ಈ ಹೀರೋಯಿನ್-ನ ಜೊತೆ ಭೇಟಿ ಆಗೋ ಆಸೆ ಇಟ್ಕೊಂಡು ಹೋಗಿ 60 ಲಕ್ಷ ಕಳೆದುಕೊಂಡ ವ್ಯಕ್ತಿ!!

0
554

ಇತ್ತೀಚಿಗೆ ಸಿನಿಮಾ ಹುಚ್ಚಿನಲ್ಲಿ ಹೆಚ್ಚು ಆಸ್ತಕ್ತಿ ತೋರುತ್ತಿರುವ ಯುವಕ-ಯುವತಿಯರು ಅವರಿಗೆ ಇಷ್ಟವಾದ ನೆಚ್ಚಿನ ಹೀರೋ ಹೀರೋಯಿನ್ ಬಗ್ಗೆ ಹೆಚ್ಚಿನ ಅಭಿಮಾನವನ್ನು ಹೊಂದಿರುತ್ತಾರೆ. ಅದಕ್ಕಾಗಿ ತಮ್ಮ ನೆಚ್ಚಿನ ನಟರ ಸಿನಿಮಾಗಳು ಬರುವ ವಿಷಯ ತಿಳಿದರೆ ಸಾಕು. ಅದಕ್ಕಾಗಿ ಕಾದುಕುಳಿತು ಸಿನಿಮಾ ನೋಡುತ್ತಾರೆ. ಕೆಲವರ ಅಭಿಮಾನವಂತೂ ಇಷ್ಟಕ್ಕೆ ನಿಲ್ಲದೆ ಜೀವನದಲ್ಲಿ ಹೇಗಾದರೂ ಮಾಡಿ ನಟರನ್ನು ಬೇಟಿ ಮಾಡಬೇಕು ಎನ್ನುವ ಮನೋಭಾವನೆಯನ್ನು ಹೊಂದಿ. ಅದಕ್ಕಾಗಿ ಎಷ್ಟೇ ಹಣವನ್ನು ಕೂಡ ನೀಡಲು ಸಿದ್ದರಿರುತ್ತಾರೆ. ಇದೆ ತರಹ ಕಾಜಲ್ ಅಗರ್ವಾಲ್ ಬೇಟಿ ಮಾಡಲು ಹೋದ ಯುವಕ ಬರೋಬರಿ 60 ಲಕ್ಷ ಹಣವನ್ನು ಕಳೆದುಕೊಂಡಿದ್ದಾನೆ.

ಹೌದು ನಟರ ಬೇಟಿ ಮಾಡುವ ಹುಚ್ಚಿನಲ್ಲಿದ್ದ ಅಭಿಮಾನಿಯೊಬ್ಬ ದೊಡ್ಡ ಮೋಸಕ್ಕೆ ಬಲಿಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಜನಪ್ರಿಯ ತಮಿಳು ಮತ್ತು ತೆಲುಗು ನಟಿ ಕಾಜಲ್ ಅಗರ್ವಾಲ್ ಅವರ ಜಿತೆಗೆ ಭೇಟಿ ಮಾಡಿ ಅವರ ಜೊತೆ ಕುಳಿತು ಮಾತನಾಡುವ ಸಲುವಾಗಿ ತಮಿಳುನಾಡಿನ ರಾಮನಂತಪುರಂನ ಯುವಕನೊಬ್ಬ ಹಲವು ದಿನಗಳಿಂದ ಯೋಚನೆಯಲ್ಲಿದ ಆಗ ವೆಬ್‌ಸೈಟ್-ನಲ್ಲಿ ಸಿಕ್ಕ ಮಾಹಿತಿಯಂತೆ ಪ್ರಸಿದ್ಧ ನಟನೊಂದಿಗಿನ ಭೇಟಿ ಮಾಡಲು ಪ್ರತ್ಯೇಕ ವೆಬ್ ಸೈಟ್-ಗಳು ಇರುವುದು ತಿಳಿದ ವ್ಯಕ್ತಿ. ಮಾಹಿತಿಯನ್ನು ಕಲೆಹಾಕಿ ಅದರಲ್ಲಿರುವ ಜನರನ್ನು ಸಂಪರ್ಕಿಸಿದಾಗ ಅವರು ಮುಂಗಡವಾಗಿ 50,000 ರೂ. ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಒಪ್ಪಿದ ವ್ಯಕ್ತಿ ಹಣವನ್ನು ಕೂಡ ಕೊಟ್ಟಿದ್ದಾನೆ.

ನಂತರ ಕಾಜಲ್ ಅಭಿಮಾನಿ ಶ್ರೀಮಂತ ಕುಟುಂಬದವನು ಎಂದು ತಿಳಿದ ವಂಚಕರು ಸ್ವಲ್ಪ ದಿನ ಕಾಯಲು ಹೇಳಿದ್ದಾರೆ. ಹೀಗೆ ಅವಕಾಶಕ್ಕಾಗಿ ಕಾಯುತ್ತಿದ್ದ ಯುವಕನಿಗೆ ಹೆಚ್ಚಿನ ವಿಚಾರಣೆಯನ್ನು ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದೆ. ಅದರಂತೆ ವೆಬ್ ಸೈಟ್-ನಲ್ಲಿ ಸಿಕ್ಕ ವ್ಯಕ್ತಿ ನಿರ್ಮಾಪಕ ಎಂದು ಹೇಳಿಕೊಂಡಿದ್ದಾನೆ. ಇದಾದ ಕೆಲವೇ ದಿನಗಳಲ್ಲಿ ಕಾಜಲ್ ಅಭಿಮಾನಿ ಅಸ್ಲಿಲ ಫೋಟೋವನ್ನು ತೋರಿಸಿ 60 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಒಂದು ಹಣ ನಿಡದಿದ್ದರೆ ಫೋಟೋ-ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುವುದಾಗಿ ಹೇಳಿದ್ದಾರೆ. ಬೆದರಿಕೆ ಹೇದರಿದ ವ್ಯಕ್ತಿ ಮೂರು ಕಂತುಗಳಲ್ಲಿ 60 ಲಕ್ಷ ರೂ.ಗಳನ್ನು ನೀಡಲು ಗ್ಯಾಂಗ್‌ಗೆ ಒಪ್ಪಿಕೊಂಡಿದ್ದಾನೆ. ನಂತರ ಹಣವನ್ನು ಕೂಡ ಕೊಟ್ಟಿದ್ದಾನೆ.

ನಂತರ ಅವನಿಗೆ ಆದ ಮೋಸದಿಂದ ಬಹಳಷ್ಟು ಮಾನಸಿಕ ಒತ್ತಡ ಒಳಗಾಗಿ ಮನೆಬಿಟ್ಟು ಹೋಗಿದ್ದಾನೆ. ಈ ಸಂಬಂಧ ಮನೆಯವರು ಕಾಣಿಯಾಗಿದ್ದಾನೆ ಎಂದು ಪೊಲೀಸ್ ಕಂಪ್ಲೇಟ್ ಮಾಡಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಕಾಜಲ್ ಅಭಿಮಾನಿ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಆಗ ವ್ಯಕ್ತಿ ತನಗೆ ಆದ ಮೋಸದ ಬಗ್ಗೆ ವಿವರಿಸಿದ್ದಾನೆ, ಆದರೆ ವಂಚಕರ ಗ್ಯಾಂಗ್-ಗೆ ಅಭಿಮಾನಿಯ ಅಸ್ಲಿಲ ಫೋಟೋಸ್ ಹೇಗೆ ಸಿಕ್ಕವೂ ಎನ್ನುವುದು ಇನ್ನೂ ತಿಳಿದಿಲ್ಲ, ಸಧ್ಯ ಕಾಜಲ್ ಅಗರ್‌ವಾಲ್ ಅಭಿಮಾನಿ ನೀಡಿದ ದೂರಿನ ಆಧಾರದ ಮೇಲೆ ನಿರ್ಮಾಪಕನೆಂದು ಹೇಳಿಕೊಂಡಿದ್ದ ಸರವಣಕುಮಾರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದಕ್ಕಾಗಿ ವೆಬ್ ಸೈಟ್ ಮತ್ತು ಇತರೆ ಯಾವುದೇ ವ್ಯಕ್ತಿಗಳು ನೀಡುವ ಭರವಸೆಗೆ ಒಳಗಾಗಿ ಮೋಸಕ್ಕೆ ಬಲಿಯಾಗುವ ಮುನ್ನ ಎಚ್ಚರವಾಗಿರಿ.