ಮಗಳ ಮದುವೆ ಖರ್ಚಿನಲ್ಲಿ 90 ಬಡವರಿಗೆ ಮನೆ ಗಿಫ್ಟ್‌

0
1103

ಔರಂಗಾಬಾದ್‌ ಜಿಲ್ಲೆಯ ಲೇಸರ್ ಪಟ್ಟಣದಲ್ಲಿ ಉದ್ಯಮಿ ಅಜಯ್ ಮುನೋದ್ ಮಗಳು ಶ್ರೇಯಾ ಮದುವೆ ಉಡುಗೊರೆಯಾಗಿ ನಿರ್ಗತಿಕರಿಗೆ ಜನರಿಗೆ 90 ಮನೆ ವಿತರಿಸಿದೆ. ಅವರು 1.50 ರೂ ಕೋಟಿ ವೆಚ್ಚದಲ್ಲಿ 90 ಒಂದು ಬೆಡ್ ರೂಮ್ ಮನೆ ನಿರ್ಮಿಸಿದಾರೆ .

123

ಶ್ರೀಮಂತರ ಮಗಳು. ಅದ್ಧೂರಿಯಾಗಿ ಮದುವೆ ಆಗಲು ಯಾವುದೇ ಅಡ್ಡಿ ಇಲ್ಲ. ಆದರೆ ಆಕೆಗೆ ಸರಳವಾಗಿ ಮದುವೆ ಆಗಲು ಇಷ್ಟ. ಅಂತೆಯೇ ಮದುವೆ ದಿನ ಸಮೀಪಿಸುವುದರೊಳಗೆ 90 ಮನೆಗಳನ್ನು ನಿರ್ಮಾಣ ಪೂರ್ಣಗೊಳಿಸಿದ್ದಾರೆ. ಬಡ ಫಲಾನುಭವಿಗಳನ್ನು ಮದುವೆಗೆ ಆಹ್ವಾನಿಸಿ ಕಲ್ಯಾಣ ಮಂಟಪದಲ್ಲೇ ಮನೆಯ ಬೀಗಗಳನ್ನು ಅವರಿಗೆ ಕೊಟ್ಟು ಮನೆಗಳನ್ನು ಹಸ್ತಾಂತರಿಸಿದ್ದಾರೆ.

home-bussinesman
ಶ್ರೀಮಂತ ಕುಟುಂಬದ ಶ್ರೇಯಾ ವರಿಸುತ್ತಿರುವುದು ಶ್ರೀಮಂತ ಕುಟುಂಬದ ವರನನ್ನೇ. ಕುಟುಂಬದವರ ಆಸೆಯಂತೆ ಅದ್ಧೂರಿಯಾಗಲು ಇಚ್ಛಿಸದ ಶ್ರೇಯಾ ತಮ್ಮ ಬಂಧು ಯುವ ಬಿಜೆಪಿ ಶಾಸಕ ಪ್ರಶಾಂತ್ ಬ್ಯಾಂಬ್ ಅವರಿಂದ ಸ್ಫೂರ್ತಿ ಪಡೆದು ಮದುವೆಗೆ ಖರ್ಚು ಮಾಡುವ ಹಣದಲ್ಲಿ ಬಡವರಿಗೆ 108 ಮನೆ ನಿರ್ಮಿಸಿ ವಿತರಿಸಲು ನಿರ್ಧರಿಸಿದ್ದಾರೆ.

daughter-1

ಮನೆ ನೀಡಲು ಮೂರು ಮಾನದಂಡಗಳನ್ನು ಇಟ್ಟಿದ್ದರು
ಬಡವರಿಗಬೇಕು
ಸ್ಲಂನಲ್ಲಿ ಇರಬೇಕು
ಅವರಿಗೆ ಯಾವುದೇ ರೀತಿಯ ಕೆಟ್ಟ ಚಟ ಇರಬಾರದು ಕೆಲವು ರೀತಿಯ ಹೊಂದಿಲ್ಲ.

ಮುನೋದ್ ಕುಟುಂಬದ ಮುಖ್ಯ ಗುರಿ 108 ಮನೆಗಳನ್ನು ನಿರ್ಮಿಸಲು ಇತ್ತು . ಆದರೆ ಮದುವೆಗೆ ಮುಂಚೆ ಕೇವಲ 90 ಮನೆಗಳನ್ನು ಪೂರ್ಣಗೊಂಡಿತು, ಆದ್ದರಿಂದ ಅವರು 90 ಮನೆಗಳಿಗೆ ಸೀಮಿತ ಮಾಡಿದರು. ಪ್ರತಿ ಮನೆಯ ವೆಚ್ಚ ಸುಮಾರು 1.25 ಲಕ್ಷ ರೂ.

123_1

ಬಡವರಿಗಾಗಿ ಮನೆಗಳನ್ನು ನಿರ್ಮಿಸಿ ಕೊಡಬೇಕೆಂಬ ಶ್ರೇಯಾ ಯೋಚನೆಗೆ ತವರುಮನೆಯವರು, ಅತ್ತೆಯ ಮನೆಯವರು ಸಹಕರಿಸಿದ್ದು ವಿಶೇಷ.