ಯುವಕನೊಬ್ಬ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ಟ್ರ್ಯಾಕ್ ಮಾಡಿ, ನಂಬಿಸಿ ಕರೆದೊಯ್ದು ನಾಲ್ವರಿಂದ ಗ್ಯಾಂಗ್‍ರೇಪ್.!

0
233

ದೇಶದಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿವೆ, ಈ ಬಗ್ಗೆ ಎಲ್ಲಡೆ ಹೋರಾಟವೂ ಕೂಡ ನಡೆಯುತ್ತಿವೆ, ಆದರೆ ಬರಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎನ್ನುವುದು ತಪ್ಪುಕಲ್ಪನೆ, ಏಕೆಂದರೆ ಇತ್ತೀಚಿಗೆ ಪುರುಷರ ಮೇಲೆ ಪುರುಷರಿಂದಲೇ ಅತ್ಯಾಚಾರ ನಡೆಯುತ್ತಿವೆ. ಈ ವಿಷಯ ಅಂತಕ ಸೃಷ್ಟಿಸಿದರು ಸತ್ಯಕ್ಕ್ಕೆ ಹತ್ತಿರವಾಗಿದೆ. ಇದಕ್ಕೆ ಸಾಕ್ಷಿಯಾಗುವಂತ ಘಟನೆ ಒಂದು ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ಆಧರಿಸಿ ಟ್ರ್ಯಾಕ್ ಮಾಡಿ ಅಪಹರಿಸಿ ಯುವಕನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ವ್ಯಕ್ತಿಯ ಮೇಲೆ ಅತ್ಯಾಚಾರಕ್ಕೆ ಕಾರಣವಾಗಿದೆ. ಎನ್ನುವುದು ಇನ್ನೂ ಅಚ್ಚರಿಯ ಸಂಗತಿಯಾಗಿದ್ದು. 22 ವರ್ಷದ ಯುವಕ ಮುಂಬೈನಲ್ಲಿ ವಾಸವಿದ್ದು, ನಗರದ ಹೊರವಲಯದಲ್ಲಿರುವ ರೆಸ್ಟೋರೆಂಟಿಗೆ ಭೇಟಿ ನೀಡಿ ಅಲ್ಲಿ ಸೆಲ್ಫಿ ತೆಗೆದುಕೊಂಡಿದ್ದ ಚಿತ್ರಗಳನ್ನು ಇನ್‍ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದನ್ನು ಆಧರಿಸಿ ನಾಲ್ವರು ಆರೋಪಿಗಳು ಸಂತ್ರಸ್ತ ಯುವಕ ತಂಗಿರುವ ಜಾಗಕ್ಕೆ ತೆರಳಿದ್ದಾರೆ ಎಂದು ವಿವರಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್‍ಸ್ಟಾಗ್ರಾಂ ನಲ್ಲಿ ಹಾಕಿದ ಫೋಟೊ ಆಧರಿಸಿ ವ್ಯಕ್ತಿ ಇರುವ ಲೊಕೇಶನ್ ಹುಡುಕಿದೆವು. ಆಗ ನಾಲ್ವರೂ ರೆಸ್ಟೊರೆಂಟಿಗೆ ತೆರಳಿದೆವು, ನಾವು ನಿಮ್ಮನ್ನು ಇನ್‍ಸ್ಟಾಗ್ರಾಂ ನಲ್ಲಿ ಫಾಲೋ ಮಾಡುತ್ತಿದ್ದೇವೆ. ನಿಮ್ಮ ಅಭಿಮಾನಿಗಳಾಗಿದ್ದೇವೆ ಎಂದು ಪರಿಚಯಿಸಿಕೊಂಡೆವು ಎಂದು ಹೇಳಿದ್ದಾರೆ.

ನಂತರ ಬೈಕ್ ರೈಡಿಗೆ ಹೊರಟಿದ್ದೇವೆ ನಮ್ಮ ಜೊತೆ ಬಂದು ಕಂಪನಿ ಕೊಡಿ ಎಂದು ಆರೋಪಿಯನ್ನು ಮನವೊಲಿಸಿದೆವು. ಇದಕ್ಕೆ ಸಂತ್ರಸ್ತ ಒಪ್ಪಿದ, ಸುಮಾರು 20 ನಿಮಿಷಗಳ ಬೈಕ್ ರೈಡ್ ನಂತರ ಸಂತ್ರಸ್ತನನ್ನು ಮುಂಬೈ ವಿಮಾನ ನಿಲ್ದಾಣದ ಬಳಿಯ ಹೋಟೆಲಿಗೆ ಕರೆದೊಯ್ದೆವು. ನಂತರ ಕಾರಿನಲ್ಲಿ ಕರೆದೊಯ್ದು ಮೂರು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿ ಯುವಕನನ್ನು ರಸ್ತೆ ಬಳಿ ಬಿಟ್ಟು ಹೊರಟೆವು ಎಂದು ವಿವರಿಸಿದ್ದಾರೆ. ನಂತರ ಸಂತ್ರಸ್ತ ಪೋಷಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಪೊಲೀಸರಿಗೂ ಕರೆ ಮಾಡಿ ಘಟನೆ ಕುರಿತು ವಿವರಿಸಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ತಿಳಿದ ಮಾಹಿತಿಯಂತೆ ಪಾಪಿಗಳು ಸಂತ್ರಸ್ತನ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿಕೊಂಡಿದ್ದಾರೆ. ಕ್ರೆಡಿಟ್ ಕಾರ್ಡ್ ಬಳಸಿವೆ ಪೆಟ್ರೋಲ್ ಹಾಕಿಕೊಂಡಿದ್ದಾರೆ, ನಂತರ ಅವನನ್ನು ರಸ್ತೆಬದಿಗೆ ಎಸೆಯುವ ಮೊದಲು ಅವರು ಆತನಿಂದ 2 ಸಾವಿರ ರೂ.ಗಳ ಹಣವನ್ನು ಸಹ ಕಸಿದುಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ದ್ವಿಚಕ್ರ ವಾಹನ ಮತ್ತು ಕಾರಿನ ನೋಂದಣಿ ಸಂಖ್ಯೆಗಳಿಂದ ಸಿ.ಸಿ.ಟಿ.ವಿ ದೃಶ್ಯಾವಳಿಗಳಿಂದ ಪತ್ತೆ ಹಚ್ಚಿದ್ದು, ಮೆಹುಲ್ ಪರ್ಮಾರ್ (21), ಆಸಿಫ್ ಅಲಿ ಅನ್ಸಾರಿ (23) ಮತ್ತು ಪಿಯೂಷ್ ಚೌಹಾನ್ (22) ಅವರನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನೂ ಬಂಧಿಸಲಾಗಿದೆ.

ಅದರಂತೆ ಮೂವರು ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇನ್ನೊಬ್ಬ ಅಪ್ರಾಪ್ತನಾಗಿದ್ದು ಬಾಲಾಪರಾಧಿಗಳ ಕಾರಾಗೃಹದಲ್ಲಿಡಲಾಗಿದೆ. ಘಟನೆ ಕುರಿತು ವಿ.ಬಿ.ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮಾಧುರಿ ಪೊಕ್ಲೆ ಮಾಹಿತಿ ನೀಡಿ, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಎಲ್ಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ಎಂದು ತಿಳಿಸಿದ್ದಾರೆ.

Also read: ಅತ್ಯಾಚಾರ ಆರೋಪಿ ಎನ್‍ಕೌಂಟರ್ ವಿಷಯ ತಿಳಿದು ಭಾರತದೆಲ್ಲಡೆ ಸಂಭ್ರಮಾಚರಣೆ; ಬಲಿಯಾದ ಆರೋಪಿಗಳ ತಂದೆ, ತಾಯಿ ಪತ್ನಿ ಹೇಳಿದ್ದೇನೆ??