ಬೈಕ್ ನಲ್ಲಿ ತಾಯಿಯ ಮೃತ ದೇಹ ಸಾಗಿಸಿದರು…

0
1040

ಮೊನ್ನೆ ಮೊನ್ನೆಯಷ್ಟೆ ಅಸಹಾಯಕ ಪತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು 10 ಕಿಲೋ ಮೀಟರ್ ವರೆಗೂ ಹೊತ್ತುಕೊಂಡೇ ಸಾಗಿದ ಹೃದಯ ವಿದ್ರಾವಕ ಘಟನೆ ಓಡಿಶಾದಲ್ಲಿ ನಡೆದಿತ್ತು. ಇದೀಗ ಮಧ್ಯಪ್ರದೇಶ ಕೂಡ ಇಂಥದ್ದೇ ಘಟನೆಗೆ ಮೂಕ ಸಾಕ್ಷಿಯಾಗಿದೆ.

ಅಂಬ್ಯುಲೆನ್ಸ್ ಸಿಗದೇ ಮಕ್ಕಳಿಬ್ಬರು ತಾಯಿಯ ಮೃತದೇಹವನ್ನು ಬೈಕ್ ನಲ್ಲಿಟ್ಟುಕೊಂಡು 12 ಕಿಲೋ ಮೀಟರ್ ಸಾಗಿದ್ದಾರೆ. ಮಧ್ಯಪ್ರದೇಶದ ಉಲತ್ ನಲ್ಲಿ ಈ ಘಟನೆ ನಡೆದಿದೆ. 70 ವರ್ಷದ ಮಹಿಳೆ ಪರ್ವತಾ ಬಾಯಿ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿತ್ತು. ಕೂಡಲೇ ಅಂಬ್ಯುಲೆನ್ಸ್ ಗಾಗಿ ಆಕೆಯ ಇಬ್ಬರು ಮಕ್ಕಳು ಕರೆ ಮಾಡಿದ್ದಾರೆ, ಆದ್ರೆ ಅಂಬ್ಯುಲೆನ್ಸ್ ಬಂದಿಲ್ಲ. ಕೂಡಲೇ ಆಕೆಯನ್ನು ಮೋಟರ್ ಸೈಕಲ್ ನಲ್ಲಿ ಕೂರಿಸಿಕೊಂಡು ಹತ್ತಿರದ ಆಸ್ಪತ್ರೆಗೆ ಹೊರಟಿದ್ದಾರೆ. ಮಾರ್ಗ ಮಧ್ಯೆಯೇ ಪರ್ವತಾ ಬಾಯಿ ಮೃತಪಟ್ಟಿದ್ದಾಳೆ.

ಬೇರೆ ದಾರಿ ಕಾಣದೆ ಆಕೆಯ ಇಬ್ಬರು ಮಕ್ಕಳು ತಾಯಿಯ ಮೃತದೇಹವನ್ನು ಬೈಕ್ ನಲ್ಲೇ ಹಾಕಿಕೊಂಡು ಮನೆಗೆ ತಂದಿದ್ದಾರೆ.

Source : kannadadunia