ಹೆಣದ ಮುಂದೆ ಬಾರ್ ಹೆಣ್ಮಕ್ಳು ಹೆಜ್ಜೆ ಹಾಕ್ತಾರೆ…

0
849

ಏನಪ್ಪಾ ವಿಚಿತ್ರ ಅನ್ಕೊಂಡ್ರಾ…! ಹೀಗೊಂದು ಪದ್ಧತಿ ಚೀನಾ ದೇಶದಲ್ಲಿ ಚಾಲ್ತಿಯಲ್ಲಿದೆ. ಹೆಣ್ಮಕ್ಳು ತುಂಡು ಬಟ್ಟೆಯಲ್ಲಿ ಕುಣಿದು ಎಲ್ಲರನ್ನು ರಂಜಿಸಿ ಜನ ಸೇರಿಸುತ್ತಾರೆ. ಇದು ಹಿಂದಿನಿಂದ ನಡೆದು ಬಂದ ಪದ್ಧತಿಯಲ್ಲ ಎಂಬುದನ್ನು ನೀವು ಗಮನಿಸಬೇಕು.

ಜನ ಎಷ್ಟು ಮೆಕ್ಯಾನಿಕಲ್ ಜೀವನ ನೆಡೆಸುತ್ತ ಇದ್ದಾರೆ ಎಂಬುದಕ್ಕೆ ಈ ವಿಚಾರ ಸಾಕ್ಷಿಯಾಗಿದೆ. ನಿಮಗೆ ಗೊತ್ತಿರೋ ಹಾಗೆ ವಿಶ್ವದ ಪ್ರತಿಯೊಂದು ಸಮುದಾಯದಲ್ಲೂ ಅದರದೇ ಆದ ಸಂಪ್ರದಾಯ, ಪದ್ಧತಿಗಳಿವೆ. ವ್ಯಕ್ತಿಯೊಬ್ಬ ಸಾವನ್ನಪ್ಪಿದ್ರೆ ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಕೆಲವರು ಹೆಣವನ್ನು ಸುಡುತ್ತಾರೆ, ಕೆಲವರು ಮಣ್ಣು ಮಾಡುತ್ತಾರೆ, ಇನ್ನು ಕೆಲವರು ಬೇರೆ ಬೇರೆ ರೀತಿಯಲ್ಲಿ ಶವ ಸಂಸ್ಕಾರ ಮಾಡಿ ಕೊನೆಯ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.

ತಮ್ಮ ಹಿತೈಷಿಗಳ, ಸಂಬಂಧಿಕರ ಸಾವಾದಾಗ ಕುಟುಂಬಸ್ಥರು, ಸ್ನೇಹಿತರು ಕಣ್ಣಿರು ಹಾಕೋದು ಸಾಮಾನ್ಯ ಸಂಗತಿ. ಆದ್ರೆ ಚೀನಾದಲ್ಲಿ ಹೆಣದ ಮುಂದೆ ಹೆಣ್ಮಕ್ಳು ಕುಣಿಯುತ್ತಾರೆ, ಅದು ಅರೆ ಬರೆ ಬಟ್ಟೆ ತೊಟ್ಟು ಎಂದರೆ ನೀವು ನಂಬಲೇ ಬೇಕು. ಇತ್ತೀಚಿನ ದಿನಗಳಲ್ಲಿ ಬಾರ್ ಗರ್ಲ್ಸ್ ಕರೆಸಿ ನೃತ್ಯ ಮಾಡಿಸಲಾಗುತ್ತಿದೆ. ಈ ಪದ್ಧತಿ ಜಾರಿಗೆ ಬರಲು ಕಾರಣವೇನು ಎಂಬುದನ್ನು ತಿಳಿದ್ರೆ ನಿಮಗೆ ಆಶ್ಚರ್ಯವಾಗುತ್ತೆ. ದುಃಖದಲ್ಲಿರುವ ಕುಟುಂಬ ನೋವು ಮರೆತು ಸಂತೋಷವಾಗಿ ಜೀವನ ನಡೆಸಲಿ ಎಂದು ಈ ರೀತಿ ಮಾಡಲಾಗುತ್ತಿದೆ. ಅದು ಅಲ್ಲದೆ ಈ ಯಾಂತ್ರಿಕ ಬದುಕಿನಲ್ಲಿ ಶೋಕಾಚರಣೆಯಲ್ಲಿ ಪಾಲ್ಗೊಳ್ಳಲು ಜನರಿಗೆ ಸಮಯವಿಲ್ಲ, ಹೀಗಿರುವಾಗ ಜನರನ್ನು ಸೆಳೆಯಲು ಈ ಬಾರ್ ಗರ್ಲ್ಸ್ ಡಾನ್ಸ್ ಮಾಡಿಸಲಾಗುತ್ತದೆ. ಬಾರ್ ಗರ್ಲ್ಸ್ ನೋಡುವ ನೆಪದಲ್ಲಿ ಜನರು ಮನೆಗೆ ಬರ್ತಾರೆ ಎಂಬ ನಂಬಿಕೆ ಇಲ್ಲಿನವರದ್ದು. ಅಲ್ಲದೆ ಎಂಬ ಉದ್ದೇಶವೂ ಇದರ ಹಿಂದಿದೆ.

ನಮ್ ಕಣ್ಣಲಿ ಇನ್ನು ಏನ್ ಏನ್ ನೋಡ್ಬೇಕೋ ಏನ್ ಕತೇನೋ… ಸತ್ತಾಗ ಒಂದ್ ಹಿಡಿ ಮಣ್ಣು ಹಾಕಲು ಜನಕ್ಕೆ ಪುರಸೊತ್ತಿಲ್ಲ ಅಂದ್ರೆ ಕಾಲ ಅದಿನ್ನೆಷ್ಟು ಕೆಟ್ಟಿದೆ ಯೋಚನೆ ಮಾಡಬೇಕು ನಾವು.

-ಗಿರೀಶ್ ಗೌಡ

video