ಸಿಗರೇಟ್ ಸೇದಲು ರಸ್ತೆ ಮದ್ಯ ವಾಹನ ನಿಲ್ಲಿಸಿದ ವ್ಯಕ್ತಿಯ ಮೇಲೆ ಐದು ಜನರಿಂದ ಗ್ಯಾಂಗ್-ರೇಪ್.!

0
317

ದೇಶದಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಪಾಪಿ ಕಾಮುಕರು ವಯಸ್ಸಾದ ವೃದ್ಧ ಮಹಿಳೆಯರಿಂದ ಹಿಡಿದು, ಚಿಕ್ಕ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ, ಇದರಿಂದ ಮಾನವ ಎನ್ನುವ ಹೆಸರಿಗೆ ಅಪಮಾನ ವಾಗುತ್ತಿದೆ. ಅಷ್ಟೇ ಅಲ್ಲದೆ ಮಹಿಳೆಯರ ಮೇಲೆ ಅಸಹ್ಯವಾಗಿ ನಡೆದುಕೊಂಡು ಹತ್ಯ ಕೂಡ ಮಾಡುತ್ತಿದ್ದಾರೆ. ಇದು ಇಷ್ಟಕ್ಕೆ ನಿಲ್ಲದೆ ಪುರುಷರಿಂದ ಪುರುಷರ ಮೇಲೆ ಅತ್ಯಾಚಾರ ನಡೆಯುತ್ತಿವೆ, ಇದಕ್ಕೆ ಸಾಕ್ಷಿಯಾಗಿ ಮುಂಬೈ-ಯಲ್ಲಿ ರಸ್ತೆ ಮದ್ಯ ನಿಂತ ವ್ಯಕ್ತಿಯನ್ನು ಐದು ಜನರು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ಇಡಿ ದೇಶದಲ್ಲಿ ಭಯ ಹುಟ್ಟಿಸಿದೆ.

Also read: ದಸರಾ, ದೀಪಾವಳಿ ಆಫರ್ ಎಂದು Amazon, Flipkart ಹೆಸರಲ್ಲಿ ಆನ್ಲೈನ್ ಕಳ್ಳರಿಂದ ನಡೆಯುತ್ತಿದೆ 7 ರೀತಿಯಲ್ಲಿ ವಂಚನೆ ಎಚ್ಚರ.!

ಪುರುಷರ ಮೇಲೆ ಅತ್ಯಾಚಾರ?

ಹೌದು ಒಂಟಿಯಾಗಿ ಮಹಿಳೆಯರು ಯಾಕೆ ಪುರುಷರೇ ಹೋಗಲು ಹೆದರುವ ಕಾಲ ಬಂದಿದೆ. ಏಕೆಂದರೆ ಮುಂಬೈಯಲ್ಲಿ ನಡೆದಿರುವ ಘಟನೆ ಎಲ್ಲರಲ್ಲಿ ಭಯ ಹುಟ್ಟಿಸಿದೆ. 36 ವರ್ಷದ ವ್ಯಕ್ತಿಯೊಬ್ಬ ರಾತ್ರಿವೇಳೆ ಮನೆಗೆ ತೆರಳುತ್ತಿದ್ದಾಗ, ನಿರ್ಜನ ಸ್ಥಳದಲ್ಲಿ ಧೂಮಪಾನ ಮಾಡಲು ಬೈಕ್ ನಿಲ್ಲಿಸಿದ್ದಾನೆ. ಆಗ ಐದು ಜನರು ಬಂದು ವ್ಯಕ್ತಿಯನ್ನು ಅಪಹರಿಸಿ ಮರಗಳ ಹಿಂದೆ ಕರೆದೊಯ್ದು ಥಳಿಸಿದ್ದಾರೆ, ನಂತರ ಅನುಚಿತ್ತವಾಗಿ ನಡೆದುಕೊಂಡು ಅತ್ಯಚಾರ ವೆಸಗಿದ್ದಾರೆ. ಇದರಿಂದ ವ್ಯಕ್ತಿಗೆ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು.

ಈ ಘಟನೆಯ ಕುರಿತು ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿ ಪೋಲಿಸರಿಗೆ ಘಟನೆಯ ಬಗ್ಗೆ ಹೇಳಿದ್ದು, ಆರೋಪಿಗಳೆಲ್ಲರು 25 ರಿಂದ 30 ವರ್ಷದವರಾಗಿದ್ದಾರು ಅವರು ನನಗೆ ಸಾಕಷ್ಟು ಹಿಂಸೆಯನ್ನು ಕೊಟ್ಟಿದ್ದಾರೆ, ಅವರೆಲ್ಲರೂ ಮದ್ಯಪಾನ ಮಾಡಿದರು ನಿಲ್ಲಲು ಸಾಧ್ಯವಾಗದಷ್ಟು ನಸೆಯಲ್ಲಿದ್ದರು ಎಂದು ಸಂತ್ರಸ್ತ ಹೇಳಿದ್ದಾನೆ. ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಮಾಹಿತಿ ನೀಡಿದ ಪೊಲೀಸರು ನಾವು ಆರೋಪಿಗಳ ವಿವರಣೆಯನ್ನು ತೆಗೆದುಕೊಂಡಿದ್ದೇವೆ ಮತ್ತು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ.

Also read: ನಿಮ್ಮ ಕೈಯಲ್ಲಿ ಸ್ಮಾರ್ಟ್-ಫೋನ್ ಇದ್ದರೆ ಸಾಕು ನೀವೇ ಟ್ರಾಫಿಕ್ ಪೊಲೀಸ್ ಆಗಬಹುದು, ಹೇಗೆ ಅಂತೀರಾ ಮುಂದೆ ಓದಿ!!

ಘಟನೆ ನಡೆದ ಪ್ರದೇಶದ ಹತ್ತಿರವೇ ಇರುವ CC ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಕ್ಷಿಸುತ್ತಿದ್ದೇವೆ, ಆರೋಪಿಗಳು ಮದ್ಯಪಾನ ಮಾಡಿದವರಂತೆ ಕಾಣಿಸಿಕೊಂಡಿದ್ದಾರೆ ಮತ್ತು ಮಾದಕದ್ರವ್ಯದ ಪ್ರಭಾವಕ್ಕೆ ಒಳಗಾದವರು ಅವರೆಲ್ಲರೂ 25-30 ವಯಸ್ಸಿನವರಂತೆ ಕಾಣುತ್ತಿದ್ದಾರೆ ”ಎಂದು ಹಿರಿಯ ಪೊಲೀಸ್ ಅಧಿಕಾರಿಯನ್ನು ಮಾಹಿತಿ ನೀಡಿದ್ದಾರೆ. ವ್ಯಕ್ತಿಯ ಸಂಬಂಧಿಕರು ಕೇಸ್ ದಾಖಲಿಸಿದ್ದು, ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು ಅದಕ್ಕಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನೇ ಆಗಲಿ ಇಷ್ಟೊಂದು ಕ್ರೂರವಾದ ಕಾಲ ಬರುತ್ತೆ ಎಂದು ಯಾರು ನಿರೀಕ್ಷೆ ಮಾಡಿದಿಲ್ಲ ಅನಿಸುತ್ತೆ, ಬರಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಒಂದು ರೀತಿಯಾದರೆ ಪುರುಷರ ಮೇಲಿವೂ ಇಂತಹ ಕೃತ್ಯ ನಡೆದರೆ ಮುಂದೊಂದು ದಿನ ರಸ್ತೆ ಮೇಲೆ ನಡೆಕೊಂಡು ಹೋಗುವುದು ಕಷ್ಟವಾಗುತ್ತೆ, ಅದಕ್ಕಾಗಿ ಸರ್ಕಾರ ಅತ್ಯಾಚಾರದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಇದರಿಂದ ಹೆದರಿಕೆ ಹುಟ್ಟಿ ಅಲ್ಪ ಮಟ್ಟಿಗಾದರೂ ವಿಕೃತ ಘಟನೆಗಳು ನಡೆಯುವುದು ಕಡಿಮೆಯಾಗುತ್ತೆ. ಎನ್ನುವುದು ಜನರ ಅಭಿಪ್ರಾಯ.