ಬಿಬಿಎಂಪಿ ಮಾಡಿದ ತಪ್ಪಿಗೆ ಅಂಗಾಗ ಕಳೆದುಕೊಂಡ ಯುವತಿ; ಯುವತಿ ಜೀವನಕ್ಕೆ ಸಹಾಯ ಮಾಡದೆ ಜಾರಿಕೊಳ್ಳುತ್ತಿರುವ BBMP ಅಧಿಕಾರಿಗಳು..

0
205

ಬೆಂಗಳೂರಿನಲ್ಲಿ ಕಂಡು ಬರುತ್ತಿರುವ ರಸ್ತೆಗುಂಡಿ ಮತ್ತು ಮ್ಯಾನ್‌ಹೋಲ್‌-ಗಳು ದಿನನಿತ್ಯವೂ ಜನರ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಇದಕ್ಕೆ BBMP ಯಾವ ರೀತಿಯ ಕೆಲಸ ಮಾಡುತ್ತಿದೆ ಎನ್ನುವುದು ನೋಡಿದವರಿಗೆ ತಿಳಿಯುತ್ತೆ, ಅದು ರಸ್ತೆಯಲ್ಲಿ ಗುಂಡಿ ಮುಚುವಾಗ ಎಷ್ಟೊಂದು ಕಳಪೆಯಿಂದ ಮಾಡುತ್ತಾರೆ ಎಂದರೆ ಗುಂಡಿಗೆ ಪೆಟ್ ಹಚ್ಚಿದ ರೀತಿಯಲ್ಲಿ ಗುಂಡಿ ಮುಚ್ಚುತ್ತಿದ್ದಾರೆ. ಮತ್ತು ಮ್ಯಾನ್‌ಹೋಲ್‌-ಗಳು ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿವೆ ಇಂತಹ ಮ್ಯಾನ್‌ಹೋಲ್‌-ನಿಂದ ಯುವತಿಯೊಬ್ಬಳ ಜೀವನವೇ ನರಕವಾದ ಘಟನೆಯೊಂದು ನಡೆದಿದ್ದು, ಬೆಳಕಿಗೆ ಬಂದಿದೆ.

Also read: ಬೆಂಗಳೂರಿನ ಪ್ರತಿಷ್ಠಿತ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳ ದಾಳಿ; ಸಾವಿರಾರು ಕೆಜಿ ಪ್ಲಾಸ್ಟಿಕ್ ವಶ, ಲಕ್ಷಾಂತರ ದಂಡ ವಸೂಲಿ..

ಹೌದು ಸ್ವಾಭಿಮಾನದ ಜೀವನ ನಡೆಸಿಕೊಂಡು ಮನೆಯಲ್ಲಿಯೇ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಯುವತಿ ಈಗ ಕಾಲು ಕಳೆದುಕೊಂಡು ಮದುವೆ ಕೂಡ ಮುರಿದು ಬಿದಿದ್ದೆ. ಈಗ ಸರ್ಕಾರದ ನೆರವಿಗಾಗಿ ಕೈ ಚಾಚಿದರು ಕರುಣೆ ಇಲ್ಲದ BBMP ಕ್ಯಾರೆ ಮಾಡುತ್ತಿಲ್ಲ ಎನ್ನುವುದು ಯುವತಿಯ ಕುಟುಂಬದ ಅಳಲಾಗಿದೆ. ಇದೆ ವೇಳೆ ಘಟನೆ ಬಗ್ಗೆ ಮಾಹಿತಿ ನೀಡಿದ 30 ವರ್ಷದ ಶಾಹೀನ್ ತಾಜ್‌. ನಾನು ಮನೆಯಲ್ಲಿಯೇ ಬಟ್ಟೆ ವ್ಯಾಪಾರ ಮಾಡಿಕೊಂಡು ತಂದೆ-ತಾಯಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದೆ. ಹಾಗೆಯೇ ಮದುವೆ ಕೂಡ ಫಿಕ್ಸ್ ಆಗಿತ್ತು ಅದಕ್ಕಾಗಿ ತಯಾರಿ ಕೂಡ ನಡೆದಿತ್ತು. ಈ ನಡುವೆ ಮನೆಯ ಮುಂದೆ ಇರುವ ಮರಕ್ಕೆ ಬಟ್ಟೆಯನ್ನು ಹಾಕಲು ಹೋಗಿದ್ದೆ, ಅಲ್ಲಿ ರಸ್ತೆಯೇ ಮೇಲೆಯೇ ಕೊಳಚೆ ನೀರು ನಿಂತು ಎಲ್ಲಿ ಗುಂಡಿ ಇದೆ ಎನ್ನುವುದು ತಿಳಿಯಲಿಲ್ಲ ಹಾಗೆಯೇ ನಡೆದು ಹೋಗುವಾಗ ನನ್ನ ಕಾಲು ಮ್ಯಾನ್‌ಹೋಲ್‌ಗೆ ಸಿಕ್ಕಿಕೊಂಡಿತು ಆಗ ಸಹಾಯಕ್ಕಾಗಿ ಕೊಗಿಕೊಂಡೆ ಅಕ್ಕಪಕ್ಕದವರು ಬಂದು ನನ್ನನು ರಕ್ಷಿಸಿದರು.

Also read: ಇನ್ಮುಂದೆ ರಸ್ತೆ ಗುಂಡಿ ಅಪಘಾತ ಸಂತ್ರಸ್ತರಿಗೆ ಬಿಬಿಎಂಪಿ ಪರಿಹಾರ ಕೊಡಬೇಕು; ಹೈ ಕೋರ್ಟ್ ಮಹತ್ವದ ತೀರ್ಪು.!!

ಇದರಿಂದ ನನ್ನ ಪಾದ ಮತ್ತು ಮೊಣಕಾಲು ಮುರಿದು ಹೋಗಿತ್ತು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿಯಿತು. ಒಂದೇ ವಾರದಲ್ಲಿ ಕಾಲಿನ ಗಾಯ ದೊಡ್ಡದಾಗಿ ವಾಸನೆ ಬರಲು ಶುರುವಾಯಿತು. ಆಗ ನನ್ನನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಪರೀಕ್ಷಿಸಿ ನೋಡಿದ ಡಾಕ್ಟರ್ಸ್ ಗಾಯವು ಗ್ಯಾಂಗ್ರೇನಸ್ ಆಗಿರುವುದು ತಿಳಿಸಿ ಅರ್ಧ ಘಂಟೆಯಲ್ಲಿ ಕಾಲು ಕಟ್ ಮಾಡಲಿದ್ದಾರೆ ಜೀವಕ್ಕೆ ಅಪಾಯ ವೆಂದರು ಅದಕ್ಕಾಗಿ ಬಡ ಕುಟುಂಬದವರಿಗೆ ಏನು ದೊಚದೆ ಮಗಳ ಜೀವವಾದರು ಉಳಿಯಲಿ ಎಂದು ಕಾಲು ಕತ್ತರಿಸಲು ಒಪ್ಪಿಗೆ ನೀಡಿದರು. ಇದೆಲ್ಲ ಆಗಿ ಮೂರು ತಿಂಗಳು ಆದ ನಂತರ ಮದುವೆ ಕೂಡ ಕ್ಯಾನ್ಸಲ್ ಆಯಿತು, ಕಾಲು ಇಲ್ಲದವಳಿಗೆ ಹೇಗೆ ಮದುವೆ ಆಗುವುದು ಎಂದು ಹುಡುಗನ ಮನೆಯಲ್ಲಿ ಹೇಳಿದರು.

Also read: ಬಿಬಿಎಂಪಿ 250 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; ಆಗಸ್ಟ್ 1 ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು..

ಈಗ ಅವರಿವರ ನೆರವಿನಿಂದ ಜೀವನ ಸಾಗಿಸಬೇಕಾಗಿದೆ ಮಾರುತಿ ಸಾ ಮಿಲ್ ರಸ್ತೆಯಲ್ಲಿ ಆಟೋದವರು ಕೂಡ ಬರುವುದಕ್ಕೆ ಹೆದರುತ್ತಾರೆ. ಅಷ್ಟೊಂದು ಕೆಟ್ಟ ರಸ್ತೆ ಸ್ಥಿತಿ ಅಲ್ಲಿದೆ. ಈಗಾಗಲೇ ಚಿಕಿತ್ಸೆಗೆ 2 ಲಕ್ಷ ಸಾಲ ಮಾಡಲಾಗಿದೆ. ಈಗ ಪ್ರತಿ ತಿಂಗಳೂ 30 ಸಾವಿರ ಹಣ ಬೇಕಾಗುತ್ತೆ. ಇದಕ್ಕಾಗಿ ಸರ್ಕಾರವಾಗಲಿ BBMP ಆಗಿಲಿ ಯಾವುದೇ ಸಹಾಯ ಮಾಡುತ್ತಿಲ್ಲ, ಆಸ್ಪತ್ರೆ ಕರ್ಚು ಮಾಡಿದ ಬಿಲ್ ಸರ್ಕಾರಿ ಆಸ್ಪತ್ರೆಯದೆ ಆಗಿರಬೇಕು ಎನ್ನುತ್ತಾರೆ. ನನ್ನ ಜೀವನಕ್ಕೆ ಒಂದು ಸರ್ಕಾರೀ ನೌಕರಿ ನೀಡಬೇಕು ಮನೆಯಲ್ಲಿ ಬಡತನ ವಿರುವುದರಿಂದ ನನ್ನ ಜೀವನಕ್ಕೆ ಕಷ್ಟವಾಗುತ್ತಿದೆ. ಇದೆ ವಿಷಯವಾಗಿ ಒಂದು ಸಲ ಪ್ರತಿಭಟನೆಯನ್ನು ಕೂಡ ಮಾಡಲಾಗಿದೆ. BBMP ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಒಬ್ಬರ ಮೇಲೆ ಒಬ್ಬರು ವರಸುತ್ತಿದ್ದಾರೆ. ಯಾರು ಸಹಾಯಕ್ಕೆ ಮುಂದೆ ಬರುತ್ತಿಲ್ಲ, BBMP ಮಾಡಿದ ತಪ್ಪಿಗೆ ಜೀವನವೇ ಹಾಳಾಗಿದೆ. ಈಗ ನನಗೆ ಯಾವುದೇ ಹಣಕಾಸಿನ ನೆರವು ಸಹಾಯ ಬೇಕಿಲ್ಲ ಒಂದು ಸರ್ಕಾರಿ ಹುದ್ದೆ ನೀಡಲಿ ಅದರಲ್ಲೇ ಜೀವನ ಮಾಡುತ್ತೇನೆ ಎನ್ನುವುದು ಶಾಹೀನ್ ಬೇಡಿಕೆಯಾಗಿದೆ.