97ರ ವೃದ್ಧೆಯ ಮೈನವಿರೇಳಿಸುವ ಯೋಗಾಸನ ಬಂಗಿ

0
620

ನಾನಮ್ಮಳ್ ಇವರು ಯೋಗ ಮಾಡುವುದನ್ನು ನೋಡಿದ್ರೆ ಅಶ್ಚರ್ಯ ಮಡುತ್ತಿರಾ. ಇವರ ದೇಹದಲ್ಲಿ ಮೂಳೆ ಇದೆಯೋ ಇಲ್ಲವೋ ಎನ್ನುವ ಪ್ರಶ್ನೆ ನಿಮ್ಮಲ್ಲಿ ಕಾಡುತ್ತದೆ. ಚೀನ ಮತ್ತು ರಾಷ್ಯದವರ ಜಿಮ್ನಾಸ್ಟಿಕ್ ರವರನ್ನ ನಾಚಿಸುವಂತೆ ಇವರು ವ್ಯಾಯಮ ಮಾಡುತ್ತಾರೆ. ಇವರು 97ನೇ ವಯಸ್ಸಿನಲ್ಲಿ ವ್ಯಾಯಮ ಮಾಡುತ್ತಾರೆ.

ಇವರು ತಮಿಳುನಾಡಿನಲ್ಲಿ ಕೊಯಮುತ್ತುರು ಮೂಲದ ವೃದ್ಧೆ ನಾನಮ್ಮಾಳ್ ನಮ್ಮ ದೇಶದ ಹಿರಿಯಾ ಯೋಗ ಶಿಕ್ಷಕಿ ಎಂಬ ಹೆಮ್ಮೆಗೆ ಪಾತ್ರವಾಗಿದ್ದಾರೆ. ವಯಸ್ಸು ಅನ್ನೋದು ಕೇವಲ ಸಂಖ್ಯೆ. ಯೋಗ ಮಾಡುವುದಕ್ಕು ವಯ್ಸಿಗು ಯಾವುದೇ ಸಂಬಂಧವಿಲ್ಲ ಎಂದು ಈ ಅಜ್ಜಿ ನಿರೂಪಿಸಿದ್ದಾರೆ. ತಮ್ಮ ಹತ್ತನೆ ವಯಸ್ಸಿನಿಂದಯೋಗವನ್ನು ಪ್ರಾರಂಭಿಸಿರುವ ನಾನಮ್ಮಾಳ್, ಕಠಿಣ ಯೋಗಾ ಭ್ಯಾಸದಲ್ಲಿ ಸಿದ್ಧಸ್ತರು. ತಮ್ಮ ಅಜ್ಜನಿಂದ ಯೋಗ ಕಲಿತ ನಾನಮ್ಮಳ್ ತಮ್ಮ 14ನೇ ವಯಸ್ಸಿನಲ್ಲಿ ಜಿಲ್ಲಾಮಟ್ಟದ ಯೋಗಸ್ಪರ್ಧೆಯಲ್ಲಿ ಗೆದ್ದಿದ್ದರು.

ವಿಶೇಷ ಅಂದರೆ ಯೋಗ ಎಂದರೆ ರೋಗಮುಕ್ತ ಅನ್ನೋದು ಇವರ ಬದುಕಿನಲ್ಲಿ ಸತ್ಯವಾಗಿದೆ. 97ರ ವಯಸ್ಸಿನಲ್ಲಿಯೂ ಇವರಿಗೆ ಒಂದೇ ಒಂದು ಕಾಯಿಲೆಕೂಡ ಬಂದಿಲ್ಲ. ಸ್ಟ್ರಾಂಗ್ ಹಾಗೂ ಆರೋಗ್ಯವಾಗಿ ಇರುವ ನಾನಮ್ಮಾಳ್ ತಮ್ಮಮನೆಯಲ್ಲಿಯೇ ನಿತ್ಯ ನೂರು ವಿದ್ಯಾರ್ಥಿಗಳಿಗೆ ಯೋಗಾಸನ ಪಾಠ ಮಾಡುತ್ತಾರೆ. ಇವರ ಮಕ್ಕಳು ಮತ್ತು ಮೊಮ್ಮಕ್ಕಳು ಕೂಡ ಯೋಗದಲ್ಲಿ ಪರಿಣಿತರು,

ನಾನಮ್ಮಾಳ್ ಸಾಂಪ್ರದಾಯಿಕ ಸಿರೆಯನ್ನು ಧರಿಸಿ ಯೋಗವನ್ನು ಮಾಡುತ್ತಾರೆ. ಇದು ಅವರ ಶೈಲಿಯಾಗಿದೆ. ನಮ್ಮ ದೇಶದ ಯೋಗ ಚೇತನವಾಗಿರುವ ನಾನಮ್ಮಾಳ್ ರಾಷ್ಟ್ರೀಯ ಹಾಗೂ ಅಂರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

20.000 ವಿದ್ಯಾರ್ಥಿಗಳಿಗೆ ಯೋಗಸನವನ್ನ ಕಲಿಸಿಕೊಟ್ಟಿರುವ ನಾನಮ್ಮಾಳ್ ಅವರು ಶ್ವಾಸ ಸಂಸ್ಥೆ ನೀಡಿರುವ 2016ರ ಪ್ರತಿಷ್ಟಿತ ಯೋಗಸಂಸ್ಥೆಗೆ ಆಯ್ಕೆ ಅಗಿದ್ದಾರೆ.