ಕಾರು ತಯಾರಕ ಟೊಯೊಟೋ ಕಂಪನಿಯಲ್ಲಿ ಮಾತ್ರ ಕನ್ನಡಿಗರಿಗೆ ನ್ಯಾಯ ಸಿಗುತ್ತಿದೆ: ಶೇಕಡ 98% ನೌಕರರು ಕನ್ನಡಿಗರೇ, ಬೇರೆ ಕಂಪನಿಗಳಲ್ಲಿ ಹೀಗೆ ಯಾಕಿಲ್ಲ??

0
1142

ಕಾರ್ಖಾನೆ ಹಾಗೂ ಐಟಿ ಕಂಪನಿಗಳಲ್ಲಿ, ಎ ಗುಂಪಿನ ಹುದ್ದೆಗಳಲ್ಲಿ ಶೇ. 65, ಬಿ ದರ್ಜೆ ಹುದ್ದೆಗಳಲ್ಲಿ ಶೇ.80, ಸಿ, ಡಿ ದರ್ಜೆ ಹುದ್ದೆಗಳಲ್ಲಿ ಶೇ.100 ಮಾನ್ಯತೆ ನೀಡಬೇಕು ಎಂದು ಕಳೆದ ವರ್ಷ ರಾಜ್ಯದ ತುಂಬೆಲ್ಲ ಹೋರಾಟಕ್ಕೆ ಇಳಿದಿದ್ದರು ಈ ವಿಷಯವಾಗಿ ಹಲವಾರು ಚರ್ಚೆಗಳು ನಡೆದವು, ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಮಾಡಲಾಗಿರುವ ವರದಿಯ ಶಿಫಾರಸ್ಸಿನಂತೆ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಿಸಲು ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರ ಭರವಸೆ ನೀಡಿ. ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಿಸಲು ಮಾಡಿರುವ ಶಿಫಾರಸುಗಳನ್ನು ಕಾನೂನನ್ನಾಗಿ ಮಾಡಬೇಕು ಎಂಬ ಒತ್ತಾಯ ಬಂದಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಮೊದಲಿಗೆ ಈ ವಿಚಾರವನ್ನು ಸಂಪುಟದಲ್ಲಿ ಚರ್ಚೆ ಮಾಡಿ ಕಾನೂನು ರಚನೆ ಸಂಬಂಧ ಸೂಕ್ತ ನಿರ್ಧಾರಕೈಗೊಳ್ಳಲಾಗುವುದು ಎಂದು ಸ್ವಲ್ಪ ಸಮಯ ಕೋರಿದರು.

ನವಂಬರ್ ತಿಂಗಳಲ್ಲಿ ಈ ವಿಷಯವಾಗಿ ಸರ್ಕಾರ ವಿಳಂಬ ಮಾಡುತ್ತಿದೆ, ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ ಸಿದ್ದರಾಮಯ್ಯ ಸರೋಜಿನಿಯವರ ವರದಿಯಂತೆ ನವೆಂಬರ್ ಅಂತ್ಯದೊಳಗೆ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಕ್ರಮ ಕೈಗೊಳಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿಮಾಡಿಕೊಂಡಿದ್ದರು. ಸರೋಜಿನಿ ಮಹಷಿ ಪರಿಷ್ಕ್ರತ ವರದಿಯನ್ವಯ 2017 ರ ಬಜೆಟ್ ನಲ್ಲಿ ಕಾಯಿದೆ ರೂಪಿಸುವ ಘೋಷಣೆ ಮಾಡಲಾಗಿದೆ. ಈ ಎಲ್ಲ ವಿಷಯವಾಗಿ ಕಾರ್ಮಿಕ ಇಲಾಖೆ ಕಾಯಿದೆ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಆದಷ್ಟು ವೇಗವಾಗಿ ಜಾರಿಗೊಳ್ಳಬೇಕು ಎಂದು ತಿಳಿಸಿದ ಮನವಿಯಂತೆ ನೀಡಿದ ಕಾಲಮಿತಿಯೊಳಗೆ ಜಾರಿಗೆ ಬರುವ ಸಾದ್ಯತೆ ಇದೆ ಇದರಿಂದ ನಿರುದ್ಯೋಗಿ ಕನ್ನಡಿಗರಿಗೆ ಉದ್ಯೋಗ ಸಿಗುವುದು ಬಹುತೇಕವಾಗಿ ಖಚಿತವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.

ಕನ್ನಡಿಗರಿಗೆ ಉದ್ಯೋಗ ಕುರಿತು ಅಧಿವೇಶದಲ್ಲಿ ಚರ್ಚೆ:

ಇಂದಿಗ ಇದೆ ವಿಷಯವಾಗಿ ಅಧಿವೇಶದಲ್ಲಿ ಚರ್ಚೆಗಳು ನಡೆದು ಸಂದರ್ಭದಲ್ಲಿ ಬಿಜೆಪಿ ಸದಸ್ಯ ಎಂ. ಚಂದ್ರಪ್ಪ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೃಹತ್‌ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರು ಟೊಯೋಟಾ ಕಿರ್ಲೋಸ್ಕರ್‌ ಕಾರ್ಖಾನೆಯಲ್ಲಿ ಶೇ.98ರಷ್ಟುಕನ್ನಡಿಗರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಯಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಕಾರ್ಖಾನೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಲಾಗಿದೆ. ಕಾರ್ಖಾನೆಯಲ್ಲಿ ಒಟ್ಟು 6,717 ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಚಿವರು ನೀಡಿದ ಮಾಹಿತಿಯಲ್ಲಿ ಶೇ.98ರಷ್ಟುಉದ್ಯೋಗ ನೀಡಲಾಗಿದೆ. ಎ ಗ್ರೂಪ್‌ನಲ್ಲಿ 38, ಬಿ ಗ್ರೂಪ್‌ನಲ್ಲಿ 766, ಸಿ ಗ್ರೂಪ್‌ ನಲ್ಲಿ 1088, ಡಿ ಗ್ರೂಪ್‌ನಲ್ಲಿ 4825 ಮಂದಿ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಕಾರ್ಖಾನೆಯು ಎರಡು ಹಂತದಲ್ಲಿ ಉತ್ಪಾದನೆಯ ಕಾರ್ಯವನ್ನು ಮಾಡಿದೆ. 1999ರ ಡಿ.24ರಂದು ಮೊದಲನೇ ಹಂತ ಮತ್ತು 2010ರ ಡಿ.21ರಂದು ಎರಡನೇ ಹಂತದಲ್ಲಿ ಆರಂಭಿಸಿದೆ. ಕಾರ್ಖಾನೆಯು ಮೊದಲನೇ ಹಂತದಲ್ಲಿ 3,733 ಕೋಟಿ ರು. ತೆರಿಗೆ ಪಾವತಿಸಬೇಕಾಗಿದ್ದು, ಇನ್ನು ಆರು ತಿಂಗಳ ಕಾಲಾವಕಾಶ ಇದೆ. ಅಲ್ಲದೇ, ಎರಡನೇ ಹಂತದಲ್ಲಿ 909 ಕೋಟಿ ರು. ತೆರಿಗೆ ಪಾವತಿಬೇಕಾಗಿದ್ದು, ಇನ್ನೂ 10 ವರ್ಷ ಕಾಲಾವಕಾಶ ಇದೆ. ಉಳಿದ ಕಂಪನಿಗಳು ಉದ್ಯೋಗ ನೀಡುವ ಭರವಸೆಯಲ್ಲಿವೆ ಎಂದು ವಿಧಾನಸಭಾ ಕಲಾಪದಲ್ಲಿ ತಿಳಿದು ಬಂದಿದೆ.

Also read: ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; SSLC ಪಾಸಾದವರಿಗೂ ಸಿಗಲಿದೆ ಉದ್ಯೋಗ..