ಹೆಗ್ಗಡೆ ತಲೆಮಾರಿನ ಕಿರುಪರಿಚಯ

1
8533

ಇಲ್ಲಿಯವರೆಗೆ 21 ತಲೆಮಾರುಗಳ ಹೆಗ್ಗಡೆ ಕುಟುಂಬವು ಧಾರ್ಮಿಕ ಚಟುವಟಿಕೆಗಳಿಗೆ ತೊಡಗಿಸಿಕೊಂಡಿದೆ. ಇವರುಗಳಲ್ಲಿ ಶ್ರೀ ಮಂಜಯ್ಯ ಹೆಗ್ಗಡೆ ಹಾಗು ಶ್ರೀ ರತ್ನವರ್ಮ ಹೆಗ್ಗಡೆಯವರ ಕಾಲದಲ್ಲಿ ಧರ್ಮಸ್ಥಳವು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಮೂಡಿತು. ಇವರುಗಳ ಕಾಲದಲ್ಲಿ ರಸ್ತೆಗಳು, ಅತಿಥಿ ಗೃಹಗಳು, ಭೋಜನಾ ಶಾಲೆಗಳು, ಮದುವೆ ಮಂಟಪಗಳು ಹಾಗೂ ಇನ್ನು ಹಲವು ಅಭಿವೃದ್ಧಿ ಕಾರ್ಯಗಳು ಕಾರ್ಯರೂಪ ಪಡೆದುಕೊಂಡವು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಶ್ರೀ ಕ್ಷೇತ್ರ ಧರ್ಮಸ್ಥಳ ಹಿನ್ನಲೆ

ಧರ್ಮಾಧಿಕಾರಿ ಶ್ರೀಗಳು ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಹೆಗ್ಗಡೆ ಕುಟುಂಬವು ಅಚುಕಟ್ಟಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಧರ್ಮಾಧಿಕಾರಿಗಳು ಶ್ರೀ ಮಂಜುನಾಥನ ಅವತಾರವೆಂದೇ ಹೇಳಲಾಗುತ್ತದೆ.

ಧರ್ಮಾಧಿಕಾರಿ ಹೆಗ್ಗಡೆ ಕುಟುಂಬವು ಗೃಹಸ್ಥರಾಗಿದ್ದು, ಬಹು ಧರ್ಮ ಪಾಲನೆ ಮಾಡುವುದು ಒಂದು ವಿಶೇಷತೆ. ಬೇರೆ ಯಾವ ಧಾರ್ಮಿಕ ಕೇಂದ್ರಗಳಲೂ ಇದು ಕಾಣಸಿಗುವುದಿಲ್ಲ.

ಧರ್ಮ ದೈವಗಳ ಹಾಗು ಶ್ರೀ ಮಂಜುನಾಥನ ಆದೇಶಗಳನ್ನು ಅನುಸರಿಸಿ ಶ್ರೀ ಸಾಮಾನ್ಯರ ತಕರಾರುಗಳಿಗೆ ನ್ಯಾಯ ಒದಗಿಸುತ್ತಾರೆ.ಇವರುಗಳು ಕೊಟ್ಟ ನ್ಯಾಯವನ್ನು ಹಲವು ಬಾರಿ ಕೋರ್ಟ್ ಪುರಸ್ಕರಿಸಿರುವುದೂ ಇದೆ.

ಇಂತಹ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ಹಲವು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆಯ ಭಾಗವಾಗಿ ನಾಲ್ಕು ಧಾನಗಳನ್ನು ತಪ್ಪದೇ ನಡೆಸಿಕೊಂಡು ಬರುತಿದ್ದಾರೆ.

ಆ ನಾಲ್ಕು ಧಾನಗಳು ಇಂತಿವೆ…

1.ಅನ್ನ ಧಾನ
2.ಔಷಧ ಧಾನ
3.ವಿದ್ಯಾ ಧಾನ
4.ಅಭಯ ಧಾನ

Also read: ಹಸಿದಿರೋ ಭಕ್ತರಿಗೆ ಅನ್ನ ಉಣಿಸಿ ಭಕ್ತರಲ್ಲಿ ದೇವರ ಕಾಣುವ ದೇವಾಲಯಗಳ ಬಗ್ಗೆ ಕೇಳಿದ್ರೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡ್ತಿರಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

21 ತಲೆಮಾರು :

1.ಬರ್ಮಣ್ಣ ಹೆಗ್ಗಡೆ
2.ಪದ್ಮಯ್ಯ ಹೆಗ್ಗಡೆ
3.ಚಂಡಯ್ಯ ಹೆಗ್ಗಡೆ
4.ದೇವರಾಜ ಹೆಗ್ಗಡೆ
5.ಮಂಜಯ್ಯ ಹೆಗ್ಗಡೆ
6.ಜಿನ್ನಪ್ಪ ಹೆಗ್ಗಡೆ
7.ಇಮ್ಮಡಿ ಚಂಡಯ್ಯ ಹೆಗ್ಗಡೆ
8.ದೇವರಾಜ ಹೆಗ್ಗಡೆ
9. ಅನಂತಯ್ಯ ಹೆಗ್ಗಡೆ
10.ವೃಷ್ಬಯ್ಯ ಹೆಗ್ಗಡೆ
11.ಗುಮ್ಮಣ್ಣ ಹೆಗ್ಗಡೆ
12.ವರದಯ್ಯ ಹೆಗ್ಗಡೆ
13.ಮುಮ್ಮಡಿ ಚಂಡಯ್ಯ ಹೆಗ್ಗಡೆ
14.ಕುಮಾರಯ್ಯ ಹೆಗ್ಗಡೆ
15.ನಲ್ಮಾಡಿ ಚಂಡಯ್ಯ ಹೆಗ್ಗಡೆ
16.ಇಮ್ಮಡಿ ಮಂಜಯ್ಯ ಹೆಗ್ಗಡೆ
17.ಧರ್ಮಪಾಲ ಹೆಗ್ಗಡೆ
18.ಚಂಡಯ್ಯ ಹೆಗ್ಗಡೆ
19.ಮಂಜಯ್ಯ ಹೆಗ್ಗಡೆ
20.ರತ್ನವರ್ಮ ಹೆಗ್ಗಡ
21.ವೀರೇಂದ್ರ ಹೆಗ್ಗಡೆ- ಪ್ರಸ್ತುತ ಧರ್ಮಾಧಿಕಾರಿ

ವೀರೇಂದ್ರ ಹೆಗ್ಗಡೆಯವರು

Also read: ವೀರೇಂದ್ರ ಹೆಗ್ಗಡೆಯವರ ಜೀವನದ ಸಾಧನೆಗಳನ್ನು ಓದಿದರೆ, ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧನೆಗಳನ್ನು ಮಾಡಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

• ವೀರೇಂದ್ರ ಹೆಗ್ಗಡೆಯವರು ಹುಟ್ಟಿದ್ದು ನವಂಬರ್ 25, 1948

• ವೀರೇಂದ್ರ ಹೆಗ್ಗಡೆಯವರು ತಮ್ಮ 20ನೇ ವಯಸಿನಲ್ಲಿ ಧರ್ಮಾಧಿಕಾರಿ ಆದರು.

• ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿ ಆದ ನಂತರ ಕ್ಷೇತ್ರದ ಆಡಳಿತದಲ್ಲಿ ಆಧುನಿಕತೆಯ ಶೈಲಿ ಅಳವಡಿಸಿದರು. ಇದರಿಂದ ಧರ್ಮಸ್ಥಳವು ಭೂ ನಕ್ಷೆಯಲ್ಲಿ ಗುರುತಿಸುವಂತಾಯಿತು.

• ವೀರೇಂದ್ರ ಹೆಗ್ಗಡೆಯವರು 1971ರಲ್ಲಿ ಮೊಟ್ಟ ಮೊದಲ ಬಾರಿಗೆ “ಸಾಮೂಹಿಕ ಮದುವೆ” ಏರ್ಪಡಿಸಿದ್ದರು. ಭಾಗವಹಿಸುವ ಜೋಡಿಗಳಿಗೆ ಎಲ್ಲಾ ಖರ್ಚು ವೆಚ್ಚಗಳನ್ನು ದೆವಸ್ಥಾನದ ವತಿಯಿಂದ ಭರಿಸಲಾಗುತ್ತದೆ. ಪ್ರತಿವರ್ಷ 500 ಜೋಡಿಗಳು ಇದರ ಪ್ರಯೋಜನ ಪಡಿಯುತಿದ್ದಾರೆ.

• ವೀರೇಂದ್ರ ಹೆಗ್ಗಡೆಯವರು ಶುರು ಮಾಡಿದ ಸಾಮೂಹಿಕ ಮದುವೆ ಕಾರ್ಯಕ್ರಮಗಳಲ್ಲಿ ಇದುವರೆಗೆ ಸುಮಾರು 12000 ಜೋಡಿಗಳಿಗೆ ಕಂಕಣ ಭಾಗ್ಯ ದೊರೆತಿದೆ. ಈ ಕಾರ್ಯಕ್ರಮವು ಯಶಸ್ವಿ ಆಗಿದ್ದು, ರಾಜ್ಯದ ಹಲವು ಕಡೆಗಳಲ್ಲಿ ಅನುಕರಣೆ ಮಾಡಲಾಗುತ್ತಿದೆ.

• ವೀರೇಂದ್ರ ಹೆಗ್ಗಡೆಯವರು 1981ರಲ್ಲಿ “ಅನ್ನ ಪೂರ್ಣ ಭೋಜನಾಲಯ” ನಿರ್ಮಿಸಿದರು. ಆನ್ನ ಪೂರ್ಣದಲ್ಲಿ ಏಕ ಕಾಲದಲ್ಲಿ 5000 ಮಂದಿ ಒಟ್ಟಿಗೆ ಕುಳಿತು ಊಟ ಮಾಡಬಹುದು. ಸಾಮಾನ್ಯ ದಿನಗಳಲ್ಲಿ 10000 ಹಾಗೂ ವಿಶೇಷ ದಿನಗಳಲ್ಲಿ 60000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.

• ವೀರೇಂದ್ರ ಹೆಗ್ಗಡೆಯವರು 1982ರಲ್ಲಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಬಾಹುಬಲಿ ವಿಗ್ರಹದ ಎತ್ತರ 39 ಅಡಿಗಳಾಗಿದ್ದು, ಏಕ ಶಿಲಾ ವಿಗ್ರಹವಾಗಿದೆ. ಬಾಹುಬಲಿ ವಿಗ್ರಹ ಪ್ರತಿಷ್ಠಾಪನೆ ಅವರ ತಂದೆಯ ಕನಸಾಗಿತ್ತು.

• ವೀರೇಂದ್ರ ಹೆಗ್ಗಡೆಯವರು ಬಾಹುಬಲಿ ವಿಗ್ರಹ ಪ್ರತಿಷ್ಠಾಪಿಸಿದ್ದಕ್ಕಾಗಿ “ಅಭಿನವ ಚಾವುಂಡರಾಯ” ಬಿರುದು ಪಡೆದರು.

• ವೀರೇಂದ್ರ ಹೆಗ್ಗಡೆಯವರು 1982ರಲ್ಲಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ “ರೂಡ್ ಸೆಟ್” ಸಂಸ್ಥೆ ಸ್ಥಾಪಿಸಿದರು. ರೂಡ್ ಸೆಟ್ (ಗ್ರಾಮೀಣ ಅಭಿವೃದ್ಧಿ ಸ್ವ ಉದ್ಯೋಗ ತರಬೇತಿ ಕೇಂದ್ರ) ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ ನೀಡುತ್ತದೆ.ಇಲ್ಲಿಯವರೆಗೆ 13 ರಾಜ್ಯಗಳಲ್ಲಿ, 26 ಕೇಂದ್ರಗಳನ್ನು ಹೊಂದಿದ್ದು, ಸುಮಾರು 200000ಕ್ಕೂ ಹೆಚ್ಚು ಯುವಕರಿಗೆ ನೆರವಾಗಿದೆ.

• ವೀರೇಂದ್ರ ಹೆಗ್ಗಡೆಯವರು 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿ ಸಣ್ಣ ಹಾಗೂ ಬಡ ರೈತರು ಮತ್ತು ಮಹಿಳೆಯರ ಸ್ವ ಸಹಾಯ ಸಂಘಗಳ ನಿರ್ಮಿಸಿ, ಧನ ಸಹಾಯ ಮಾಡುವ ಮೂಲಕ ಹಲವು ಕುಟುಂಬಗಳಿಗೆ ಆಶಾಕಿರಣರಾಗಿದ್ದಾರೆ.

• ವೀರೇಂದ್ರ ಹೆಗ್ಗಡೆಯವರು “ಧರ್ಮೋತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡ ದೇವಸ್ಥಾನಗಳ, ಜೈನ ಮಂದಿರಗಳ ಹಾಗೂ ಇತಿಹಾಸ ಸಾರುವ ಸ್ಮಾರಕಗಳ ನವೀಕರಣ ಮಾಡಿಸಿ ತಮ್ಮ ಹಳೆಯ ಗತ ವೈಭವ ಮರಳಿ ಬರುವಂತೆ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 200ಕ್ಕೂ ಹೆಚ್ಚು ದೇವಸ್ಥಾನಗಳು ಹಾಗೂ ಸ್ಮಾರಕಗಳನ್ನು ನವೀಕರಣ ಮಾಡಿಸಿದ್ದಾರೆ.

Also read: ‘ಮಾತು ಬಿಡ ಮಂಜುನಾಥ’ ಇಲ್ಲಿ ಮಾತಿಗೆ ಹೆಚ್ಚು ಮಹತ್ವ ಮತ್ತು ಮನ್ನಣೆ.

• ವೀರೇಂದ್ರ ಹೆಗ್ಗಡೆಯವರು “ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ” ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆಯುರ್ವೇದ ಕಾಲೆಜುಗಳ, ಪ್ರಕೃತಿ ಚಿಕಿತ್ಸೆ ಕಾಲೆಜುಗಳ, ಡೆಂಟಲ್, ಮೆಡಿಕಲ್, ಇಂಜಿನೀಯರಿಂಗ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಾಲೆಜುಗಳ ಮುಖ್ಯಸ್ಥರು ಆಗಿದ್ದಾರೆ.

• ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸಂಗ್ರಹಣಾಲಯಗಳನ್ನು ಅಭಿವೃದ್ಧಿಪಡಿಸಿ ದೇಶದ ಪರಂಪರೆಯನ್ನು ಸಂರಕ್ಷಿಸುತ್ತಿದ್ದಾರೆ. ಹಳೆಯ ಕಾರುಗಳ ಸಂಗ್ರಹಣಾಲಯ ಒಂದು ಉತ್ತಮ ನಿದರ್ಶನ. ಸಂಗ್ರಹಣಾಲಯದಲ್ಲಿರುವ ಕಾರುಗಳು ರಸ್ತೆಯಲ್ಲಿ ಚಲಿಸಲು ಯೋಗ್ಯವಾದ ಸ್ಥಿತಿಯಲ್ಲಿವೆ.

• ವೀರೇಂದ್ರ ಹೆಗ್ಗಡೆಯವರು ಕನ್ನಡ ಸಾಹಿತ್ಯ ಸಮೇಳನ, ತುಳು ಸಮೇಳನ, ರೈತ ಮೇಳಗಳನ್ನು ಆಯೋಜಿಸಿದ್ದಾರೆ.

• ವೀರೇಂದ್ರ ಹೆಗ್ಗಡೆಯವರು ಓರ್ವ ಉತ್ಸಾಹಿ ಛಾಯಾಗ್ರಾಹಕರು.

• ವೀರೇಂದ್ರ ಹೆಗ್ಗಡೆಯವರು ನವೀಕರಿಸಬಹುದಾದ ಇಂಧನಗಳ ಬಗ್ಗೆ ತುಂಬಾ ಆಸಕ್ತಿ. ಆದ್ದರಿಂದಲ್ಲೇ ಧರ್ಮಸ್ಥಳದ ಎಲ್ಲಾ ಅತಿಥಿ ಗೃಹಗಳಲ್ಲಿ ಸೌರಶಕ್ತಿ ಬಿಸಿನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಪ್ರತಿನಿತ್ಯ 1ಲಕ್ಷ ಲೀಟರ್ ಬಿಸಿನೀರು ಪಡಿಯಬಹುದು. ಅಲ್ಲದೆ ಧರ್ಮಸ್ಥಳದ ಎಲ್ಲಾ ರಸ್ತೆ ದೀಪಗಳು ಸೌರಶಕ್ತಿ ಚಾಲಿತವಾಗಿವೆ. ಬಯೋ ಗ್ಯಾಸ್ ಕೇಂದ್ರ ಸ್ಥಾಪಿಸಿ, ಭಕ್ತರಿಗೆ ಅಡಿಗೆ ಮಾಡುವುದಕ್ಕಾಗಿ ಉಪಯೋಗಿಸಲಾಗುತ್ತಿದೆ.

• ವೀರೇಂದ್ರ ಹೆಗ್ಗಡೆಯವರು ಮಧ್ಯಪಾನ ದುಶ್ಚಟಗಳ ಬಗ್ಗೆ “ಜನ ಜಾಗೃತಿ” ಎಂಬ ಕಾರ್ಯಕ್ರಮದ ಅಡಿಯಲ್ಲಿ, ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

• ವೀರೇಂದ್ರ ಹೆಗ್ಗಡೆಯವರಿಂದ ರಾಜಕಾರಣಿಗಳು, ಶಿಕ್ಷಣ ಕ್ಶೇತ್ರದವರು, ಆಡಳಿತಾಧಿಕಾರಿಗಳು, ಸಿರಿವಂತರು, ಬಡವರು ಹೀಗೆ ಎಲ್ಲಾ ವರ್ಗದವರು ಮಾರ್ಗದರ್ಶನ ಪಡೆದುಕೊಳುತ್ತಿದ್ದಾರೆ.

• ವೀರೇಂದ್ರ ಹೆಗ್ಗಡೆಯವರ ಶ್ರೀಮತಿ ಹೇಮಾವತಿಯವರು ಕೂಡ ಸಮಾಜ ಸೇವೆಯಲ್ಲಿ ತೊಡಗಿದ್ದು, ಮಹಿಳಾ ಸಬಲೀಕರಣದಲ್ಲಿ ಸಕ್ರೀಯವಾಗಿ ಪಾಲ್ಗೋಳುತ್ತಿದ್ದಾರೆ.

• ವೀರೇಂದ್ರ ಹೆಗ್ಗಡೆ ದಂಪತಿಗೆ ಶ್ರದ್ಧಾ ಎಂಬ ಮಗಳಿದ್ದಾರೆ. ಶ್ರದ್ಧಾರ ಮದುವೆ ಬೆಂಗಳೂರು ಮೂಲದ ಉದ್ಯಮಿ ಅಮಿತ್ ರೊಂದಿಗೆ ಆಗಿದ್ದು, ಮಾನ್ಯ ಎಂಬ ಮಗಳಿದ್ದಾಳೆ.

• ವೀರೇಂದ್ರ ಹೆಗ್ಗಡೆಯವರಿಗೆ ಮೊಮ್ಮಗಳು ಮಾನ್ಯ ಎಂದರೆ ತುಂಬಾ ಪ್ರೀತಿ.

• ವೀರೇಂದ್ರ ಹೆಗ್ಗಡೆಯವರು ಈಗಲೂ ಉತ್ಸಾಹಿ ಯುವಕರಂತೆ ದಿನದಲ್ಲಿ 18ಗಂಟೆ ಕೆಲಸ ಮಾಡುತ್ತಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522