತ್ಮಾಹುತಿ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿತ್ತಾ?

ಮಕ್ಕಳ ಹಿತರಕ್ಷಣೆಗಾಗಿ 20ನೇ ನವೆಂಬರ್ 1989ರಲ್ಲಿ ವಿಶ್ವ ಸಂಸ್ಥೆಯು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸಿತು. ಭಾರತ ಸರಕಾರವು ಡಿಸೆಂಬರ್ 1992ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿತು ಇದರ ಪ್ರಕಾರ ಮಗುವಿನ ಗೌಪ್ಯತೆ ಮತ್ತು ಏಕಾಂತತೆಯ ಹಕ್ಕನ್ನು ಕಾಪಾಡುವುದು ಹಾಗೂ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಇಂತಹ ಅಪರಾಧಗಳನ್ನು ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯಿದೆಯನ್ನು 2012 ನವೆಂಬರ್ ರಂದು ಜಾರಿಗೆ ತರಲಾಗಿದೆ. ಇಂತಹ ಪ್ರಕರಣಗಳನ್ನು ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದೆ.